ವೈರಿ ದೇಶ ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತೆ 10 ವಸ್ತುಗಳು- ಪ್ರತಿ ಮನೆಯಲ್ಲೂ ಆಗುತ್ತೆ ಇದರ ಬಳಕೆ

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹಾವು-ಮುಂಗುಸಿಯಂತಿದ್ದರೂ, ವ್ಯಾಪಾರ ಸಂಬಂಧಗಳು ಮುಂದುವರೆದಿವೆ. ಪಾಕಿಸ್ತಾನದಿಂದ ಭಾರತಕ್ಕೆ ಹಲವು ವಸ್ತುಗಳು ಆಮದು ಆಗುತ್ತವೆ, ಅವುಗಳಲ್ಲಿ ಕೆಲವನ್ನು ನಾವು ಪ್ರತಿದಿನ ಬಳಸುತ್ತೇವೆ.

10 things that India buys from Pakistan Its use in every home mrq

ನವದೆಹಲಿ: ನೆರೆಯ ದೇಶ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು, ಜನರು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ವಿದೇಶ ಹಣದ ಸಂಗ್ರಹ ಕುಸಿತ ಮತ್ತು ಸಾಲದ ಪ್ರಮಾಣ ಹೆಚ್ಚಳದಿಂದ ಪಾಕಿಸ್ತಾನ ಅರ್ಥವ್ಯವಸ್ಥೆಯ ಮೇಲೆ ನರಕಾರಾತ್ಮಕ ಪರಿಣಾಮ ಬೀರಿದೆ. ಪಾಕಿಸ್ತಾನದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರು ಬೇಳೆ, ಹಿಟ್ಟು, ಎಣ್ಣೆ ಸೇರಿದಂತ ಅಡುಗೆ ಸಾಮಾಗ್ರಿಗಳನ್ನು ಖರೀದಿಸಲು ಪರದಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಪಾಕಿಸ್ತಾನ ಸರ್ಕಾರ ಸಹ ಒಪ್ಪಿಕೊಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಾವು-ಮುಂಗುಸಿಯಂತಿದೆ. ಆದರೂ ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ ಸಂಬಂಧ ನಡೆಯುತ್ತಿದೆ. 

ಪಾಕಿಸ್ತಾನದಿಂದ ಭಾರತಕ್ಕೆ ಹಲವು ವಸ್ತುಗಳು ಆಮದು ಆಗುತ್ತವೆ. ಭಾರತದ ಮನೆಗಳಲ್ಲಿ ಪಾಕಿಸ್ತಾನದಿಂದ ಬರುವ ವಸ್ತುಗಳ ಬಳಕೆಯಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಿಂದ ಬರುವ ವಸ್ತುಗಳ ಸಂಖ್ಯೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ರಾಜಮಾರ್ಗವಾಗಿ ಪಾಕಿಸ್ತಾನದಿಂದ ಇಂದಿಗೂ ಕೆಲ ವಸ್ತುಗಳು ಭಾರತಕ್ಕೆ ಬರುತ್ತವೆ. ಡ್ರೈ ಫ್ರೂಟ್ಸ್, ಚರ್ಮ, ಸೌಂದರ್ಯವರ್ಧಕಗಳಿ, ಸಿಮೆಂಟ್ ಸೇರಿದಂಯೆ ಅನೇಕ ವಸ್ತುಗಳನ್ನು ಪಾಕಿಸ್ತಾನದಿಂದ ಭಾರತ ಖರೀದಿಸುತ್ತದೆ. 

ವಾಘ ಗಡಿ ರಿಟ್ರೀಟ್ ವೇಳೆ ಭಾರತದೊಳಗೆ ಓಡಿ ಬಂದ ಪಾಕಿಸ್ತಾನ ಬೀದಿ ನಾಯಿ ವಶಕ್ಕೆ ಪಡೆದ ಸೇನೆ!

ಪಾಕಿಸ್ತಾನದಿಂದ ಭಾರತ ಅತ್ಯಧಿಕವಾಗಿ ಖರೀದಿಸುವ ವಸ್ತು ಕಲ್ಲುಪ್ಪು ಅಥವಾ ಸೇಂಧಾ ನಮಕ್ (ರಾಕ್ ಸ್ಟಾಲ್ Himalayan salt). ಭಾರತ ಈ ರಾಕ್ ಸ್ಟಾಲ್ ಮೇಲೆ ಸಂಪೂರ್ಣವಾಗಿ  ಪಾಕಿಸ್ತಾನದ ಮೇಲೆಯೇ ಅವಲಂಬಿತವಾಗಿದೆ. ಉಪವಾಸದ ಸಂದರ್ಭದಲ್ಲಿ ಈ ರಾಕ್ ಸ್ಟಾಲ್ ಹೆಚ್ಚು ಬಳಕೆಯಾಗುತ್ತದೆ. ಹಾಗಾಗಿ ಈ ಉಪ್ಪನ್ನು ಮನೆಗಳಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ಇದರ ಜೊತೆಗೆ ಮುಲ್ತಾನಾ ಮಿಟ್ಟಿ, ಕಾಟನ್, ಮೆಟಲ್ ಕಾಂಪೌಂಡ್, ಸಲ್ಫರ್, ಕಲ್ಲು ಮತ್ತು ಸುಣ್ಣವನ್ನು ಸಹ ಭಾರತ ಖರೀದಿ ಮಾಡುತ್ತದೆ. ಕನ್ನಡಕಗಳಲ್ಲಿ ಬಳಕೆಯಾಗುವ ಆಪ್ಟಿಕ್ಲಸ್ ಸಹ ದೊಡ್ಡ ಪ್ರಮಾಣದಲ್ಲಿ ಪಾಕಿಸ್ತಾನದಿಂದಲೇ ಭಾರತಕ್ಕೆ ಬರುತ್ತದೆ. ಪಾಕಿಸ್ತಾನದ ಚರ್ಮದ ಉತ್ಪನ್ನಗಳು, ಹಣ್ಣುಗಳು, ಕಾರ್ಬನಿಕ್ ಕೆಮಿಕಲ್ ಮತ್ತು ಮೆಟಲ್ ಕಾಂಪೌಂಡ್ ಭಾರತದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ. ಸಕ್ಕರೆಯಿಂದ ಮಾಡಲ್ಪಡುವ ಕನ್ಫೆಕ್ಷನರಿ ಪ್ರೊಡಕ್ಟ್‌ಗಳು ಸಹ ಪಾಕಿಸ್ತಾನದಿಂದಲೇ ಭಾರತಕ್ಕೆ ಬರುತ್ತವೆ. ಸ್ಟೀಲ್‌ ಮೇಲೆಯೂ ಸಹ ಪಾಕಿಸ್ತಾನದ ಮೇಲೆಯೇ ಭಾರತ ಅವಲಂಬಿತವಾಗಿದೆ. ತಾಮ್ರವೂ ಸಹ ಪಾಕಿಸ್ತಾನದಿಂದ ಬರುವ ವಸ್ತುಗಳಲ್ಲಿ ಒಂದಾಗಿದೆ.

ಇತರೆ ನೆರೆಯ ರಾಷ್ಟ್ರಗಳಿಂದಲೂ ಖರೀದಿ

ಭಾರತದ ಬಾಂಗ್ಲಾದೇಶದಿಂದ ಬಟ್ಟೆ ಮತ್ತು ರಾಸಾಯನಿಕಗಳನ್ನು ಖರೀದಿಸುತ್ತದೆ. ಬಾಂಗ್ಲಾದೇಶದ ಬಟ್ಟೆ ಉದ್ಯಮ ಭಾರತದ ಫ್ಯಾಶನ್ ಮಾರುಕಟ್ಟೆ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ. ಇನ್ನು ನೇಪಾಳದಿಂದ ಶುಂಠಿ ಸೇರಿದಂತ ಅತ್ಯಧಿಕ ಮಸಾಲೆ ಪದಾರ್ಥಗಳನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ನೇಪಾಳದ ಕೃಷಿ ಉತ್ಪನ್ನಗಳಿಗೆ ಭಾರತವೇ ದೊಡ್ಡ ಮಾರುಕಟ್ಟೆಯಾಗಿದೆ. ಇತ್ತ ಮಯನ್ಮಾರದಿಂದ ಟೀ, ಕಪ್ಪು ಪೇಪರ್ ಸೇರಿದಂತೆ ಅತ್ಯಧಿಕ ಕೃಷಿ ಉತ್ಪನ್ನಗಳನ್ನು ಭಾರತ ಖರೀದಿಸುತ್ತದೆ.

ಹಣದುಬ್ಬರದಿಂದ ದಿವಾಳಿಯಾದ ಪಾಕ್‌ನಲ್ಲಿ 50 ರೂ ಮಾಲ್ ಓಪನ್; ಕ್ಷಣಾರ್ಧದಲ್ಲಿಯೇ ಹಣ ಕೊಡದೇ ಲೂಟಿಗೈದ ಪಾಕಿಸ್ತಾನಿಗಳು

Latest Videos
Follow Us:
Download App:
  • android
  • ios