ವಯಸ್ಸು 60 ಆಯ್ತು, ಉದ್ಯಮ ಪ್ರಾರಂಭಕ್ಕೆ ಸೂಕ್ತವಲ್ಲಅಂತೀರಾ?ಆತನೂ ಹೀಗೆ ಯೋಚಿಸಿದ್ರೆ ಇಂದು KFC ಇರ್ತಿರಲಿಲ್ಲ!

ಕೆಲವರಿಗೆ ಉದ್ಯಮ ಪ್ರಾರಂಭಿಸಬೇಕೆಂಬ ಹಂಬಲ, ಬಂಡವಾಳ ಎರಡೂ ಇದ್ದರೂ ವಯಸ್ಸಾಯಿತು ಎಂಬ ಕಾರಣಕ್ಕೆ ಸುಮ್ಮನಿರುತ್ತಾರೆ. ಆದರೆ, ಉದ್ಯಮ ಪ್ರಾರಂಭಿಸೋದಕ್ಕೂ ವಯಸ್ಸಿಗೂ ಸಂಬಂಧವಿಲ್ಲ  ಎಂಬುದನ್ನು ಕೆಎಫ್ ಸಿ ಸ್ಥಾಪಕ ಕರ್ನಲ್ ಸ್ಯಾಂಡ್ರಸ್ ಸಾಬೀತುಪಡಿಸಿದ್ದಾರೆ. 

There is No Age For Starting A Business And KFC Founder Colonel Sanders Story Is Proof anu

Business Desk: ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಲು ಅಥವಾ ಉದ್ಯಮದಲ್ಲಿ ಯಶಸ್ಸು ಕಾಣಲು ಯೌವನದಲ್ಲೇ  ಉದ್ಯಮ ಪ್ರಾರಂಭಿಸಬೇಕು ಎಂಬ ನಂಬಿಕೆ ಕೆಲವರಲ್ಲಿರುತ್ತದೆ. ಜೀವನದಲ್ಲಿ ಬೇಗ ಉದ್ಯಮ ಪ್ರಾರಂಭಿಸಿದ್ರೆ ಮಾತ್ರ ಯಶಸ್ಸು ಕಾಣಬಹುದು, ದುಡ್ಡು ಮಾಡಬಹುದು ಎಂಬುದು ಸಾಮಾನ್ಯ ಭಾವನೆ. ಆದರೆ, ಇದೊಂದು ಸುಳ್ಳು ನಂಬಿಕೆ, ಉದ್ಯಮ ಪ್ರಾರಂಭಿಸಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಕೆಎಫ್ ಸಿ ಸಂಸ್ಥಾಪಕ ಕರ್ನಲ್ ಹರ್ಲ್ಯಾಂಡ್ ಸ್ಯಾಂಡ್ರೆಸ್ ಸಾಬೀತುಪಡಿಸಿದ್ದಾರೆ. ತನ್ನ 62ನೇ ವಯಸ್ಸಿನಲ್ಲಿ ಉದ್ಯಮ ಪ್ರಾರಂಭಿಸಿದ ಸ್ಯಾಂಡ್ರೆಸ್ ಜನಪ್ರಿಯ ಬ್ರ್ಯಾಂಡ್ ವೊಂದನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾದರು. ಇಂದು ಕೆಎಫ್ ಸಿ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದೆ.  ಆಹಾರೋದ್ಯಮ ಪ್ರಾರಂಭಿಸುವ ಮುನ್ನ  ಸ್ಯಾಂಡರ್ಸ್ ಕೆಂಟುಕಿಯಲ್ಲಿ ರಾಜ್ಯ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದರು ಕೂಡ. ನಿವೃತ್ತಿ ವಯಸ್ಸಿನಲ್ಲಿ ರೆಸ್ಟೋರೆಂಟ್ ತೆರೆದು ವಿಭಿನ್ನ ರುಚಿಯ ಮೂಲಕ ಸ್ಯಾಂಡ್ರಸ್ ದೊಡ್ಡ ಸಂಸ್ಥೆ

ಸ್ಯಾಂಡ್ರಸ್ ಅಮೆರಿಕದಲ್ಲಿ ಕೆಂಟುಕಿ ಎಂಬಲ್ಲಿ ಸ್ಯಾಂಡ್ರಸ್ ರೆಸ್ಟೋರೆಂಟ್ ಪ್ರಾರಂಭಿಸಿದರು. ಇವರು ಬೇಯಿಸಿದ ಕೋಳಿಮಾಂಸಕ್ಕೆ ಸಿದ್ಧಪಡಿಸಿದ 11 ಗಿಡಮೂಲಿಕೆ ರೆಸಿಪಿಗಳು ಸ್ಥಳೀಯವಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಆ ಭಾಗದಲ್ಲಿಕೆಂಟುಕಿ ಫ್ರೈಡ್ ಚಿಕನ್ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಮುಂದೆ ಇದೇ ಸಂಸ್ಥೆ ಕೆಎಫ್ ಸಿ ಹೆಸರಿನ ಮೂಲಕ ಜನಪ್ರಿಯತೆ ಗಳಿಸಿತು. ಸ್ಯಾಂಂಡ್ರಸ್ ಗೆ ನಿಜವಾದ ಯಶಸ್ಸು ಸಿಕ್ಕಿದ್ದು 74ನೇ ವಯಸ್ಸಿನಲ್ಲಿ. ಆಗ ಅವರು ಜಾನ್ ವೈ ಅರ್ಥಿ, ಜಾಕ್ ಬ್ರೌನ್ ಜೂನಿಯರ್ ಮತ್ತು ಜಾಕ್ ಸಿ ಮ್ಯಾಸ್ಸೆ ಅವರನ್ನು ಭೇಟಿಯಾದರು. ಅವರು ಕೆಂಟುಕಿ ರೆಸ್ಟೋರೆಂಟ್ ಫ್ರಾಂಚೈಸಿ ಹೊಂದಲು ಆಸಕ್ತಿ ಹೊಂದಿದ್ದರು. ಅವರು ಸ್ಯಾಂಡ್ರಸ್ ಗೆ ಉತ್ಪನ್ನದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಭರವಸೆ ಕೂಡ ನೀಡಿದರು. ಇಲ್ಲಿಂದ ಕೆಎಫ್ ಸಿಯ ಯಶಸ್ಸಿನ ಕಥೆ ಪ್ರಾರಂಭವಾಯಿತು.

ಇನ್ಫೋಸಿಸ್ ಷೇರಿನ ಲಾಭಾಂಶ ತೆಗೆದುಕೊಂಡು ಬೇರೆಯಾದ ನಾರಾಯಣ ಮೂರ್ತಿ ಮಗ ರೋಹನ್ ಮೂರ್ತಿ!

1964ರಲ್ಲಿ ಸ್ಯಾಂಡ್ರಸ್ ಕಂಪನಿಯನ್ನು 2 ಮಿಲಿಯನ್ ಡಾಲರ್ ಗೆ ಜಾಕ್ ಬ್ರೌನ್ ಹಾಗೂ ಜಾಕ್ ಮೆಸ್ಸೆ ಅವರಿಗೆ ಮಾರಾಟ ಮಾಡಿದರು. ಕೆಎಫ್ ಸಿಯ ಹೊಸ ಮಾಲೀಕರು ಸ್ಯಾಂಡ್ರಸ್ ಮುಖವನ್ನು ಒಪ್ಪಿಕೊಂಡರು. ಹಾಗೆಯೇ ಬ್ರ್ಯಾಂಡ್ ಅನ್ನು ಸ್ಯಾಂಡ್ರಸ್ ಫೋಟೋದ ಮೂಲಕವೇ ಜನಪ್ರಿಯಗೊಳಿಸಿದರು. ಇಂದಿಗೂ ಕೆಎಫ್ ಸಿಯಲ್ಲಿ ಸ್ಯಾಂಡ್ರಸ್ ಚಿತ್ರವಿರೋದನ್ನು ನೋಡಬಹುದು. ಸ್ಯಾಂಡ್ರಸ್ ಅನ್ನು ಕಂಪನಿ ಬ್ರ್ಯಾಂಡ್ ಅಂಬಾಸೆಡರ್ ಆಗಿ ನೇಮಕ ಮಾಡಿಕೊಂಡಿರೋದಕ್ಕೆ ಅವರಿಗೆ ಜೀವನಪರ್ಯಂತ ಪ್ರತಿವರ್ಷ ಸುಮಾರು 40,000 ಡಾಲರ್ ವೇತನ ಕೂಡ ನೀಡಲಾಯಿತು. ಸ್ಯಾಂಡ್ರಸ್ 1980ರಲ್ಲಿ ನಿಧನರಾದರು.

ಬ್ರೌನ್ ಕೆಫ್ ಸಿಯನ್ನು 1971ರಲ್ಲಿ ಹುಬ್ಲಿನ್ ಗೆ ಮಾರಾಟ ಮಾಡಿದರು. 1971ರಲ್ಲಿ ಆರ್ ಜೆ ರೆನೋಲ್ಡ್ಸ್ ಎಂಬ ತಂಬಾಕು ಕಂಪನಿ ಕೆಎಫ್ ಸಿಯನ್ನು ಖರೀದಿಸಿತು. ನಾಲ್ಕು ವರ್ಷಗಳ ಬಳಿಕ ರೆನೋಲ್ಡ್ಸ್ ಕೆಎಫ್ ಸಿಯನ್ನು 850 ಮಿಲಿಯನ್ ಡಾಲರ್ ಗೆ ಪೆಪ್ಸಿಕೋಗೆ ಮಾರಾಟ ಮಾಡಿತು. ಈ ಸಂಸ್ಥೆ ಆ ಬಳಿಕ ಯಮ್ ಎಂಬ ಕಂಪನಿಯನ್ನು 1997ರಲ್ಲಿ ಪ್ರಾರಂಭಿಸಿತು. ಯಮ್ ಬ್ರ್ಯಾಂಡ್ ಕೆಎಫ್ ಸಿಯ ಮಾತೃಸಂಸ್ಥೆಯಾಯಿತು. 

ಏನೂ ಮಾಡದೇ 1.27 ಕೋಟಿ ಪಡೆವ ಕೊಹ್ಲಿ, ತಿಂಗಳಿಗೆ 18 ಲಕ್ಷ ಪಡೆವ ಅಭಿಷೇಕ್ ಬಚ್ಚನ್; ಇಲ್ಲಿದೆ ಹೂಡಿಕೆ ಯೋಜನೆ

ಕೆಎಫ್ ಸಿಯ ಯಶೋಗಾಥೆ ಉದ್ಯಮ ಜಗತ್ತಿಗೆ ದೊಡ್ಡ ಮಾದರಯಾಗಿದೆ. ಇಂದು ಉದ್ಯಮ ಸಂಬಂಧಿ ಕೋರ್ಸ್ ಗಳಲ್ಲಿ ಕೆಎಫ್ ಸಿ ಯಶೋಗಾಥೆಯನ್ನು ಮಾದರಿಯಾಗಿಟ್ಟುಕೊಂಡು ಬೋಧಿಸಲಾಗುತ್ತಿದೆ. ಕೆಎಫ್ ಸಿ ಮಾಲೀಕತ್ವದಲ್ಲಿ ನಾಲ್ಕು ಬಾರಿ ಬದಲಾವಣೆಗಳಾಗಿದ್ದರೂ ಇಂದಿಗೂ ರುಚಿಯಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಿಲ್ಲ. ಕೆಎಫ್ ಸಿ 145 ದೇಶಗಳಲ್ಲಿ 25,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ ಆಹಾರ ಸರಪಳಿಯಾಗಿದೆ.

Latest Videos
Follow Us:
Download App:
  • android
  • ios