Bajaj Avenger Electric 28 ಸಾವಿರ ರೂಗೆ ಬಜಾಜ್ ಅವೆಂಜರ್ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ,ಕಿಟ್ ಆನ್‌ಲೈನ್ ಮೂಲಕ ಲಭ್ಯ!
- ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ
- ಬಜಾಜ್ ಅವೆಂಜರ್ ಬೈಕನ್ನು ಕಿಟ್ ಮೂಲಕ ಪರಿವರ್ತನೆ
- 27,760 ರೂಪಾಯಿಗೆ ಎಲೆಕ್ಟ್ರಿಕ್ ಕಿಟ್ ಲಭ್ಯ
ನವದೆಹಲಿ(ಫೆ.22): ಎಲೆಕ್ಟ್ರಿಕ್ ವಾಹನ(Electric Vehicle) ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಈಗಾಲೇ ದುಬಾರಿ ಹಣ ನೀಡಿ ಪೆಟ್ರೋಲ್ ಬೈಕ್ ಖರೀದಿಸಿದವರಿಗೆ ದಿಢೀರ್ ಬದಲಾಯಿಸಲು ಪರಿತಪಿಸುವಂತಾಗಿದೆ. ಇದೀಗ ಈ ಸಮಸ್ಯೆಗೆ ಪರಿಹಾರವೂ ಇದೆ. ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್(Electric Bike) ಆಗಿ ಪರಿವರ್ತಿಸಬಲ್ಲ ಕಿಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಪೆಟ್ರೋಲ್ ಎಲೆಕ್ಟ್ರಿಕ್ ಹೈಬ್ರಿಡ್ ಕಿಟ್(Petrol Electric Hybrid Kit) ಅಭಿವೃದ್ಧಿಪಡಿಸಲಾಗಿದ್ದು, ಈ ಕಿಟ್ ಮೂಲಕ ಬಜಾಜ್ ಅವೆಂಜರ್(Bajaj Avenger) ಬೈಕ್‌ನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲಾಗಿದೆ. ಕೇವಲ 28,000 ರೂಪಾಯಿಗೆ ಈ ಕಿಟ್ ಖರೀದಿಸಿ ಸುಲಭವಾಗಿ ಪೆಟ್ರೋಲ್ ಬೈಕ್ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಬಹುದು.
ಇತರ ಎಲ್ಲಾ ಎಲೆಕ್ಟ್ರಿಕ್ ಕನ್ವರ್ಟ್ ಕಿಟ್‌ಗಿಂತ ಈ ಕಿಟ್ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಕಿಟ್ ಅಳವಡಿಸಿದರೆ ಬೈಕ್ ಎಲೆಕ್ಟ್ರಿಕ್ ಬೈಕ್ ಆಗಿ ರೈಡ್ ಮಾಡಬುಹುದು. ಇನ್ನು ಅಗತ್ಯಬಿದ್ದರೆ ಪೆಟ್ರೋಲ್ ವಾಹನವನ್ನಾಗಿಯೂ ಬಳಕೆ ಮಾಡಬಹುದು.ಹೀಗಾಗಿ ಲಾಂಗ್ ರೈಡ್ ಮಾಡಲು ಹಾಗೂ ನಗರ ಪ್ರಯಾಣ ಎರಡಕ್ಕೂ ಹೊಂದಿಕೊಳ್ಳುವಂತೆ ಕಿಟ್ ಅಭಿವೃದ್ಧಿಡಿಸಲಾಗಿದೆ.
Upcoming Bike ಬರುತ್ತಿದೆ ಮೇಡ್ ಇನ್ ಇಂಡಿಯಾ KTM ಎಲೆಕ್ಟ್ರಿಕ್ ಬೈಕ್, ಇ ಡ್ಯೂಕ್ ಖಚಿತಪಡಿಸಿದ ಕಂಪನಿ!
ಇದು ಪೆಟ್ರೋಲ್ ಎಲೆಕ್ಟ್ರಿಕ್ ಹೈಬ್ರಿಡ್ ಕಿಟ್ ಆಗಿದೆ. ಈ ಕನ್ವರ್ಟ್ ಕಿಟ್‌ನಲ್ಲಿ 72V, 35A ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಇದು ಸಣ್ಣ ಬ್ಯಾಟರಿಯಾಗಿದ್ದು, ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 40 ರಿಂದ 50 ಕಿ.ಮೀ ಮೈಲೇಜ್ ನೀಡಲಿದೆ. ಎಲೆಕ್ಟ್ರಿಕ್ ಮೋಟಾರ್(Electric Motor) ಮೂಲಕ ಗಂಟೆಗೆ 60 ಕಿ.ಮೀ ವೇಗದಲ್ಲಿ ಪ್ರಯಾಣ ಮಾಡಲು ಸಾಧ್ಯವಿದೆ.
ಈ ಕನ್ವರ್ಟರ್ ಕಿಟ್ ಆನ್‌ಲೈನ್ ಮೂಲಕ ಖರೀದಿಸಲು ಸಾಧ್ಯವಿದೆ. 27,760 ರೂಪಾಯಿಗೆ ಕಿಟ್ ಲಭ್ಯವಿದೆ. GoGoA1 ಸೋರ್ಸ್ ಮೂಲಕ ಈ ಕಿಟ್ ಖರೀದಿಸಲು ಸಾಧ್ಯವಿದೆ. ಇದು ಆರ್‌ಟಿಓ ಅನುಮತಿ ನೀಡಿರುವ ಕಿಟ್ ಎಂದು ಸ್ಟಾರ್ಟ್ ಅಪ್ ಕಂಪನಿ ಹೇಳಿಕೊಂಡಿದೆ. ಅತೀ ಸುಲಭವಾಗಿ ಬೈಕ್‌ಗಳನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬಳಕೆ ಮಾಡಬಹುದು ಎಂದಿದೆ.
ಈ ಕಿಟ್ ಬಳಸಿ ಬಜಾಜ್ ಅವೆಂಜರ್ 220 ಬೈಕನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲಾಗಿದೆ. ಎಲೆಕ್ಟ್ಕಿಕ್ ಮೋಟಾರನ್ನು ಮುಂಭಾಗದ ವೀಲ್‌ಗೆ ಪವರ್ ನೀಡಲಾಗಿದೆ. ಇನ್ನು ಪೆಟ್ರೋಲ್ ಎಂಜಿನ್ ಮೋಟಾರು ರೈಡ್ ಹಿಂಭಾಗದ ಚಕ್ರದಲ್ಲೇ ಇದೆ. ಹೀಗಾಗಿ ಎಲೆಕ್ಟ್ರಿಕ್ ಮೋಟಾರ್ ಸ್ವಿಚ್ ಆನ್ ಮಾಡಿದರೆ ಮುಂಭಾಗದ ಚಕ್ರ ತಿರುಗಲಿದೆ. ಈ ಮೂಲಕ ಸಲಿಸಾಗಿ ರೈಡ್ ಮಾಡಿಕೊಂಡು ಹೋಗಬಹಹುದು. ಇನ್ನು ಪೆಟ್ರೋಲ್ ಎಂಜಿನ್ ಸ್ವಿಚ್ ಆನ್ ಮಾಡಿದರೆ ಪೆಟ್ರೋಲ್ ಮೂಲಕ ಬೈಕ್ ಕಾರ್ಯನಿರ್ವಹಿಸಲಿದೆ.
Oben Electric Bike ಅತ್ಯಧಿಕ ಮೈಲೇಜ್ ನೀಡಬಲ್ಲ ಓಬೆನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ರೆಡಿ!
ಎರಡು ಎಂಜಿನ್ ಕಾರ್ಯನಿರ್ವಹಿಸುವ ಕಿಟ್ ಇದಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಎಲೆಕ್ಟ್ರಿಕ್ ಕನ್ವರ್ಟರ್ ಕಿಟ್ ಬಳಸಿದರೆ ಮತ್ತೆ ಪೆಟ್ರೋಲ್ ಎಂಜಿನ್ ಕಾರ್ಯನಿರ್ವಹಿಸುವುದಿಲ್ಲ. ಆದರೆ ಈ ಕಿಟ್ ಹಾಗಲ್ಲ, ಎರಡೂ ಎಂಜಿನ್ ಹಾಗೂ ಮೋಟಾರು ಕಾರ್ಯನಿರ್ವಹಿಸಲಿದೆ.ಇದು ಈ ಎಲೆಕ್ಟ್ರಿಕ್ ಕಿಟ್ ವಿಶೇಷತೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಬಲ್ಲ ಕಿಟ್‌ಗಳು ಲಭ್ಯವಿದೆ ಇದಕ್ಕೆ ದೆಹಲಿ ಸರ್ಕಾರದಿಂದ ಮಾನ್ಯತೆ ಪಡದ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಹಳೇ ಡೀಸೆಲ್, ಪೆಟ್ರೋಲ್ ವಾಹನಗಳನ್ನು ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಲಾಗುತ್ತಿದೆ.
ಭಾರತದಲ್ಲಿ ಇದೀಗ ಎಲೆಕ್ಟ್ರಿಕ್ ಬೈಕ್‌ಗಳು ಬಿಡುಗಡೆಯಾಗಿದೆ. ಟಾರ್ಕ್ ಮೋಟಾರ್ಸ್, ರಿವೋಲ್ಟ್, ಕೋಮಾಕಿ ಸೇರಿದಂತೆ ಹಲವು ಎಲೆಕ್ಟ್ರಿಕ್ ಬೈಕ್‌ಗಳು ಭಾರತದಲ್ಲಿ ಲಭ್ಯವಿದೆ.