New GST rates for popcorn: ಪಾಪ್‌ಕಾರ್ನ್‌ಗೆ ಹೊಸ ಜಿಎಸ್‌ಟಿ, ಫ್ಲೇವರ್‌ ಮೇಲೆ ಬದಲಾಗುತ್ತೆ ಟ್ಯಾಕ್ಸ್‌!

55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಪಾಪ್‌ಕಾರ್ನ್ ಮೇಲೆ ಹೊಸ ತೆರಿಗೆ ದರಗಳನ್ನು ಪ್ರಸ್ತಾಪಿಸಿದೆ. ವಿಮಾ ವಲಯಕ್ಕೆ ಜಿಎಸ್‌ಟಿ ದರಗಳ ಕುರಿತ ಚರ್ಚೆಯನ್ನು ಮುಂದೂಡಲಾಗಿದೆ.

 

55th GST Council meeting New rates for popcorn Finance Minister Nirmala Sitharaman san

ನವದೆಹಲಿ (ಡಿ.21): ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 55 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಪಾಪ್‌ಕಾರ್ನ್ ಮೇಲೆ ಹೊಸ ತೆರಿಗೆ ದರಗಳನ್ನು ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಉಪ್ಪು ಹಾಗೂ ಮಸಾಲೆ ಬೆರೆಸಿದ ರೆಡಿ-ಟು-ಈಟ್‌ ಪಾಪ್‌ಕಾರ್ನ್‌ನ ಮೇಲೆ ಶೇ. 5ರಷ್ಟು ಜಿಎಸ್‌ಟಿಯನ್ನು ಪ್ರಸ್ತಾಪ ಮಾಡಿದೆ. ಆದರೆ, ಈ ಪಾಪ್‌ಕಾರ್ನ್‌ಅನ್ನು ಮೊದಲೇ ಪ್ಯಾಕ್‌ ಮಾಡಿರಬಾರದು ಎಂದೂ ತಿಳಿಸಿದೆ. ಪ್ಯಾಕೇಜ್‌ ಮಾಡಿ ಲೇಬಲ್‌ ಮಾಡಿದ ಪಾಪ್‌ಕಾರ್ನ್ 12% ಜಿಎಸ್‌ಟಿಯನ್ನು ಆಕರ್ಷಿಸುತ್ತದೆ, ಆದರೆ ಕ್ಯಾರಮೆಲ್ ಫ್ಲೇವರ್‌ನ ಪಾಪ್‌ಕಾರ್ನ್‌ಗೆ 18% ತೆರಿಗೆ ವಿಧಿಸಲಾಗುತ್ತದೆ. 

ವಿಮಾ ವಲಯಕ್ಕೆ ಜಿಎಸ್‌ಟಿ ದರಗಳಿಗೆ ಸಂಬಂಧಿಸಿದ ಸಚಿವರ ಗುಂಪು (ಜಿಒಎಂ) ವರದಿಯ ಮೇಲಿನ ಚರ್ಚೆಗಳನ್ನು ಮುಂದೂಡಲಾಗಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸಚಿವರ ಗುಂಪಿನ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ವಿಳಂಬಕ್ಕೆ ಕಾರಣವಾಗಿವೆ ಎಂದು ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ. "ಮುಂದಿನ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು" ಎಂದು ಅವರು ತಿಳಿಸಿದ್ದು, ಹೆಚ್ಚಿನ ಚರ್ಚೆಗಳಿಗಾಗಿ ವಿಮೆಯ ಕುರಿತು ಸಚಿವರ ಗುಂಪು ಜನವರಿಯಲ್ಲಿ ಮತ್ತೆ ಭೇಟಿಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

50% ಕ್ಕಿಂತ ಹೆಚ್ಚು ಫ್ಲೈ ಆಶ್ ಅಂಶವನ್ನು ಹೊಂದಿರುವ ಆಟೋಕ್ಲೇವ್ಡ್ ಏರೇಟೆಡ್ ಕಾಂಕ್ರೀಟ್ (AAC) ಬ್ಲಾಕ್‌ಗಳು HS ಕೋಡ್ 6815 ಅಡಿಯಲ್ಲಿ ಬರುತ್ತವೆ ಮತ್ತು 18 ಪ್ರತಿಶತದ ಬದಲಿಗೆ 12 ಪ್ರತಿಶತದಷ್ಟು ಕಡಿಮೆ GST ದರವನ್ನು ಆಕರ್ಷಿಸುತ್ತವೆ ಎಂದು ಸ್ಪಷ್ಟಪಡಿಸಲು ಕೌನ್ಸಿಲ್ ಒಪ್ಪಿಕೊಂಡಿದೆ. ಕಂಪನಿಗಳು, ಇವಿ ಸೇರಿದಂತೆ ಹಳೆಯ ಮತ್ತು ಬಳಸಿದ ಕಾರುಗಳ ಮಾರಾಟದ ಜಿಎಸ್‌ಟಿಯನ್ನು ಶೇಕಡಾ 12 ರಿಂದ ಶೇಕಡಾ 18 ಕ್ಕೆ ಹೆಚ್ಚಿಸಲು ಅನುಮೋದಿಸಿದೆ. ಇದು ವ್ಯಕ್ತಿಗಳ ಮಾರಾಟ ಮತ್ತು ಖರೀದಿಗೆ ಅನ್ವಯಿಸುವುದಿಲ್ಲ. ಅಸ್ತಿತ್ವದಲ್ಲಿರುವ ರಿಯಾಯಿತಿಗಳನ್ನು ಸಂಕೀರ್ಣಗೊಳಿಸುವ ಬದಲು ಅಂತಿಮ ಬಳಕೆಯ ಹೊರತಾಗಿಯೂ ತೆರಿಗೆ ದರವನ್ನು ಶೇಕಡಾ 5 ಕ್ಕೆ ಇಳಿಸುವ ಮೂಲಕ ಬಲವರ್ಧಿತ ಅಕ್ಕಿ ಕಾಳುಗಳಿಗೆ ಜಿಎಸ್‌ಟಿ ರಚನೆಯನ್ನು ಸರಳೀಕರಿಸಲು ಕೌನ್ಸಿಲ್ ಶಿಫಾರಸು ಮಾಡಿದೆ.

Nelamangala Accident: ಮಹಾರಾಷ್ಟ್ರದಲ್ಲಿರುವ ವೃದ್ಧ ತಾಯಿಗಿನ್ನೂ ಮುಟ್ಟಿಲ್ಲ ಮಗನ ಸಾವಿನ ಸುದ್ದಿ!

ಇನ್ನೂ ನಡೆಯುತ್ತಿರುವ ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಿ ಪಿ ಚೌಧರಿ ಮತ್ತು ಗೋವಾ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ ಮತ್ತು ಒಡಿಶಾದಂತಹ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದಾರೆ. ಅರುಣಾಚಲ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಉಪ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಸಹ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾರೆ.

Photos: ನೆಲಮಂಗಲ ಭೀಕರ ಆಕ್ಸಿಡೆಂಟ್‌, IAST ಕಂಪನಿ ಮಾಲೀಕ ಚಂದ್ರಮ್‌ ಇಡೀ ಕುಟುಂಬ ಸಾವು

Latest Videos
Follow Us:
Download App:
  • android
  • ios