10 ಗ್ರಾಮ್‌ ಚಿನ್ನಕ್ಕೆ 76 ಸಾವಿರ..! ಭಾರತದಲ್ಲಿ ಇತಿಹಾಸ ಬರೆದ ಬಂಗಾರ..!

ಭಾರತದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 76,000 ರೂಪಾಯಿ ದಾಟಿದೆ. ಜಾಗತಿಕ ಆರ್ಥಿಕ ಅಂಶಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಈ ಏರಿಕೆಗೆ ಕಾರಣವಾಗಿವೆ. ಹೂಡಿಕೆದಾರರಿಗೆ ಇದು ಅವಕಾಶ ಮತ್ತು ಸವಾಲಿನ ಸಮಯವಾಗಿದೆ.

first time in India Gold prices cross 76000 per 10 grams san

ಬೆಂಗಳೂರು (ಸೆ.23): ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 76,000 ರೂಪಾಯಿ ದಾಟಿದೆ. ಗುಡ್ ರಿಟರ್ನ್ಸ್ ಡೇಟಾ ಪ್ರಕಾರ ದೆಹಲಿ, ಜೈಪುರ, ಲಕ್ನೋ ಮತ್ತು ಚಂಡೀಗಢದಂತಹ ಪ್ರಮುಖ ನಗರಗಳಲ್ಲಿ ಈ ಏರಿಕೆ ಕಂಡುಬಂದಿದೆ. ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಕಡಿತ ಮತ್ತು ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಸೇರಿದಂತೆ ಜಾಗತಿಕ ಆರ್ಥಿಕ ಅಂಶಗಳ ಸಂಯೋಜನೆಯ ಕಾರಣದಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ $ 2,628.28 ಕ್ಕೆ 0.2% ಏರಿತು, ಹಿಂದಿನ ದಿನ ಔನ್ಸ್‌ಗೆ $ 2,630.93 ಕ್ಕೆ ತಲುಪಿತ್ತು. ನಾನ್‌ ಯೀಲ್ಡಿಂಗ್‌ ಚಿನ್ನವು ಈ ವರ್ಷ 27% ಕ್ಕಿಂತ ಹೆಚ್ಚಿದೆ, 2010 ರಿಂದ ಅದರ ಅತ್ಯಂತ ಗಮನಾರ್ಹ ವಾರ್ಷಿಕ ಲಾಭಕ್ಕೆ ಸಿದ್ಧವಾಗಿದೆ. ಯುಎಸ್‌ ಗೋಲ್ಡ್‌ ಫ್ಯೂಚರ್‌ ಕೂಡ ಮೇಲ್ಮುಖ ಪ್ರಗತಿ ಕಂಡಿದೆ.  ಪ್ರತಿ ಔನ್ಸ್‌ಗೆ 0.3% ರಷ್ಟು $2,653.00 ಕ್ಕೆ ಏರಿಕೆ ಕಂಡಿದೆ.
ಕೆಸಿಎಂ ಟ್ರೇಡ್‌ನ ಮುಖ್ಯ ಮಾರುಕಟ್ಟೆ ವಿಶ್ಲೇಷಕರಾದ ಟಿಮ್ ವಾಟೆರ್, ಈ ಏರಿಕೆಯ ಹಿಂದಿನ ಅಂಶಗಳನ್ನು ವಿವರಿಸಿದ್ದಾರೆ. "ಜಾಗತಿಕ ಆರ್ಥಿಕತೆಯಲ್ಲಿನ ಪ್ರಸ್ತುತ ಸ್ಥಿತಿಯು,ಚಿನ್ನದ ದರಗಳ ಏರಿಕೆಗೆ ಕಾರಣವಾಗಿದೆ' ಎಂದಿದ್ದಾರೆ. US ಫೆಡರಲ್ ರಿಸರ್ವ್ ಇತ್ತೀಚೆಗೆ ರೇಟ್‌ ಕಟ್‌ ಕೂಡ ಮಾಡಿದೆ. ಅರ್ಧ-ಪರ್ಸೆಂಟೇಜ್ ಪಾಯಿಂಟ್ ಕಡಿತದಿಂದ ಇದು ಪ್ರಾರಂಭವಾಗಿದ್ದು, ವರ್ಷಾಂತ್ಯದಲ್ಲಿ ಇನ್ನೊಂದು ರೇಟ್‌ ಕಟ್‌ ಕೂಡ ಇರಲಿದೆ.
ಬಡ್ಡಿದರಗಳು ಕಡಿಮೆಯಾಗುತ್ತಿದ್ದಂತೆ, ಚಿನ್ನವನ್ನು ಹಿಡಿದಿಟ್ಟುಕೊಳ್ಳುವ ಅವಕಾಶದ ವೆಚ್ಚವು ಕಡಿಮೆಯಾಗುತ್ತದೆ, ಇದು ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ.

ಜಾಗತಿಕ ವಿಚಾರಗಳ ಕಾರಣಕ್ಕಾಗಿ ಬೇಡಿಕೆ:ಭೌಗೋಳಿಕ ರಾಜಕೀಯ ಅಪಾಯಗಳು ಸಹ ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತಿವೆ. ಹೆಜ್ಬೊಲ್ಲಾ ಮತ್ತು ಇಸ್ರೇಲ್ ನಡುವಿನ ಇತ್ತೀಚಿನ ಯುದ್ಧ ಸ್ಥಿತಿಯು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ, ಇದು ಚಿನ್ನದಂತಹ ಸುರಕ್ಷಿತ ಆಸ್ತಿಗಳಿಗೆ ಬೇಡಿಕೆಯನ್ನು ಹೆಚ್ಚಿಸಿದೆ.

ಆಗ್ಮಾಂಟ್‌ನ ಸಂಶೋಧನಾ ಮುಖ್ಯಸ್ಥ ರೆನಿಶಾ ಚೈನಾನಿ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಸಮಸ್ಯೆಯು ಚಿನ್ನದ ಕಡೆಗೆ ಹೆಚ್ಚಿನ ಗಮನಕ್ಕೆ ಕಾರಣವಾಯಿತು, ರಕ್ಷಣಾತ್ಮಕ ಹೂಡಿಕೆಯಾಗಿ ಅದರ ಸ್ಥಾನಮಾನವನ್ನು ಬಲಪಡಿಸುತ್ತದೆ ಎಂದು ಗಮನಿಸಿದರು. "ಚಿನ್ನದ ಮುಂದಿನ ಬೆಲೆಯೂ ಪ್ರತಿ ಔನ್ಸ್‌ಗೆ $2,700 ಆಗಿದೆ" ಎಂದು ಚೈನಾನಿ ಹೇಳಿದ್ದಾರೆ. "ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮುಂದುವರಿಯುವುದರೊಂದಿಗೆ, ಚಿನ್ನದ ದೃಷ್ಟಿಕೋನವು ಬುಲಿಶ್ ಆಗಿ ಉಳಿದಿದೆ."

ಚಿನ್ನಾಭರಣ ಪ್ರಿಯರೇ ಗಮನಿಸಿ, ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ

ಹೂಡಿಕೆ ಅವಕಾಶ: ಹೂಡಿಕೆದಾರರಿಗೆ, ಈ ಕ್ಷಣವು ಅವಕಾಶಗಳು ಮತ್ತು ಸವಾಲುಗಳನ್ನು ಒದಗಿಸುತ್ತದೆ. ಕಡಿಮೆ-ಬಡ್ಡಿ ದರದ ಪರಿಸರದಲ್ಲಿ ನಾನ್‌ ಯೀಲ್ಟಿಂಗ್‌ ಆಸ್ತಿಯಾಗಿ ಅದರ ಸ್ಥಾನಮಾನದಿಂದಾಗಿ ಮಾರುಕಟ್ಟೆಯು ಪ್ರಸ್ತುತ ಚಿನ್ನದತ್ತ ಒಲವು ತೋರುತ್ತಿದೆ. ಏಂಜೆಲ್ ಒನ್ ಲಿಮಿಟೆಡ್‌ನ ಸಂಶೋಧನೆಯ ಡಿವಿಪಿ ಪ್ರಥಮೇಶ್ ಮಲ್ಯ ಅವರು ಉಲ್ಲೇಖಿಸಿದಂತೆ, "ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಚಿನ್ನದ ಬೆಲೆಗಳು ಬುಲಿಶ್ ಆಗಿ ಉಳಿಯುವ ಸಾಧ್ಯತೆಯಿದೆ." ಎಂದಿದ್ದಾರೆ.

ಸಂಡೇ ಶಾಪಿಂಗ್ ಪ್ಲಾನ್ ಇದ್ರೆ ಚಿನ್ನವನ್ನೇ ಖರೀದಿಸಿ; ಶನಿವಾರದ ಬೆಲೆಯಲ್ಲಿ ಸಿಗಲಿದೆ ಬಂಗಾರ

Latest Videos
Follow Us:
Download App:
  • android
  • ios