Asianet Suvarna News Asianet Suvarna News

March Deadline: ತಿಂಗಳ ಅಂತ್ಯದೊಳಗೆ ಈ 6 ಕೆಲ್ಸ ಮಾಡದಿದ್ರೆ ಜೇಬಿಗೆ ಕತ್ತರಿ!

*ಆಧಾರ್-ಪ್ಯಾನ್ ಕಾರ್ಡ್ ಜೋಡಣೆಗೆ ಮಾರ್ಚ್ 31 ಅಂತಿಮ ಗಡುವು
*ಮುಂಗಡ ತೆರಿಗೆ ಫೈಲಿಂಗ್ಗೆ ಮಾರ್ಚ್ 15 ಅಂತಿಮ ದಿನಾಂಕ
*ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡದಿದ್ರೆ ತೊಂದ್ರೆ ಗ್ಯಾರಂಟಿ

6 Major financial things to be done before March 31 2022
Author
Bangalore, First Published Mar 9, 2022, 5:26 PM IST

Business Desk: ಭಾರತದಲ್ಲಿ (India) ಮಾರ್ಚ್ (March) ಆರ್ಥಿಕ ಸಾಲಿನ (Financial year) ಕೊನೆಯ ತಿಂಗಳು. ಹಣಕಾಸಿಗೆ (Finance) ಸಂಬಂಧಿಸಿದ ಅನೇಕ ಕೆಲಸಗಳಿಗೆ ಈ ತಿಂಗಳು ಡೆಡ್ ಲೈನ್ (deadline)ಕೂಡ. ಹೀಗಾಗಿ ಮಾರ್ಚ್ 31ರೊಳಗೆ ಮಾಡಿ ಮುಗಿಸಬೇಕಾದ ಹಣಕಾಸಿಗೆ ಸಂಬಂಧಿಸಿದ ಕೆಲಸಗಳನ್ನು ಮರೆಯದೆ ಪೂರ್ಣಗೊಳಿಸಿ. ಇಲ್ಲವಾದ್ರೆ ನಿಮ್ಮ ಜೇಬಿಗೆ ಇನ್ನಷ್ಟು ಹೊರೆ ಬೀಳೋದು ಪಕ್ಕಾ. ಹಾಗಾದ್ರೆ ಮಾರ್ಚ್ ನಲ್ಲಿ ಮಾಡಿ ಮುಗಿಸಲೇಬೇಕಾದ 5  ಪ್ರಮುಖ ಹಣಕಾಸಿನ ವಿಚಾರಗಳು ಯಾವುವು? 

1.ಆಧಾರ್-ಪ್ಯಾನ್ ಕಾರ್ಡ್ ಜೋಡಣೆ
ಆಧಾರ್ (Aadhar)-ಪ್ಯಾನ್ ಕಾರ್ಡ್(Pan card) ಲಿಂಕ್ ಮಾಡಲು ಮಾರ್ಚ್ 31 ಅಂತಿಮ ಗಡುವು. ಯಾರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಾರೋ ಅವರು ಕಡ್ಡಾಯವಾಗಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲೇಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ನೀವು ಇನ್ನೂ ಆಧಾರ್-ಪ್ಯಾನ್ ಲಿಂಕ್ ಮಾಡಿಲ್ಲವೆಂದ್ರೆ ಆದಷ್ಟು ಶೀಘ್ರವಾಗಿ ಈ ಕೆಲ್ಸ ಮಾಡಿ ಮುಗಿಸಿ. ಮಾರ್ಚ್ 31ರೊಳಗೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಪ್ಯಾನ್ ನಿಷ್ಕ್ರಿಯಗೊಂಡ್ರೆ ನಿಮಗೆ ಮುಂದೆ ಹಣಕಾಸಿಗೆ ಸಂಬಂಧಿಸಿದ ಕೆಲಸಗಳಿಗೆ ಅಡಚಣೆಯುಂಟಾಗುತ್ತದೆ. 

7th Pay Commission: ಕೇಂದ್ರ ಸರ್ಕಾರಿ ನೌಕರರರಿಗೆ ಮೋದಿ ಸರ್ಕಾರದ ಹೋಳಿ ಗಿಫ್ಟ್, ತುಟ್ಟಿಭತ್ಯೆ ಹೆಚ್ಚಳ?

2.ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡಿ
ಬ್ಯಾಂಕ್ ಖಾತೆಗಳಿಗೆ ಕೆವೈಸಿ (KYC) ಅಪ್ಡೇಟ್ ಮಾಡೋ ಅಂತಿಮ ಗಡುವನ್ನು ಮಾರ್ಚ್ 31ರ ತನಕ ವಿಸ್ತರಿಸಲಾಗಿದೆ. ಹೀಗಾಗಿ ಬ್ಯಾಂಕ್ ಖಾತೆದಾರರು ವಹಿವಾಟಿನಲ್ಲಿ ಯಾವುದೇ ತೊಂದರೆಯಾಗಬಾರದು ಅಂದ್ರೆ ಕೆವೈಸಿ ಅಪ್ಡೇಟ್ ಮಾಡಬೇಕು. ವಿಳಾಸದ ಪುರಾವೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಕೆವೈಸಿಗೆ ಸಂಬಂಧಿಸಿ ಬ್ಯಾಂಕ್ ಕೋರಿರುವ ಮಾಹಿತಿಗಳನ್ನು ತಕ್ಷಣ ಸಲ್ಲಿಸಿ. 

3.ಮುಂಗಡ ತೆರಿಗೆ ಫೈಲಿಂಗ್
ಭಾರತದ ಆದಾಯ ತೆರಿಗೆ ಕಾಯ್ದೆ ಅನ್ವಯ 10,000 ರೂ.ಗಿಂತ ಅಧಿಕ ತೆರಿಗೆ ಪಾವತಿಸುತ್ತಿರೋ ವ್ಯಕ್ತಿಗಳು ಮಾರ್ಚ್ 15ರ ಮುನ್ನ ನಾಲ್ಕು ಕಂತುಗಳಲ್ಲಿ ಮುಂಗಡ ತೆರಿಗೆ ಪಾವತಿಸಬೇಕು. ಒಂದು ವೇಳೆ ವೇತನ ಪಡೆಯೋ ಉದ್ಯೋಗಿಯಾಗಿದ್ರೆ ಉದ್ಯೋಗದಾತ ಸಂಸ್ಥೆ ಅವರ ವೇತನದಿಂದ ಈ ಮೊತ್ತವನ್ನು ಕಡಿತಗೊಳಿಸಿ ಪಾವತಿಸಬೇಕು.

4.ತೆರಿಗೆ ಉಳಿಸಲು ಹೂಡಿಕೆ ಮಾಡಿ
ತೆರಿಗೆ ಉಳಿತಾಯ ಯೋಜನೆಗಳಾದ ಪಿಪಿಎಫ್, ರಾಷ್ಟ್ರೀಯ ಪಿಂಚಣಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದ್ದರೆ, ಈ ಖಾತೆಗಳನ್ನು ಸಕ್ರಿಯವಾಗಿಡಲು ಮಾರ್ಚ್ 31ರೊಳಗೆ ಕನಿಷ್ಠ ಕೊಡುಗೆಗಳನ್ನು ನೀಡಲು ಮರೆಯಬೇಡಿ.

ರಷ್ಯಾದಲ್ಲಿ McDonald's, Starbucks, Coca-Cola, PepsiCo ವ್ಯವಹಾರ ಸ್ಥಗಿತ! 

5.ಪರಿಷ್ಕೃತ ಐಟಿಆರ್ ಸಲ್ಲಿಕೆ
ನೀವು ಡಿ.31ರೊಳಗೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡಿದ್ದು, ಅದ್ರಲ್ಲಿ ಕೆಲವು ತಪ್ಪುಗಳಿದ್ದಲ್ಲಿ ತಿದ್ದುಪಡಿಗಳೊಂದಿಗೆ ಮತ್ತೆ ಸಲ್ಲಿಕೆ ಮಾಡಲು ಅವಕಾಶವಿದೆ. ಈ ರೀತಿ ಪರಿಷ್ಕೃತ ಐಟಿಆರ್ (revised return) ಸಲ್ಲಿಕೆಗೆ ಮಾರ್ಚ್‌ 31 ಅಂತಿಮ ಗಡುವಾಗಿದೆ. ಈ ಹಿಂದೆ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ಕೊನೆಯ ದಿನಾಂಕವಾಗಿತ್ತು. ಆದ್ರೆ 2020-21ನೇ ಆರ್ಥಿಕ ಸಾಲಿನಲ್ಲಿ ಕೊರೋನಾ ವೈರಸ್ ಕಾರಣಕ್ಕೆ ಸರ್ಕಾರ ಐಟಿಆರ್ ಸಲ್ಲಿಕೆ ಗಡುವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಿದ ಕಾರಣ ಈ ವರ್ಷ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಮಾರ್ಚ್ 31 ಅಂತಿಮ ದಿನಾಂಕವಾಗಿದೆ. 

6.ಬಾಕಿ ತೆರಿಗೆ ಪಾವತಿಸಿ
ವಿವಾದ್ ಸೇ ವಿಶ್ವಾಸ್ ಯೋಜನೆಯಡಿಯಲ್ಲಿ ತೆರಿಗೆ ಮೇಲ್ಮನವಿ ಅಥವಾ ಬಾಕಿ ಅರ್ಜಿಗಳನ್ನು ಹೊಂದಿರೋರು ವಿವಾದಿತ ತೆರಿಗೆಗಳನ್ನು 2022ರ ಮಾರ್ಚ್ 31ರೊಳಗೆ ಪಾವತಿಸಿದ್ರೆ ಬಡ್ಡಿ ಅಥವಾ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಬಾಕಿಯಿರೋ ತೆರಿಗೆಗಳನ್ನು ಆದಷ್ಟು ಬೇಗ ಪಾವತಿಸಿ. 


 

Follow Us:
Download App:
  • android
  • ios