ಆನ್‌ಲೈನ್ ಗೇಮ್‌ನಲ್ಲಿ ಗೆದ್ದ ಹಣಕ್ಕೆ ಶೇ.30 ತೆರಿಗೆ: ವಿದೇಶಿ ಪ್ರವಾಸ ಇನ್ಮುಂದೆ ದುಬಾರಿ
ಆನ್‌ಲೈನ್ ಗೇಮ್‌ಗಳಲ್ಲಿ 10 ಸಾವಿರ ರು.ಗೂ ಹೆಚ್ಚಿನ ಮೊತ್ತವನ್ನು ಗೆದ್ದರೆ ಅದಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ. 10 ಸಾವಿರ ರು.ಗಿಂತ ಕಡಿಮೆ ಮೊತ್ತದ ಗೆಲುವಿಗೆ ಯಾವುದೇ ಟ್ಯಾಕ್ಸ್ ವಿಧಿಸಲಾಗುವುದಿಲ್ಲ.
ಆನ್‌ಲೈನ್ ಗೇಮ್‌ಗಳಲ್ಲಿ 10 ಸಾವಿರ ರು.ಗೂ ಹೆಚ್ಚಿನ ಮೊತ್ತವನ್ನು ಗೆದ್ದರೆ ಅದಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ. 10 ಸಾವಿರ ರು.ಗಿಂತ ಕಡಿಮೆ ಮೊತ್ತದ ಗೆಲುವಿಗೆ ಯಾವುದೇ ಟ್ಯಾಕ್ಸ್ ವಿಧಿಸಲಾಗುವುದಿಲ್ಲ. ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ ಆನ್‌ಲೈನ್ ಗೇಮ್‌ಗಳಿಂದ ಗಳಿಸುವ ಹಣವನ್ನು ರಿಟನ್ಸ್ ಫೈಲ್ ಮಾಡುವಾಗ ಇತರೆ ಆದಾಯ ಮೂಲಗಳ ಅಡಿಯಲ್ಲಿ ನಮೂದು ಮಾಡುವುದು ಕಡ್ಡಾಯವಾಗಿದೆ. ಇದು ತೆರಿಗೆ ಪ್ರತಿ ಆನ್‌ಲೈನ್ ಆಟಕ್ಕೆ ಸಂಬಂಧಿಸಿದ್ದು, 10 ಸಾವಿರ ರು.ಗಿಂತ ಹೆಚ್ಚಿನ ಹಣವನ್ನು ಗಳಿಸಿದರೆ, ಹೂಡಿಕೆ ಮಾಡಿದ ಹಣವನ್ನು ಬಿಟ್ಟು ಶೇ.30ರಷ್ಟುತೆರಿಗೆಯನ್ನು ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ.
ಉದಾಹರಣೆಗೆ ಒಬ್ಬ ವ್ಯಕ್ತಿ ಆನ್‌ಲೈನ್ ಗೇಮ್‌ವೊಂದರಲ್ಲಿ 1 ಸಾವಿರ ರು. ಹೂಡಿಕೆ ಮಾಡಿ 36 ಸಾವಿರ ರು. ಗೆದ್ದರೆ, ಆತ ಹೂಡಿಕೆ ಮಾಡಿದ್ದ 1 ಸಾವಿರ ರು. ಕಳೆದು 35 ಸಾವಿರ ರು.ಗೆ ಶೇ.30ರಷ್ಟುತೆರಿಗೆ ಕಟ್ಟಬೇಕಾಗುತ್ತದೆ. ಹಾಗಾಗಿ ಗೇಮಿಂಗ್ ಕಂಪನಿ 35 ಸಾವಿರ ರು.ಗಳಲ್ಲಿ 10,500 ರು. ಟಿಡಿಎಸ್ ಮುರಿದುಕೊಂಡು ಆ ವ್ಯಕ್ತಿಗೆ 24,500 ರು.ಗಳನ್ನು ಪಾವತಿಸುತ್ತದೆ. ತೆರಿಗೆ ಹಣವನ್ನು ಸರ್ಕಾರಕ್ಕೆ ನೀಡಲಾಗುತ್ತದೆ. ಒಂದು ವೇಳೆ 36 ಸಾವಿರ ರು. ಬದಲಿಗೆ 9,500 ರು. ಗೆದ್ದರೆ ಯಾವುದೇ ತೆರಿಗೆ ಕಡಿತವಾಗುವುದಿಲ್ಲ.
ಹಾಗೆಯೇ ಆನ್‌ಲೈನ್ ಗೇಮ್‌ಗಳಲ್ಲಿ ಟಿಡಿಎಸ್ ಕಡಿತವಾಗಿಲ್ಲದಿದ್ದರೆ, ಆದಾಯ ತೆರಿಗೆ ರಿಟನ್ಸ್‌ರ್ ಫೈಲ್ ಮಾಡುವಾಗ ಇತರೆ ಆದಾಯ ಮೂಲಗಳ ಅಡಿಯಲ್ಲಿ ಅದನ್ನು ತುಂಬಬೇಕಾಗುತ್ತದೆ.
Budget 2023: ದೇಶದ ಭವಿಷ್ಯಕ್ಕೆ ಆದ್ಯತೆ ನೀಡಿರುವ ನಿರ್ಮಲ ಬಜೆಟ್: ವ ...
ವಿದೇಶಿ ಪ್ರವಾಸ ಇನ್ಮುಂದೆ ದುಬಾರಿ
ವಿದೇಶಗಳಿಗೆ ಪ್ರಯಾಣ ಬೆಳೆಸುವವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಇದರಿಂದಾಗಿ ವಿದೇಶಿ ಪ್ರವಾಸಕ್ಕೆ ಹೋಗುವವರಿಗೆ ತಗಲುವ ವೆಚ್ಚದಲ್ಲಿ ಹೆಚ್ಚಳವಾಗಲಿದೆ. ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್)ವನ್ನು ಶೇ.5ರಿಂದ 20ಕ್ಕೆ ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಇದಕ್ಕೆ ಟ್ರಾವೆಲ್ ಏಜೆನ್ಸಿಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ. ನಾವು ವಿದೇಶಿ ಪ್ರವಾಸವನ್ನು ಮತ್ತಷ್ಟುಸುಲಭವಾಗಿ ನಡೆಸಲು ಅನುಕೂಲ ಆಗುವಂತೆ ವ್ಯವಸ್ಥೆ ಮಾಡಬೇಕು ಎಂದು ಕೇಳಿಕೊಂಡಿದ್ದೇವು. ಆದರೆ ಸರ್ಕಾರ ಏಕಾಏಕಿ ಶೇ.5ರಷ್ಟಿದ್ದ ತೆರಿಗೆಯನ್ನು ಶೇ.20ಕ್ಕೆ ಹೆಚ್ಚಿಸಲು ನಿರ್ಧರಿಸಿರುವುದು ಆಘಾತವುಂಟು ಮಾಡಿದೆ ಎಂದು ಅವಲತ್ತುಕೊಂಡಿವೆ.
ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರ ...
ವಿದೇಶಿ ವಿನಿಮಯಕ್ಕೆ ಜಿಎಸ್‌ಟಿ ಇದೆ. ಇದರಲ್ಲೇ ಸರ್ಕಾರಕ್ಕೆ ತೆರಿಗೆ ಬರುತ್ತದೆ. ಆದರೂ ಸರ್ಕಾರ ಟಿಸಿಎಸ್ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಹೇಳಿವೆ. ಸರ್ಕಾರ ತಕ್ಷಣ ತನ್ನ ತೆರಿಗೆ ಹೆಚ್ಚಳ ಪ್ರಸ್ತಾವನೆಯನ್ನು ಹಿಂಪಡೆಯಬೇಕು ಎಂದು ಟ್ರಾವೆಲ್ ಏಜೆನ್ಸಿಗಳು ಆಗ್ರಹಿಸಿವೆ. ನಮ್ಮ ಬೇಡಿಕೆಯನ್ನು ಪರಿಗಣಿಸದೆ ಸರ್ಕಾರ ಏಕಮುಖ ನಿರ್ಧಾರ ಕೈಗೊಂಡಿದೆ ಎಂದು ಟ್ರಾವೆಲ್ ಏಜೆಂಟ್ಸ್ ಸಂಘವು ಬೇಸರ ವ್ಯಕ್ತಪಡಿಸಿದೆ.