- Home
- Automobile
- Bike News
- 2026 TVS Radeon ಹೊಸ ಬೈಕ್ ಲಾಂಚ್, ಬೆಲೆ 67000! ಬಜೆಟ್ ಸ್ನೇಹಿ ಮೂಲಕ ಕಂಪನಿ ಭರ್ಜರಿ ಪ್ಲಾನ್
2026 TVS Radeon ಹೊಸ ಬೈಕ್ ಲಾಂಚ್, ಬೆಲೆ 67000! ಬಜೆಟ್ ಸ್ನೇಹಿ ಮೂಲಕ ಕಂಪನಿ ಭರ್ಜರಿ ಪ್ಲಾನ್
ಟಿವಿಎಸ್ ಮತ್ತೊಂದು ಬೈಕ್ ಅನ್ನು ಮಾರುಕಟ್ಟೆಗೆ ತಂದಿದೆ. ಹಬ್ಬದ ಸೀಸನ್‌ಗಳನ್ನ ಟಾರ್ಗೆಟ್ ಮಾಡಿಕೊಂಡು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದೆ.

110 ಸಿಸಿ commuter Radeon
ಸಾಲು ಸಾಲು ಹಬ್ಬಗಳು.. ದಸರಾ, ದೀಪಾವಳಿ.. ಸಂಕ್ರಾಂತಿ.. ಹೀಗೆ ಒಂದರ ಹಿಂದೆ ಒಂದು ಹಬ್ಬ ಬರಲಿವೆ. ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡ ಟಿವಿಎಸ್ TVS Radeon ಲಾಂಚ್ ಮಾಡಿದೆ. 110 ಸಿಸಿ commuter Radeon ಇದಾಗಿದೆ. ಬೆಲೆ ಕೂಡ ಸಾಮಾನ್ಯ ಜನರ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದ್ದು, ಹಬ್ಬದ ಸೀಸನ್‌ನಲ್ಲಿ ಭರ್ಜರಿ ವ್ಯಾಪಾರದ ಪ್ಲಾನ್ ಮಾಡಿಕೊಂಡಿದೆ.
ಎಲ್ಲವೂ ಕೂಡ LED ಲೈಟಿಂಗ್
ಈ ಬೈಕ್‌ನ ವಿಶೇಷತೆ ಏನು ಅಂತಾ ನೋಡೋದಾದರೆ.. ಎಲ್ಲವೂ ಕೂಡ LED ಲೈಟಿಂಗ್ ಜೊತೆಗೆ ಹೊಸ ಬಣ್ಣಗಳ ಆಯ್ಕೆಯನ್ನು ನೀಡಿವೆ. ಇನ್ನು ಆನ್ ರೋಡ್ ಪ್ರೈಸ್ 67100 ರಿಂದ 73100 ವರೆಗೆ ಇವೆ. ಈ ಬೈಕ್ ತನ್ನ ಹಳೆಯ ಮಾಡೆಲ್ ಜೊತೆಗೆ ಬರುತ್ತದೆಯೇ ಇಲ್ಲವೋ ಅನ್ನೋದನ್ನು ಕಂಪನಿ ಇನ್ನೂ ಬಹಿರಂಗ ಮಾಡಿಲ್ಲ.
- ಎಲ್ಲಾ ಎಲ್‌ಇಡಿ ಲೈಟಿಂಗ್‌ನೊಂದಿಗೆ ಲಭ್ಯ
- 110cc ಎಂಜಿನ್‌ನಿಂದ ಕಾರ್ಯನಿರ್ವಹಣೆ
- Digi-disc variant ಫ್ರಂಟ್ ಡಿಸ್ಕ್ ಹೊಂದಿದೆ
ಇನ್ನೂ ಹೊಸತು ಏನಿದೆ?
- ಸಿಗ್ನೆಚರ್ DRL
- LED ಟೈಲ್ ಲೈಟ್
- LED ಟರ್ನ್ ಇಂಡಿಕೇಟರ್
- LED ಹೆಡ್‌ಲೈಟ್
ಯಾವೆಲ್ಲ ಕಲರ್‍ನಲ್ಲಿ ಲಭ್ಯ?
- Base, Digi-Drum and Digi-Disc ಒಟ್ಟು ಮೂರು ವೆರೈಟಿಗಳಲ್ಲಿ ಲಭ್ಯವಿದೆ.
- Base : ಕಪ್ಪು ಮತ್ತು ನೀಲಿ
- Digi-Drum : ಕಪ್ಪು ಮತ್ತು ಕೆಂಪು
- Digi-Disc : ಕಪ್ಪು ಮತ್ತು ಕಿತ್ತಳೆ, ಕೆಂಪು ಮತ್ತು ಕಪ್ಪು
ಎಷ್ಟು ಮೈಲೇಜ್ ನೀಡುತ್ತದೆ?
ಇನ್ನುಳಿದಂತೆ ಬೈಕ್‌ನ ಉಳಿದ ಭಾಗಗಳು ಮೊದಲಿನಂತೆ ಇವೆ. ಇದು 110 ಸಿಸಿ ಏರ್ ಆಯಿಲ್ ಕೋಲ್ಡ್ ಎಂಜಿನಿಂದ ಕಾರ್ಯನಿರ್ವಹಿಸಲಿದೆ. ಇದು 4-ಸ್ಪೀಡ್-ಗೇರ್ ಬಾಕ್ಸ್ ಜೊತೆ ಜೋಡಿಸಲ್ಪಟ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ಬೈಕ್ ಎಷ್ಟು ಮೈಲೇಜ್ ನೀಡಲಿದೆ ಅನ್ನೋದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ದುಬಾರಿ ಬೆಲೆಗೆ ಒಳ್ಳೆಯ ಮೈಲೇಜ್
ಪ್ರೀಮಿಯಂ ಕೊಡುಗೆಯ ಮುಂದುವರಿದ ಭಾಗವಾಗಿ.. ಆಲ್ ಎಲ್‌ಇಡಿ ಲೈಟಿಂಗ್, ಯುಎಸ್‌ಬಿ ಚಾರ್ಜಿಂಗ್, ಕಲರ್ ಡಿಜಿಟಲ್, ಆಪ್ಷನ್ ಡಿಸ್ಕ್ ಫೀಚರ್ಸ್ ಹೊಂದಿದೆ. ಒಟ್ಟಾರೆ ಬೈಕ್ ಬಗ್ಗೆ ನೋಡೋದಾದರೆ.. ಬಜೆಟ್ ಸ್ನೇಹಿ ಬೈಕ್ ಇದಾಗಿದ್ದು.. ದುಬಾರಿ ಬೆಲೆಗೆಗೆ ಒಳ್ಳೆಯ ಒಳ್ಳೆಯ ಮೈಲೇಜ್ ಸಿಗುವುದರಲ್ಲಿ ಯಾವುದೇ ಡೌಟ್ ಇಲ್ಲ.

