ಉದ್ಯಮ ಯಾವುದೇ ಇರಲಿ, ಈ 4 ಮಾರ್ಕೆಟಿಂಗ್ ತಂತ್ರ ಬಳಸಿದ್ರೆ ದುಡ್ಡು ಮಾಡೋದು ಸುಲಭ!

ಸ್ಟಾರ್ಟ್ ಅಪ್ ಅಥವಾ ಯಾವುದೇ ಉದ್ಯಮ ಪ್ರಾರಂಭಿಸೋರು ಸೂಕ್ತ ಮಾರುಕಟ್ಟೆ ತಂತ್ರಗಳನ್ನು ಅನುಸರಿಸೋದು ಅತ್ಯಗತ್ಯ. ಅದರಲ್ಲೂ ಈ 4 ಮಾರುಕಟ್ಟೆ ತಂತ್ರಗಳನ್ನು ಅನುಸರಿಸಿದ್ರೆ ಸುಲಭವಾಗಿ ಯಶಸ್ಸು ಸಾಧಿಸಬಹುದು. 

4 effective marketing strategies that work wonders for any business anu

Business Desk: ಇಂದಿನ ಸ್ಪರ್ಧಾತ್ಮಕ ಉದ್ಯಮ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಎಲ್ಲರಿಗಿಂತ ಭಿನ್ನ ಯೋಚನೆ ಹಾಗೂ ನಡೆ ಎರಡೂ ಅಗತ್ಯ. ಆಗ ಮಾತ್ರ ಗುಂಪಿನಲ್ಲಿ ನಾವು ಎದ್ದು ಕಾಣಲು ಸಾಧ್ಯ. ವಿಶಿಷ್ಟ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುವ ಮೂಲಕ ಗ್ರಾಹಕರ ಗಮನ ಸೆಳೆಯಬಹುದು ಹಾಗೂ ಈ ಕ್ಷೇತ್ರದಲ್ಲಿ ಇತರರಿಗಿಂತ ನೀವು ಭಿನ್ನವಾಗಿ ನಿಲ್ಲಬಹುದು. ಇತ್ತೀಚಿನ ದಿನಗಳಲ್ಲಿ ಉದ್ಯಮಗಳು ಕೂಡ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಂಡು ತಮ್ಮ ಉದ್ಯಮ ವಿಸ್ತರಿಸಿಕೊಳ್ಳುತ್ತಿವೆ. ಉದ್ಯಮದ ಬೆಳವಣಿಗೆಗೆ ಪರಿಣಾಮಕಾರಿ ಮಾರುಕಟ್ಟೆ ತಂತ್ರಗಳನ್ನು ಅನುಸರಿಸೋದು ಅಗತ್ಯ. ಕೆಲವೊಂದು ಮಾರುಕಟ್ಟೆ ತಂತ್ರಗಳನ್ನು ಅನುಸರಿಸುವ ಮೂಲಕ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಿದೆ. ಹಾಗಾದ್ರೆ ಅಂಥ ಮಾರುಕಟ್ಟೆ ತಂತ್ರಗಳು ಯಾವುವು? ಇಲ್ಲಿದೆ ಮಾಹಿತಿ.

1.ವಿಶ್ವಾಸಾರ್ಹತೆ ನಿರ್ಮಾಣ: ಉದ್ಯಮದ ನಿರ್ದಿಷ್ಟ ವಲಯದಲ್ಲಿ ನೀವು ಪರಿಣತಿ ಹೊಂದಿಲ್ಲದಿದ್ದರೆ ಗ್ರಾಹಕರು ನಿಮ್ಮ ಬಳಿ ಏಕೆ ಬರುತ್ತಾರೆ, ಅಲ್ವಾ? ನೀವು ಉತ್ತಮ ಉತ್ಪನ್ನಗಳನ್ನು ನೀಡಿದಾಗ ಅಥವಾ ಅವರ ಅಗತ್ಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದಾಗ ನಿಮ್ಮ ಸಂಸ್ಥೆ ಕುರಿತು ಅವರಿಗೆ ವಿಶ್ವಾಸಾರ್ಹತೆ ಬೆಳೆಯುತ್ತದೆ. ಈ ರೀತಿ ವಿಶ್ವಾಸಾರ್ಹತೆ ನಿರ್ಮಾಣಕ್ಕಿರುವ ಅತ್ಯುತ್ತಮ ಮಾರ್ಗವೆಂದರೆ ಸೂಕ್ತವಾದ ಮಾಹಿತಿಯನ್ನು ಅವರಿಗೆ ನೀಡೋದು. ನಿಮ್ಮ ಉತ್ಪನ್ನ ಅಥವಾ ಸೇವೆಯ ವಿಶೇಷತೆ ಏನು? ಅದರಿಂದ ಯಾವೆಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ಮಾಹಿತಿ ಒದಗಿಸಬೇಕು. ಈ ಮೂಲಕ ನೀವು ಗ್ರಾಹಕರ ವಿಶ್ವಾಸಾರ್ಹತೆ ಗಳಿಸಲು ಪ್ರಯತ್ನಿಸಬೇಕು.

ಮಾಡಿದ ತಪ್ಪನ್ನೇ ಮತ್ತೆ ಮಾಡ್ಬೇಡಿ;ಸ್ಟಾರ್ಟ್ ಅಪ್ ಪ್ರಾರಂಭಿಸಿರೋ ಯುವಜನರಿಗೆ ರಿತೇಶ್ ಅಗರ್ವಾಲ್ ಕಿವಿಮಾತು

2.ಸಮುದಾಯ (Community) ನಿರ್ಮಾಣ: ನೀವು ಯಾವುದಾದರೂ ಪೋಸ್ಟ್ ಅಥವಾ ವಿಡಿಯೋ ಹಾಕಿದಾಗ ಅದಕ್ಕೆ ಪ್ರತಿಕ್ರಿಯಸುವ ಒಂದಿಷ್ಟು ಜನರು ಇರುತ್ತಾರೆ. ಅಂಥವರನ್ನು ಒಟ್ಟು ಸೇರಿಸಿ ಒಂದು ಸಮುದಾಯ (Community) ನಿರ್ಮಾಣ ಮಾಡಬೇಕು. ಇದನ್ನು ಹೇಗೆ ಮಾಡೋದು ಅಂತೀರಾ? ವಾಟ್ಸಾಪ್, ಫೇಸ್ ಬುಕ್, ಟೆಲಿಗ್ರಾಮ್, ಮೀಟ್ ಅಪ್ಸ್, ಪಾಡ್ ಕಾಸ್ಟ್ ಇತ್ಯಾದಿ ಮೂಲಕ ಇದನ್ನು ಮಾಡಬಹುದು. ಯಾವಾಗ ನಿಮ್ಮ ವೀಕ್ಷಕರನ್ನು ಒಟ್ಟಿಗೆ ತರಲಾಗುತ್ತದೋ ಆಗ ಅಲ್ಲೊಂದು ಸಂಬಂಧ ನಿರ್ಮಾವಾಗುತ್ತದೆ. 

3.ಗಮನ ಸೆಳೆಯೋದು: ಬಹುತೇಕ ಜನರು ಸೋಷಿಯಲ್ ಮೀಡಿಯಾದಲ್ಲಿ ಏನನ್ನು ನೋಡುತ್ತಾರೆ ಅಥವಾ ಎಂಥ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ? ಇದಕ್ಕೆ ಉತ್ತರ ಮನರಂಜನೆ. ಹೀಗಾಗಿ ನಿಮ್ಮ ಮಾರುಕಟ್ಟೆ ತಂತ್ರಗಳು ಹಾಗೂ ಕಂಟೆಂಡ್ ಕೂಡ ಜನರಿಗೆ ಮಾಹಿತಿ ನೀಡುವ ಜೊತೆಗೆ ಮನರಂಜನೆ ಕೂಡ ಒದಗಿಸಬೇಕು. ಮನರಂಜನೆ ನೀಡುವ ಕಂಟೆಂಟ್ ಗಳು ಜನರ ಗಮನ ಸೆಳೆಯುತ್ತವೆ. ಅಲ್ಲದೆ, ಅವರು ಬೇರೆ ವಿಡಿಯೋಗೆ ಹೋಗದೆ ನಿಮ್ಮ ವಿಡಿಯೋವನ್ನೇ ನೋಡುವಂತೆ ಮಾಡುತ್ತದೆ. ಇದರಿಂದ ಅವರಿಗೆ ನಿಮ್ಮ ಉತ್ಪನ್ನ ಅಥವಾ ಸೇವೆಯ ಮಾಹಿತಿ ಸಿಗುತ್ತದೆ. ಹೀಗಾಗಿ ಗ್ರಾಹಕರ ಗಮನ ಸೆಳೆಯುವಂತಹ ಜಾಹೀರಾತುಗಳನ್ನು ಸೃಷ್ಟಿಸಲು ಪ್ರಯತ್ನಿಸಿ.

4.ಸ್ಪರ್ಧಾ ಮಾರ್ಕೆಟಿಂಗ್ : ಅಂದ್ರೆ ನಿಮ್ಮ ಬ್ರ್ಯಾಂಡ್ ಹೆಸರಿನಲ್ಲಿ ನೀವು ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು. ಇಲ್ಲವೇ ಜನಪ್ರಿಯ ಕಾರ್ಯಕ್ರಮಗಳಿಗೆ ನೀವು ಪ್ರಾಯೋಜಕರಾಗಬೇಕು. ಆಗ ನಿಮ್ಮ ಬ್ರ್ಯಾಂಡ್ ಅನ್ನು ಜನರು ಗುರುತಿಸುತ್ತಾರೆ. ಇದು ಜನರನ್ನು ನಿಮ್ಮ ಉತ್ಪನ್ನ ಅಥವಾ ಸೇವೆಯತ್ತ ಸೆಲೆಯಲು ನೆರವು ನೀಡುತ್ತದೆ.

ವಯಸ್ಸು 60 ಆಯ್ತು, ಉದ್ಯಮ ಪ್ರಾರಂಭಕ್ಕೆ ಸೂಕ್ತವಲ್ಲಅಂತೀರಾ?ಆತನೂ ಹೀಗೆ ಯೋಚಿಸಿದ್ರೆ ಇಂದು KFC ಇರ್ತಿರಲಿಲ್ಲ!

ಇಂಥ ವಿಭಿನ್ನ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಬಹುದು. ಹಾಗೆಯೇ ಹೊಸ ಗ್ರಾಹಕರನ್ನು ಕೂಡ ಸೆಳೆಯಲು ಸಾಧ್ಯವಿದೆ. ಅಲ್ಲದೆ, ಮಾರುಕಟ್ಟೆ ತಂತ್ರಗಳು ಬ್ರ್ಯಾಂಡ್ ಅನ್ನು ಬಲಿಷ್ಠಗೊಳಿಸುವ ಜೊತೆಗೆ ಗ್ರಾಹಕರ ಜೊತೆಗೆ ಉತ್ತಮ ಬಾಂಧವ್ಯ ನಿರ್ಮಾಣಕ್ಕೆ ನೆರವು ನೀಡುತ್ತದೆ. ಹೀಗಾಗಿ ನೀವು ಪುಟ್ಟ ಸ್ಟಾರ್ಟ್ ಅಪ್ ಹೊಂದಿರಿ ಅಥವಾ ದೊಡ್ಡ ಕಾರ್ಪೊರೇಷನ್ ಹೊಂದಿದ್ದರೂ ಇಂಥ ಮಾರುಕಟ್ಟೆ ತಂತ್ರಗಳು ನಿಮಗೆ ನೆರವು ನೀಡುವ ಜೊತೆಗೆ ನೀವು ಬಯಸಿದ ರೀತಿಯಲ್ಲಿ ಮುಂದುವರಿಯಲು ನೆರವು ನೀಡುತ್ತವೆ. 


 

Latest Videos
Follow Us:
Download App:
  • android
  • ios