ಹೋಂಡಾ ಹೊಚ್ಚ ಹೊಸ R300L, XR300 ಬೈಕ್ ಲಾಂಚ್ ಮಾಡಿದೆ. ಲೈಟ್‌ವೈಟ್ ಅಡ್ವೆಂಚರ್ ಬೈಕ್ ಖರೀದಿ ಮಾಡಲು ಬಯಸಿದ್ದರೆ ಇದೀಗ ಆಯ್ಕೆಗಳು ಹಲವಿದೆ. ಈ ಸಾಲಿಗೆ ಹೋಂಡಾ ಹಲವು ಫೀಚರ್ ಮೂಲಕ ಹೊಸ ಬೈಕ್ ನೀಡುತ್ತಿದೆ.
ನವದೆಹಲಿ (ಅ.05) ಹೋಂಡಾ ಭಾರತದಲ್ಲಿ ಇದೀಗ ಎರಡು ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದೆ. ರಾಯಲ್ ಎನ್‌ಫೀಲ್ಡ್, ಹೀರೋ ಎಕ್ಸ್‌ಪಲ್ಸ್, ಕೆಟಿಎಂ ಅಡ್ವೆಂಚರ್ 250 ಸೇರಿದಂತೆ ಕೆಲ ಅಡ್ವೆಂಚರ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಹೋಂಡಾ R300L, XR300 ಬೈಕ್ ಲಾಂಚ್ ಮಾಡಿದೆ. ಸಿಟಿ ರೋಡ್, ಹಳ್ಳಿ, ಲಾಂಗ್ ರೈಡ್, ಆಫ್ ರೋಡ್ ಸೇರಿದಂತೆ ಯಾವುದೇ ರಸ್ತೆಗಳಿಗೆ ಹೊಂದಿಕೊಳ್ಳುವ ಈ ಬೈಕ್ ಇದೀಗ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಹೋಂಡಾ R300L, XR300 ಬೈಕ್ ಬೆಲೆ ಎಷ್ಟು?
ಹೋಂಡಾ R300L ಆರಂಭಿಕ ಬೆಲೆ 1.83 ಲಕ್ಷ (ಎಕ್ಸ್ ಶೋ ರೂಂ) ಹಾಗೂ ಹೋಂಡಾ XR300 ಬೈಕ್ 2.08 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಬೆಲೆಯಲ್ಲಿ ಲಭ್ಯವಿದೆ. ಈ ಸೆಗ್ಮೆಂಟ್‌ನಲ್ಲಿ ಹೋಂಡಾ ಪ್ರತಿಸ್ಪರ್ಧಿಗಳಿಗಿಂತ ಆಕರ್ಷಕ ಬೆಲೆಯಲ್ಲಿ ಎರಡು ಬೈಕ್ ಲಾಂಚ್ ಮಾಡಿದೆ. ಅಡ್ವೆಂಚರ್ ಬೈಕ್ ಇಷ್ಟಪಡುವ ಮಂದಿಗೆ ಇದೀಗ ಹೋಂಡಾ ಹೊಸ ಆಯ್ಕೆ ನೀಡಿದೆ.
ಬೈಕ್ ಎಂಜಿನ್ ಹಾಗೂ ಪರ್ಫಾಮೆನ್ಸ್
ಹೋಂಡಾ R300L ಹಾಗೂ XR300 ಬೈಕ್ ಎಂಜಿನ್ ಒಂದೇ ಆಗಿದೆ. ಆದರೆ XR300L ಬೈಕ್ ಹೆಚ್ಚು ಆಫರ್ ರೋಡ್ ಬೈಕ್ ಆಗಿದೆ. ಇನ್ನು XR300 ಬೈಕ್ ಲಾಂಗ್ ರೈಡ್‌ಗೆ ಹೆಚ್ಚು ಸೂಕ್ತವಾಗಿದೆ. 286ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. 24.3 ಬಿಹೆಚ್‌ಪಿ ಪವರ್ ಹಾಗೂ 26.5 ಎನ್ಎಂ ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.
ಪರ್ಫಾಮೆನ್ಸ್ ಕಂಪೇರ್ ಮಾಡಿದರೆ ರಾಯಲ್ ಎನ್‌ಫೀಲ್ಡಿಂಗ್ ಹಾಗೂ ಹೀರೋ ಎಕ್ಸ್‌ಪಲ್ಸ್ 210 ನಡುವಿನ ಸ್ಥಾನ ಪಡೆದಿದೆ. ವಿಶೇಷ ಅಂದರೆ ಹೋಂಡಾಗ ಸ್ಮೂತ್ ಎಂಜಿನ್, ರಗಡ್ ಲುಕ್‌ನೊಂದಿಗೆ ಈ ಬೈಕ್ ಬಿಡುಗಡೆಯಾಗಿದೆ. ಹೀಗಾಗಿ ರೈಡಿಂಗ್ ಹೆಚ್ಚು ಆರಾಮದಾಯಕ ನೀಡಲಿದೆ. ಲೈಟ್ ವೇಟ್ ಅಡ್ವೆಂಚರ್ ಬೈಕ್ ಆಗಿ ಗುರುತಿಸಿಕೊಂಡಿರುವ ಹೋಂಡಾ R300L, XR300 ಆಕರ್ಷಕ ವಿನ್ಯಾಸ ಹೊಂದಿದೆ.
ಎರಡು ಬೈಕ್‌ಗಳ ಸಸ್ಪೆನ್ಶನ್ ಅತ್ಯುತ್ತಮವಾಗಿದೆ. ಹೀಗಾಗಿ ಲಾಂಗ್ ರೈಡ್ ಅಥವಾ ಆಫ್ ರೋಡ್‌ಗೂ ಸರಿಹೊಂದುತ್ತದೆ. ಫ್ರಂಟ್ ಫೋರ್ಕ್ ಅಪ್‌ಸೈಡ್ ಡೌನ್ ನೀಡಲಾಗಿದೆ. ಹಿಂಭಾಗದಲ್ಲಿ ಮೋನೋಶಾಕ್ ನೀಡಲಾಗಿದೆ. ಎರಡು ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಗರಿಷ್ಠು ಸುರಕ್ಷತೆ ಹಾಗೂ ಗ್ರೀಪ್ ನೀಡಲಿದೆ. ರೋಡ್ ಹ್ಯಾಂಡಲಿಂಗ್, ಗ್ರೀಪ್ ಉತ್ತಮವಾಗಿದೆ.


