ಬೆಂಗಳೂರಿನಲ್ಲಿದೆ ವಿಜಯ್ ಮಲ್ಯ ನೂರು ಕೋಟಿಯ ಕಿಂಗ್ ಫಿಶರ್ ಟವರ್, ಏನ್ ಪ್ರಯೋಜನ ಗುರು ?
ಬೆಂಗಳೂರಿನಲ್ಲಿರೋ ವಿಜಯ್ ಮಲ್ಯ (Vijay Mallya) ಮನೆ ಬಂಗಲೆ ಅಮೆರಿಕಾ ಅಧ್ಯಕ್ಷರ ನಿವಾಸದ ಹಾಗಿದೆ. ಆದ್ರೆ ಸಾಲಗಾರ ವಿಜಯ್ ಮಲ್ಯಗೆ ಇದನ್ನು ಅನುಭವಿಸೋ ಅದೃಷ್ಟ ಇಲ್ಲ. ಉದ್ಯಮಿ ಹರ್ಷ ಗೊಯೆಂಕಾ ಈ ಬೃಹತ್ ಬಂಗಲೆ ಫೋಟೋ ಹಾಕಿದ್ದಾರೆ.
ಕಿಂಗ್ ಫಿಶರ್ ಟವರ್ ಬೆಂಗಳೂರಿನ ಅಶೋಕ ನಗರದಲ್ಲಿರುವ ಬೃಹತ್ ಬಂಗಲೆ. ನೋಡೋಕೆ ಥೇಟ್ ಅಮೆರಿಕ ವಾಷಿಂಗ್‌ಟನ್‌ನ ವೈಟ್ ಹೌಸ್ ಮಾದರಿಯಲ್ಲಿದೆ. ಆ ಮನೆ ಬೇರೆ ಯಾರದ್ದೂ ಅಲ್ಲ, ಮದ್ಯದ ದೊರೆ ಎಂದು ಕರೆಸಿಕೊಳ್ಳುವ ವಿಜಯ್ ಮಲ್ಯ (Vijay Mallya) ಅವರದ್ದು. ಕಿಂಗ್ ಫಿಶರ್ ಏರ್‌ಲೈನ್ಸ್ (Kingfisher) ಮಾಲೀಕ ವಿಜಯ್ ಮಲ್ಯ ಭಾರತದಲ್ಲಿ ಕೋಟ್ಯಂತರ ರೂಪಾಯಿ ಸಾಲ ಮಾಡಿ, ಅದನ್ನು ವಾಪಸ್ ಮಾಡದೆ ವಿದೇಶಕ್ಕೆ ಹೋಗಿ ನೆಲೆಸಿದ್ದಾರೆ. ಲಂಡನ್‌ನಲ್ಲಿ ಕೂಡಾ ಆತನಿಗೆ ದೊಡ್ಡ ಬಂಗಲೆ ಇದೆ. ಉದ್ಯಮಿ ಹರ್ಷ್ ಗೊಯೆಂಕಾ ಕಿಂಗ್ ಫಿಶರ್ ಟವರ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ವಿಜಯ್ ಮಲ್ಯ ಮನೆ, ಆಕಾಶದಲ್ಲಿ ವೈಟ್ ಹೌಸ್ ಎಂದು ಕ್ಯಾಪ್ಷನ್ ನೀಡಿದ್ಧಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. 'ಈ ಮಲ್ಯನದ್ದು ಏನ್ ಕರ್ಮ ಗುರು. ಈ ರೇಂಜ್ ಮನೆ ಕಟ್ಟಿಸಿದ್ರೂ ಅದರಲ್ಲಿ ವಾಸಿಸೋ ಅದೃಷ್ಟ ಇಲ್ವಲ್ಲಾ' ಅಂತ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
Vijay mallya's home in Bangalore - White House in skies' ಅನ್ನೋ ಕ್ಯಾಪ್ಶನ್ ನಡಿ ಉದ್ಯಮಿ ಹರ್ಷ ಗೋಯೆಂಕಾ ವಿಜಯ್ ಮಲ್ಯ ಮನೆಯ ವೀಡಿಯೋವನ್ನು ಟ್ವೀಟ್ ಮಾಡಿದ್ದು ಕ್ಷಣ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ದಾಖಲಿಸಿದೆ. 'ಲಂಡನ್‌ನಲ್ಲಿ ನಿಂತು ಬೈನಾಕ್ಯುಲರ್‌ನಿಂದ ನೋಡಿದ್ರೆ ಕಾಣಬಹುದೇನೋ' ಅಂತೊಬ್ಬ ನೆಟ್ಟಿಗ ವ್ಯಂಗ್ಯವಾಗಿ ರಿಪ್ಲೈ ಮಾಡಿದರೆ 'ನೀವಿದನ್ನು ಖರೀದಿಸೋ ಪ್ಲಾನ್‌ನಲ್ಲಿದ್ದೀರಾ?' ಅಂತ ಮತ್ತೊಬ್ಬರು ಕೇಳಿದ್ದಾರೆ. ಈ ಬಿಲ್ಡಿಂಗ್‌ನಲ್ಲಿ ಎಸ್‌ಬಿಐ ಹೊಸ ಬ್ರಾಂಚ್ ತೆರೆಯಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇಷ್ಟು ದೊಡ್ಡ ಬಂಗಲೆ ಇದ್ದು ಏನು ಪ್ರಯೋಜನ, ವಿಜಯ್ ಮಲ್ಯಗೆ ಇಲ್ಲಿ ವಾಸಿಸಲು ಪುಣ್ಯವೇ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರಿನ ಅಶೋಕ ನಗರದಲ್ಲಿರುವ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಟವರ್ 100 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ. 2 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಈ ಕಟ್ಟಡ ಕಟ್ಟಲಾಗಿದೆ. 2018ರಲ್ಲಿ ಈ ಮನೆ ನಿರ್ಮಾಣವಾಗಿದೆ. ಸುಮಾರು 400 ಅಡಿ ಎತ್ತರದ ಬಿಲ್ಡಿಂಗ್ ಮೇಲೆ ಅಮೆರಿಕದ ವೈಟ್‌ಹೌಸ್ ಹೋಲುವ ಬಂಗಲೆಯನ್ನು ಕಟ್ಟಲಾಗಿದೆ. ಮಲ್ಯ ಒಡೆತನದ ಯುಬಿ ಗ್ರೂಪ್ ಹಾಗೂ ಪ್ರೆಸ್ಟೀಜ್ ಪಾಲುದಾರಿಕೆಯಲ್ಲಿ ಈ ಮ್ಯಾನ್ಸನ್ ನಿರ್ಮಾಣವಾಗಿದೆ. ಈ ಗಗನಚುಂಬಿ ಕಟ್ಟಡದಲ್ಲಿ 82 ಫ್ಲಾಟ್‌ಗಳಿವೆ, ಪ್ಲೋರ್ ರೂಪ್ ಟಾಪ್‌ನಲ್ಲಿ ಹೆಲಿಪ್ಯಾಡ್, ದೊಡ್ಡ ಸ್ವಿಮ್ಮಿಂಗ್ ಪೂಲ್, ಬಾರ್ ಹೌಸ್, ಥಿಯೇಟರ್ ಇವೆ.
ವಿದೇಶಕ್ಕೆ ಪರಾರಿಯಾದ ಉದ್ಯಮಿ ವಿಜಯ್ ಮಲ್ಯಗೆ ನೀಡಿದ್ದ ಭೂ ಹಂಚಿಕೆ ರದ್ದು ಮಾಡಿದ ತಿರುಪತಿ ದೇಗುಲ
ಆದರೆ ಇದರಲ್ಲಿ ವಾಸ ಮಾಡೋ ಭಾಗ್ಯ ಮದ್ಯದ ದೊರೆಗೆ ಇಲ್ಲ. ವಿಜಯ್ ಮಲ್ಯ 2017ರಲ್ಲಿ ಅರೆಸ್ಟ್ ಆಗಿದ್ದರು, ಕಿಂಗ್ ಫಿಶರ್ ಏರ್‌ಲೈನ್ಸ್ ಮಾಲೀಕ ವಿಜಯ್ ಮಲ್ಯ ಭಾರತದಲ್ಲಿ ಕೋಟ್ಯಂತರ ರೂಪಾಯಿ ಸಾಲ ಮಾಡಿ, ಅದನ್ನು ವಾಪಸ್ ಮಾಡದೆ ವಿದೇಶಕ್ಕೆ ಹೋಗಿ ನೆಲೆಸಿದ್ದಾರೆ. ಲಂಡನ್‌ನಲ್ಲಿ ಕೂಡಾ ಆತನಿಗೆ ದೊಡ್ಡ ಬಂಗಲೆ ಇದೆ. ವಿಜಯ್ ಮಲ್ಯನನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ.
ಇನ್ನೊಂದೆಡೆ ವಿಜಯ್ ಮಲ್ಯ ಮಗ ಸಿದ್ಧಾರ್ಥ ಹೊಸ ಹುಡುಗಿ ಜೊತೆ ಕೆಲವು ದಿನಗಳ ಹಿಂದೆ ಎಂಗೇಜ್‌ಮೆಂಟ್ ಮಾಡಿಕೊಂಡರು. ಅಮೆರಿಕಾದ ಕ್ಯಾಲಿಫೋರ್ನಿಯದಲ್ಲಿ ಇದು ಜರುಗಿತು. ಆದರೆ ಮದ್ಯದ ದೊರೆಯಾಗಲೀ ಸಂಬಂಧಿಕರಾಗಲಿ ಈ ವೇಳೆ ಹಾಜರಿರಲಿಲ್ಲ.
ಟೆಸ್ಟ್ ಪಂದ್ಯದ ವೇಳೆ ಸೆರೆ ಸಿಕ್ಕ ವಿಜಯ್ ಮಲ್ಯ!