ಫ್ಯೂಚರ್ ಆಂಡ್ ಆಪ್ಷನ್ ಟ್ರೇಡಿಂಗ್‌ನಲ್ಲಿ ಶೇ.93ರಷ್ಟು ಹೂಡಿಕೆದಾರರಿಗೆ ನಷ್ಟ; ಸೆಬಿ ಸ್ಪೋಟಕ ವರದಿ
2022-24ರ ಅವಧಿಯಲ್ಲಿ ಫ್ಯೂಚರ್ ಆ್ಯಂಡ್ ಆಪ್ಷನ್ ಟ್ರೇಡಿಂಗ್‌ನಲ್ಲಿ ತೊಡಗಿದ್ದ ಶೇ.93ರಷ್ಟು ವೈಯಕ್ತಿಕ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ ಎಂದು ಸೆಬಿ ಹೇಳಿದೆ. ಹೂಡಿಕೆದಾರರು ಸರಾಸರಿ 2 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ. ಒಟ್ಟಾರೆಯಾಗಿ 1.8 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಮುಂಬೈ: 2022-24ರ ಅವಧಿಯಲ್ಲಿ ಫ್ಯೂಚರ್ ಆ್ಯಂಡ್ ಆಪ್ಷನ್ ಟ್ರೇಡಿಂಗ್‌ನಲ್ಲಿ ತೊಡಗಿದ್ದ ಶೇ.93ರಷ್ಟು ವೈಯಕ್ತಿಕ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ. ಅವರ ನಷ್ಟದ ಸರಾಸರಿ ತಲಾ 2 ಲಕ್ಷ ರು.ನಷ್ಟಿತ್ತು ಎಂದು ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ಸೆಬಿ ಹೇಳಿದೆ.
ವರದಿ ಅನ್ವಯ 10ರಲ್ಲಿ 9 ವೈಯಕ್ತಿಕ ಹೂಡಿಕೆದಾರರು ಫ್ಯೂಚರ್ ಆ್ಯಂಡ್ ಆಪ್ಷನ್ ಟ್ರೇಡಿಂಗ್‌ನಲ್ಲಿ ನಷ್ಟ ಅನುಭವಿಸಿದ್ದಾರೆ. ಹೀಗೆ ಅವರು ಅನುಭವಿಸಿದ್ದ ಒಟ್ಟು ನಷ್ಟದ ಪ್ರಮಾಣ 1.8 ಲಕ್ಷ ಕೋಟಿ ರು.ನಷ್ಟಿತ್ತು. ನಷ್ಟ ಅನುಭವಿಸಿದ ಟಾಪ್ ಶೇ.3.5ರಷ್ಟು ಜನರು ಅಂದರೆ ಅಂದಾಜು 4 ಲಕ್ಷ ಜನರು ಸರಾಸರಿ 28 ಲಕ್ಷ ರು.ನಷ್ಟ ಅನುಭವಿಸಿದ್ದಾರೆ. ಶೇ.1ರಷ್ಟು ಹೂಡಿಕೆದಾರರು ಮಾತ್ರವೇ 1 ಲಕ್ಷ ರು.ಗಿಂತ ಹೆಚ್ಚಿನ ಲಾಭ ಮಾಡುವಲ್ಲಿ ಸಫಲರಾಗಿದ್ದಾರೆ.
10 ಗ್ರಾಮ್ ಚಿನ್ನಕ್ಕೆ 76 ಸಾವಿರ..! ಭಾರತದಲ್ಲಿ ಇತಿಹಾಸ ಬರೆದ ಬಂಗಾರ..!
2024ರಲ್ಲಿ ಹಣಕಾಸು ಸಂಸ್ಥೆಗಳು ಮತ್ತು ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಕ್ರಮವಾಗಿ 33 ಸಾವಿರ ಕೋಟಿ ರು. ಮತ್ತು 28000 ಕೋಟಿ ರು. ಲಾಭ ಗಳಿಸಿದ್ದಾರೆ. ಇದೇ ಅವಧಿಯಲ್ಲಿ ವೈಯಕ್ತಿಕ ಹೂಡಿಕೆದಾರರು 61 ಸಾವಿರ ಕೋಟಿ ರು. ನಷ್ಟ ಅನುಭವಿಸಿದ್ದಾರೆ ಎಂದು ವರದಿ ಹೇಳಿದೆ.
ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಹೂಡಿಕೆದಾರರು ಈಕ್ವಿಟಿ ಮತ್ತು ಡೆರಿವಿಟಿವ್ಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆಗೆ ಮುಂದಾಗುತ್ತಿರುವ ಕಾರಣ, ಅವರ ಲಾಭ-ನಷ್ಟದ ಬಗ್ಗೆ ಅರಿಯಲು ಸೆಬಿ ಅಧ್ಯಯನ ನಡೆಸಿತ್ತು. ಈ ವೇಳೆ ಈ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 23: ಇಂದು ಲಾಭ ಕಂಡ 10 ಷೇರುಗಳು, ಶೇ. 12 ಏರಿಕೆ ಕಂಡ SBFC