Asianet Suvarna News Asianet Suvarna News

Layoff: ಕಂಪನಿಯ ಶೇ. 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಶೇರ್‌ಚಾಟ್‌..!

ಶೇರ್‌ಚಾಟ್ ತನ್ನ ಸೀನಿಯರ್ ಮ್ಯಾನೇಜ್‌ಮೆಂಟ್ ಮತ್ತು ಮಿಡ್-ಜುನಿಯರ್ ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಸರಿಸುಮಾರು 2,100 ಉದ್ಯೋಗಿಗಳ ಪೈಕಿ ಸುಮಾರು 600 ಮಂದಿಯನ್ನು ಕಳೆದ ಕೆಲವು ದಿನಗಳಲ್ಲಿ ವಜಾಗೊಳಿಸಿದೆ.

sharechat lays off 20 percent employees ash
Author
First Published Jan 16, 2023, 3:03 PM IST

ಭಾರತದ ಪ್ರಮುಖ ಸಂಸ್ಥೆಗಳಲ್ಲೊಂದಾದ ಶೇರ್‌ಚಾಟ್‌ನ ಪೋಷಕ ಕಂಪನಿಯಾದ ಮೊಹಲ್ಲಾ ಟೆಕ್ ಪ್ರೈವೇಟ್ ಸುಮಾರು 600 ಉದ್ಯೋಗಿಗಳನ್ನು ವಜಾಗೊಳಿಸಿದೆ. 255 ಮಿಲಿಯನ್ ಡಾಲರ್‌ನಷ್ಟು ಫಂಡ್‌ ಅನ್ನು ಸಂಗ್ರಹಿಸಿದ ಕೇವಲ 6 ತಿಂಗಳ ಬಳಿಕ ಶೇರ್‌ಚಾಟ್‌ ಸಂಸ್ಥೆ ಈ ನಿರ್ಧಾರ ಮಾಡಿದೆ. ಹಲವು ಸ್ಟಾರ್ಟಪ್‌ಗಳು ಹಾಗೂ ಪ್ರಖ್ಯಾತ ಐಟಿ ಕಂಪನಿಗಳು ವೆಎಚ್ಚ ಕಡಿತದ ಭಾಗವಾಗಿ ಹಲವರನ್ನು ಉದ್ಯೋಗದಿಂದ ವಜಾಗೊಳಿಸುತ್ತಿದ್ದು, ಇದೇ ಸಂದರ್ಭದಲ್ಲಿ ಶೇರ್‌ಚಾಟ್‌ ಸಹ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. 

ಶೇರ್‌ಚಾಟ್ (Share Chat) ತನ್ನ ಸೀನಿಯರ್ ಮ್ಯಾನೇಜ್‌ಮೆಂಟ್ (Senior Management) ಮತ್ತು ಮಿಡ್-ಜುನಿಯರ್ ಮ್ಯಾನೇಜ್‌ಮೆಂಟ್‌ (Mid Junior Management) ವಿಭಾಗದಲ್ಲಿ ಸರಿಸುಮಾರು 2,100 ಉದ್ಯೋಗಿಗಳ ಪೈಕಿ ಸುಮಾರು 600 ಮಂದಿಯನ್ನು ಕಳೆದ ಕೆಲವು ದಿನಗಳಲ್ಲಿ ವಜಾಗೊಳಿಸಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ಮಾಹಿತಿ ನೀಡಿದೆ. ಆದರೆ, ಸುಮಾರು 500 ಉದ್ಯೋಗಿಗಳನ್ನು ಅಥವಾ ಕಂಪನಿಯ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವ ಬಗ್ಗೆ ಶೇರ್‌ಚಾಟ್‌ (Share Chat) ಕಂಪನಿ ಮಾಹಿತಿ ನೀಡಿದೆ. 

ಇದನ್ನು ಓದಿ: ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ 6 ತಿಂಗಳಲ್ಲೇ ಉದ್ಯೋಗದಿಂದ ವಜಾಗೊಂಡ ಐಐಟಿ ಪದವೀಧರ!

ಇಮೇಲ್ ಮೂಲಕ ಕಂಪನಿಯು ಉದ್ಯೋಗಿಗಳಿಗೆ ವಜಾಗೊಳಿಸುವಿಕೆಯ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ, ನೀವು  ಸಂದೇಶವನ್ನು ಓದುತ್ತಿದ್ದರೆ, ಅವರು ಈ ಕ್ರಿಯೆಯಿಂದ ಪ್ರಭಾವಿತರಾಗುವುದಿಲ್ಲ ಎಂದು ವಜಾಗೊಳಿಸದ ಉದ್ಯೋಗಿಗಳಿಗೆ ಸ್ಲ್ಯಾಕ್‌ ಮೂಲಕ ಘೋಷಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲವರು ಮಾಹಿತಿ ನೀಡಿದ್ದಾರೆ. ವಜಾಗೊಂಡ ನೌಕರರಿಗೆ ಪ್ರವೇಶವನ್ನು ಕಡಿತಗೊಳಿಸಲಾಗಿದೆ ಎಂದೂ ಮೂಲಗಳು ಉಲ್ಲೇಖಿಸಿವೆ. 

ಶೇರ್‌ಚಾಟ್‌ ಸಂಸ್ಥೆಗೆ ಇತ್ತೀಚೆಗೆ 255 ಮಿಲಿಯನ್ ಡಾಲರ್‌ನಷ್ಟು ಹಣಕಾಸಿನ ಸಂಗ್ರಹವಾದ ಬಳಿಕ ಅತಿಯಾದ ನೇಮಕಾತಿಯ ಪರಿಣಾಮವಾಗಿ ಸುಮಾರು 600 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದೂ ಕೆಲವರು ಮಾಹಿತಿ ನೀಡಿದ್ದಾರೆ. ವಜಾ ಪ್ರಕ್ರಿಯೆಯ ಭಾಗವಾಗಿ, ಬಾಧಿತ ಉದ್ಯೋಗಿಗಳು ಡಿಸೆಂಬರ್ 2022 ರವರೆಗೆ ತಮ್ಮ ವೇರಿಯಬಲ್ ವೇತನದ 100 ಪ್ರತಿಶತವನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಕಂಪನಿಯು ನೋಟಿಸ್ ಅವಧಿಯ ಒಟ್ಟು ವೇತನವನ್ನು ಮತ್ತು ಕಂಪನಿಯೊಂದಿಗೆ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಎರಡು ವಾರಗಳ ವೇತನವನ್ನು ಎಕ್ಸ್ ಗ್ರೇಷಿಯಾವಾಗಿ ಪಾವತಿಸುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Amazon Layoff: ಅಮೆಜಾನ್‌ನಿಂದ ಭಾರತದಲ್ಲೂ 1000 ನೌಕರರ ವಜಾ

ಜೂನ್ 2023 ರವರೆಗೆ ಶೇರ್‌ಚಾಟ್ ತನ್ನ ಆರೋಗ್ಯ ವಿಮಾ ಪಾಲಿಸಿಯನ್ನು ಇರಿಸುತ್ತದೆ ಮತ್ತು ಉದ್ಯೋಗಿಗಳಿಗೆ ಲ್ಯಾಪ್‌ಟಾಪ್‌ಗಳಂತಹ ತಮ್ಮ ಕೆಲಸದ ಸ್ವತ್ತುಗಳನ್ನು ಅವರ ಬಳಿಯೇ ಇಟ್ಟುಕೊಳ್ಳಲು ಅನುಮತಿಸಲಾಗುತ್ತದೆ. ಇದಲ್ಲದೆ, ಉದ್ಯೋಗಿಗಳು ಪ್ರಸ್ತುತ ಒಟ್ಟು ವೇತನದ ಪ್ರಕಾರ 45 ದಿನಗಳವರೆಗೆ ಬಳಕೆಯಾಗದ ರಜೆಯ ಬಾಕಿಗಳನ್ನು ಎನ್ಕ್ಯಾಶ್ ಮಾಡಬಹುದು. ಅಲ್ಲದೆ, ಹೆಚ್ಚುವರಿಯಾಗಿ, ಅವರ ಸ್ಟಾಕ್ ಆಯ್ಕೆಗಳು ಏಪ್ರಿಲ್ 30, 2023 ರವರೆಗೆ ಮುಂದುವರಿಯುತ್ತದೆ ಮತ್ತು ಅವರು ಎಲ್ಲಾ ಸ್ಥಾಪಿತ ಉದ್ಯೋಗಿ ಸ್ಟಾಕ್ ಆಯ್ಕೆ ಯೋಜನೆಗಳನ್ನು (ESOPs) ಉಳಿಸಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಶೇರ್‌ಚಾಟ್‌ ಕಂಪನಿಯು ಸಹ ಈ ಬೆಳವಣಿಗೆಗಳನ್ನು ದೃಢಪಡಿಸಿದೆ.

ಡಿಸೆಂಬರ್‌ ತಿಂಗಳಲ್ಲಿ ಸಹ ಶೇರ್‌ಚಾಟ್ ತನ್ನ ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ Jeet11 ಅನ್ನು ಬಂದ್‌ ಮಾಡಿತ್ತು ಮತ್ತು ಸುಮಾರು 115 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ, ಕಂಪನಿಯ ಮುಖ್ಯ ವಾಣಿಜ್ಯ ಅಧಿಕಾರಿ ಅಜಿತ್ ವರ್ಗೀಸ್ ಅವರು ಕಂಪನಿಗೆ ರಾಜೀನಾಮೆ ನೀಡಿದ್ದರು. ಅವರು ಒಂದೆರಡು ವರ್ಷಗಳ ಹಿಂದೆಯಷ್ಟೇ ಕಂಪನಿ ಸೇರಿಕೊಂಡಿದ್ದರು ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಮತ್ತೊಂದು ಟೆಕ್ ಕಂಪೆನಿಯಲ್ಲಿ ಉದ್ಯೋಗಿಗಳ ವಜಾ, 7,350 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದ Salesforce

Follow Us:
Download App:
  • android
  • ios