ಟೆಸ್ಟ್ ಪಂದ್ಯದ ವೇಳೆ ಸೆರೆ ಸಿಕ್ಕ ವಿಜಯ್ ಮಲ್ಯ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 8:46 PM IST
Vijay malya spoted India vs England test match at oval
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದ ವೇಳೆ, ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ ಉದ್ಯಮಿ ವಿಜಯ್ ಮಲ್ಯ ಸೆರೆ ಸಿಕ್ಕಿದ್ದಾರೆ. ಕೆನ್ನಿಂಗ್ಟನ್ ಓವಲ್‌ನಲ್ಲಿ ಮಲ್ಯ ಸೆರೆ ವಿವರ ಇಲ್ಲಿದೆ.

ಓವಲ್(ಸೆ.07): ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಇಂಗ್ಲೆಂಡ್‌ನಲ್ಲಿ ಹಾಯಾಗಿ ಕಾಲಕಳೆಯುತ್ತಿರುವ ಉದ್ಯಮಿ ವಿಜಯ್ ಮಲ್ಯ ಬಂಧನಕ್ಕೆ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿತ್ತಿದೆ. ಆದರೆ ವಿಜಯ್ ಮಲ್ಯ ಲಂಡನ್‌ನಲ್ಲಿ ಹಾಯಾಗಿ ಕಾಲಕಳೆಯುತ್ತಿದ್ದಾರೆ.

ಇಂಗ್ಲೆಂಡ್ ಕೋರ್ಟ್ ವಿಚಾರಣೆಗೆ ಕಾಣಿಸಿಕೊಂಡ ಬಳಿಕ ನಾಪತ್ತೆಯಾಗಿದ್ದ ವಿಜಯ್ ಮಲ್ಯ ಇದೀಗ ಕ್ಯಾಮರ ಕಣ್ಣಿಗೆ ಸೆರೆಸಿಕ್ಕಿದ್ದಾರೆ. ಓವಲ್‌ನಲ್ಲಿ ನಡೆಯುತ್ತಿರುವ  ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ವಿಜಯ್ ಮಲ್ಯ ಹಾಜರಾಗಿದ್ದಾರೆ.

 

 

ಸಂಗಡಿಗರ ಜೊತೆ ವಿಜಯ್ ಮಲ್ಯ ಓವಲ್ ಕ್ರೀಡಾಂಗಣಕ್ಕೆ ಎಂಟ್ರಿಕೊಡುತ್ತಿರುವ ದೃಶ್ಯ ಕ್ಯಾಮರದಲ್ಲಿ ಸೆರೆಯಾಗಿದೆ.  ಇಂಗ್ಲೆಂಡ್‌ಗೆ ಪಲಾಯನ ಮಾಡಿದ ಬಳಿಕ ಮಲ್ಯ , ಕಳೆದ ಜೂನ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಕ್ಕೂ ಹಾಜರಾಗಿದ್ದರು.

ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವೇ ವಿಜಯ್ ಮಲ್ಯ ಸದ್ದಿಲ್ಲದೇ ಹಾಜರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರಾಗಿದ್ದ ಮಲ್ಯ, 2015ರಲ್ಲಿ ಅನಿವಾರ್ಯವಾಗಿ ಫ್ರಾಂಚೈಸಿಯನ್ನ ಮಾರಾಟ ಮಾಡಿದ್ದರು.
 

loader