ಶಾವೊ ಚುನ್ ಚೆನ್ ವಾರಕ್ಕೆ ಕೇವಲ ಮೂರು ಗಂಟೆ ಕೆಲಸ ಮಾಡುತ್ತಾರೆ ಮತ್ತು ಥೈಲ್ಯಾಂಡ್‌ನಲ್ಲಿ ಪತ್ನಿಯೊಂದಿಗೆ ಆರಾಮದಾಯಕ ಜೀವನ ನಡೆಸುತ್ತಿದ್ದಾರೆ. ಗೂಗಲ್‌ನಿಂದ ವಜಾಗೊಂಡ ನಂತರ, ತಮ್ಮ ಹೂಡಿಕೆಯಿಂದ ಜೀವನ ನಡೆಸಲು ಸಾಧ್ಯ ಎಂದು ಅರಿತುಕೊಂಡರು.

ಒಂದು ಕಾಲದಲ್ಲಿ ಶಾವೊ ಚುನ್ ಚೆನ್ ಸಿಂಗಾಪುರದಲ್ಲಿ ಕಾರ್ಪೊರೇಟ್ ಉದ್ಯೋಗ ಮಾಡುತ್ತಾ ವಾರಕ್ಕೆ 40 ಗಂಟೆಗಳಿಗಿಂತ ಹೆಚ್ಚು ದುಡಿಯುತ್ತಿದ್ದರು. ಇಂದು ಅವರ ಜೀವನಶೈಲಿ ತೀವ್ರವಾಗಿ ಬದಲಾಗಿದೆ. ವಾರಕ್ಕೆ ಕೇವಲ ಮೂರು ಗಂಟೆ ಕೆಲಸ ಮಾಡುತ್ತಾರೆ, ಥೈಲ್ಯಾಂಡ್‌ನಲ್ಲಿ ಪತ್ನಿ ಮತ್ತು ನನಗೆ ಬದುಕಲು ಈ ದುಡಿಮೆ ಸಾಕು ಎನ್ನುತ್ತಿದ್ದಾರೆ. ತಮ್ಮ ಜೀವನದ ಬಹುಪಾಲು ಕಳೆದಿರುವ ಅವರಿಗೀಗ 39 ವರ್ಷ. ನವೆಂಬರ್ 2024 ರಲ್ಲಿ ತಮ್ಮ ಪತ್ನಿಯೊಂದಿಗೆ ಚಿಯಾಂಗ್ ಮಾಯ್‌ಗೆ ಸ್ಥಳಾಂತರಗೊಂಡರು.

ವಾರಕ್ಕೆ 3 ಗಂಟೆ ಕೆಲಸ

ಸಿಂಗಾಪುರದಲ್ಲಿ ಸಹಾಯಕ ಉಪನ್ಯಾಸಕನಾಗಿ ವಾರಕ್ಕೆ ಮೂರು ಗಂಟೆ ಕೆಲಸ ಮಾಡುತ್ತಾರೆ. ಇದರ ಜೊತೆಗೆ YouTube ಚಾನೆಲ್ ಮೂಲಕವೂ ಆದಾಯವನ್ನು ಗಳಿಸುತ್ತಾರೆ, YouTube ಮೂಲಕ ಕೂಡ ಶೈಕ್ಷಣಿಕ ವಿಷಯ, ತರಬೇತಿ ನೀಡುತ್ತಾರೆ. ಇದರ ಜೊತೆಗೆ ಕ್ಲೈಂಟ್ ಗಳನ್ನು ಕೂಡ ಹೊಂದಿದ್ದು, ಗಂಟೆಗೆ $500 ವರೆಗೆ ಶುಲ್ಕ ವಿಧಿಸುತ್ತಾರೆ. ಜೀವನ ವೆಚ್ಚ ಗಮನಾರ್ಹವಾಗಿ ಕಡಿಮೆ ಇರುವ ಥೈಲ್ಯಾಂಡ್‌ನಲ್ಲಿ ಕನಿಷ್ಠ ಕೆಲಸದೊಂದಿಗೆ ಆರಾಮದಾಯಕ ಜೀವನಶೈಲಿಯನ್ನು ಆನಂದಿಸಲು ಸಾಧ್ಯವಾಗುತ್ತದೆ.

ಸಿಂಗಾಪುರದ ದುಬಾರಿ ಜೀವನಕ್ಕಿಂತ ಥೈಲ್ಯಾಂಡ್‌ನ ಆರಾಮ ಜೀವನ

ಸಿಂಗಾಪುರದಲ್ಲಿ, ಅವರು ತಮ್ಮ ಎರಡು ಕೋಣೆ ಇರುವ ಕಾಂಡೋಮಿನಿಯಂಗೆ ತಿಂಗಳಿಗೆ ಸುಮಾರು $2,450 ಪಾವತಿಸುತ್ತಿದ್ದರಂತೆ. ಈಗ, ಅವರು ತಿಂಗಳಿಗೆ $450 ವೆಚ್ಚವಾಗುವ ಹೊಚ್ಚ ಹೊಸ ಒಂದು ಮಲಗುವ ಕೋಣೆ ಕಾಂಡೋದಲ್ಲಿ ವಾಸಿಸುತ್ತಿದ್ದಾರೆ. ಇದು ಹೆಚ್ಚು ಐಷಾರಾಮಿಯಾಗಿದೆಯಂತೆ. ಅವರು ಮೂರು ಗಂಟೆಗಳ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಅನ್ನು ಕಲಿಸುತ್ತಾರೆ, ಅದು ಅವರಿಗೆ ಪ್ರತಿ ತಿಂಗಳು 2,000 ರಿಂದ 4,000 ಸಿಂಗಾಪುರ್ ಡಾಲರ್‌ಗಳವರೆಗೆ (ಸುಮಾರು $1,540 ರಿಂದ $3,070 USD) ತಂದುಕೊಡುತ್ತದೆ. ಆ ಆದಾಯವು ಅವರ ಪ್ರಯಾಣ ಮತ್ತು ಥೈಲ್ಯಾಂಡ್‌ನಲ್ಲಿ ದಂಪತಿಗಳ ಜೀವನ ವೆಚ್ಚವನ್ನು ಆರಾಮವಾಗಿ ಭರಿಸುತ್ತದೆ.

ಗೂಗಲ್‌ ನಿಂದ ವಜಾ, ಬದಲಾದ ಜೀವನ

2024ರ ಫೆಬ್ರವರಿಯಲ್ಲಿ ಗೂಗಲ್ ಕಂಪನಿಯಿಂದ ಚೆನ್ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಆಗ ಏನು ಮಾಡಬೇಕೆಂದು ತೋಚದಾಯಿತು. ಜೊತೆಗೆ ಜೀವನಕ್ಕೆ ಮಹತ್ವದ ತಿರುವು ಕೊಟ್ಟಿತು. ಕೆಲಸ ಕಳೆದುಕೊಂಡ ಬಳಿಕ ಜೀವನವನ್ನು ಮರುರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ಸಾಧಿಸಿದ್ದಾರೆಂದು ಅರಿತುಕೊಂಡರು. ಗೂಗಲ್‌ನಲ್ಲಿ ಸುಮಾರು ಒಂದು ದಶಕದ ಕಾಲ, ಚೆನ್ ಮಿತವ್ಯಯದಿಂದ ಬದುಕಿದರು ಮತ್ತು ನಿಯಮಿತವಾಗಿ ತಮ್ಮ ಆದಾಯದ ಅರ್ಧದಷ್ಟು ಹೂಡಿಕೆ ಮಾಡಿದರು. ಆದ್ದರಿಂದ ಟೆಕ್ ದೈತ್ಯ ಫೆಬ್ರವರಿ 2024 ರಲ್ಲಿ ಅನಿರೀಕ್ಷಿತವಾಗಿ ಅವರನ್ನು ಕೆಲಸದಿಂದ ತೆಗೆದುಹಾಕಿದಾಗ ಹೂಡಿಕೆ ಮಾಡಿದ್ದು ಬದುಕಿಗೆ ಧೈರ್ಯ ಕೊಟ್ಟಿತು. ಇದುವೇ ಅವರನ್ನು ಕೆಲಸ ಇಲ್ಲಾದಾಗ ಸ್ವಂತ ಏನಾದರೂ ಮಾಡಬೇಕೆಂಬ ಹಠಕ್ಕೆ ಬುನಾದಿಯಾಯ್ತು.

ದುಡಿದ ಹಣವನ್ನು ಉಳಸಿದ್ದ ಜೆನ್

ಚೆನ್ ಅವರನ್ನು ಕೆಲಸದಿಂದ ವಜಾಗೊಳಿಸಿದ ಸಮಯದಲ್ಲಿ ಅವರ ಬಂಡವಾಳವು ಸುಮಾರು $2 ಮಿಲಿಯನ್ ಮೌಲ್ಯದ್ದಾಗಿತ್ತು ಎಂದು CNBC ಮೇಕ್ ಇಟ್ ಪರಿಶೀಲಿಸಿದ ದಾಖಲೆಗಳು ತಿಳಿಸಿವೆ . 4% ನಿಯಮವನ್ನು ಅನ್ವಯಿಸುವ ಮೂಲಕ, ಹಣದುಬ್ಬರಕ್ಕೆ ಸರಿಹೊಂದಿಸಿ ವಾರ್ಷಿಕವಾಗಿ ಸುಮಾರು $80,000 ಹಿಂಪಡೆಯಬಹುದು ಎಂದು ಅವರು ಲೆಕ್ಕಹಾಕಿದರು, ಇದು ಹಣದ ಕೊರತೆಯಿಲ್ಲದೆ ಅವರನ್ನು ನಿಯಮಿತ ಸಂಬಳದ ಅಗತ್ಯದಿಂದ ಮುಕ್ತಗೊಳಿಸಿತು. ನಾನು ನನ್ನ ಜೀವನದ ಕೊನೆಯ 14 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಮತ್ತು ವಜಾಗೊಳಿಸುವಿಕೆಯಿಂದಾಗಿ, ನಾನು ವಿರಾಮ ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿತ್ತು. ಶಿಸ್ತಿನಿಂದ ಖರ್ಚುಮಾಡಿದ್ದರಿಂದ, ವಜಾಗೊಳಿಸುವ ವೇಳೆಗೆ ಸುಮಾರು $2 ಮಿಲಿಯನ್ ಹೂಡಿಕೆ ಬಂಡವಾಳವಿತ್ತು. ಈ ಹಣದಿಂದ ವರ್ಷಕ್ಕೆ ಸುಮಾರು $80,000 (ಅಂದಾಜು ₹66 ಲಕ್ಷ) ಬಳಸಬಹುದು. ಹೆಚ್ಚಿನ ಕೆಲಸವಿಲ್ಲದೇ ಬದುಕಲು ಸಾಕು ಎಂಬುದನ್ನು ಅರಿತುಕೊಂಡರು.

ಪ್ರತಿಯೊಬ್ಬ ಕಲಿಯಬೇಕಾದ್ದೇನು ?

ಅವರು ಈಗ ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ಎಂಬ ನಗರದಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಅವರು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ವಾರಕ್ಕೆ 3 ಗಂಟೆಗಳ ಡಿಜಿಟಲ್ ಮಾರ್ಕೆಟಿಂಗ್ ತರಗತಿ ಕಲಿಸುತ್ತಾರೆ. ಈ ಕೆಲಸದಿಂದ ಅವರಿಗೆ $2,000 ರಿಂದ $4,000 SGD ಗಳಿಕೆಯಾಗುತ್ತದೆ, ಇದು ಥೈಲ್ಯಾಂಡ್‌ನಲ್ಲಿ ಜೀವನ ನಡೆಸಲು ಸಾಕು. ಇತರೆ ಆದಾಯ ಮೂಲಗಳೆಂದರೆ ಚೆನ್ YouTube ಚಾನೆಲ್‌ ಮೂಲಕ ಶೈಕ್ಷಣಿಕ ವಿಷಯ ಹಂಚಿಕೊಳ್ಳುತ್ತಾರೆ. ತರಬೇತಿ ನೀಡುವ ಮೂಲಕ ಕೆಲವೊಮ್ಮೆ ಗಂಟೆಗೆ $500 ಗಳಿಸುತ್ತಾರೆ. ವಜಾಗೊಳಿಸುವಿಕೆಯು ನನ್ನ ಅಹಂಕಾರಕ್ಕೆ ಹೊಡೆತ ನೀಡಿತ್ತು. ಆದರೆ ಅದು ನನ್ನನ್ನು ನಿಜವಾಗಿಯೂ ನಾನು ಬಯಸುವ ಜೀವನದ ಬಗ್ಗೆ ಯೋಚಿಸಲು ಪ್ರೇರೇಪಿಸಿತು ಎನ್ನುತ್ತಾರೆ. ಇದರಿಂದ ಪ್ರತಿಯೊಬ್ಬ ಕಲಿಯಬೇಕಾದ್ದೇನು ಎಂದರೆ ಆದಾಯ ವನ್ನು ಉಳಿಸಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಆರಾಮ ಜೀವನ ನಡೆಸಿ.