Asianet Suvarna News Asianet Suvarna News

Budget 2023: ದೇಶದ ಭವಿಷ್ಯಕ್ಕೆ ಆದ್ಯತೆ ನೀಡಿರುವ ನಿರ್ಮಲ ಬಜೆಟ್‌: ವಿಜಯರಾಜೇಶ್‌

ದೇಶದ ಭವಿಷ್ಯಕ್ಕಾಗಿ ಶಿಕ್ಷಣ, ವೈದ್ಯಕೀಯ, ಕೃಷಿ, ಕೈಗಾರಿಕಾ ಕ್ಷೇತ್ರಗಳ ಉತ್ತೇಜನದ ಜೊತೆ ಮೂಲಸೌಕರ್ಯ ಅಭಿವೃದ್ಧಿ. ಬದಲಾದ ಸಮಯದಲ್ಲಿ ಮುಂಬರುವ ಅವಕಾಶಗಳಿಗೆ ಸಿದ್ಧತೆಗಳು ಮಹತ್ವವೆನಿಸುತ್ತದೆ.

Special Article By Vijay Rajesh Over Union Budget 2023 gvd
Author
First Published Feb 2, 2023, 4:21 AM IST

ವಿಜಯರಾಜೇಶ್‌, ತೆರಿಗೆ ಸಲಹೆಗಾರರು.

ದೇಶದ ಭವಿಷ್ಯಕ್ಕಾಗಿ ಶಿಕ್ಷಣ, ವೈದ್ಯಕೀಯ, ಕೃಷಿ, ಕೈಗಾರಿಕಾ ಕ್ಷೇತ್ರಗಳ ಉತ್ತೇಜನದ ಜೊತೆ ಮೂಲಸೌಕರ್ಯ ಅಭಿವೃದ್ಧಿ. ಬದಲಾದ ಸಮಯದಲ್ಲಿ ಮುಂಬರುವ ಅವಕಾಶಗಳಿಗೆ ಸಿದ್ಧತೆಗಳು ಮಹತ್ವವೆನಿಸುತ್ತದೆ. ಈ ಬಾರಿಯ ಬಜೆಟ್‌ ಭವಿಷ್ಯಕ್ಕೆ ಅವಕಶ್ಯಕತೆಗೆ ತಕ್ಕಂತೆ ಎಲ್ಲ ಕ್ಷೇತ್ರಗಳಿಗೆ ಒತ್ತು ನೀಡುವುದರ ಜೊತೆಗೆ, ತಂತ್ರಜ್ಞಾನದ ಬೆಳವಣಿಗೆಗೆ ಪೂಕರವಾಗಿ ಕೃತಕ ಬುದ್ಧಿಮತ್ತೆ (ಎ.ಐ), ಡಿಜಿಟಲ್‌ ಇಂಡಿಯಾಗೆ ಹೆಚ್ಚು ಒತ್ತು ನೀಡಿದೆ. 

ಸಾಮಾನ್ಯ ಜನರಿಗೆ ಉದ್ಯೋಗದ ಅವಕಾಶದ ಜೊತೆ, ಹಣ ಸಿಗುವಂತ ಯೋಜನೆಗಳನ್ನು ಕೈಗೊಳ್ಳಲು ಪೂರಕವಾಗಿದೆ. ನಮ್ಮ ಆರ್ಥಿಕತೆ ಪೆಟ್ರೋಲ್‌ ಮೇಲಿನ ಅವಲಂಬನೆಯಿಂದ ಹೊರ ಬರಲು ಸಿಎನ್‌ಜಿ, ಎಥನಾಲ್‌ ಉತ್ಪಾದನೆ ಜನರಿಗೆ ಆದಾಯದ ಜೊತೆ, ವಿದೇಶಿ ವಿನಿಮಯಕ್ಕೆ ಕೂಡ ಅನುಕೂಲವಾಗುತ್ತದೆ. ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆಯಡಿಯಲ್ಲಿ ಕೊಡುಗೆಗಳು ಸಿಕ್ಕಿರಲಿಲ್ಲ. ಈ ಬಾರಿ ಹಲವು ಕೋಟಿಗಳು ಸಿಕ್ಕಿವೆ.

ಮೂಗಿಗೆ ಬದಲು ಹಣೆಗೆ ತುಪ್ಪ ಸವರಿದ ಕೇಂದ್ರ ಬಜೆಟ್: ಕುಮಾರಸ್ವಾಮಿ

1. ಸಣ್ಣ ವ್ಯಾಪಾರಸ್ಥರು ಈವರೆಗೆ .2 ಕೋಟಿ ವಹಿವಾಟು ಇದ್ದಲ್ಲಿ ಶೇ.8ರಷ್ಟುಲಾಭ ಪೋಷಿಸಿ ತೆರಿಗೆ ಕಟ್ಟಬೇಕಿತ್ತು. ಈ ವಹಿವಾಟು ಮಿತಿಯನ್ನು .3 ಕೋಟಿಗೆ ಏರಿಸಲಾಗಿದೆ. ಹಾಗೆಯೇ ವೃತ್ತಿಪರರು ಅಂದರೆ ಡಾಕ್ಟರ್‌, ವಕೀಲರು ಮುಂತಾದವರು .50 ಲಕ್ಷ ವಹಿವಾಟಿಗೆ ಶೇ.50ರಷ್ಟುತೆರಿಗೆ ಕಟ್ಟಬೇಕಿತ್ತು. ಈಗ ಮಿತಿಯನ್ನು .75 ಲಕ್ಷಕ್ಕೆ ಏರಿಸಲಾಗಿದೆ.

2. ಸ್ಟಾರ್ಟ್‌ಅಪ್‌ ಕಂಪನಿಗಳಿಗೆ ಹಲವು ತೆರಿಗೆ ರಿಯಾಯಿತಿ, ವಿನಾಯಿತಿಗಳ ಜೊತೆಗೆ ಸ್ಥಾಪಿಸಲು ಉತ್ತೇಜನ ನೀಡಲಾಗಿದೆ.

3. ನಿಮ್ಮ ಚಿನ್ನವನ್ನು ಬ್ಯಾಂಕಿಗೆ ಡೆಪಾಸಿಟ್‌ ಮಾಡಿದಾಗ ಕ್ಯಾಪಿಟಲ್‌ ಗೇನ್‌ ತೆರಿಗೆ ಬರುವುದಿಲ್ಲ.

4. ಕಳೆದ 2020ನೇ ಸಾಲಿನಿಂದ ನಮಗೆ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿ ಆಯ್ಕೆಗಳಿದ್ದವು. ಹಳೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ/ ರಿಯಾಯಿತಿ ದೊರಕುತ್ತಿದ್ದು, ಹೊಸ ಪದ್ಧತಿಯಲ್ಲಿ ಯಾವುದೇ ವಿನಾಯಿತಿ ಇರಲಿಲ್ಲ. ಈ ಹೊಸ ಪದ್ಧತಿ ಅಡಿಯಲ್ಲಿ ಮಾತ್ರ .7 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ. ಹಳೆ ಪದ್ಧತಿಯಲ್ಲಿ .5 ಲಕ್ಷಕ್ಕೆ ತೆರಿಗೆ ಇರಲಿಲ್ಲ. ಮುಂದಿನ ಸಾಲಿನಿಂದ ಹೊಸ ತೆರಿಗೆ ಪದ್ಧತಿ ಎಲ್ಲರಿಗೂ ಅನ್ವಯವಾಗುತ್ತದೆ.

5. ಹೊಸ ತೆರಿಗೆ ಪದ್ಧತಿಗೆ ಮಾತ್ರ ಅನ್ವಯವಾಗುವಂತೆ ತೆರಿಗೆ ದರಗಳನ್ನು ಬದಲಿಸಲಾಗಿದೆ.

6. ನಿವೃತ್ತಿ ಹೊಂದುವವರಿಗೆ ಅನುಕೂಲವಾಗುವಂತೆ Leave ವಿನಾಯಿತಿ ಮೊತ್ತ 3 ಲಕ್ಷದಿಂದ 25 ಲಕ್ಷಕ್ಕೆ ಏರಿಸಲಾಗಿದೆ.

7. ಅಗ್ನಿವೀರರಿಗೆ ನಿರ್ದಿಷ್ಟ ತೆರಿಗೆ ವಿನಾಯಿತಿ ನೀಡಲಾಗಿದೆ.

Budget 2023: ವಿಶ್ವಕರ್ಮರ ಬೆನ್ನಿಗೆ ನಿಂತ ಮೋದಿ, ವಿಕಾಸಕ್ಕೆ ಆದಿ!

8. ಕ್ಯಾಪಿಟಲ್‌ ಗೇನ್‌ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ನೀವು .10 ಕೋಟಿಯವರೆಗಿನ ಮನೆ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಈವರೆಗೆ ಈ ಮಿತಿ .2 ಕೋಟಿ ಇತ್ತು.

ಒಟ್ಟಾರೆಯಾಗಿ ಎಲ್ಲ ಕ್ಷೇತ್ರಗಳಿಗೆ ಒತ್ತು ನೀಡುವುದು ಜೊತೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ದೇಶದ ಭವಿಷ್ಯಕ್ಕೆ ಪೂರಕವಾದ ಬಜೆಟ್‌ ಮಂಡನೆಯಾಗಿದೆ.

Follow Us:
Download App:
  • android
  • ios