Upcoming Bike ಬರುತ್ತಿದೆ ಮೇಡ್ ಇನ್ ಇಂಡಿಯಾ KTM ಎಲೆಕ್ಟ್ರಿಕ್ ಬೈಕ್, ಇ ಡ್ಯೂಕ್ ಖಚಿತಪಡಿಸಿದ ಕಂಪನಿ!

  • ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕೆಟಿಎಂ ಬೈಕ್‌ನಿಂದ ಇ ಬೈಕ್
  • ಇ ಡ್ಯೂಕ್ ಹೆಸರಲ್ಲಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ತಯಾರಿ
  • ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಖಚಿತ ಪಡಿಸಿದ ಕಂಪನಿ
KTM confirms made in India e duke Electric bike soon with most powerfull motor ckm

ನವದೆಹಲಿ(ಫೆ.10): ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಪೋರ್ಟ್ಸ್ ಬೈಕ್(Sports Bike) ಕೆಟಿಎಂ ಇದೀಗ ಹೊಸ ಘೋಷಣೆ ಮಾಡಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್(Electric Bike) ಬೇಡಿಕೆ ಹೆಚ್ಚಾಗುತ್ತಿರ ಹಿನ್ನಲೆಯಲ್ಲಿ ಕೆಟಿಎಂ(KTM) ಹೊಚ್ಚ ಹೊಸ ಇ ಡ್ಯೂಕ್(E Duke) ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ವಿಶೇಷ ಎಂದರೆ ಇದು ಮೇಡ್ ಇನ್(Made in India) ಇಂಡಿಯಾ ಎಲೆಕ್ಟ್ರಿಕ್ ಬೈಕ್.

ಆಸ್ಟ್ರೀಯಾದ ಕೆಟಿಎಂ ಕಂಪನಿ ಭಾರತದಲ್ಲಿ(India) ಸ್ಪೋರ್ಟ್ಸ್ ಬೈಕ್ ಮೂಲಕ ಭಾರಿ ಸಂಚಲನ ಸಷ್ಟಿಸಿದೆ. ಯುವಕರ ನೆಚ್ಚಿನ ಬೈಕ್ ಆಗಿ ಮಾರ್ಪಟ್ಟಿದೆ. ಈ ಯಶಸ್ಸಿನ ಬೆನ್ನಲ್ಲೇ ಕೆಟಿಎಂ ಎಲೆಕ್ಟ್ರಿಕ್ ವಿಭಾಗಕ್ಕೆ ಎಂಟ್ರಿಕೊಂಡುತ್ತಿದೆ. ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲ್ಪಡುವ ಇ ಡ್ಯೂಕ್ ಎಲೆಕ್ಟ್ರಿಕ್ ಬೈಕ್, ಹಲವು ವಿಶೇಷತೆ ಹೊಂದಿದೆ.

Electric Bike 1 ಗಂಟೆಯಲ್ಲಿ ಚಾರ್ಜ್, 120 KM ಮೈಲೇಜ್, ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ!

ಸದ್ಯ ಕೆಟಿಎಂ ಕಂಪನಿಯ ಇ ಡ್ಯೂಕ್ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿ ಹಂತದಲ್ಲಿದೆ. ಎಲೆಕ್ಟ್ರಿಕ್ ಬೈಕ್‌ನಲ್ಲಿ 5.5kWh ಎಲೆಕ್ಟ್ರಿಕ್ ಬ್ಯಾಟರಿ ಪ್ಯಾಕ್ ಬಳಸುವ ಸಾಧ್ಯತೆ ಇದೆ. ಈ ಮೂಲಕ ದೇಶದಲ್ಲಿ ಅತ್ಯಂತ ಪವರ್‌ಫುಲ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಅತ್ಯಂತ ಪವರ್‌ಪುಲ್ ಎಲೆಕ್ಟ್ರಿಕ್ ಎಂಜಿನ್ ಬೈಕ್ ಕೀರ್ತಿ ಟಾರ್ಕ್ ಮೋಟಾರ್ಸ್ ಸ್ಟಾರ್ಟ್ಅಪ್ ಸಂಸ್ಥೆಯ ಟಾರ್ಕ್ ಕ್ರಾಟೋಸ್ ಆರ್‌ಗೆ ಪಾತ್ರವಾಗಿದೆ.

ನೂತನ ಕೆಟಿಎಂ ಡ್ಯೂಕ್ ಇ ಬೈಕ್ ಬಿಡುಗಡೆ ದಿನಾಂಕ ಸೇರಿದಂತೆ ಇತರ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ   5.5kWh ಎಲೆಕ್ಟ್ರಿಕ್ ಬ್ಯಾಟರಿ ಹೊಂದಿರುವ ಕಾರಣ ಗರಿಷ್ಠ ಮೈಲೇಜ್ ರೇಂಜ್ ಹೊಂದಿರುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ 180 ಕಿ.ಮೀ ಪ್ಲಸ್ ಮೈಲೇಜ್ ರೇಂಜ್ ಹೊಂದಿದೆ. 

Cyborg GT 120 Bike ಭಾರತದಲ್ಲಿ ಸೈಬೊರ್ಗ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಅನಾವರಣ, 180 ಕಿ.ಮೀ ಮೈಲೇಜ್!

ಭಾರತದಲ್ಲಿ ಕೆಟಿಎಂ ಡ್ಯೂಕ್ ಪೆಟ್ರೋಲ್ ಎಂಜಿನ್ ಬೈಕ್‌ ಬೆಲೆ 1.51 ಲಕ್ಷ ರೂಪಾಯಿಯಿಂದ 8.64 ಲಕ್ಷ ರೂಪಾಯಿವರೆಗಿದೆ(ಎಕ್ಸ್ ಶೋ ರೂಂ). ಇನ್ನು ಹೊಸದಾಗಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಬೈಕ್ ಬೆಲೆ 2 ಲಕ್ಷ ರೂಪಾಯಿ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಕೆಟಿಎಂ ಕಂಪನಿ ಬಜಾಜ್ ಜೊತೆ ಸಹಭಾಗಿತ್ವ ಹೊಂದಿದೆ. ಈಗಾಗಲೇ ಕೆಟಿಎಂ ಹಾಗೂ ಬಜಾಜ್ ಜಂಟಿಯಾಗಿ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿಪಡಿಸುವುದಾಗಿ ಹೇಳಿದೆ. ಇದೀಗ ಕೆಟಿಎಂ ಸ್ಕೂಟರ್ ಬದಲು ಕೆಟಿಂ ಡ್ಯೂಕ್ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ತಯಾರಿ ಕೂಡ ಆರಂಭಿಸಿದೆ. ಕೆಟಿಎಂ ನೂತನ ಎಲೆಕ್ಟ್ರಿಕ್ ಬೈಕ್ ಸಂಪೂರ್ಣವಾಗಿ ಭಾರತದಲ್ಲೇ ಉತ್ಪಾದನೆಯಾಗಲಿದೆ ಎಂದು ಕೆಟಿಎಂ ಘೋಷಿಸಿದೆ. ಈ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯಡಿ ಹೊಸ ಬೈಕ್ ಬಿಡುಗಡೆಯಾಗಲಿದೆ.

Electric Cruiser Bike 220 ಕಿ.ಮಿ ಮೈಲೇಜ್, ಭಾರತದ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಕೊಮಾಕಿ ಲಾಂಚ್!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ:
ಭಾರತದಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ತಾಗಿದೆ. ಇದರ ಜೊತೆಗೆ ಉತ್ಪಾದನೆಯೂ ಹೆಚ್ಚಾಗಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಸ್ಕೂಟರ್, ಇ ಬೈಕ್ ಲಭ್ಯವಿದೆ. ಟಾರ್ಕ್ ಮೋಟಾರ್ಸ್, ಸೈಬೊರ್ಗ್, ಕೊಮಾಕಿ, ಇಗ್ನಿಟ್ರಾನ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಬೈಕ್‌ಗಳು ಬಿಡುಗಡೆಯಾಗಿದೆ. ಸ್ಕೂಟರ್ ವಿಭಾಗದಲ್ಲಿ ಓಲಾ, ಸಿಂಪಲ್ ಒನ್, ಬೌನ್ಸ್, ಎದರ್ ಸೇರಿದಂತೆ 25ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. 

ಎಲೆಕ್ಟ್ರಿಕ್ ಕಾರುಗಳ ಪೈಕಿ ಭಾರತ ಹೊಸ ಸಂಚಲನ ಮೂಡಿಸಿದೆ. ಕಡಿಮೆ ಬೆಲೆಯಲ್ಲಿ ಟಾಟಾ ನೆಕ್ಸಾನ್ ಇವಿ, ಟಾಟಾ ಟಿಗೋರ್ ಇವಿ ಲಭ್ಯವಿದೆ, ಇನ್ನು ಎಂಜಿ ZS ಎಲೆಕ್ಟ್ರಿಕ್ ಹಾಗೂ ಹ್ಯುಂಡೈ ಕೋನಾ ಕಾರು ಲಭ್ಯವಿದೆ.ಶೀಘ್ರದಲ್ಲೇ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ.
 

Latest Videos
Follow Us:
Download App:
  • android
  • ios