ಜುಲೈ 1 ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ  ಇಳಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1665 ರೂ. ಆಗಿದೆ.

ನವದೆಹಲಿ: ಮೊದಲ ದಿನವೇ ಎಲ್‌ಪಿಜಿ ಬಳಕೆದಾರರಿಗೆ ಸಿಹಿಯಾದ ಸುದ್ದಿ ಸಿಕ್ಕಿದೆ. ಇಂದು ಅಂದ್ರೆ ಜುಲೈ 1ರಂದು ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಬಹುದೊಡ್ಡ ಬದಲಾವಣೆ ಕಂಡು ಬಂದಿದೆ. ಪ್ರತಿ ತಿಂಗಳ ಮೊದಲ ದಿನದಂದು ತೈಲ ಮಾರುಕಟ್ಟೆ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಈ ತಿಂಗಳು ಸಿಲಿಂಡರ್ ಬೆಲೆ ಕಡಿಮೆಯಾಗಿದೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು ಸುಮಾರು 58.50 ರೂ.ಗಳಷ್ಟು ಕಡಿಮೆ ಮಾಡಿವೆ. ಆದರೆ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಜುಲೈ 1 ರಿಂದ ವಾಣಿಜ್ಯ ಸಿಲಿಂಡರ್ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.

Add Asianetnews Kannada as a Preferred SourcegooglePreferred

ತೈಲ ಮಾರುಕಟ್ಟೆ ಕಂಪನಿಗಳು ಬಿಡುಗಡೆ ಮಾಡಿದ ಹೊಸ ದರ ಪಟ್ಟಿಯ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 1,665 ರೂ. ಆಗಿದೆ. ಜೂನ್‌ನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1723.50 ರೂ. ಆಗಿತ್ತು. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1826 ರೂ. ಗಳ ಬದಲಾಗಿ 1769 ರೂಪಾಯಿಗೆ ಸಿಗಲಿದೆ. ಮುಂಬೈನಲ್ಲಿ 1674.50 ರೂ.ಗಳ ಬದಲಿಗೆ 1616 ರೂ ಮತ್ತು ಚೆನ್ನೈನಲ್ಲಿ 1823.50 ರೂ.ಗಳ ಬದಲಿಗೆ 1881 ರೂ.ಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಸಿಗಲಿದೆ.

ರಾಜಧಾನಿ ಬೆಂಗಳೂರಿನಲ್ಲಿಯೂ 19 ಕೆಜಿ ಸಿಲಿಂಡರ ಬೆಲೆಯಲ್ಲಿ 58.50 ರು.ಗಳಷ್ಟು ಕಡಿಮೆಯಾಗಿದೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ವಾಣಿಜ್ಯ ಸಿಲಿಂಡರ್ ಅಗ್ಗವಾಗುತ್ತಿರುವುದರಿಂದ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವ್ಯಾಪಾರಿಗಳಿಗೆ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ.

ಜೂನ್ 2025, ಮೇ 2025, ಏಪ್ರಿಲ್ 2025 ರಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿತ್ತು. ಜೂನ್‌ನಲ್ಲಿ 24 ರೂಪಾಯಿ, ಮೇ ತಿಂಗಳಲ್ಲಿ 14.50 ರೂಪಾಯಿ ಮತ್ತು ಏಪ್ರಿಲ್‌ನಲ್ಲಿ 41 ರೂ.ಗಳಷ್ಟು ಬೆಲೆ ಕಡಿಮೆಯಾಗಿತ್ತು. ಇದೀಗ ಜುಲೈನಲ್ಲಿಯೂ 58.50 ರೂ. ಕಡಿಮೆಯಾಗಿದೆ. ಫೆಬ್ರವರರಿಯಲ್ಲಿ 7 ರೂ. ಇಳಿಕೆಯಾಗಿದ್ದರೆ, ಮಾರ್ಚ್‌ನಲ್ಲಿ 6 ರೂಪಾಯಿ ಏರಿಕೆಯಾಗಿತ್ತು.

Scroll to load tweet…