Asianet Suvarna News Asianet Suvarna News

ಭಾರತದ ಭವಿಷ್ಯ ಬದಲಿಸಿದ 10 ಬಜೆಟ್‌ಗಳು

ಕೇಂದ್ರ ಬಜೆಟ್‌ ಮಂಡನೆಗೆ ಇನ್ನೊಂದೇ ದಿನ ಬಾಕಿ ಇದೆ. ಕೇಂದ್ರ ಆಯವ್ಯಯ ಎಂದರೆ ಇಡೀ ದೇಶದ ಅಭಿವೃದ್ಧಿಯ ಮಾರ್ಗಸೂಚಿ. ಇಲ್ಲಿನ ಪ್ರತಿಯೊಂದು ಹೆಜ್ಜೆಯೂ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ಚಹರೆ ಬದಲಿಸಿದ ಪ್ರಮುಖ ಬಜೆಟ್‌ಗಳ ಕಿರು ಪರಿಚಯ ಇಲ್ಲಿದೆ.

10 major budget which changed Indian economy post independence
Author
Bengaluru, First Published Jan 31, 2020, 4:28 PM IST
  • Facebook
  • Twitter
  • Whatsapp

ಕೇಂದ್ರ ಬಜೆಟ್‌ ಮಂಡನೆಗೆ ಇನ್ನೊಂದೇ ದಿನ ಬಾಕಿ ಇದೆ. ಕೇಂದ್ರ ಆಯವ್ಯಯ ಎಂದರೆ ಇಡೀ ದೇಶದ ಅಭಿವೃದ್ಧಿಯ ಮಾರ್ಗಸೂಚಿ. ಇಲ್ಲಿನ ಪ್ರತಿಯೊಂದು ಹೆಜ್ಜೆಯೂ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ಚಹರೆ ಬದಲಿಸಿದ ಪ್ರಮುಖ ಬಜೆಟ್‌ಗಳ ಕಿರು ಪರಿಚಯ ಇಲ್ಲಿದೆ.

ಸ್ವತಂತ್ರ ಭಾರತದ ಮೊದಲ ಬಜೆಟ್‌ (1947)

ಸ್ವತಂತ್ರ ಭಾರತದ ಮೊಟ್ಟಮೊದಲ ಬಜೆಟ್‌ ಮಂಡಿಸಿದ್ದು, ಆರ್‌.ಕೆ ಷಣ್ಮುಗಂ ಚೆಟ್ಟಿ. ಇದು ಮಂಡನೆಯಾಗಿದ್ದು ನವೆಂಬರ್‌ 26, 1947ರಂದು. ಸ್ವಾತಂತ್ರ್ಯಾ ನಂತರ ಭಾರತ ವಿಭಜನೆಯಾದ ಬಳಿಕ ಭಾರತದಲ್ಲಿದ್ದ ನಿರಾಶ್ರಿತರಿಗೆ ಪುನರ್‌ವಸತಿ ಕಲ್ಪಿಸುವುದು ಮತ್ತು ಆಹಾರ ಧಾನ್ಯಗಳಿಗೆ ಸಬ್ಸೀಡಿ ಪಾವತಿಸುವುದು ಮೊದಲ ಬಜೆಟ್‌ಗೆ ದೊಡ್ಡ ಆರ್ಥಿಕ ಹೊರೆಯಾಗಿತ್ತು. ಬಜೆಟ್‌ ಆದಾಯ 171.15 ಕೋಟಿ ರು. ಆಗಿದ್ದರೆ, ಖರ್ಚು 197.39 ಕೋಟಿ ರು. ಆಗಿತ್ತು.

ಮೊದಲ ಗಣರಾಜ್ಯ ಬಜೆಟ್‌(1950)

ಗಣರಾಜ್ಯ ಭಾರತ ಮೊಟ್ಟಮೊದಲ ಬಜೆಟ್‌ ಇದು. ಕಾಂಗ್ರೆಸ್‌ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಜಾನ್‌ ಮತಾಯ್‌ ಈ ಬಜೆಟ್‌ ಅನ್ನು 1950 ಫೆಬ್ರವರಿ 28ರಂದು ಮಂಡಿಸಿದ್ದರು. ಈ ಬಜೆಟ್‌ನಲ್ಲಿ ಯೋಜನಾ ಆಯೋಗ ರಚನೆಗೆ ಮಾರ್ಗಸೂಚಿಯನ್ನು ಹಾಕಿಕೊಳ್ಳಲಾಗಿತ್ತು.

ಸ್ವಾತಂತ್ಯಾ ನಂತರದ ಮೂರೇ ವರ್ಷದಲ್ಲಿ ಈ ಬಜೆಟ್‌ ಮಂಡನೆಯಾಗಿದ್ದರಿಂದ ಅಧಿಕ ಖರ್ಚು ಹಣದುಬ್ಬರ, ಕಡಿಮೆ ಉಳಿತಾಯ, ಕಡಿಮೆ ಬಂಡವಾಳ ಹೂಡಿಕೆ ಇಡೀ ದೇಶದ ದೊಡ್ಡ ಸಮಸ್ಯೆಯಾಗಿತ್ತು. ಈ ಬಜೆಟ್‌ನಲ್ಲಿ ರೂಪಿಸಲಾಗಿದ್ದ ಯೋಜನಾ ಆಯೋಗವು ಮುಂದೆ ಭಾರತ ಬೆಳವಣಿಗೆ ಸಾಕಷ್ಟುಕೊಡುಗೆ ನೀಡಿತು.

ಆರ್ಥಿಕ ಸಮೀಕ್ಷೆ ಬಹಿರಂಗ: ಅಭಿವೃದ್ಧಿ ಮೋದಿ ಸರ್ಕಾರದ ಅಂಗ!

ಕೃಷ್ಣಮಾಚಾರಿ ಬಜೆಟ್‌ (1957)

ಟಿ.ಟಿ ಕೃಷ್ಣಮಾಚಾರಿ ಅವರು 1957 ಮಾಚ್‌ರ್‍ 15ರಂದು ಮಂಡಿಸಿದ್ದ ಬಜೆಟ್‌ ಕೃಷ್ಣಮಾಚಾರಿ ಬಜೆಟ್‌ ಎಂದೇ ಹೆಸರುವಾಸಿಯಾಗಿದೆ. ಈ ಬಜೆಟ್‌ನಲ್ಲಿ ಆಮದು ಪರವಾನಗಿ ವ್ಯವಸ್ಥೆ ಜಾರಿ ಮಾಡುವ ಮೂಲಕ ಮತ್ತು ಆದಾಯ ತೆರಿಗೆ ಹೆಚ್ಚಿಸುವ ಮೂಲಕ ಆಮದಿನ ಮೇಲೆ ನಿರ್ಬಂಧ ಹೇರಿದರು. ಹಂಗೇರಿಯಾದ ಆರ್ಥಿಕ ತಜ್ಞರಾಗಿದ್ದ ನಿಕೋಲಸ್‌ ಕಲ್ದೋರ್‌ ಅವರ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಜನ ಸೂಕ್ಷ್ಮ ಬಜೆಟ್‌ (1968)

ಈ ಬಜೆಟ್‌ ಅನ್ನು ಫೆಬ್ರವರಿ 29, 1968ರಲ್ಲಿ ಮೊರಾರ್ಜಿ ದೇಸಾಯಿ ಮಂಡಿಸಿದ್ದರು. ಈ ಬಜೆಟ್‌ನಲ್ಲಿ ಎಲ್ಲಾ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳಿಗೆ ಸ್ವ ಮೌಲ್ಯ ಮಾಪನ ಮಾಡಿಕೊಡಿಕೊಳ್ಳುವ ಹೊಸ ಕ್ರಮವನ್ನು ಜಾರಿ ಮಾಡಲಾಯಿತು. ಈ ವ್ಯವಸ್ಥೆ ಇನ್ನೂ ಜಾರಿಯಲ್ಲಿದೆ. ಇದು ಉತ್ಪಾದಕ ಉದ್ದಿಗೆಗಳಿಗೆ ವರ್ಧಕವಾಗಿ ಮಾರ್ಪಟ್ಟಿತು. ಈ ವ್ಯವಸ್ಥೆಯಿಂದ ಅಬಕಾರಿ ಇಲಾಖೆಯ ಮೇಲಿನ ಹೊರೆ ಕಡಿಮೆಯಾಯಿತು.

ಬ್ಲಾಕ್‌ ಬಜೆಟ್‌ (1973)

ಈ ಬಜೆಟ್‌ನಲ್ಲಿ ಹಣವನ್ನು ಗುಪ್ತ ಅಥವಾ ನಿರ್ದಿಷ್ಟಯೋಜನೆಗಳಿಗಾಗಿ ಮೀಸಲಿಡಲಾಗಿತ್ತು. ಈ ಬಜೆಟ್ಟನ್ನು ಯಶವಂತರಾವ್‌ ಚೌಹಾಣ್‌ ಮಂಡಿಸಿದ್ದರು. ಆಗ 550 ಕೋಟಿ ರು. ಕೊರತೆ ಉಂಟಾಗಿತ್ತು. ಹಾಗಾಗಿ 1973-74ರ ಬಜೆಟ್ಟನ್ನು ‘ಬ್ಲಾಕ್‌ ಬಜೆಟ್‌’ ಎಂದು ಕರೆಯಲಾಗುತ್ತದೆ. ಈ ಬಜೆಟ್‌ನಲ್ಲಿ ಚೌಹಾಣ್‌ ಕಲ್ಲಿದ್ದಲು ಗಣಿಗಾರಿಕೆಗಳ, ಸಾಮಾನ್ಯ ವಿಮೆ ಕಂಪನಿಗಳ ರಾಷ್ಟ್ರೀಕರಣಕ್ಕೆ 56 ಕೋಟಿ ರು. ಮೀಸಲಿಟ್ಟಿದ್ದರು. ಆದರೆ ಈ ಬಗ್ಗೆ ದೊಡ್ಡ ವಿವಾದ ಉಂಟಾಯಿತು. ಇದು ಮುಂದಿನ ವರ್ಷ ಕಲ್ಲಿದ್ದಲು ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಪರಿಣಾಮ ಬಾರೀ ಪ್ರಮಾಣದ ಬೇಡಿಕೆ ಪೂರೈಸಲು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿ ಬಂತು.

ಗಾಂಧಿ ಬಜೆಟ್‌ (1987)

ಈ ಬಜೆಟ್‌ ಅನ್ನು ರಾಜೀವ್‌ ಗಾಂಧಿ ಫೆಬ್ರವರಿ 28, 1987ರಂದು ಮಂಡಿಸಿದ್ದರು. ಈ ಬಜೆಟ್‌ನಲ್ಲಿ ಮಿನಿಮಮ್‌ ಕಾರ್ಪೋರೇಟ್‌ ಟ್ಯಾಕ್ಸ್‌ ಅನ್ನು ಪರಿಚಯಿಸಲಾಯಿತು. ಅತಿ ಹೆಚ್ಚು ಆದಾಯ ಗಳಿಸುವ ಕಂಪನಿಗಳು ಕಾನೂನಾತ್ಮಕವಾಗಿ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳದಂತೆ ಮಾಡಲು ಇದನ್ನು ಜಾರಿ ಮಾಡಲಾಯಿತು.

ಈ ತೆರಿಗೆ ಇವತ್ತಿಗೂ ದೇಶದ ಬೊಕ್ಕಸದ ಪ್ರಮುಖ ಆದಾಯವಾಗಿದೆ. ಇಂಥದ್ದೊಂದು ತೆರಿಗೆ ಜಾರಿಗೆ ಕಾರಣ ಅಮೆರಿಕ. ಅಮೆರಿಕದಿಂದ ಪ್ರೇರಣೆ ಪಡೆದು ಇದನ್ನು ನಮ್ಮ ದೇಶದಲ್ಲಿ ಜಾರಿ ಮಾಡಲಾಯಿತು.

ಮೋದಿ ಬಜೆಟ್ ಭಾಗ್ಯ, ಯಾವುದು ತುಟ್ಟಿ, ಯಾವುದು ಅಗ್ಗ?: ಬಜೆಟ್ ಪೂರ್ವಾಪರ!

‘ಯುಗ ಪ್ರವರ್ಧಕ’ ಬಜೆಟ್‌ (1991)

1991ರ ಬಜೆಟ್‌ ಯುಗಪ್ರವರ್ಧಕ ಬಜೆಟ್‌ ಎಂದೇ ಹೆಸರುವಾಸಿಯಾಗಿದೆ. ಇದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಮಂಡಿಸಿದ ಮೊದಲ ಬಜೆಟ್‌. ಭಾರತದಲ್ಲಿ ಉದ್ಭವವಾಗಿದ್ದ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಮಂಡನೆಯಾದ ಈ ಬಜೆಟ್‌ ಭಾರತವನ್ನು ಉದಾರೀಕರಣದೆಡೆಗೆ ಕಂಡೊಯ್ದಿತು. ಪಿ.ವಿ ನರಸಿಂಹ ರಾವ್‌ ನೇತೃತ್ವ ಸರ್ಕಾರದಲ್ಲಿ ವಿತ್ತಮಂತ್ರಿಗಳಾಗಿದ್ದ ಮನಮೋಹನ್‌ ಸಿಂಗ್‌ ಅವರು ಬಜೆಟ್‌ನಲ್ಲಿ ಹೊಸ ಆರ್ಥಿಕ ನೀತಿಯನ್ನು ಪರಿಚಯಿಸಿದರು.

ಆರ್ಥಿಕ ಸ್ಥಿರತೆ ಸಾಧಿಸಲು ಆಮದು ಮತ್ತು ರಫ್ತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅನಗತ್ಯ ನಿರ್ಬಂಧಗಳನ್ನು ತೆಗೆದು ಹಾಕಿ ಭಾರತದ ಆರ್ಥಿಕತೆಯನ್ನು ಇನ್ನೂ ಹೆಚ್ಚು ಜಾಗತಿಕ ವ್ಯಾಪಾರ ಸ್ನೇಹಿಯನ್ನಾಗಿಸಿದರು. ಕಸ್ಟಮ್‌ ಸುಂಕವನ್ನು 220%ನಿಂದ 150%ಗೆ ಇಳಿಸಿದರು. ರಫ್ತು ಹೆಚ್ಚಿಸಿಲು ಪ್ರೋತ್ಸಾಹದಾಯಕ ನಿಯಮಗಳನ್ನು ಜಾರಿ ಮಾಡಿದರು. ಈ ಬಜೆಟ್‌ ಮಂಡನೆಯಾದ ಎರಡೇ ಎರಡು ದಶಕದಲ್ಲಿ ಭಾರತ ಜಗತ್ತಿನಲ್ಲಿ ಅತಿ ವೇಗವಾಗಿ ಸಾಗುತ್ತಿರುವ ಆರ್ಥಿಕತೆಗಳ ಸಾಲಿನಲ್ಲಿ ಸೇರಿತು.

ಇದೇ ವೇಳೆ ಮನಮೋಹನ್‌ ಸಿಂಗ್‌ ತಮ್ಮ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿ ವೈಯಕ್ತಿಕ ಸಂಗತಿಗಳನ್ನು ಪ್ರಸ್ತಾಪಿಸಿದರು. ‘ನಾನು ಬಡ ಕುಟುಂಬದಲ್ಲಿ ಬೆಳೆದವನು. ಪಾಕಿಸ್ತಾನದ ಪೊನ್ರೆ ಗ್ರಾಮದಿಂದ ಭಾರತಕ್ಕೆ ವಲಸೆ ಬರಬೇಕಾಯಿತು.ವಿಶ್ವವಿದ್ಯಾಲಯ ಸ್ಕಾಲರ್‌ಶಿಪ್‌ಗಳು ಮತ್ತು ಅನುದಾನಗಳು ನನಗೆ ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ಕಾಲೇಜ್‌ ವ್ಯಾಸಂಗಮಾಡಲು ನೆರವಾಯಿತು. ಈ ದೇಶ ನನಗೆ ಗೌರವ ಹಾಗೂ ಉನ್ನತ ಸ್ಥಾನ ನೀಡಿದೆ. ದೇಶ ಸೇವೆಗೆ ನನ್ನಿಂದ ನೀಡಬಹುದಾದ ಸೇವೆಯನ್ನು ಪ್ರಾಮಾಣಿಕವಾಗಿ ನೀಡುತ್ತೇನೆ. ಈ ಮೂಲಕ ನಾನು ಸದನಕ್ಕೆ ಭರವಸೆ ನೀಡುತ್ತೇನೆ’ ಎಂದು ಐತಿಹಾಸಿಕ ಬಾಷಣವನ್ನು ಬಜೆಟ್‌ ವೇಳೆ ಮಂಡಿಸಿದ್ದರು.

ಮೋದಿ ಸರ್ಕಾರದ ಹಿಂದಿನ 6 ಬಜೆಟ್‌ ಹೇಗಿದ್ದವು?

ಡ್ರೀಮ್‌ ಬಜೆಟ್‌ (1997)

1997-98ರ ಬಜೆಟ್ಟನ್ನು ‘ಡ್ರೀಮ್‌ ಬಜೆಟ್‌’ ಎಂದೇ ಕರೆಯಲಾಗುತ್ತದೆ. ಎಚ್‌.ಡಿ ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ವಿತ್ತ ಮಂತ್ರಿಯಾಗಿದ್ದ ಪಿ.ಚಿದಂಬರಂ ಅವರು ಇದನ್ನು ಮಂಡಿಸಿದ್ದರು. ಇದರಲ್ಲಿ ಆರ್ಥಿಕ ಸುಧಾರಣೆಗೆ ಕ್ರಾಂತಿಕಾರಿ ಕ್ರಮ ಕೈಗೊಳ್ಳಲಾಗಿತ್ತು.

ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೋರೇಟ್‌ ತೆರಿಗೆಯಲ್ಲಿ ಬಾರೀ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿತ್ತು. ವೈಯಕ್ತಿಕ ಆದಾಯ ತೆರಿಗೆಯನ್ನು 40%ನಿಂದ 30%ಗೆ ಇಳಿಸಿದ್ದರು. ಇದರೊಂದಿಗೆ ಅನೇಕ ಸರ್‌ಚಾಜ್‌ರ್‍ಗಳನ್ನು ರದ್ದು ಮಾಡಿದ್ದರು. ಆದಾಯ ತೆರಿಗೆಯನ್ನು ಕಡಿತ ಗೊಳಿಸಿದ್ದರಿಂದ ತೆರಿಗೆ ಸಂಗ್ರಹಣೆ ಅಧಿಕವಾಗಿತ್ತು. ಚಿದಂಬರಂ ಅವರ ಈ ನಿರ್ಧಾರವನ್ನು ಸಾಮಾನ್ಯ ಜನರು ಸ್ವಾಗತಿಸಿದ್ದರು.

ಮಿಲ್ಲೇನಿಯಂ ಬಜೆಟ್‌ (2000)

2000ನೇ ಇಸವಿಯ ಬಜೆಟ್‌ ಮಂಡನೆ ಮಾಡಿದವರು ಯಶವಂತ್‌ ಸಿನ್ಹಾ. ಭಾರತವನ್ನು ಪ್ರಮುಖ ಸಾಫ್ಟ್‌ವೇರ್‌ ಹಬ್‌ ಆಗಿಸುವ ಉದ್ದೇಶದಿಂದ ಈ ಬಜೆಟ್‌ ಮಂಡಿಸಲಾಗಿತ್ತು. ಹಾಗಾಗಿ ಈ ಬಜೆಟ್‌ ಅನ್ನು ಮಿಲ್ಲೇನಿಯಂ ಬಜೆಟ್‌ ಎಂದೇ ಕರೆಯಲಾಯಿತು. 1991ರ ಬಜೆಟ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸಾಫ್ಟ್‌ವೇರ್‌ ಆಮದನ್ನು ತೆರಿಗೆ ರಹಿತವಾಗಿಸಿದ್ದರು.

ಈ ಬಜೆಟ್‌ನಲ್ಲಿ, ಸಾಫ್ಟ್‌ವೇರ್‌ ರಫ್ತುದಾರರಿಗೆ ಮನಮೋಹನ್‌ಸಿಂಹ್‌ ಅವರು ನೀಡಿದ್ದ ಪ್ರೋತ್ಸಾಹವನ್ನು ಸಿನ್ಹಾ ಹಂತಹಂತವಾಗಿ ತೆಗೆದು ಹಾಕಿದರು. ಇದನ್ನು ನೀತಿ ತಜ್ಞರು ಧೈರ್ಯಶಾಲಿ ನಿರ್ಧಾರ ಎಂದು ಶ್ಲಾಘಿಸಿದ್ದರು. ಕಂಪ್ಯೂಟರ್‌ ಮತ್ತು ಸಿಡಿ, ರಾರ‍ಯಮ್ಸ್‌ ಸೇರಿದಂತೆ 21 ವಸ್ತುಗಳ ಮೇಲೆ ಕಡಿಮೆ ಕಸ್ಟಮ್ಸ್‌ ಸುಂಕ ನೀಡುವ ಪ್ರೋತ್ಸಾಹಕವನ್ನು ತೆಗೆದು ಹಾಕುವ ಅವರ ನಿರ್ಧಾರವು ಐಟಿ ವಲಯದ ಬೆಳವಣಿಗೆಗೆ ಕಾರಣವಾಯಿತು.

ರೋಲ್‌ ಬ್ಯಾಕ್‌ ಬಜೆಟ್‌ (2002)

ಎಲ್ಲಾ ಬಜೆಟ್‌ಗಳಲ್ಲೂ ಹೊಸ ಹೊಸ ಯೋಜನೆಗಳು ಘೋಷಣೆಯಾಗುವುದಿಲ್ಲ. ಅದರಲ್ಲಿ ರೋಲ…-ಬ್ಯಾಕ್‌ ಪ್ರಸ್ತಾಪಗಳಿಗೆ ಕನಿಷ್ಠ ಒಂದು ಬಜೆಟ್‌ ಹೆಸರುವಾಸಿಯಾಗಿದೆ. ಯಶ್ವಂತ್‌ ಸಿನ್ಹಾ ಅವರು ಮಂಡಿಸಿದ ಬಜೆಟ್‌ ರೋಲ…-ಬ್ಯಾಕ್‌ ಬಜೆಚ್‌ ಆಗಿ ಜನಪ್ರಿಯವಾಯಿತು. ಏಕೆಂದರೆ ಈ ಬಜೆಟ್‌ನಲ್ಲಿ, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಸೇವಾ ತೆರಿಗೆ ಹಾಗೂ ಎಲ್‌ಪಿಜಿ ಬೆಲೆಯನ್ನು ಹೆಚ್ಚಿಸಿದ್ದರು.

ಸಮಾಜವಾದಿ ಬಜೆಟ್‌ (2005)

ಯುಪಿಎ ಸರ್ಕಾರದ ಅವಧಿಯಲ್ಲಿ ಪಿ. ಚಿದಂಬರಂ ಅವರು ಮಂಡಿಸಿದ್ದ ಬಜೆಟ್‌ಗೆ ಸಮಾಜವಾದಿ ಬಜೆಟ್‌ ಎನ್ನಲಾಗುತ್ತದೆ. ಈ ಬಜೆಟ್‌ನಲ್ಲಿ ಭಾರತ್‌ ನಿರ್ಮಾಣ್‌ ಎನ್ನುವ ಬೃಹತ್‌ ಯೋಜನೆ ಹಾಕಿಕೊಳ್ಳಲಾಗಿತ್ತು. ಸಾಮಾನ್ಯ ಜನರ ಮೇಲೆ ಕೇಂದ್ರೀಕೃತವಾಗಿದ್ದ ಈ ಬಜೆಟ್‌ನಲ್ಲಿ ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌’ ಮತ್ತು ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯನ್ನು ಜಾರಿ ಮಾಡಲಾಯಿತು.

 

Follow Us:
Download App:
  • android
  • ios