Asianet Suvarna News Asianet Suvarna News

Union Budget 2022 : "ಹರ್ ಘರ್, ನಳ್ ಸೇ ಜಲ್" ಯೋಜನೆಗೆ 60 ಸಾವಿರ ಕೋಟಿ !

2019ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ್ದ ಜಲ್ ಜೀವನ್ ಮಿಷನ್
ಪೈಪ್ ಮೂಲಕ ಕುಡಿಯುವ ನೀರು ಪೂರೈಕೆ
ಕೇಂದ್ರ ಬಜೆಟ್ ನಲ್ಲಿ 60 ಸಾವಿರ ಕೋಟಿ ರೂಪಾಯಿ ಮೀಸಲು

Rs 60000 allocated to Har Ghar Jal scheme in Union Budget 2022 says FM Nirmala Sitharaman san
Author
Bengaluru, First Published Feb 1, 2022, 3:11 PM IST

ನವದೆಹಲಿ (ಫೆ.1): ನರೇಂದ್ರ ಮೋದಿ (Narendra Modi)ನೇತೃತ್ವದ ಸರ್ಕಾರದ ಪ್ರಮುಖ ಭರವಸೆಗಳಲ್ಲಿ ದೇಶದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಕೆ ಮಾಡುವುದು ಪ್ರಮುಖವಾಗಿತ್ತು. ಇದನ್ನು ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  (central government) ಈವರೆಗೂ ದೊಡ್ಡ ಮಟ್ಟದ ಶ್ರಮವಹಿಸಿದ್ದು, ಕೇಂದ್ರ ಬಜೆಟ್ ನಲ್ಲಿ "ಹರ್ ಘರ್, ನಳ್ ಸೇ ಜಲ್" (ಪ್ರತಿ ಮನೆಗೂ, ನಲ್ಲಿಯಿಂದ ನೀರು) ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಹೇಳಿದ್ದಾರೆ.

2022-23ನೇ ಹಣಕಾಸು ವರ್ಷದಲ್ಲಿ 3.8 ಕೋಟಿ ಕುಟುಂಬಗಳು ಕೇಂದ್ರ ಸರ್ಕಾರದ ಕೊಳವೆ ಕುಡಿಯುವ ನೀರಿನ ಯೋಜನೆಯಡಿ ಒಳಪಡಲಿವೆ. ಸಂಸತ್ತಿನಲ್ಲಿ 2022 ರ ಬಜೆಟ್ ಅನ್ನು ಮಂಡಿಸುವಾಗ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2022-23 ರ ಹಣಕಾಸು ವರ್ಷಕ್ಕೆ ಭಾರತ ಸರ್ಕಾರದ ಹರ್ ಘರ್ ಜಲ್ ಯೋಜನೆಗೆ 60,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು. "ಯೋಜನೆಯಡಿಯಲ್ಲಿ, ಈಗಾಗಲೇ 8.7 ಕೋಟಿ ಕುಟುಂಬಗಳನ್ನು ಸೇರಿಸಲಾಗಿದೆ, ಅದರಲ್ಲಿ 5.5 ಕೋಟಿ ಜನರನ್ನು ಕೇವಲ ಕಳೆದ ಎರಡೇ ವರ್ಷಗಳಲ್ಲಿ ಈ ಯೋಜನೆಗೆ ಸೇರಿಸಲಾಗಿದೆ" ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು. ಮುಂಬರುವ ಹಣಕಾಸು ವರ್ಷದಲ್ಲಿ 2022-23 ರಲ್ಲಿ 60,000 ಕೋಟಿ ರೂಪಾಯಿಗಳ ಹಂಚಿಕೆಯೊಂದಿಗೆ ಇನ್ನೂ 3.8 ಕೋಟಿ ಕುಟುಂಬಗಳನ್ನು ಹರ್ ಘರ್, ನಳ್ ಸೇ ಜಲ್ (Har Ghar Nal Se Jal) ಯೋಜನೆಯಡಿ ಒಳಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

2019 ರಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (Jal Jeevan Mission ) ಇದುವರೆಗೆ ದೇಶದಾದ್ಯಂತ 45.68 ಪ್ರತಿಶತ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ಮಾಡಿದೆ. ಗೋವಾ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಮತ್ತು ಹರಿಯಾಣ ಈ ಯೋಜನೆಯಡಿಯಲ್ಲಿ 100 ಪ್ರತಿಶತ ಟ್ಯಾಪ್ ವಾಟರ್ ವ್ಯಾಪ್ತಿಯನ್ನು ಸಾಧಿಸಿವೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ.

Union Budget 2022: ನಿರ್ಮಲಾ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?
ಉತ್ತರ ಪ್ರದೇಶದ (Uttar Pradesh) ಗ್ರಾಮೀಣ ಕುಟುಂಬಗಳಲ್ಲಿ ಕೇವಲ 13.22 ಪ್ರತಿಶತದಷ್ಟು ಮಾತ್ರ ಟ್ಯಾಪ್ ನೀರನ್ನು ಒದಗಿಸಲಾಗಿದೆ, ಇದು ದೇಶದಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್‌ನ ಡೇಟಾ ತೋರಿಸಿದೆ.  . ದೇಶದ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ  ಯೋಜನೆಯಲ್ಲಿ 'ಹರ್ ಘರ್ ನಳ್ ಸೇ ಜಲ್ ಯೋಜನೆಯನ್ನು ಜಲ್ ಜೀವನ್ ಮಿಷನ್ ಯೋಜನೆಯಡಿ ಜಾರಿ ಮಾಡಲಾಗುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಉತ್ತರ ಪ್ರದೇಶದ 86.78 ಪ್ರತಿಶತ ಗ್ರಾಮೀಣ ಕುಟುಂಬಗಳು - ಅಂದರೆ 22.9 ಮಿಲಿಯನ್ ಹಳ್ಳಿಯ ಕುಟುಂಬಗಳು ಈಗಲೂ ಕೂಡ ಕೈಪಂಪುಗಳು ಹಾಗೂ ಇತರ ಖಾಸಗಿ ನೀರಿನ ಪೂರೈಕೆಯ ಮೇಲೆ ಅವಲಂಬಿತವಾಗಿದೆ.

Tech Budget 2022: ಶೀಘ್ರದಲ್ಲೇ 5G, ಇ-ಪಾಸ್‌ಪೋರ್ಟ್ ಸೇವೆ: ಭಾರತದ‌ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್!
ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮ : ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ, 2022-23ರಲ್ಲಿ "ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ" (Aspirational Blocks Programme)ಪ್ರಮುಖ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯನ್ನು ತೋರಿಸದ ಬ್ಲಾಕ್‌ಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದರು. “ಆಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ (Aspirational Districts Programme) ಮೂಲಕ ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ನಮ್ಮ ದೃಷ್ಟಿಕೋನವನ್ನು ಕಡಿಮೆ ಸಮಯದಲ್ಲಿ ವಾಸ್ತವಕ್ಕೆ ತರಲಾಗಿದೆ. ಆ 112 ಜಿಲ್ಲೆಗಳಲ್ಲಿ ಶೇಕಡಾ 95 ರಷ್ಟು ಪ್ರಮುಖ ಕ್ಷೇತ್ರಗಳಾದ ಆರೋಗ್ಯ, ಪೋಷಣೆ, ಆರ್ಥಿಕ ಸೇರ್ಪಡೆ ಮತ್ತು ಮೂಲ ಸೌಕರ್ಯಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಅವರು ರಾಜ್ಯದ ಸರಾಸರಿ ಮೌಲ್ಯಗಳನ್ನು ಮೀರಿಸಿದ್ದಾರೆ. ಆದರೆ, ಆ ಜಿಲ್ಲೆಗಳಲ್ಲಿ ಕೆಲವು ಬ್ಲಾಕ್‌ಗಳು ಹಿಂದುಳಿದಿವೆ. 2022-23 ರಲ್ಲಿ, ಕಾರ್ಯಕ್ರಮವು ಆ ಜಿಲ್ಲೆಗಳಲ್ಲಿ ಅಂತಹ ಬ್ಲಾಕ್‌ಗಳ ಮೇಲೆ ಕೇಂದ್ರೀಕರಿಸುತ್ತದೆ ”ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

Follow Us:
Download App:
  • android
  • ios