ರಾಯಲ್ ಎನ್ಫೀಲ್ಡ್ 125ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಹೈಪರ್ಶಿಫ್ಟ್ ಬೈಕ್ ಬುಕಿಂಗ್ ಆರಂಭಗೊಂಡಿದೆ. ಕೇವಲ 125 ಬೈಕ್ ಮಾತ್ರ ಲಭ್ಯವಿದೆ. ಮೊದಲು ಬುಕ್ ಮಾಡುವವರಿಗೆ ಮಾತ್ರ ಈ ಬೈಕ್ ಲಭ್ಯವಾಗಲಿದೆ. ಇದರ ಬೆಲೆ ಎಷ್ಟು?
ಚೆನ್ನೈ (ಅ.18) ರಾಯಲ್ ಎನ್ಫೀಲ್ಡ್ ಭಾರತದ ಅತ್ಯುತ್ತಮ ಬೈಕ್ಗಳಲ್ಲಿ ಒಂದು. ಅತೀ ಹೆಚ್ಚಿನ ಮಂದಿ ಎನ್ಫೀಲ್ಡ್ ಬೈಕ್ ಇಷ್ಟಪಡುತ್ತಾರೆ. ಹಲವು ಪ್ರತಿಸ್ಪರ್ಧಿಗಳಿದ್ದರೂ ಈಗಲೂ ರಾಯಲ್ ಎನ್ಫೀಲ್ಡ್ ಟಾಪ್ ಬೈಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದೀಗ ರಾಯಲ್ ಎನ್ಫೀಲ್ಡ್ 125ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಈ ವಿಶೇಷ ಸಂಭ್ರಮದಲ್ಲಿ ಸ್ಪೆಷಲ್ ಬೈಕ್ ಬಿಡುಗಡೆ ಮಾಡುತ್ತಿದೆ. ರಾಯಲ್ ಎನ್ಫೀಲ್ಡ್ 650 ಹೈಪರ್ಶಿಪ್ಟ್ ಬೈಕ್ ಬುಕಿಂಗ್ ಆರಂಭಗೊಂಡಿದೆ. ಇದು ಲಿಮಿಟೆಡ್ ಎಡಿಶನ್ ಬೈಕ್. 125ನೇ ವರ್ಷಾಚರಣೆ ಪ್ರಯುಕ್ತ ಈ ಬೈಕ್ ಕೇವಲ 125 ಮಂದಿಗೆ ಮಾತ್ರ ಖರೀದಿಸಲು ಸಾಧ್ಯ. ಈ ಲಿಮಿಟೆಡ್ ಎಡಿಶನ್ ಬೈಕ್ ಬೈಕ್ 125 ಯುನಿಟ್ ಮಾತ್ರ ಉತ್ಪಾದನೆ ಮಾಡಲಾಗುತ್ತದೆ.
ಅಕ್ಟೋಬರ್ 28ರ ವರೆಗೆ ಬುಕಿಂಗ್ ಅವಕಾಶ
ರಾಯಲ್ ಎನ್ಫೀಲ್ಡ್ ಹೈಪರ್ಶಿಫ್ಟ್ ಬೈಕ್ ಬುಕಿಂಗ್ ಆರಂಭಗೊಂಡಿದೆ. ಕೇವಲ 125 ಬೈಕ್ ಮಾತ್ರ ಉತ್ಪಾದನೆ ಮಾಡಲಾಗುತ್ತದೆ. ಹೀಗಾಗಿ ಮೊದಲು ಬುಕ್ ಮಾಡುವ 125 ಮಂದಿಗೆ ಈ ಬೈಕ್ ಖರೀದಿಗೆ ಲಭ್ಯವಾಗಲಿದೆ. ಅಕ್ಟೋಬರ್ 28ರ ವರೆಗೆ ಬುಕಿಂಗ್ ಲಭ್ಯವಿದೆ. ಬಳಿಕ ಸೇಲ್ಸ್ ಆರಂಭಗೊಳ್ಳಲಿದೆ. ಈ ಬೈಕ್ ಹಲವು ವಿಶೇಷತೆಗಳನ್ನು ಹೊಂದಿದ.
ರಾಯಲ್ ಎನ್ಫೀಲ್ಡ್ ಹೈಪರ್ಶಿಫ್ಟ್ ಬೈಕ್ ಬೆಲೆ ಎಷ್ಟು?
ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಹೈಪರ್ಶಿಪ್ ಬೈಕ್ ಬೆಲೆ 4.25 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ನವೆಂಬರ್ ತಿಂಗಳಿನಿಂದ ಡೆಲಿವರಿ ಆರಂಭಗೊಳ್ಳಲಿದೆ. ಇದು ಸ್ಪೆಷಲ್ ಹಾಗೂ ಲಿಮಿಟೆಡ್ ಎಡಿಶನ್ ಬೈಕ್. ಹಲವು ವಿಶೇಷತೆಗಳಿಂದ ಕೂಡಿದ ಕಾರಣ ಈ ಬೈಕ್ ದುಬಾರಿಯಾಗಿದೆ.
1901ರಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಭಾರತದಲ್ಲಿ ಉತ್ಪಾದನೆ ಆರಂಭಿಸಿತ್ತು. ಇದೀಗ 125ನೇ ವರ್ಷದ ಸಂಭ್ರಮ. ಹೀಗಾಗಿ ಸ್ಪೆಷಲ್ ಎಡಿಶನ್ ಬೈಕ್ ಲಾಂಚ್ ಮಾಡಲಾಗುತ್ತಿದೆ. ಈ ಬೈಕ್ನಲ್ಲಿ 125 ವರ್ಷಾಚರಣೆ ವಿಶೇಷ ಬ್ಯಾಡ್ಜ್ ಇರಲಿದೆ. 650 ಟ್ವಿನ್ ಪ್ಲಾಟ್ಫಾರ್ಮ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಹೊಸ ಬಣ್ಣದಲ್ಲಿ ಈ ಬೈಕ್ ಲಭ್ಯವಿದೆ. ರಾಯಲ್ ಎನ್ಫೀಲ್ಡ್ ಕಳೆದ 125 ವರ್ಷಗಳ ಲೆಗೆಸಿಯನ್ನು ಬಿಂಬಿಸುವ ರೀತಿಯಲ್ಲಿ ಈ ಬೈಕ್ ರಸ್ತೆಗಿಳಿಯಲಿದೆ.
125ನೇ ವರ್ಷಕ್ಕೆ 125 ಬೈಕ್ ಲಿಮಿಟೆಡ್ ಎಡಿಶನ್ ಮೂಲಕ ವಿಶೇಷವಾಗಿ ನೀಡಲಾಗುತ್ತಿದೆ. ಕೇವಲ 125 ಮಂದಿಯಲ್ಲಿ ಮಾತ್ರ ಈ ಬೈಕ್ ಇರಲಿದೆ. ಇದು ಮಾಲೀಕರ ಪ್ರತಿಷ್ಠೆ ಹೆಚ್ಚಿಸಲಿದೆ. ಜೊತೆಗೆ ಅತ್ಯಂತ ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಟೆಕ್ ಈ ಬೈಕ್ನಲ್ಲಿದೆ.


