3 ವರ್ಷದ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ರೆ, ನಿಮ್ಮ ಬಳಿ ಈಗ 39 ಲಕ್ಷ ಇರ್ತಿತ್ತು!
ಈ ಕಂಪನಿಯಲ್ಲಿ ಸುಮಾರು 3 ವರ್ಷಗಳ ಹಿಂದೆ ಕಂಪನಿಯ ಷೇರುಗಳಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ, ಆ ಷೇರುಗಳ ಮೌಲ್ಯ ₹ 39.02 ಲಕ್ಷಗಳಾಗುತ್ತಿತ್ತು. ಈ ಕಂಪನಿ ಬಗ್ಗೆ ಇಲ್ಲಿದೆ ವಿವರ..
ಬೆಂಗಳೂರು (ಸೆಪ್ಟೆಂಬರ್ 25, 2023): ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಹಲವರು ಆಸಕ್ತಿ ಹೊಂದಿರುತ್ತಾರೆ. ಹಾಗೂ, ತಮ್ಮ ಹಣವನ್ನು ಹೆಚ್ಚು ಮಾಡಿಕೊಳ್ಳಲು ಹಲವರಿಗೆ ಉತ್ಸಾಹ ಇರುತ್ತದೆ. ಶ್ರೀಮಂತರಾಗೋಕೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ, ಯಾವ ಕಂಪನಿಯಲ್ಲಿ ಹೂಡಿಕೆ ಮಾಡ್ಬೇಕು ಅನ್ನೋ ಬಗ್ಗೆ ಹಲವರಿಗೆ ಅರಿವಿರುವುದಿಲ್ಲ. ಇತ್ತೀಚಿನ ತಿಳುವಳಿಕೆಯೂ ಮುಖ್ಯ.
ದೀರ್ಘಾವಧಿಯವರೆಗೆ ಕಂಪನಿಯಲ್ಲಿ ಹೂಡಿಕೆ ಮಾಡುವುದರಿಂದ ಭಾರಿ ಆದಾಯ ಪಡೆಯಲು ಸಹಾಯ ಮಾಡುತ್ತದೆ ಎಂದು ಅನೇಕ ಹೂಡಿಕೆದಾರರು ನಂಬುತ್ತಾರೆ. ಈ ಹೇಳಿಕೆಯು ಅನೇಕ ಷೇರುಗಳಿಗೆ ನಿಜವಾಗಿದ್ದರೂ, ಕೋವಿಡ್ -19 ವೇಳೆ ಷೇರು ಕುಸಿತದ ನಂತರ ಕೆಲವು ಸ್ಟಾಕ್‌ಗಳು ಭಾರಿ ಆದಾಯ ನೀಡಿವೆ.
ಇದನ್ನು ಓದಿ: ಈ ಷೇರಿನಿಂದ 5 ದಿನದಲ್ಲಿ ಕೋಟಿಗೂ ಅಧಿಕ ಲಾಭ ಗಳಿಸಿದ ಖ್ಯಾತ ಹೂಡಿಕೆದಾರ: ನಿಮ್ಮ ಬಳಿಯೂ ಇದ್ಯಾ ಈ ಸ್ಟಾಕ್?
ಈ ಪೈಕಿ ಭಾರತದಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗ ಶಿಲ್ಚಾರ್ ಟೆಕ್ನಾಲಜೀಸ್ ಪ್ರತಿ ಷೇರು 36.75 ರೂ. ರಂತೆ ವಹಿವಾಟು ನಡೆಸುತ್ತಿತ್ತು. ಆದರೆ, ಕಳೆದ ಶುಕ್ರವಾರ ಈ ಷೇರುಗಳ ಮೌಲ್ಯ 1,434.05 ರೂ. ಆಗಿದೆ. ಅಂದರೆ ಬರೋಬ್ಬರಿ 3802% ರಷ್ಟು ಮಲ್ಟಿಬ್ಯಾಗರ್ ಆದಾಯ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಹೂಡಿಕೆದಾರರು ಸುಮಾರು ಮೂರು ವರ್ಷಗಳ ಹಿಂದೆ ಕಂಪನಿಯ ಷೇರುಗಳಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ, ಆ ಷೇರುಗಳ ಮೌಲ್ಯ ₹ 39.02 ಲಕ್ಷಗಳಾಗುತ್ತಿತ್ತು ಎಂಬುದನ್ನು ನೀವು ನಂಬ್ಲೇಬೇಕು.
ಶಿಲ್ಚಾರ್ ಟೆಕ್ನಾಲಜೀಸ್ ಕಂಪನಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಹಾಗೂ ವಿದ್ಯುತ್ ಮತ್ತು ವಿತರಣಾ ಟ್ರಾನ್ಸ್‌ಫಾರ್ಮರ್‌ಗಳನ್ನು ತಯಾರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಇತ್ತೀಚೆಗೆ ಫೆರೈಟ್ ಟ್ರಾನ್ಸ್‌ಫಾರ್ಮರ್‌ಗಳ ತಯಾರಿಕೆಯಲ್ಲೂ ತೊಡಗಿದೆ. ಈ ಮಧ್ಯೆ, ಕಂಪನಿಯು ಆರ್ಥಿಕ ವರ್ಷ 2020 ರಲ್ಲಿ 71.28 ಕೋಟಿಗಳಿಗೆ ಹೋಲಿಸಿದರೆ ಆರ್ಥಿಕ ವರ್ಷ 2023 ರಲ್ಲಿ ₹ 280.24 ಕೋಟಿಗಗಳಿಗೆ ಅಂದರೆ, ತನ್ನ ಆದಾಯದಲ್ಲಿ 293% ಹೆಚ್ಚಳವನ್ನು ವರದಿ ಮಾಡಿದೆ. ಇದರ ನಿವ್ವಳ ಲಾಭವು FY20 ರಲ್ಲಿ 1.50 ಕೋಟಿ ರೂ. ಗೆ ಹೋಲಿಸಿದರೆ, FY23 ರಲ್ಲಿ ₹ 43.12 ಕೋಟಿಗಳಿಗೆ ಅಂದರೆ 2775% ರಷ್ಟು ಹೆಚ್ಚಾಗಿದೆ.
ಇದನ್ನು ಓದಿ: G20 ಸಭೆಯಲ್ಲಿ ಮೋದಿ ಗೆಲುವು, ಹೂಡಿಕೆಯಲ್ಲಿ ಅದಾನಿ ಕಂಪನಿ ಗೆಲುವು: ಒಂದೇ ದಿನದಲ್ಲಿ 3.4 ಲಕ್ಷ ಕೋಟಿ ಲಾಭ
ಇನ್ನು, 1,107 ಕೋಟಿಗಳ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ, ಶಿಲ್ಚಾರ್ ಇಂಡಸ್ಟ್ರೀಸ್ ಸ್ಮಾಲ್ ಕ್ಯಾಪ್ ಕಂಪನಿಯಾಗಿದೆ. ಇದು 48.36% ನಷ್ಟು ಈಕ್ವಿಟಿಯಲ್ಲಿ ಹೆಚ್ಚಿನ ಲಾಭವನ್ನು ಹೊಂದಿದೆ ಮತ್ತು 0.00 ರ ಆದರ್ಶ ಸಾಲ - ಈಕ್ವಿಟಿ ಅನುಪಾತವನ್ನು ಹೊಂದಿದೆ. ಕಂಪನಿಯ ಪ್ರೊಮೋಟರ್‌ಗಳು ಈ ಸಂಸ್ಥೆಯಲ್ಲಿ 65.85% ಪಾಲನ್ನು ಹೊಂದಿದ್ದರೆ, ಚಿಲ್ಲರೆ ಹೂಡಿಕೆದಾರರು 33.56% ಮತ್ತು ವಿದೇಶಿ ಸಂಸ್ಥೆಗಳು 0.59% ಪಾಲನ್ನು ಹೊಂದಿದ್ದಾರೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 25,600 ಕೋಟಿ ಮೌಲ್ಯದ ಆಸ್ತಿ ಹೆಚ್ಚಿಸಿಕೊಂಡ ಉದ್ಯಮಿ ಮೋದಿ
ಇದನ್ನೂ ಓದಿ: AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?