MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Photos: ನೆಲಮಂಗಲ ಭೀಕರ ಆಕ್ಸಿಡೆಂಟ್‌, IAST ಕಂಪನಿ ಮಾಲೀಕ ಚಂದ್ರಮ್‌ ಇಡೀ ಕುಟುಂಬ ಸಾವು

Photos: ನೆಲಮಂಗಲ ಭೀಕರ ಆಕ್ಸಿಡೆಂಟ್‌, IAST ಕಂಪನಿ ಮಾಲೀಕ ಚಂದ್ರಮ್‌ ಇಡೀ ಕುಟುಂಬ ಸಾವು

ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರಣಿ ಅಪಘಾತದಲ್ಲಿ 2 ಲಾರಿ, 2 ಕಾರು ಮತ್ತು ಸ್ಕೂಲ್ ಬಸ್ ಒಳಗೊಂಡಿತ್ತು.

2 Min read
Santosh Naik
Published : Dec 21 2024, 01:41 PM IST| Updated : Dec 21 2024, 01:44 PM IST
Share this Photo Gallery
  • FB
  • TW
  • Linkdin
  • Whatsapp
112

ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಭೀಕರ ಅಫಘಾತ ಸಂಭವಿಸಿದ್ದು, ಕಾರ್‌ನಲ್ಲಿದ್ದ ಎಲ್ಲಾ ಆರು ಮಂದಿ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
 

212

ಹೆದ್ದಾರಿಯಲ್ಲಿ 2 ಲಾರಿ, 2 ಕಾರು ಹಾಗೂ ಸ್ಕೂಲ್‌ ಬಸ್‌ನ ನಡುವೆ ಅಪಘಾತ ಸಂಭವಿಸಿದೆ. ಇದರಲ್ಲಿ KA 01 ND 1536 ನಂಬರ್‌ನ ವೋಲ್ವೋ ಕಾರ್‌ನಲ್ಲಿದ್ದ ಎಲ್ಲಾ 6 ಮಂದಿ ಅಪ್ಪಚ್ಚಿಯಾಗಿದ್ದಾರೆ.
 

312

ಪ್ರಾಥಮಿಕ ವರದಿಗಳ ಪ್ರಕಾರ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಈ ಹಂತದಲ್ಲಿ ಕಂಟೇನರ್‌ ಲಾರಿಯೊಂದು ತನ್ನ ಎದುರಿಗಿದ್ದ ವಾಹನಕ್ಕೆ ಗುದ್ದಿ ಪಲ್ಟಿಯಾಗಿದೆ. ಈ ಹಂತದಲ್ಲಿ ಕಂಟೇನರ್‌ ಲಾರಿಯ ಪಕ್ಕದಲ್ಲಿಯೇ ಇದ್ದ ವೋಲ್ವೋ ಕಾರ್‌ನ ಮೇಲೆ ಇದು ಉರುಳಿಬಿದ್ದಿದೆ.
 

412


ಕಂಟೇನರ್‌ ಲಾರಿ ಉರುಳಿಬಿದ್ದ ರಭಸಕ್ಕೆ ಕಾರ್‌ನಲ್ಲಿದ್ದ ಎಲ್ಲಾ ಆರು ಮಂದಿ ಅಪ್ಪಚ್ಚಿಯಾಗಿದ್ದಾರೆ. ಇವರನ್ನು 42 ವರ್ಷದ ಗೌರಾಬಾಯಿ, 12 ವರ್ಷದ ದೀಕ್ಷಾ, 16 ವರ್ಷದ ಧ್ಯಾನ್‌ ಹಾಗೂ 6 ವರ್ಷದ ಆರ್ಯ ಎಂದು ಗುರುತಿಸಲಾಗಿದ್ದು, ಉಳಿದವರ ಪತ್ತೆ ಕಾರ್ಯ ನಡೆಯುತ್ತಿದೆ.

512

ಮಹಾರಾಷ್ಟ್ರ ಮೂಲದ ಇಂಜಿನಿಯರ್‌ ಆಗಿರುವ ಚಂದ್ರಮ್‌ ಅವರ ಕುಟುಂಬವಾಗಿದೆ. ಐಎಎಸ್‌ಟಿ ಸಲ್ಯೂಷನ್‌ ಎನ್ನುವ ಸಾಫ್ಟ್‌ವೇರ್‌ ಕಂಪನಿಯನ್ನು ಚಂದ್ರಮ್‌ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
 

612

ಸರಣಿ ಅಪಘಾತದ ಕಾರಣಕ್ಕೆ ತುಮಕೂರು-ಬೆಂಗಳೂರು ಹೈವೇಯಲ್ಲಿ ಅಂದಾಜು 3 ಕಿಲೋಮೀಟರ್‌ವರೆಗೆ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಅಪಘಾತಗೊಂಡ ವಾಹನ


 

712

ಮೃತ 6 ಜನರಲ್ಲಿ ಮಹಾರಾಷ್ಟ್ರ ಮೂಲದ ಚಂದ್ರಮ್ ಯಗಪಗೋಲ್ ಕೂಡ ಸೇರಿದ್ದಾರೆ. IAST ಸಾಫ್ಟ್​ವೇರ್ ಸಲ್ಯೂಷನ್‌ನ ಎಂಡಿ, ಸಿಇಒ ಆಗಿ ಚಂದ್ರಮ್‌ ಕೆಲಸ ಮಾಡುತ್ತಿದ್ದರು.
 

812

ಆಟೋಮೋಟಿವ್, ಎಂಬೆಡೆಡ್ ಸಾಫ್ಟ್​ವೇರ್ ಡೆವಲ್ಪಮೆಂಟ್‌ನಲ್ಲಿ ಅನುಭವ ಹೊಂದಿದ್ದ ಚಂದ್ರಮ್‌, ಕೇವಲ ಎರಡು ತಿಂಗಳ ಹಿಂದೆಯಷ್ಟೇ ಹೊಸ ಕಾರ್‌ಅನ್ನು ಖರೀದಿ ಮಾಡಿದ್ದರು.
 

912

18 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಚಂದ್ರಮ್, ಎಲೆಕ್ಟ್ರಿಕ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ​ಸುರತ್ಕಲ್‌ನ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ.
 

1012


ವೀಕೆಂಡ್‌ ಪ್ರವಾಸಕ್ಕಾಗಿ ಇಡೀ ಕುಟುಂಬ ಬೆಂಗಳೂರಿಗೆ ತೆರಳಿತ್ತು. ಎರಡು ತಿಂಗಳ ಹಿಂದೆಯಷ್ಟೇ ಹೊಸ ವೋಲ್ವೋ ಕಾರು ಖರೀದಿ ಮಾಡಿದ್ದುರ ಎನ್ನಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

1112

ಕಾರಿನೊಳಗೆ ಸಿಕ್ಕಿಬಿದ್ದ ಶವವನ್ನು ಹರಸಾಹಸ ಪಟ್ಟು ಹೊರತೆಗೆಯಲಾಗಿದೆ. ಯಾರೊಬ್ಬರು ಕನಿಷ್ಠ ಆಸ್ಪತ್ರೆಗೆ ಸಾಗಿಸುವಷ್ಟೂ ಜೀವಂತವಾಗಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Breaking: ನೆಲಮಂಗಲ ಹೆದ್ದಾರಿಯಲ್ಲಿ ಕಾರ್‌ನ ಮೇಲೆ ಬಿದ್ದ ಕಂಟೇನರ್‌ ಲಾರಿ, 6 ಮಂದಿ ಅಪ್ಪಚ್ಚಿ!

1212

ಮೃತರು ಮಹಾರಾಷ್ಟ್ರ ಮೂಲದವರು ಎಂದು ತಿಳಿಸಲಾಗಿದ್ದು, ಮಹಾರಾಷ್ಟ್ರ ಸಾಂಗಲಿ ಜಿಲ್ಲೆ ಜತ್ ತಾಲೂಕಿ‌ ಮೊರಬಗಿ ಗ್ರಾಮದವರು ಎನ್ನಲಾಗಿದೆ. ಸದ್ಯ ಮೊರಬ ಗ್ರಾಮದಲ್ಲಿ ಮೃತನ ತಂದೆ ತಾಯಿ ಮಾತ್ರ ವಾಸಮಾಡುತ್ತಿದ್ದರು.

Viral Video: ಆಗಸದಲ್ಲೇ ಬೆಂಕಿ ಚೆಂಡು; ಜಪಾನ್‌ನ ಸ್ಪೇಸ್‌ ಒನ್‌ ಕೈರೋಸ್‌ ರಾಕೆಟ್‌ ಉಡಾವಣೆ ಮತ್ತೆ ವಿಫಲ!

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಅಪಘಾತ
ಬೆಂಗಳೂರು
ಕರ್ನಾಟಕ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved