Asianet Suvarna News Asianet Suvarna News

Honda bike ಹೋಂಡಾ ಗೋಲ್ಡ್ ವಿಂಗ್ ಟೂರ್ ಐಷಾರಾಮಿ ಬೈಕ್ ಬಿಡುಗಡೆ, ಬುಕಿಂಗ್ ಆರಂಭ!

  • ಕಾರಿನಲ್ಲಿರುವಂತೆ ಕ್ರೂಸ್ ಕಂಟ್ರೋಲ್ ಸಿಸ್ಟಮ್
  • ರೈಡಿಂಗ್ ಮೋಡ್ ಆಯ್ಕೆ ಮಾಡಿಕೊಳ್ಳುವ ಸೌಲಭ್ಯ
  • ಹತ್ತು ಹಲವು ವಿಶೇಷತೆಗಳ ಹೋಂಡಾ ಗೋಲ್ಡ್ ವಿಂಗ್
     
Honda motorcycles Scooters india launches Gold wing tour dct bike ckm
Author
Bengaluru, First Published Apr 21, 2022, 5:46 PM IST

ನವದೆಹಲಿ(ಏ.21): ಭಾರತೀಯ ಮಾರುಕಟ್ಟೆಗೆ ಇಂದು 2022ರ  ಹೋಂಡಾ ಗೋಲ್ಡ್ ವಿಂಗ್ ಟೂರ್ ಹೊಸ ಬೈಕ್ ಬಿಡುಗಡೆಯಾಗಿದೆ. ಐಷಾರಾಮಿ ಬೈಕ್ ಇದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. 1833 ಸಿಸಿ ಎಂಜಿನ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಇದೀಗ ಭಾರತದ ಬೈಕ್ ಮಾರುಕಟ್ಟೆಯಲ್ಲಿ ಹೊಸ ಸಂಚನಲ ಸೃಷ್ಟಿಸಿದೆ.

ಕಳೆದ ದಶಕದಲ್ಲಿ ಮಹತ್ವದ ವಿಕಸನಕ್ಕೆ ಒಳಗಾಗಿದ್ದ ಹೋಂಡಾ ಗೋಲ್ಡ್ ವಿಂಗ್ ಬೈಕ್ ಇದೀಗ ಐಷಾರಾಮಿ, ಸುಖಕರ ಮತ್ತು ಸುರಕ್ಷತೆಯ ಮರುವ್ಯಾಖ್ಯಾನಕ್ಕೆ ಒಳಪಟ್ಟಿದೆ. ಗೋಲ್ಡ್ ವಿಂಗ್ ಟೂರ್ ಹಿತಕರ ಸವಾರಿ ಅನುಭವ ನೀಡುತ್ತದೆ, ಏಕೆಂದರೆ ಇದು ವಿಭಿನ್ನ ರಸ್ತೆ ಪರಿಸ್ಥಿತಿಗಳಲ್ಲಿ ವಾಹನ ಸವಾರಿ ಮತ್ತು ಸವಾರನ ಅನುಭವ ಮಿಶ್ರಣವನ್ನು ನೀಡುತ್ತದೆ. ಭಾರತದಲ್ಲೀಗ 2022 ಗೋಲ್ಡ್ ವಿಂಗ್ ಟೂರ್(ಡಿಸಿಟಿ) ಬೈಕ್ ಬುಕಿಂಗ್‌ಗಳು ತೆರೆದಿವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಎಂದು  ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

ಭಾರತದಲ್ಲಿ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಬಿಡುಗಡೆ!

ಸ್ಟೈಲಿಂಗ್ ಮತ್ತು ಸಲಕರಣೆಗಳು
ʻಗೋಲ್ಡ್ ವಿಂಗ್ ಟೂರ್ʼ, ಯುವ ತಲೆಮಾರಿನ ದ್ವಿಚಕ್ರ ವಾಹನ ಸವಾರರನ್ನು ಸೆಳೆಯಲು ತನ್ನ ಆಕರ್ಷಣೆಯನ್ನು ಮತ್ತಷ್ಟು ವಿಸ್ತರಿಸಿರುವುದಲ್ಲದೆ ಪ್ರಬಲ ಮುಂಭಾಗದ ವಿನ್ಯಾಸ, ಅನನ್ಯ ಸಿಲ್ಹೌಟ್,  ಸದೃಢ ಚಾಸಿಸ್ ಮತ್ತು ಎಂಜಿನ್ ಸಾಮರ್ಥ್ಯಗಳೊಂದಿಗೆ ಆರಾಮವನ್ನು ಒದಗಿಸುತ್ತದೆ.

ಸೂಕ್ಷ್ಮವಾದ ಏರೋಡೈನಾಮಿಕ್ ಡೀಟೇಲಿಂಗ್, ಟ್ರೇಡ್ಮಾರ್ಕ್ ಎನಿಸಿರುವ ಸುಗಮತೆ, ತೀಕ್ಷ್ಣ ಹಾಗೂ ಘನವಾದ ಸಮತಟ್ಟು ವಿಸ್ತಾರಗಳು ಅದರ ಸೌಂದರ್ಯದ ಉತ್ಕೃಷ್ಟತೆಗೆ ಕನ್ನಡಿ ಹಿಡಿಯುತ್ತವೆ. ಇದರಿಂದಾಗಿ ಐಷಾರಾಮಿ ಪ್ರವಾಸಿಗರಿಗೆ ಅವಾಕ್ಕಾಗುವ ನೋಟವನ್ನು ಇದು ಒದಗಿಸುತ್ತದೆ.

ಇಷ್ಟೇ ಅಲ್ಲದೆ, ಇದರ ಕ್ರಿಯಾತ್ಮಕ ಸೌಂದರ್ಯಕ್ಕೆ ಹೆಚ್ಚುವರಿ ಸೇರ್ಪಡೆಯೆಂದರೆ - ಡಬಲ್ ವಿಶ್ಬೋನ್ ಫ್ರಂಟ್ ಸಸ್ಪೆನ್ಶನ್. ಇದು ಜಾರಿಕೆಯ  ಘರ್ಷಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದೇ ವೇಳೆ, ಇದರ ಆರು-ಸಿಲಿಂಡರ್ನ ಫ್ಲಾಟ್ ಎಂಜಿನ್(ಹಾರಿಜಾಂಟಲಿ-ಅಪೋಸ್ಡ್ ಫ್ಲ್ಯಾಟ್ ಸಿಕ್ಸ್-ಸಿಲಿಂಡರ್ ಎಂಜಿನ್) ಹೋಂಡಾದ ಪ್ರೀಮಿಯಂ ಟೂರರ್ನ ಹೃದಯಭಾಗದಲ್ಲಿ ನೆಲೆಸಿ ಶಕ್ತಿ ತುಂಬುತ್ತದೆ. ಒಟ್ಟಾರೆಯಾಗಿ, ನಂಬಲಾಗದ ಮಟ್ಟದ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್  ಉಷ್ಕೃಷ್ಟತೆಯನ್ನು ಆಧರಿಸಿರುವ ಇದಕ್ಕೆ ವಿನ್ಯಾಸದ ಅಂಶಗಳು ಅತ್ಯಾಧುನಿಕ ಸ್ಟೈಲ್ ಅನ್ನು ನೀಡುತ್ತವೆ.

ಹೀರೋಗೆ ಪೈಪೋಟಿ, ಶೀಘ್ರದಲ್ಲೇ ಹೋಂಡಾದಿಂದ ಕೈಗೆಟುಕುವ ದರದ ಎಲೆಕ್ಟ್ರಿಕ್ ವಾಹನ ಬಿಡುಗಡೆ!

ದ್ವಿಚಕ್ರ ವಾಹನ ಚಾಲಕ ಮತ್ತು ಹಿಂಬದಿ ಕುಳಿತ ವ್ಯಕ್ತಿಯ ಸುತ್ತಲೂ ಆಹ್ಲಾದಕರ ತಂಪಾದ ಗಾಳಿಯನ್ನು ಒದಗಿಸುವ ʻಗೋಲ್ಡ್ ವಿಂಗ್ ಟೂರ್ʼ ಆರಾಮದಾಯಕತೆ, ಶಾಖ ನಿರ್ವಹಣೆ ಮತ್ತು ವಾಯು ನಿರ್ವಹಣೆಯನ್ನು ಮೊದಲ ಆದ್ಯತೆಯಲ್ಲಿ ಇರಿಸುತ್ತದೆ. ಇದರ ವಿಸ್ತರಿತ ಎಲೆಕ್ಟ್ರಿಕ್ ಪರದೆಯು ಅತ್ಯುತ್ತಮ ಗಾಳಿಯ ರಕ್ಷಣೆಯನ್ನು ನೀಡುತ್ತದೆ, ಜೊತೆಗೆ ಅಗತ್ಯವಿದ್ದಾಗ ಸ್ಥಳಾವಕಾಶ ಮತ್ತು ಸ್ವಾತಂತ್ರ್ಯವನ್ನೂ ಒದಗಿಸುತ್ತದೆ.  ಹ್ಯಾಂಡಲ್ ಬಾರ್ನ ಎಡಭಾಗದಿಂದ ಸ್ಟೆಪ್-ಲೆಸ್ ಸ್ಕ್ರೀನ್ ಕೋನ ಮತ್ತು ಎತ್ತರ ಹೊಂದಾಣಿಕೆಯನ್ನು ನಿರ್ವಹಣೆ ಮಾಡಬಹುದು.

ಇದರ ಚಾಲಕ ಮತ್ತು ಹಿಂಬದಿ ಸವಾರರಿಗಾಗಿ ಬೇರ್ಪಡಿಸಿದ ಆಸನ ಹಾಗೂ (16ಲಿ ರಿಂದ 23ಲಿ) ಕೋನದ ಆರಾಮದಾಯಕ ಬ್ಯಾಕ್ರೆಸ್ಟ್ ಅತ್ಯುತ್ತಮ ಸೌಖ್ಯವನ್ನು ಒದಗಿಸುತ್ತದೆ. ಇದೇ ವೇಳೆ, ಚಲನೆ ಮತ್ತು ನೆಲಕ್ಕೆ ಕಾಲೂರುವುದನ್ನೂ ಸುಲಭವಾಗಿಸುತ್ತದೆ. ಇದರ ಸೀಟ್ ಕವರ್ ಐಷಾರಾಮಿ ನ್ಯೂಸ್ಯೂಡ್ / ಸಿಂಥೆಟಿಕ್ ಲೆದರ್ ನಿಂದ ಕೂಡಿದೆ. ಹಿಂಬದಿ ಸವಾರರ ಬ್ಯಾಕ್ ರೆಸ್ಟ್ನ ಕೋನವು ಸಹ ಅತ್ಯಂತ ಆರಾಮದಾಯಕವಾಗಿರುತ್ತದೆ.

ಡ್ಯುಯಲ್ ಎಲ್ಇಡಿ ಫಾಗ್ ಲೈಟ್ಗಳು ಸೇರಿದಂತೆ ಸಂಪೂರ್ಣ ಎಲ್ಇಡಿ ಲೈಟಿಂಗ್ ಅನ್ನು ಇದು ಒಳಗೊಂಡಿದೆ. ಎರಡೂ ಬದಿಗಳಲ್ಲಿ ನಯಗೊಳಿಸಿದ ಆಪ್ಟಿಕಲ್ ಮಸೂರಗಳನ್ನು ಬಳಸುವ ಮೂಲಕ ಆಭರಣದ ಮಾದರಿಯ ಲೋ ಬೀಮ್ ಲೈಟ್ ಸಿಗ್ನೇಚರ್ ಅನ್ನು ಇದು ಒದಗಿಸುತ್ತದೆ. ಜೊತೆಗೆ ಆಟೋ-ಕ್ಯಾನ್ಸಲಿಂಗ್ ಇಂಡಿಕೇಟರ್ಗಳನ್ನು ಇದು ಹೊಂದಿದ್ದು, ಮುಂದಿನ ಮತ್ತು ಹಿಂಬದಿಯ ಚಕ್ರಗಳ ವೇಗದ ವ್ಯತ್ಯಾಸವನ್ನು ಹೋಲಿಕೆ ಮಾಡಿ, ರೈಡಿಂಗ್ ಸನ್ನಿವೇಶಕ್ಕೆ ಸಂಬಂಧಿಸಿದ ಸೂಚನೆಯನ್ನು ಯಾವಾಗ ರದ್ದುಗೊಳಿಸಬೇಕು ಎಂದು ಲೆಕ್ಕಹಾಕುವ ವ್ಯವಸ್ಥೆಯು ಇದರಲ್ಲಿದೆ.

ಪ್ರವಾಸ ಮಾಡುವಾಗ, ಚಾಲುಗೊಳಿಸಲಾದ ʻಕ್ರೂಸ್ ಕಂಟ್ರೋಲ್ʼ ವ್ಯವಸ್ಥೆಯಲ್ಲಿ ವೇಗಕ್ಷೀಣತೆ (ಡಿಸೆಲೆರೇಷನ್) ಪೂರ್ಣಗೊಳಿಸಿದ ಮತ್ತು ಹಿಂದಿನ ವೇಗವನ್ನು ಪುನರಾರಂಭಿಸಿದ ನಂತರ - ʻಗೋಲ್ಡ್ ವಿಂಗ್ʼ ಸೂಕ್ತವಾದ ಶಿಫ್ಟಿಂಗ್ ಶೆಡ್ಯೂಲ್ನೊಂದಿಗೆ ಪೂರ್ವ-ನಿಗದಿತ ಮಟ್ಟಕ್ಕೆ ಮರಳುತ್ತದೆ. ಕ್ರೂಸ್ ಕಂಟ್ರೋಲ್ ಸ್ವಿಚ್ ಮೂಲಕ ಹೊಂದಿಸಲಾದ ವೇಗವನ್ನು  ಸ್ಪೀಡೋಮೀಟರ್ನ ಕೆಳಭಾಗದ ಎಡಬದಿಯಲ್ಲಿ ತೋರಿಸಲಾಗುತ್ತದೆ. ʻಥ್ರೊಟಲ್ ಬೈ ವೈರ್ʼ(TBW) ಮೂಲಕ, ವಿಶೇಷವಾಗಿ ಏರುಮುಖವಾಗಿ ಚಲಿಸುವಾಗ, ನಯವಾದ ಟ್ರಾಸಿಷನ್ ಸಾಧಿಸಬಹುದಾಗಿದೆ.

ದೇಶ ಕಾಯೋ ಯೋಧರಿಗಾಗಿ ಆರ್ಮಿ ಕ್ಯಾಂಟೀನ್‌ಗಳಲ್ಲಿ ಹೋಂಡಾ H’ness CB350 ಮತ್ತು CB350RS ಬೈಕ್ ಲಭ್ಯ!

ಇದರ ಇನ್ಸ್ಟ್ರುಮೆಂಟ್ ಪ್ಯಾನಲ್ನ ಡಯಲ್ಗಳಿಗೆ ಕಡಿಮೆ ವೈದೃಶ್ಯದ (ಲೋ ಕಾಂಟ್ರಾಸ್ಟ್) ಬಣ್ಣಗಳನ್ನು ಬಳಸಲಾಗಿದ್ದು, ಗಾಢವಾದ ಚಹರೆಗಳನ್ನು ಅನ್ವಯಿಸಲಾಗಿದೆ. ಇದರ ಬಾಹ್ಯ ಪ್ರದೇಶಗಳು ಆಳದ ಭಾವನೆಯನ್ನು ಸೃಷ್ಟಿಸಲು ಕೋನ್ ಆಕಾರದ ಇಳಿಜಾರುಗಳನ್ನು ಒಳಗೊಂಡಿವೆ. ಇವುಗಳು ಒಟ್ಟಾರೆಯಾಗಿ ಇನ್ ಸ್ಟ್ರುಮೆಂಟ್ ಪ್ಯಾನೆಲ್ಗೆ ಐಷಾರಾಮಿ ಸ್ಪರ್ಶವನ್ನು ಒದಗಿಸುತ್ತವೆ.

ಆಡಿಯೊ ಮತ್ತು ನ್ಯಾವಿಗೇಶನ್ ವ್ಯವಸ್ಥೆಯಿಂದ ಹಿಡಿದು, ರೈಡಿಂಗ್ ಮೋಡ್ಗಳನ್ನು ನಿರ್ವಹಿಸುವುದು ಅಥವಾ ಸಸ್ಪೆನ್ಷನ್ ಸೆಟ್ಟಿಂಗ್ಗಳನ್ನು ಸರಿಹೊಂದಿಸುವುದು ಸೇರಿದಂತೆ ಎಲ್ಲಾ ಮಾಹಿತಿಯನ್ನು 7-ಇಂಚಿನ ಪೂರ್ಣ-ಬಣ್ಣದ TFT ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ಪರದೆಯು ಒದಗಿಸುತ್ತದೆ. ಚಾಲಕನು ಒಂದು ಗುಂಡಿಯನ್ನು ಒತ್ತುವ ಮೂಲಕ ಈ ಎಲ್ಲಾ ಮಾಹಿತಿಯನ್ನು ನೋಡಬಹುದಾಗಿದೆ. ಮಾಹಿತಿಯನ್ನು ಅತ್ಯಂತ ಕ್ರಿಯಾತ್ಮಕ ಕ್ರಮದಲ್ಲಿ ವಿಭಿನ್ನ ವಿಭಾಗಗಳಲ್ಲಿ ಪ್ರದರ್ಶಿಸಲಾಗುತ್ತದೆ, ಆದ್ದರಿಂದ ಸವಾರನು ಕನಿಷ್ಠ ಕಣ್ಣಿನ ಚಲನೆಯೊಂದಿಗೆ ಎಲ್ಲಾ ಸಂಬಂಧಿತ ಮಾಹಿತಿಯನ್ನು ಪಡೆಯಬಹುದು.

ಗಮನಾರ್ಹ ವಿಷಯವೆಂದರೆ, ಪರದೆಯು ಪ್ರಕಾಶಮಾನತೆಯ ಸ್ವಯಂ ಹೊಂದಾಣಿಕೆ ವ್ಯವಸ್ಥೆಯಷ್ಟೇ ಅಲ್ಲದೆ, ಇದರ ಪ್ರಕಾಶಮಾನತೆಯ್ನು 8  ಮಟ್ಟಗಳವರೆಗೆ ಬದಲಿಸಬಹುದಾಗಿದೆ. ಕೆಳಗಿನ ಎಡಭಾಗದ ವಿಭಾಗದಲ್ಲಿ ಟೈರ್ನಲ್ಲಿರುವ ಗಾಳಿಯ ಒತ್ತಡವನ್ನು (ಟೈರ್ ಪ್ರೆಷರ್) ಸಂಖ್ಯಾತ್ಮಕ ಚಿತ್ರವಾಗಿ ಪ್ರದರ್ಶಿಸುವ ಅನುಕೂಲತೆಯನ್ನೂ ಇದು ಹೊಂದಿದೆ.

ಇದರ ಸ್ಮಾರ್ಟ್ ಕೀಲಿಯು ಎಲ್ಲಾ ಸಿಸ್ಟಂಗಳನ್ನು ಸಕ್ರಿಯಗೊಳಿಸುತ್ತದೆ ಹಾಗೂ  ತುರ್ತು ಕೀಲಿಯನ್ನೂ ಒಳಗೊಂಡಿದೆ. ಕೀಲಿಯನ್ನು ವಾಹನಕ್ಕೆ ತೂರಿಸುವ ಅಗತ್ಯವಿಲ್ಲದೆ, ಕೇವಲ ಜೊತೆಗೆ ಇಟ್ಟುಕೊಳ್ಳುವ ಮೂಲಕ ಇಗ್ನಿಷನ್ ಮತ್ತು ಹ್ಯಾಂಡಲ್ ಬಾರ್ ಲಾಕ್ ಅನ್ನು ಆನ್/ಆಫ್ ಮಾಡಬಹುದು.

2022ನೇ ಸಾಲಿನ ಮಾದರಿಯಲ್ಲಿ 21 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಮುಂದುವರಿಸಲಾಗಿದೆ.  ಸ್ಮಾರ್ಟ್ ಕೀಲಿಯ ನೆರವಿನಿಂದ ಎಲ್ಲಾ ಪೆಟ್ಟಿಗೆಗಳನ್ನು ಸರಳವಾದ ಪುಶ್ ಬಟನ್ ನಿಂದ ತೆರೆಯಬಹುದಾಗಿದೆ ಮತ್ತು ಲಗೇಜ್ ಕಾರ್ಯಾಚರಣೆಯನ್ನು ಇದು ಸರಳಗೊಳಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸ್ಮಾರ್ಟ್ ಕೀಯಲ್ಲಿರುವ ʻಅನ್ಲಾಕ್ʼ ಗುಂಡಿಯು ಪ್ರಯಾಣಿಕರಿಗೆ ತ್ವರಿತ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ.

2022ನೇ ಸಾಲಿನ ʻಗೋಲ್ಡ್ ವಿಂಗ್ ಟೂರ್ʼ ʻಆಪಲ್ ಕಾರ್ಪ್ಲೇʼ™( Apple CarPlay™) ಮತ್ತು ʻಆಂಡ್ರಾಯ್ಡ್ ಆಟೋʼದೊಂದಿಗೆ™ (Android Auto™) ಅನ್ನು ಒಳಗೊಂಡಿದೆ. ಆದ್ದರಿಂದ ಸವಾರರು ತಮ್ಮ ಸ್ಮಾರ್ಟ್ಫೋನ್ನಲ್ಲಿನ ವೈಯಕ್ತೀಕರಿಸಿದ ಮಾಹಿತಿ ಮತ್ತು ವಿಷಯವನ್ನು ಇದರ ಮೂಲಕ ಬಳಸಬಹುದು.  ಉದಾಹರಣೆಗೆ ದೂರವಾಣಿ ಸಂಖ್ಯೆಗಳು ಮತ್ತು ಮ್ಯೂಸಿಕ್ ಪ್ಲೇಲಿಸ್ಟ್ಗಳು. ಇದಲ್ಲದೆ, Bluetooth ಸಂಪರ್ಕ, ಎರಡು USB ಟೈಪ್-ಸಿ ಪೋರ್ಟ್ಗಳೂ ಲಭ್ಯವಿವೆ.

ಇದರ ಹಗುರವಾದ ಸ್ಪೀಕರ್ಗಳು ಎದ್ದು ಕಾಣುವ ರೀತಿಯಲ್ಲಿ ಪ್ರದರ್ಶಿಸಲ್ಪಟ್ಟಿರುವುದಲ್ಲದೆ,  ಅತ್ಯುತ್ತಮ ಧ್ವನಿ ಗುಣಮಟ್ಟವನ್ನು ಒದಗಿಸುತ್ತವೆ. ಜೊತೆಗೆ, ವಾಲ್ಯೂಮ್ ಹೊಂದಾಣಿಕೆ, ಸೋರ್ಸ್ ಬದಲಾವಣೆ ಮತ್ತು ಆಡಿಯೊ ಫಾಸ್ಟ್-ಫಾರ್ವರ್ಡಿಂಗ್ಗಾಗಿ ಪ್ರಯಾಣಿಕರ ಆಡಿಯೊ ಕಂಟ್ರೋಲ್ ಸ್ವಿಚ್ ಕೂಡ ಲಭ್ಯವಿದೆ.

ನ್ಯಾವಿಗೇಶನ್ ಸಿಸ್ಟಮ್ ಅನ್ನು ಇನ್ಸ್ಟ್ರುಮೆಂಟ್ ಪ್ಯಾನೆಲ್ನ ಕೇಂದ್ರ ಭಾಗದಲ್ಲಿ ಪ್ರದರ್ಶಿಸಲಾಗಿದ್ದು, ಇದು ಗೈರೋಕಾಂಪಸ್ ಅನ್ನು ಸಹ ಒಳಗೊಂಡಿದೆ. ಇದರ ನೆರವಿಂದ ಸುರಂಗದೊಳಗೆ ಸಹ ಅಡೆತಡೆಯಿಲ್ಲದ ಪಥನಿರ್ದೇಶನವನ್ನು ಪಡೆಬಹುದಾಗಿದೆ.

ಇಂಜಿನ್ ಮತ್ತು ಕಾರ್ಯನಿರ್ವಹಣೆ
ಚಾಸಿಸ್ನ ನಿರ್ವಹಣಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದರ ಜೊತೆಗೆ ಗೀಳು ಹುಟ್ಟಿಸುವ ಪವರ್ ಡೆಲಿವರಿ ಇದರ ವಿಶೇಷತೆಯಾಗಿದೆ. ʻಗೋಲ್ಡ್ ವಿಂಗ್ ಟೂರ್ʼನ  1833 ಸಿಸಿ ಲಿಕ್ವಿಡ್-ಕೂಲ್ಡ್ 4-ಸ್ಟ್ರೋಕ್ 24-ವಾಲ್ವ್ SOHC ಫ್ಲಾಟ್-6 ಎಂಜಿನ್ 5,500RPM ನಲ್ಲಿ 93KW (93KW@5,500ಡRPM)ಗರಿಷ್ಠ ಶಕ್ತಿಯನ್ನು ಮತ್ತು 4,500RPM    ನಲ್ಲಿ 170Nm (170Nm  @ 4,500RPM) ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐತಿಹಾಸಿಕ ಮೋಟಾರ್ಸೈಕಲ್ನ ಗುಣಲಕ್ಷಣ ಮತ್ತು ಪವರ್ ಡೆಲಿವರಿಯನ್ನು ಬದಲಾಯಿಸಲು, ʻಥ್ರೋಟಲ್ ಬೈ ವೈರ್ʼ(TBW) ಎಂಜಿನ್ ನಿರ್ವಹಣೆಯನ್ನು ಅಳವಡಿಸಲಾಗಿದ್ದು, ಸಸ್ಪೆನ್ಷನ್ ಡ್ಯಾಂಪಿಂಗ್ ಮತ್ತು ಡ್ಯುಯಲ್ ಕಂಬೈನ್ಡ್ ಬ್ರೇಕ್ ಸಿಸ್ಟಮ್ (ಡಿ-ಸಿಬಿಎಸ್) ನೊಂದಿಗೆ ಸಂಪರ್ಕಿಸಲಾದ ಇದು 4 ರೈಡರ್ ಮೋಡ್ಗಳನ್ನು (ಟೂರ್, ಸ್ಪೋರ್ಟ್, ಎಕಾನ್ & ರೈನ್) ಒದಗಿಸುತ್ತದೆ. 

ಹಿಂಬದಿ ಗಾಲಿಯ ತಡೆರಹಿತ ಟ್ರಾಕ್ಷನ್ ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡುವ, ʻಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ʼ (HSTC) ಸವಾರಿಯ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ರೈಡಿಂಗ್ ಮೋಡ್ ಆಯ್ಕೆಯೊಂದಿಗೆ ಇನ್ಪುಟ್ನ ಮಟ್ಟವನ್ನು (TBW ಮೂಲಕ) ಸರಿಹೊಂದಿಸಲಾಗುತ್ತದೆ. ಯಾವುದೇ ಅತಿಯಾದ ಶಬ್ದವನ್ನು ಹೊರಸೂಸದ ಶಕ್ತಿಯುತವಾದ ಮಿಡಿತ ಹಾಗೂ ಎಕ್ಸಾಸ್ಟ್ ವ್ಯವಸ್ಥೆಯು ಎಂಜಿನ್ನ ಡೀಪ್ ಬಾಸ್ ಸಿಗ್ನೇಚರ್ಗೆ ಮೆರುಗು ನೀಡುತ್ತದೆ.

ಇದಲ್ಲದೆ, ಪ್ರಮಾಣಿತ ವ್ಯವಸ್ಥೆಗಿಂತ 2.4 ಕಿಲೋಗ್ರಾಂ ಹಗುರವಾಗಿರುವ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG), ಜನರೇಟರ್ ಮತ್ತು ಸ್ಟಾರ್ಟರ್ ಮೋಟರ್ನ ಶಕ್ತಿಯನ್ನು ಒಂದರಲ್ಲೇ ಸಂಯೋಜಿಸುತ್ತದೆ. ಹಿಮ್ಮುಖ ಶಕ್ತಿಯನ್ನು ಪೂರೈಸಿದಾಗ ಜನರೇಟರ್ ಸ್ಟಾರ್ಟರ್ ಮೋಟರ್ ಆಗಿ ದ್ವಿಗುಣಗೊಳ್ಳುತ್ತದೆ. ಯಾಂತ್ರಿಕ ಶಬ್ದವನ್ನು ಕಡಿಮೆ ಮಾಡುವ ಹೆಲಿಕಲ್ ಗೇರ್ಗಳು ʻISGʼ ಸೆಟಪ್ ಅನ್ನು ಚಾಲನೆ ಮಾಡುತ್ತವೆ.

ISG ಜೊತೆಗೆ ಹಾಗೂ DCT  ಮತ್ತು TBW ನಿಯಂತ್ರಣದ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುವ ʻಐಡ್ಲಿಂಗ್ ಸ್ಟಾಪ್ ಸಿಸ್ಟಂʼ,  ಎಂಜಿನ್ ಅತ್ಯಂತ ನಿಶ್ಯಬ್ದವಾಗಿ ಚಾಲು ಗೊಳ್ಳುವುದನ್ನು ಖಚಿತಪಡಿಸುತ್ತದೆ. ಟ್ರಾಫಿಕ್ ಸಿಗ್ನಲ್ನಲ್ಲಿ ನಿಖರವಾಗಿ ಮೂರು ಸೆಕೆಂಡುಗಳ ಕಾಲ ನಿಂತರೆ ಎಂಜಿನ್ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ ಮತ್ತು ಥ್ರೋಟಲ್ ತಿರುವಿದರೆ ಮತ್ತೆ ಚಾಲುಗೊಳ್ಳುತ್ತದೆ.

ʻಗೋಲ್ಡ್ ವಿಂಗ್ ಟೂರ್ನʼನ ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ಎಸ್ಎ) ನೆರವಿನೊಂದಿಗೆ, ಇಳಿಜಾರಿನ ವಿವಿಧ ಹಂತಗಳಲ್ಲಿ ಎಲ್ಲಿ ಬೇಕಾದರೂ ವಾಹನವನ್ನು ಸುಲಭವಾಗಿ ಚಾಲುಗೊಳಿಸಬಹುದು. ಚಾಲನೆ ಮಾಡಿದಾಗ - ಬ್ರೇಕ್ ಲಿವರ್ ಬಿಡುಗಡೆಯಾದಾಗಲೂ ಸಹ - ಹೈಡ್ರಾಲಿಕ್ ಒತ್ತಡವು ತಾತ್ಕಾಲಿಕವಾಗಿ ಬ್ರೇಕಿಂಗ್ ಬಲವನ್ನು (ಸುಮಾರು 3 ಸೆಕೆಂಡುಗಳವರೆಗೆ) ಉಳಿಸಿಕೊಳ್ಳುತ್ತದೆ, ಆದ್ದರಿಂದ ಥ್ರೊಟಲ್ನೊಂದಿಗೆ ಬೆಟ್ಟದ ಇಳಿಜಾರಿನಲ್ಲಿ ಪ್ರಾರಂಭಿಸುವುದು ಸಾಧ್ಯವಾಗುತ್ತದೆ.

ಹೋಂಡಾದ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ (DCT) ತಂತ್ರಜ್ಞಾನವು ಪ್ರತಿ ರೈಡಿಂಗ್ ಮೋಡ್ನಲ್ಲೂ ಕ್ಲಚ್ಫೀಲ್, ಶಿಫ್ಟ್ ವೇಗ ಮತ್ತು ಆರ್ಪಿಎಂನೊಂದಿಗೆ ನಿರ್ದಿಷ್ಟವಾಗಿ ಹೊಂದಿಕೆಯಾಗುವ ಅಪ್/ಡೌನ್ ಶಿಫ್ಟ್ಗಳ ಶ್ರೇಣಿಯೊಂದಿಗೆ ಸ್ಥಿರವಾದ, ತಡೆರಹಿತ ಗೇರ್ ಬದಲಾವಣೆ ಅನುಕೂಲವನ್ನು ಮುಂದುವರಿಸುತ್ತದೆ. ಇದು ಎರಡು ಕ್ಲಚ್ಗಳನ್ನು ಬಳಸುತ್ತದೆ: ಒಂದು ಸ್ಟಾರ್ಟ್ ಅಪ್, ಮತ್ತು 1ನೇ, 3ನೇ, 5ನೇ, 7ನೇ ಗೇರ್ಗಾಗಿ ಮತ್ತು ಇನ್ನೊಂದು 2ನೇ, 4 ನೇ ಮತ್ತು 6ನೇ ಗೇರ್ಗಾಗಿ. ಪ್ರತಿ ಕ್ಲಚ್ಗಾಗಿ ಮೇನ್ ಶಾಫ್ಟ್ ಮತ್ತೊಂದು ಕ್ಲಚ್ನ ಒಳಭಾಗದಲ್ಲಿದೆ.  ಇದು ಅನುಕೂಲಕರವಾದ ʻಕ್ರೀಪ್ ಫಾರ್ವರ್ಡ್ʼ ಮತ್ತು ʻಬ್ಯಾಕ್ ಫಂಕ್ಷನ್ʼ ಅನ್ನು ಸಹ ಒಳಗೊಂಡಿದೆ.

ಕಡಿಮೆ ವೇಗದಲ್ಲಿ ಚಾಲನೆಯ ಕುಶಲತೆಗಾಗಿ ನಿಕಟ ಗೇರ್ ಅನುಪಾತಗಳೊಂದಿಗೆ ಟ್ರಾನ್ಸ್ಮಿಷನ್ ಅನ್ನು ಉತ್ತಮಗೊಳಿಸಲಾಗಿದೆ. ಶಿಫ್ಟ್-ಆಘಾತವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ,  ಎಂಜಿನ್ RPM ಅನ್ನು ಕಡಿಮೆ ಮಾಡಲು ಅವುಗಳನ್ನು ವಿಸ್ತಾರವಾಗಿ ಪ್ರತ್ಯೇಕಿಸಲಾಗುತ್ತದೆ. ಇದರಿಂದ ಎರಡೂ ವೇಗದ ಶ್ರೇಣಿಗಳಲ್ಲಿ ಹೆಚ್ಚು ಆರಾಮ ದೊರೆಯುತ್ತದೆ. ಏಕೆಂದರೆ ಗೇರ್ ಏರಿಸುವಿಕೆ ಮತ್ತು ಇಳಿಸುವಿಕೆಯು ಗರಿಷ್ಠ ಗುಣಮಟ್ಟದಿಂದ ಕೂಡಿರುತ್ತದೆ.

ಚಾಸಿಸ್ ಮತ್ತು ಹ್ಯಾಂಡ್ಲಿಂಗ್
2022ನೇ ಸಾಲಿನ ʻಗೋಲ್ಡ್ ವಿಂಗ್ ಟೂರ್ʼನ ಡೈಕಾಸ್ಟ್, ಅಲ್ಯೂಮಿನಿಯಂ ಟ್ವಿನ್-ಬೀಮ್ ಫ್ರೇಮ್ ಕಾಂಪ್ಯಾಕ್ಟ್ ಎಂಜಿನ್ ಪ್ಯಾಕೇಜಿಂಗ್ಗೆ ಅನುಮತಿಸುತ್ತದೆ. ಅದರ ರಚನಾತ್ಮಕ ದಪ್ಪವನ್ನು ಪ್ರತಿ ಪ್ರದೇಶದಲ್ಲಿ ಅಗತ್ಯಕ್ಕೆ ತಕ್ಕಂತೆ ಉತ್ತಮಗೊಳಿಸಲಾಗಿದೆ. ಇದು ನಗರದ ಬೀದಿಗಳಲ್ಲಿ ಮತ್ತು ದೂರ ಪ್ರವಾಸದಲ್ಲಿ ನಯವಾದ ಮತ್ತು ಸ್ಥಿರವಾದ ಸವಾರಿಗೆ ಅನುಮತಿಸುತ್ತದೆ.

Follow Us:
Download App:
  • android
  • ios