ವಾಘ ಗಡಿ ರಿಟ್ರೀಟ್ ವೇಳೆ ಭಾರತದೊಳಗೆ ಓಡಿ ಬಂದ ಪಾಕಿಸ್ತಾನ ಬೀದಿ ನಾಯಿ ವಶಕ್ಕೆ ಪಡೆದ ಸೇನೆ!
ವಾಘ ಘಡಿಯ ಬೀಟಿಂಗ್ ರಿಟ್ರೀಟ್ ವೇಳೆ ಪಾಸ್‌ಪೋರ್ಟ್, ವೀಸಾ ಇಲ್ಲದ ಪಾಕಿಸ್ತಾನ ಬೀದಿ ನಾಯಿ ನೇರವಾಗಿ ಭಾರತದೊಳಗೆ ಪ್ರವೇಶಿಸಿದೆ. ಕೆಲವೇ ಕ್ಷಣಗಳಲ್ಲಿ ಸೇನೆ ಈ ನಾಯಿಯ ವಶಕ್ಕೆ ಪಡೆದಿದೆ.
ಅಟ್ಟಾರಿ(ಆ.31) ವಾಘ ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೇನೆ ಬ್ರೀಟಿಂಗ್ ರಿಟ್ರೀಟ್ ಮಾಡಿ ಗೌರವ ಸಲ್ಲಿಸುತ್ತದೆ. ಉಭಯ ದೇಶಗಳ ನಡುವಿನ ಸಂಬಂಧ ಉತ್ತಮವಿಲ್ಲಿದ್ದರೂ ವಾಘ ಗಡಿ ಸಂಪ್ರದಾಯ ನಡೆದುಕೊಂಡು ಬಂದಿದೆ. ವಾಘ ಗಡಿಯಲ್ಲಿ ಭಾರಿ ಜನರು ಸೇರುತ್ತಾರೆ. ಸೈನಿಕರು ರಿಟ್ರೀಟ್ ವೀಕ್ಷಿಸಿ ಗೌರವ ಸಲ್ಲಿಸುತ್ತಾರೆ. ಹೀಗೆ ಶೌರ್ಯ, ಸಾಹಸಮಯ ರೀತಿಯಲ್ಲಿ ಬೀಟಿಂಗ್ ರಿಟ್ರೀಟ್ ನಡೆಯುತ್ತಿರುವ ವೇಳೆ ಪಾಕಿಸ್ತಾನ ಗಡಿಯಿಂದ ಬೀದಿ ನಾಯಿಯೊಂದು ದಿಢೀರ್ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದೆ. ನಾಯಿ ಪ್ರವೇಶದಿಂದ ಬೀಟಿಂಗ್ ರಿಟ್ರೀಟ್‌ಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಭಾರತದೊಳಗೆ ಪ್ರವೇಶಿಸಿದ ಪಾಕಿಸ್ತಾನದ ನಾಯಿಯನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.
ಅಟ್ಟಾರಿಯ ವಾಘ ಗಡಿಯಲ್ಲಿ ಬೀಟಿಂಗ್ ರೀಟ್ರಿಟ್ ಅತ್ಯಂತ ವಿಶೇಷ. ಉಭಯ ದೇಶದ ಸೈನಿಕರ ಈ ಸಂಪ್ರದಾಯ ಭಾರಿ ಜನಪ್ರಿಯಗೊಂಡಿದೆ. ಬೀಟಿಂಗ್ ರಿಟ್ರೀಟ್ ಆರಂಭಗೊಂಡ ಬಳಿಕ ಭಾರತ ಹಾಗೂ ಪಾಕಿಸ್ತಾನದ ಯೋಧರು ಲೆಫ್ಟ್ ರೈಟ್ ಮೂಲಕ ಆಗಮಿಸಿ ಉಭಯ ದೇಶದ ಗಡಿಯಲ್ಲಿನ ಗೇಟ್ ತೆರೆಯುತ್ತಾರೆ. ಬಳಿಕ ಧ್ವಜಾರೋಹಣ, ಶೌರ್ಯ ಪ್ರದರ್ಶನ ನಡೆಯಲಿದೆ.
ಪಾಕ್ ಸೇನಾ ಹಿಡಿತದಿಂದ ಜಾರಿದ ಬಲೂಚಿಸ್ತಾನ್; 130 ಯೋಧರ ಹತ್ಯೆ ಕಾರ್ಯಾಚರಣೆ ವಿಡಿಯೋ ಔಟ್!
ಗೇಟುಗಳು ತೆರೆದ ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನ ಬೀದಿ ನಾಯಿಯೊಂದು ಒಂದೇ ವೇಗದಲ್ಲಿ ಭಾರತದ ಗಡಿಯೊಳಗೆ ಪ್ರವೇಶಿಸಿದೆ. ಗಡಿ ಬಾಗಿಲು ತೆರೆದ ಕಾರಣ ಸುಲಭವಾಗಿ ಹಾಗೂ ವೇಗವಾಗಿ ಓಡಿ ಬಂದಿದೆ. ನಾಯಿ ಗಡಿ ಪ್ರವೇಶಿಸುತ್ತಿರುವುದನ್ನು ಸ್ಥಳದಲ್ಲಿದ್ದ ಉಭಯ ದೇಶದ ಜನ ಗಮನಿಸಿದ್ದಾರೆ. ಇತ್ತ ನಾಯಿ ಭಯದಿಂದ ಓಡೋಡಿ ಭಾರತದ ಗಡಿಯೊಳಗೆ ಪ್ರವೇಶಿಸಿದೆ.
ನಾಯಿ ಪ್ರವೇಶದಿಂದ ಬೀಟಿಂಗ್ ರಿಟ್ರೀಟ್‌ಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಗಡಿ ಪ್ರವೇಶಿಸಿದ ನಾಯಿಯನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ. ನಾಯಿ ಪ್ರವೇಶದ ಈ ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ಈ ಕುರಿತು ಕಮೆಂಟ್ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಜನರಿಗೆ ತಿನ್ನಲು ಅನ್ನವಿಲ್ಲ, ಇನ್ನು ನಾಯಿಗೆ ಎಲ್ಲಿ ಸಿಕ್ಕಿತು. ಅದಕ್ಕೆ ಓಡಿ ಬಂದಿದೆ ಎಂದಿದ್ದಾರೆ. ಮತ್ತೆ ಕೆಲವರು ಪ್ರಾಣಿಗೆ ಗಡಿಗಳಿಲ್ಲ. ಹೀಗಾಗಿ ನಾಯಿ ಎಲ್ಲಿಬೇಕಾದರು ತಿರುಗಾಡಬಹುದು ಎಂದಿದ್ದಾರೆ.
ಮೇಲ್ನೋಟಕ್ಕೆ ಇದೊಂದು ನಾಯಿ ಓಡಿ ಬಂದ ಘಟನೆಯಾದರೂ ಭಾರತವಾಗಲಿ, ಪಾಕಿಸ್ತಾನವಾಗಲಿ ಅಥವಾ ಇನ್ಯಾವುದೇ ದೇಶದ ಸೇನೆ ಈ ಘಟನೆಯನ್ನು ಇಷ್ಟೇ ಎಂದು ಸುಮ್ಮನಾಗುವುದಿಲ್ಲ. ಈ ನಾಯಿಯ ಸಂಪೂರ್ಣ ತಪಾಸಣೆ ನಡೆಯಲಿದೆ. ನಾಯಿಯಲ್ಲಿ ಯಾವುದೇ ಚಿಪ್ ಅಳವಡಿಕೆಯಾಗಿಲ್ಲ ಅನ್ನೋದನ್ನು ಸೇನೆ ಖಾತ್ರಿಪಡಿಸಿಕೊಳ್ಳಲಿದೆ. ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ.
ಭಾರತದಲ್ಲಿ ರೈಲು ಹಳಿ ತಪ್ಪಿಸಲು ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೂತ್ರಧಾರ ಪಾಕ್ ಉಗ್ರನಿಂದ ಅನುಯಾಯಿಗಳಿಗೆ ಕರೆ!