Honda Bikes ದೇಶ ಕಾಯೋ ಯೋಧರಿಗಾಗಿ ಆರ್ಮಿ ಕ್ಯಾಂಟೀನ್‌ಗಳಲ್ಲಿ ಹೋಂಡಾ H’ness CB350 ಮತ್ತು CB350RS ಬೈಕ್ ಲಭ್ಯ!

  • ಭಾರತೀಯ ರಕ್ಷಣಾ ಕ್ಷೇತ್ರದ ಜೊತೆಗೆ ಹೋಂಡಾ ಇಂಡಿಯಾ ಒಪ್ಪಂದ
  • ಆರ್ಮಿ ಕ್ಯಾಂಟೀನ್‌ಗಳಲ್ಲಿ ಹೊಂಡಾ ಬೈಕ್ ಲಭ್ಯ
  • ಮೊದಲ ಹಂತದಲ್ಲಿ 35 ಕ್ಯಾಂಟೀನ್ ಸ್ಟೋರ್‌ನಲ್ಲಿ ಹೋಂಡಾ
     
Honda Hness CB350 and CB350RS now available at Indian Army CSD Stores ckm

ನವದೆಹಲಿ(ಫೆ.19): ಭಾರತ 75ನೇ ವರ್ಷದ ಸ್ವಾತಂತ್ರ್ಯೋತ್ಸವ(azadi ka amrit mahotsav) ಸಂಭ್ರಮದಲ್ಲಿದೆ. ಇದರ ಅಂಗವಾಗಿ ಹೊಂಡಾ(Honda) ಟುವೀಲ್ಹರ್ಸ್ ಮಹತ್ವದ ಘೋಷಣೆ ಮಾಡಿದೆ. ದೇಶ ಕಾಯೋ ಯೋಧರಿಗಾಗಿ(Indian Army) ಇದೀಗ ಹೋಂಡಾ H’ness CB350 ಮತ್ತು CB350RS ಬೈಕ್ ಲಭ್ಯತೆಯನ್ನು ಮತ್ತಷ್ಟು ಸುಲಭವಾಗಿಸಿದೆ. ದೇಶದ ಆರ್ಮಿ ಕ್ಯಾಂಟಿನ್‌ಗಳಲ್ಲಿ ಇದೀಗ ಹೋಂಡಾದ H’ness CB350 ಮತ್ತು CB350RS ಬೈಕ್ ಲಭ್ಯವಿದೆ ಎಂದು ಹೋಂಡಾ ಘೋಷಿಸಿದೆ.

ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್‌ಗಳ (CSD) ಫಲಾನುಭವಿಗಳಿಗೆ ಸರಕು ಸಾಗಣೆ ಪಾಲುದಾರನಾಗಿರುವುದರ ತನ್ನ ದೀರ್ಘಕಾಲದ ಬದ್ಧತೆಯ ಸಂಭ್ರಮಾಚರಣೆ ಅಂಗವಾಗಿ ದೇಶದಾದ್ಯಂತ ಇರುವ ಕ್ಯಾಂಟೀನ್ ಸ್ಟೋರ್(army canteen) ಡಿಪಾರ್ಟ್ಮೆಂಟ್‌ಗಳಲ್ಲಿ (CSD)  H’ness CB350 ಮತ್ತು CB350RS ಮಾರಾಟ ಸೌಲಭ್ಯ ಆರಂಭಿಸುವುದಾಗಿ ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರಕಟಿಸಿದೆ.

Honda Bike launch ಹೋಂಡಾ 2022 CBR650R ಬೈಕ್ ಬಿಡುಗಡೆ, ಬುಕಿಂಗ್ ಆರಂಭ! 

ಹೋಂಡಾ ಬಿಗ್‌ವಿಂಗ್‌ನ ಉತ್ಪನ್ನ ಶ್ರೇಣಿಯಾಗಿರುವ ಈ ಮಧ್ಯಮ ಭಾರದ ಮೋಟರ್‌ಸೈಕಲ್‌ಗಳನ್ನು ಇದೇ ಮೊದಲ ಬಾರಿಗೆ 35 ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್‌ಗಳಲ್ಲಿ (ಸಿಎಸ್‌ಡಿ) ಡಿಪೊಗಳಲ್ಲಿ ಮಾರಾಟ ಮಾಡುವುದಕ್ಕೆ ಚಾಲನೆ ನೀಡಲಾಗಿದೆ.

ಹೋಂಡಾ 2ವೀಲರ್ಸ್ ಇಂಡಿಯಾ, ಭಾರತದ ರಕ್ಷಣಾ(india defence) ವಲಯದ ಸಮುದಾಯದ ಜೊತೆಗೆ ದೀರ್ಘಾವಧಿಯ ಮೈತ್ರಿಯನ್ನು ಹೊಂದಿದೆ. ನಮ್ಮ ಗುಣಮಟ್ಟದ ಉತ್ಪನ್ನಗಳು ಮತ್ತು ಮಾರಾಟದ ನಂತರದ ಸೇವೆಯೊಂದಿಗೆ ಅವರಿಗೆ ಸೇವೆ ಸಲ್ಲಿಸಲು ನಾವು ಹೆಮ್ಮೆಪಡುತ್ತೇವೆ. ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಯಲ್ಲಿ, ಭಾರತದಾದ್ಯಂತ ಇರುವ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್‌ಗಳಲ್ಲಿ (ಸಿಎಸ್‌ಡಿ) ನಮ್ಮ ಹೊಸ ಬಿಗ್‌ವಿಂಗ್  H’ness CB350 ಮತ್ತು CB350RSS   ಮೋಟರ್ ಸೈಕಲ್‌ಗಳನ್ನು ಅನುಮೋದಿತ ವಿಶೇಷ ಬೆಲೆಯಲ್ಲಿ ಮಾರಾಟ ಮಾಡುವುದಕ್ಕೆ ನಮಗೆ  ಸಂತೋಷವಾಗುತ್ತಿದೆ. ದೇಶದಾದ್ಯಂತ ಇರುವ ‘ಸಿಎಸ್‌ಡಿ’ ಜಾಲದಾದ್ಯಂತ ಈ ಮೋಟರ್ ಸೈಕಲ್‌ಗಳ ಲಭ್ಯತೆಯು ರಕ್ಷಣಾ ಸಿಬ್ಬಂದಿ ಮತ್ತು ‘ಸಿಎಸ್‌ಡಿ’ ಫಲಾನುಭವಿಗಳಿಗೆ ತಮ್ಮ ನೆಚ್ಚಿನ ಹೋಂಡಾ 350ಸಿಸಿ ಮೋಟರ್‌ಸೈಕಲ್‌ಗಳನ್ನು ಖರೀದಿಸಲು ಮತ್ತು ಅತ್ಯಾಕರ್ಷಕವಾದ ತಮ್ಮ ಹೊಸ ಸವಾರಿಯನ್ನು ಪ್ರಾರಂಭಿಸಲು ಅನುವು ಮಾಡಿಕೊಡಲಿದೆ ಎಂದು  ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾರಾಟ ಮತ್ತು ಮಾರುಕಟ್ಟೆ  ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

Honda Shine ಭಾರತದಲ್ಲಿ ಹೊಸ ದಾಖಲೆ ಬರೆದ ಹೋಂಡಾ ಶೈನ್, 1 ಕೋಟಿ ಗ್ರಾಹಕರ ಮೈಲಿಗಲ್ಲು!

‘ಸಿಎಸ್‌ಡಿ' ಫಲಾನುಭವಿಗಳಿಗೆ ಖರೀದಿ ಪ್ರಕ್ರಿಯೆ
ಅನುಕೂಲಕರ ಮತ್ತು ಅಡಚಣೆ ಮುಕ್ತ ಖರೀದಿ ಅನುಭವವನ್ನು ಖಚಿತಪಡಿಸಿಕೊಳ್ಳಲು, ಸಿಎಸ್‌ಡಿ ಪೋರ್ಟಲ್ ನೋಂದಣಿ, ಡೀಲರ್ ಆಯ್ಕೆ ಮತ್ತು ತಮ್ಮ ನೆಚ್ಚಿನ ಮಾದರಿಯನ್ನು ಆಯ್ಕೆ ಮಾಡಲು ರಕ್ಷಣಾ ಸಿಬ್ಬಂದಿ ಕ್ಯಾಂಟೀನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗ್ ಇನ್ ಆಗಬಹುದು. ಆಯ್ಕೆ ಮಾಡಿದ ಡೀಲರ್‌ರಿಂದ ಮೋಟರ್‌ಸೈಕಲ್‌ಗಳ ಲಭ್ಯತೆ ದೃಢಪಟ್ಟ ನಂತರ, ಸಿಬ್ಬಂದಿ ಡೀಲರ್ ದಾಖಲೆಗಳನ್ನು (ಲಭ್ಯತೆ ಪ್ರಮಾಣಪತ್ರ ಮತ್ತು ಪ್ರೊಫಾರ್ಮಾ ಇನ್‌ವಾಯ್ಸ್) ಮತ್ತು ಗ್ರಾಹಕರ ದಾಖಲೆಗಳನ್ನು (ಕ್ಯಾಂಟೀನ್ ಕಾರ್ಡ್, ಕೆವೈಸಿ, ಪಾವತಿ ವರ್ಗಾವಣೆ ವಿವರಗಳು ಇತ್ಯಾದಿ) ಅಪ್‌ಲೋಡ್ ಮಾಡಬಹುದು. ನಂತರ ಸ್ಥಳೀಯವಾಗಿ ಮೋಟರ್‌ಸೈಕಲ್ ನೀಡುವ ಆದೇಶದ (LSO) ಡಿಜಿಟಲ್ ಪ್ರತಿ ನೀಡಲಾಗುವುದು.

ಹೋಂಡಾ ಬಿಗ್‌ವಿಂಗ್ ಕುರಿತು - ಹೋಂಡಾದ ವಿಶೇಷ ಪ್ರೀಮಿಯಂ ಮೋಟರ್ ಸೈಕಲ್ ವಹಿವಾಟು
ಪ್ರೀಮಿಯಂ ಬೈಕ್ ಅಭಿಮಾನಿಗಳಿಗೆ ಹೋಂಡಾದ ಪ್ರೀಮಿಯಂ ಮೋಟರ್ ಸೈಕಲ್ ರಿಟೇಲ್ ಸ್ವರೂಪವನ್ನು ಭಾರತದಾದ್ಯಂತ 80ಕ್ಕೂ ಹೆಚ್ಚು ಬಿಗ್‌ವಿಂಗ್ ಟಚ್‌ಪಾಯಿಂಟ್‌ಗಳು ಒದಗಿಸುತ್ತವೆ. ಬಿಗ್‌ವಿಂಗ್ ಟಾಪ್‌ಲೈನ್- ಹೋಂಡಾದ ಸಂಪೂರ್ಣ ಪ್ರೀಮಿಯಂ ಮೋಟರ್ ಸೈಕಲ್ ಶ್ರೇಣಿಯನ್ನು (300-1800ಸಿಸಿ), ಹೋಂಡಾ ಬಿಗ್‌ವಿಂಗ್- ಮಧ್ಯಮ ಗಾತ್ರದ ಮೋಟರ್ ಸೈಕಲ್ ಅಭಿಮಾನಿಗಳ (300-500ಸಿಸಿ) ಅಗತ್ಯಗಳನ್ನೆಲ್ಲ ಒದಗಿಸುತ್ತದೆ. 

Latest Videos
Follow Us:
Download App:
  • android
  • ios