Published : Jan 31 2022, 08:52 PM IST| Updated : May 26 2025, 11:25 AM IST
Share this Liveblog
FB
TW
Linkdin
Whatsapp
Budget 2022 LIVE: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು? ಹೀಗಿದೆ ನಿರ್ಮಲಾ, ಮೋದಿ ಲೆಕ್ಕಾಚಾರ
ಸಾರಾಂಶ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ನಾಲ್ಕನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ.ಈ ವರ್ಷ 39.45 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ತೆರಿಗೆ ರಿಲೀಫ್ ಸಿಕ್ಕಿದ್ದು, ಐಟಿ ದಾಳಿ ವೇಳೆ ಸಿಕ್ಕಾಕೊಳ್ಳೋರ ಹೃದಯ ಬಡಿತ ಹೆಚ್ಚಿದೆ. ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಸಹಕಾರಿ ಸಂಘಗಳಿಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗೂ ಹೊಸ ನೀತಿ ಜಾರಿಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳನ್ನು ಪರಿಚಯಿಸಿದ್ದು, ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಲಾಗಿದೆ ಜೊತೆಗೆ ಸಾವಯವ ಕೃಷಿಗೂ ಆದ್ಯತೆ ನೀಡಲಾಗಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತಾರಾಖಾಂಡ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಪಂಚ ರಾಜ್ಯಗಳಿಗೆ ಬಜೆಟ್‌ನಲ್ಲಿ ಮಣೆ ಹಾಕಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ನಿರ್ಮಲಾ, ಮೋದಿ ಲೆಕ್ಕಾಚಾರದ ಕ್ಷಣ ಕ್ಷಣದ ಅಪ್ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
06:51 PM (IST) Feb 01
Budget 2022 LIVE: Union Budget 2022: ಕ್ರೀಡೆಗೆ ಸಿಕ್ಕಿದ್ದಿಷ್ಟು
ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್(Nirmala Sitharaman), ಮಂಗಳವಾರ(ಫೆ.01)ದಂದು 2022-23ನೇ ಸಾಲಿನ ಕೇಂದ್ರ ಬಜೆಟ್ (Union Budget) ಮಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೂ (Sports Sector) ತನ್ನ ಬಜೆಟ್‌ನಲ್ಲಿ ಅನುದಾನವನ್ನು ಘೋಷಿಸಿದೆ. 2021-22ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ, ಈ ಬಾರಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚುವರಿಯಾಗಿ 300 ಕೋಟಿ ರುಪಾಯಿ ಹಣವನ್ನು ನೀಡಲಾಗಿದೆ. ಇದರ ಹೊರತಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕ್ರೀಡೆ ಎನ್ನುವ ಶಬ್ದವನ್ನು ಬಳಸಿಲ್ಲ, ಇದರ ಬದಲಾಗಿ ಗೇಮಿಂಗ್ ಎನ್ನುವ ಪದ ಬಳಕೆ ಮಾಡಿದ್ದಾರೆ.
Budget 2022 LIVE: Union Budget 2022 ಮಾನಸಿಕ ಆರೋಗ್ಯಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಜೊತೆ ಟೆಲಿ ಮೆಂಟಲ್ ಕಾರ್ಯಕ್ರಮ ಘೋಷಣೆ!
ಕಳೆದೆರಡು ವರ್ಷದಿಂದ ಸತತವಾಗಿ ಕಾಡುತ್ತಿರುವ ಕೊರೋನಾ ಸಮಸ್ಯೆ ಜನರಲ್ಲಿ ಹಲವು ಇತರ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಲ್ಲಿ ಮಾನಸಿಕ ಆರೋಗ್ಯ(mental health) ಸಮಸ್ಯೆ ಪ್ರಮುಖವಾಗಿದೆ. ಕಳೆದೆರಡು ವರ್ಷದಲ್ಲಿ ಕೊರೋನಾದಿಂದ ಮಾನಸಿಕವಾಗಿ ಕುಗ್ಗಿಹೋದವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಜನರಲ್ಲಿ ಕೊರೋನಾ ಸಾಂಕ್ರಾಮಿಕ(Coronavirus) ಅವಧಿಯಲ್ಲಿ ಹೊರಹೊಮ್ಮಿದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಬಜೆಟ್‌ನಲ್ಲಿ(Union Budget 2022) ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್(NIMHANS) ಆಸ್ಪತ್ರೆ ಜೊತೆ ಸೇರಿ ಕೇಂದ್ರ ಈ ಮಾನಸಿಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ.
Budget 2022 LIVE: Union Budget 2022: 2023ನೇ ಆರ್ಥಿಕ ಸಾಲಿಗೆ ದಾಖಲೆಯ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಣೆ
ಕಳೆದ ವರ್ಷ ಕೋವಿಡ್ ಕಾರಣದಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೇಂದ್ರ ಸರ್ಕಾರ ಬೃಹತ್ ಬಂಡವಾಳ ವೆಚ್ಚವನ್ನು(Capital Expenditure) ಘೋಷಿಸಿತ್ತು. ಇಂದು (ಫೆ.1) ಮಂಡಿಸಿದ 2022ನೇ ಸಾಲಿನ ಬಜೆಟ್ ನಲ್ಲಿ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನ ಬಂಡವಾಳ ವೆಚ್ಚದಲ್ಲಿ ಶೇ.35.4 ಏರಿಕೆ ಘೋಷಿಸಿದೆ.
Budget 2022 LIVE: Union Budget 2022: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು?
ಕೊರೋನಾ ಸಂಕಷ್ಟದ ನಡುವೆಯೂ ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಹೇಗಿತ್ತು?
"
05:36 PM (IST) Feb 01
Budget 2022 LIVE: Union Budget 2022: ಆರ್ಥಿಕತೆಗೆ ಬೂಸ್ಟರ್ ಕೊಡುವ ಬಜೆಟ್: ಸಿಎಂ ಬೊಮ್ಮಾಯಿ
2 ವರ್ಷ ಕೋವಿಡ್‌ನಿಂದ ಆರ್ಥಿಕತೆ ಹಿಂಜರಿತವಾಗಿತ್ತು. ಈ ಬಾರಿ ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸಲು ಉದ್ದೇಶವನ್ನಿಟ್ಟುಕೊಂಡು, ಬಜೆಟ್ ಮಂಡಿಸಲಾಗಿದೆ. ಇದೊಂದು ಆರ್ಥಿಕತೆಯನ್ನು ಉತ್ತೇಜಿಸುವ ಬಜೆಟ್ ಇದಾಗಿದೆ. ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿದೆ' ಎಂದು ಸಿಎಂ ಬೊಮ್ಮಾಯಿ ಹೇಳಿದರು.
"
05:13 PM (IST) Feb 01
Budget 2022 LIVE: ಬಜೆಟ್ ನ ಬಹುಪಾಲು ಹಣ ಸಾಲ ಹಾಗೂ ಬಡ್ಡಿಗೇ ಖರ್ಚಾಗುತ್ತಿದೆ: ಸಿದ್ದರಾಮಯ್ಯ
ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡ ಪತ್ರ ಮಂಡಿಸಿದ್ದಾರೆ. ನಾನು ಬಜೆಟ್ ಮೇಲೆ ಬಹಳ ನಿರೀಕ್ಷೆ ಇರಲಿಲ್ಲ. ರೈತರು, ಜನಸಾಮಾನ್ಯರು, ಬಡವರು ಇದರ ಮೇಲೆ ನಿರೀಕ್ಷೆ ಇಟ್ಟಿದ್ದರು.ಆರೋಗ್ಯ, ಶಿಕ್ಷಣ, ಕೃಷಿ ಮೂರು ಕ್ಷೇತ್ರಗಳಲ್ಲಿ ಉತ್ತೇಜನಕಾರಿಯಾದ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದ್ರು.ಆದರೆ ಅವರ ನಿರೀಕ್ಷೆ ಈಡೇರಿಲ್ಲ. ಕಳೆದ ವರ್ಷ ಸುಮಾರು 34 ಲಕ್ಷ ಕೋಟಿ ರೂ ಬಜೆಟ್ ಮಂಡಿಸಿದ್ರು.ಈ ವರ್ಷ 39.45ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ 4 ಲಕ್ಷದ 61ಸಾವಿರ ಕೋಟಿ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಲಾಗಿದೆ. ಈ ವರ್ಷದ 11ಲಕ್ಷ 87ಸಾವಿರದ 180ಕೋಟಿ ರೂ ಸಾಲ ಮಾಡಿದ್ದಾರೆ. ಕಳೆದ ವರ್ಷ ನಮ್ಮ ದೇಶದ ಮೇಲೆ ಇದ್ದ ಸಾಲ 135ಲಕ್ಷ 87ಸಾವಿರ ಕೋಟಿ ರೂ. ಮಹಮೋಹನ್ ಸಿಂಗ್ ಕಾಲದಲ್ಲಿ ಇದ್ದಂತ ಸಾಲ 53ಲಕ್ಷ 11ಸಾವಿರ ಕೋಟಿ. 8ವರ್ಷದ ಅವಧಿಯಲ್ಲಿ ಬಿಜೆಪಿ 93ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶ ನರೇಂದ್ರ ಮೋದಿ ಕಾಲದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದೆ.9,40,651ಕೋಟಿ ವರ್ಷಕ್ಕೆ ಬಡ್ಡಿ ಆಗುತ್ತೆ. ಬಜೆಟ್ ನ ಬಹುಪಾಲು ಹಣ ಸಾಲ ಹಾಗೂ ಬಡ್ಡಿಗೇ ಖರ್ಚಾಗುತ್ತಿದೆ.
ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ.
05:08 PM (IST) Feb 01
Budget 2022 LIVE: Budget ಭಾಷಣದಲ್ಲಿ ನಿರ್ಮಲಾ ಶಾಂತಿ ಪರ್ವವನ್ನು ಮೆನ್ಷನ್ ಮಾಡಿದ್ದೇಕೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್(Union Budget) 2022-23 ಅನ್ನು ಮಂಡಿಸುತ್ತಿರುವಾಗ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಅಧ್ಯಾಯಗಳಲ್ಲಿ 12ನೆಯದಾದ ಶಾಂತಿಪರ್ವ(Book of Peace)ದಲ್ಲಿ ಬರುವ ಪದ್ಯವೊಂದನ್ನು ಪ್ರಸ್ತಾಪಿಸಿದರು. ಸಂಸತ್ತಿನಲ್ಲಿ ತಮ್ಮ ಭಾಷಣದ ವೇಳೆ ಮಹಾಭಾರತವನ್ನು ಉಲ್ಲೇಖಿಸಿ, ಶಾಂತಿ ಪರ್ವದ ಪದ್ಯವೊಂದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಹೇಳಿದರು.
Budget 2022 LIVE: ಗೇಮಿಂಗ್ ಮತ್ತು ಅನಿಮೇಷನ್‌ಗೆ ಒತ್ತು, ಗಂಗೆಯ ದಡದಲ್ಲಿ ಕೃಷಿ
ಈ ಬಜೆಟ್‌ನಿಂದ ಮುಂದಿನ 25 ವರ್ಷಗಳ ಕಾಲ ಭಾರತಕ್ಕೆ ಅಡಿಪಾಯ ಸಿಗಲಿದೆ ಎಂದು ಹಣಕಾಸು ಸಚಿವ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಆರ್ಥಿಕ ಪ್ರಗತಿ ನಿರೀಕ್ಷಿಸಲಾಗಿದೆ.ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.9.2ರಷ್ಟಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ರೈಲ್ವೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆಗಳನ್ನು ಮಾಡಲಾಗಿದೆ.
Budget 2022 LIVE: Union Budget 2022: 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ
ಕೇಂದ್ರ ಹಣಕಾಸು ಸಚಿವಾಲಯದ ಬಿಡುಗಡೆಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು ಮತ್ತು ಫಿನ್‌ಟೆಕ್ (Fintech) ಆವಿಷ್ಕಾರಗಳು ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆದಿವೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಗ್ರಾಹಕ ಸ್ನೇಹಿ ರೀತಿಯಲ್ಲಿ ದೇಶದ ಮೂಲೆ ಮೂಲೆಗಳನ್ನು ತಲುಪಲು ಸರ್ಕಾರವು ನಿರಂತರವಾಗಿ ಅವುಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಸೀತಾರಾಮನ್ ಹೇಳಿದರು.
Budget 2022 LIVE: Budget 2022: ಬಜೆಟನಲ್ಲಿ ಇ-ಪಾಸ್‌ಪೋರ್ಟ್ ಘೋಷಣೆ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದ್ದು ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ. ಬಜೆಟ್‌ನಲ್ಲಿ ಗಮನ ಸೆಳೆದ ವಿಚಾರಗಳಲ್ಲಿ ಇ-ಪಾಸ್‌ಪೋರ್ಟ್ (E-Passport) ಕೂಡ ಒಂದು. ಎಂಬೆಡೆಡ್ ಚಿಪ್ ತಂತ್ರಜ್ಞಾನದೊಂದಿಗೆ ಸರ್ಕಾರ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಿಸಿದ್ದಾರೆ.
Budget 2022 LIVE: ನಿರ್ಮಲಾ ಬಜೆಟ್‌ಗೆ ಬೇಷ್ ಎಂದ ಪ್ರಧಾನಿ ಮೋದಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಕೇಂದ್ರ ಬಜೆಟ್(Union Budget 2022) ಮಂಡಿಸಿದ್ದಾರೆ. ಬಜೆಟ್ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಷೇರು ಸೂಚ್ಯಂಕ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಬಜೆಟ್ ಕುರಿತು ಭಾಷಣ ಮಾಡಿದ್ದಾರೆ. ಈ ಬಜೆಟ್ ಅತ್ಯುತ್ತಮ ಬಜೆಟ್ ಆಗಿದ್ದು, ಮುಂದಿನ 100 ವರ್ಷಗಳ ಅಭಿವೃದ್ಧಿ ಗಮನದಲ್ಲಿಟ್ಟು ಮಂಡನೆ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.
Budget 2022 LIVE: Union Budget 2022 ಅಭಿವೃದ್ಧಿಗೆ ಮತ್ತಷ್ಟು ವೇಗ
ಕೇಂದ್ರ ಬಜೆಟ್(Union Budget 2022) ಇದೀಗ ಭಾರಿ ಚರ್ಚೆಯಾಗುತ್ತಿದೆ. ಆರ್ಥಿಕ ತಜ್ಞರು ಒಟ್ಟಾರೆ ಉತ್ತಮ ಬಜೆಟ್ ಎಂದಿದ್ದರೆ, ರಾಹುಲ್ ಗಾಂಧಿ(Rahul Gandhi) ಸೇರಿದಂತೆ ವಿಪಕ್ಷ ಶೂನ್ಯ ಬಜೆಟ್ ಎಂದಿದೆ. ತಜ್ಞರ ಪ್ರಕಾರ ಭಾರತದಲ್ಲಿ ಮೂಲಸೌಕರ್ಯ(infrastructure) ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಇದರಲ್ಲಿ ಹೆದ್ದಾರಿ ಅಭಿವೃದ್ದಿ(Highway) ಕೂಡ ಸೇರಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರ 25,000 ಕಿಲೋಮೀಟರ್ ಹೆದ್ದಾರಿ ವಿಸ್ತರಿಸಲು ಮುಂದಾಗಿದೆ.
Budget 2022 LIVE: ಉದ್ಯೋಗ ಸೃಷ್ಟಿಗೆ ಒತ್ತು, ಹೇಳಿದ್ದಷ್ಟು ಕೊಡಲಿಲ್ಲ ಎಂದ ಕಾಂಗ್ರೆಸ್
ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಮುಂದಿನ 5 ವರ್ಷದಲ್ಲಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಇಂದು ತಾವು ಮಂಡಿಸಿದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿಯೂ ದೇಶದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ. ಈಗಾಗಲೇ ಭಾರತದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಇದೆ. 2014 ರಿಂದಲೂ ಯುವಕರು ಮತ್ತು ಮಹಿಳೆಯರ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮುಂದಿರುವ ಗುರಿಯಾಗಿದೆ. ಬಡತನದಿಂದ ಮೇಲೆತ್ತಲು ಈ ಉದ್ಯೋಗಗಳು ಅನುಕೂಲವಾಗಲಿದೆ ಎಂದಿದ್ದಾರೆ.
Budget 2022 LIVE: Union Budget 2022: ನಾರಿಗೆ ಶಕ್ತಿ ತುಂಬಿದ ಬಜೆಟ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1) ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿ ತಮ್ಮ ನಾಲ್ಕನೇ ಬಜೆಟ್ ಭಾಷಣದಲ್ಲಿ ಕೆಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಆ ಮೂಲಕ ಈ ಬಾರಿಯ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸೋ ಜೊತೆಗೆ ಹಳೆಯ ಯೋಜನೆಗಳಿಗೆ ಹೊಸ ರೂಪ ನೀಡಿದೆ ಕೂಡ.
ನರೇಂದ್ರ ಮೋದಿ (Narendra Modi)ನೇತೃತ್ವದ ಸರ್ಕಾರದ ಪ್ರಮುಖ ಭರವಸೆಗಳಲ್ಲಿ ದೇಶದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಕೆ ಮಾಡುವುದು ಪ್ರಮುಖವಾಗಿತ್ತು. ಇದನ್ನು ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (central government) ಈವರೆಗೂ ದೊಡ್ಡ ಮಟ್ಟದ ಶ್ರಮವಹಿಸಿದ್ದು, ಕೇಂದ್ರ ಬಜೆಟ್ ನಲ್ಲಿ "ಹರ್ ಘರ್, ನಳ್ ಸೇ ಜಲ್" (ಪ್ರತಿ ಮನೆಗೂ, ನಲ್ಲಿಯಿಂದ ನೀರು) ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಹೇಳಿದ್ದಾರೆ.
Budget 2022 LIVE: 25 ಸಂಸದರಿಗೆ, ರಾಜ್ಯದ ಸಿಎಂಗೆ ಅಭಿನಂದಿಸ್ತೇನೆ: ಡಿಕೆಶಿ
ರಾಜ್ಯಕ್ಕೆ ಯೋಜನೆಗಳ ಸುರಿಮಳೆ ಬಜೆಟ್ ಕೊಡಿಸಿದ್ದಾರೆ. ಇದು ಕೇಂದ್ರ ಬಜೆಟ್ ಅಲ್ಲ ಇದು ಕೋವಿಡ್ ಬಜೆಟ್. ಕರ್ನಾಟಕಕ್ಕೆ ಕೊಡುಗೆ ಶೂನ್ಯ.. ಬಜೆಟ್‌ನಲ್ಲಿ ಕರ್ನಾಟಕದ ಹೆಸರೇ ಇಲ್ಲ. ವರ್ಷ ಎರಡು ಕೋಟಿ ಉದ್ಯೋಗ ಕೊಡ್ತೇವೆ ಎಂದವರು ಈಗ 60 ಲಕ್ಷ ಉದ್ಯೋಗದ ಮಾತಾಡಿದ್ದಾರೆ. ದೇಶದ ಯುವಕರಿಗೆ ಅನ್ಯಾಯ ಮಾಡಿದ್ದಾರೆ..
- ಕೇಂದ್ರ ಬಜೆಟ್ ಬಗ್ಗೆ ಡಿಕೆಶಿ ವ್ಯಂಗ್ಯ
03:19 PM (IST) Feb 01
Budget 2022 LIVE: ಇದು ದೂರದೃಷ್ಟಿ ಇರುವ ಬಜೆಟ್: ನಳೀನ್ ಕುಮಾರ್ ಕಟೀಲ್
ಇದು ದೂರದೃಷ್ಟಿ ಇರುವ ಬಜೆಟ್. ಜಗತ್ತು ಸಂಕಷ್ಟದಲ್ಲಿದ್ದಾಗಲೂ ಒಳ್ಳೆಯ ಬಜೆಟ್ ಮಂಡನೆಯಾಗಿದೆ. ಆಟಲ್ ಕನಸಿಗೆ ಆದ್ಯತೆ ಕೊಟ್ಟವರು ಮೋದಿ. ರಾಷ್ಟ್ರದಲ್ಲಿ 25 ಸಾವಿರ ಕಿಲೋಮೀಟರ್ ಹೆದ್ದಾರೆ ಘೋಷಣೆಯಾಗಿದೆ. ಒಂದೇ ಭಾರತ್ ಯೋಜನೆಯ ಮೂಲಕ 400 ಹೊಎ ರೈಲುಗಳಿಗೆ ಆದ್ಯತೆ. ಆಟಲ್ ಕನಸು ನದಿ ಜೋಡಣೆಗೆ ಮೋದಿಯಿಂದ ನನಸು.
- ನಳೀನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಸಂಸದ
03:15 PM (IST) Feb 01
Budget 2022 LIVE: Education Budget 2022: ಶಿಕ್ಷಣಕ್ಕೆ ಸಿಕ್ಕಿದ್ದು ಮಹತ್ವದ ಕೊಡುಗೆ, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ
ಕೇಂದ್ರ ಬಜೆಟ್ 2022ರ (Union Budget 2022) ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿದ್ದಾರೆ. ಆತ್ಮನಿರ್ಭರ್‌ಗೆ ಹೆಚ್ಚು ಒತ್ತು ನೀಡಿದ್ದು, 25 ವರ್ಷಗಳ ಬ್ಲೂಪ್ರಿಂಟ್ ತಯಾರು ಮಾಡಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಜೊತೆಗೆ ಆಂತರಿಕವಾಗಿ 30 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದಾರೆ.
Budget 2022 LIVE: Union Budget 2022: ಯಾವ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ.? ನಿರ್ಮಲಕ್ಕನ ಲೆಕ್ಕ ಹೀಗಿದೆ
ನವದೆಹಲಿ (ಫೆ. 01): ಬಹುನಿರೀಕ್ಷಿತ ಕೇಂದ್ರ ಬಜೆಟ್ (Union Budget 2022) ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಿದ್ದಾರೆ. ಈ ಬಜೆಟ್ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಕೋವಿಡ್ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ ಬಜೆಟ್ ನೀಡಿದ್ದಾರೆ. ಬಜೆಟ್‌ನ ಗಾತ್ರ, ಯಾರ್ಯಾರಿಗೆ ಏನೇನು ಸಿಕ್ಕಿದೆ..? ಬಜೆಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ.
"
03:06 PM (IST) Feb 01
Budget 2022 LIVE: Union Budget 2022: ನಿರ್ಮಲಾ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದರು. ಇದು ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಆದಾಯ ತೆರಿಗೆ ದರಗಳು ಅಥವಾ ಸ್ಲ್ಯಾಬ್‌ನಲ್ಲಿ ಬದಲಾವಣೆಯನ್ನು ನಿರೀಕ್ಷಿಸಿದ್ದ ತೆರಿಗೆದಾರರು ನಿರಾಶೆಗೊಂಡಿದ್ದಾರೆ. ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಜೆಟ್‌ನಲ್ಲಿ ಏನು ದುಬಾರಿಯಾಗಿದೆ ಮತ್ತು ಯಾವ ವಸ್ತುಗಳಿಗೆ ಈಗ ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಜನರಲ್ಲಿತ್ತು. ಬಜೆಟ್‌ನಿಂದಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳು, ಕೈಗಡಿಯಾರಗಳು ಮತ್ತು ರಾಸಾಯನಿಕಗಳು ಅಗ್ಗವಾಗಲಿವೆ.