Asianet Suvarna News Asianet Suvarna News

Electric Vehicle ಹೀರೋಗೆ ಪೈಪೋಟಿ, ಶೀಘ್ರದಲ್ಲೇ ಹೋಂಡಾದಿಂದ ಕೈಗೆಟುಕುವ ದರದ ಎಲೆಕ್ಟ್ರಿಕ್ ವಾಹನ ಬಿಡುಗಡೆ!

*ಹೊಂಡಾ ಆಕ್ಟೀವಾದಿಂದ ಜನಪ್ರಿಯಗೊಂಡ ಎಚ್‌ಎಂಎಸ್‌ಐ

*ಸದ್ಯ ದೇಶದ ಅತಿ ಹೆಚ್ಚು ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದು

* ಮುಂದಿನ ವರ್ಷದಲ್ಲೇ ಇವಿ ವಾಹನ ಬಿಡುಗಡೆಗೆ ಸಿದ್ಧತೆ

Honda Motorcycle all set to enter Electric Vehicle Sector launch multiple products to rival Hero
Author
Bangalore, First Published Feb 20, 2022, 5:20 PM IST

ನವದೆಹಲಿ(ಫೆ.20) ಹೋಂಡಾ ಆಕ್ಟಿವಾದೊಂದಿಗೆ (Honda Activa) ಸ್ಕೂಟರ್ ವಿಭಾಗದಲ್ಲಿ ಯಶಸ್ಸನ್ನು ದಾಖಲಿಸಿರುವ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ (ಎಚ್‌ಎಂಎಸ್‌ಐ-HMSI), ತನ್ನ ಪ್ರತಿಸ್ಪರ್ಧಿ ಹೀರೋ ಮೋಟೋಕಾರ್ಪ್‌ಗೆ (Hero Motocarp) ಠಕ್ಕರ್‌ ನೀಡಲು ಮೋಟಾರ್‌ಸೈಕಲ್ ವಿಭಾಗದಲ್ಲಿ ಅನೇಕ ಹೊಸ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ.ಹೋಂಡಾ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್ ಕಂಪನಿಯು ತಮ್ಮ ಸಿಡಿ110 (CD110) ಕಡಿಮೆ ತೂಕ ಇಂಜಿನ್‌ ವಾಹನದ ನಂತರ ಈಗ 150 ಸಿಸಿ (150-cc) ವಿಭಾಗದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಲು ಅವಕಾಶಗಳನ್ನು ಅರಸುತ್ತಿದೆ. ಈ ನಿಟ್ಟಿನಲ್ಲಿ ಹಲವು ಮಾರುಕಟ್ಟೆ ಸರ್ವೆಗಳನ್ನು ಕೂಡ ನಡೆಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಚ್‌ಎಮ್‌ಎಸ್ಐ ಅಧ್ಯಕ್ಷ ಅಟ್ಸುಶಿ ಒಗಾಟಾ, " ಕಡಿಮೆ-ಮಟ್ಟದ ಮಾದರಿ ಸಿಡಿ110 ಅನ್ನು ಹೊಂದಿದ್ದೇವೆ, ಆದರೆ ನಮ್ಮ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ತುಂಬಾ ದುರ್ಬಲವಾಗಿದೆ. ಆದ್ದರಿಂದ ನಾವು ಈ ರೀತಿಯ ಇನ್ನಷ್ಟು ಮೋಟಾರ್ಸೈಕಲ್ ಅನ್ನು ಕಡಿಮೆ-ಮಟ್ಟದ ವಿಭಾಗದಲ್ಲಿ  ಅಭಿವೃದ್ಧಿಪಡಿಸಲಿದ್ದೇವೆ" ಎಂದಿದ್ದಾರೆ.

Honda Activa125 Premium: ಮತ್ತಷ್ಟು ಆಕರ್ಷಕ, ಹೋಂಡಾ ಆ್ಯಕ್ಟೀವಾ 125 ಪ್ರೀಮಿಯಂ ಸ್ಕೂಟರ್ ಬಿಡುಗಡೆ!

 “150ಸಿಸಿ ವಿಭಾಗದಲ್ಲಿ, ನಾವು ಪೋರ್ಟ್ಫೋಲಿಯೊ, ಎಕ್ಸ್-ಬ್ಲೇಡ್, ಯುನಿಕಾರ್ನ್ ಅನ್ನು ಹೊಂದಿದ್ದೇವೆ. ಯುನಿಕಾರ್ನ್ ಉತ್ತಮ ಉತ್ಪನ್ನವಾಗಿದೆ. ಆದರೆ ಇದು ದೇಶದ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾಗಗಳ  ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ತಿಳಿದಿದೆ ಮತ್ತು ಇಡೀ ಭಾರತದಲ್ಲಿ ಅಲ್ಲ. ಆದ್ದರಿಂದ, ನಾವು 150 ಸಿಸಿ ಲೈನ್ ಅಪ್ ಮೇಲೆ ಹೆಚ್ಚು ಗಮನಹರಿಸಬೇಕು. ನಾವು ಈ ವಿಭಾಗವನ್ನು ಸಹ ತನಿಖೆ ಮಾಡುತ್ತಿದ್ದೇವೆ” ಎಂದಿದ್ದಾರೆ.
ಜಪಾನಿನ ಆಟೋ ಮೇಜರ್ ಕಂಪನಿ 110-125 ಸಿಸಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ.  2022ರ ಹಣಕಾಸು ವರ್ಷದ ಏಪ್ರಿಲ್ ಮತ್ತು ಜನವರಿ ನಡುವೆ  ಒಟ್ಟು 9,24,787 ವಾಹನಗಳ ಮಾರಾಟದೊಂದಿಗೆ ಮಾರುಕಟ್ಟೆಯಲ್ಲಿ  ಪ್ರಾಬಲ್ಯ ಸಾಧಿಸಿದೆ. ಒಟ್ಟಾರೆಯಾಗಿ, 2022ರ ಜನವರಿವರೆಗೆ ಹೀರೋ ಮೋಟೋಕಾರ್ಪ್, ಮೋಟಾರ್‌ಸೈಕಲ್ ವಿಭಾಗದಲ್ಲಿ ಶೇ. 48ರಷ್ಟು ಪಾಲನ್ನು ಹೊಂದಿತ್ತು. ಎಚ್‌ಎಂಎಸ್‌ಐ ಶೇ. 16%ರಷ್ಟು ಮಾರಾಟ ಪ್ರಮಾಣದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಮಾರುಕಟ್ಟೆಯ ಉನ್ನತ ಮಟ್ಟದಲ್ಲಿ, ಕಂಪನಿ ಪ್ರಸ್ತುತ ಮಧ್ಯಮ-ತೂಕದ ಮೋಟಾರ್ಸೈಕಲ್ ವಿಭಾಗದಲ್ಲಿ ರಾಯಲ್ ಎನ್ಫೀಲ್ಡ್ಗೆ ಸವಾಲು ಹಾಕಲು ಎರಡು ಉತ್ಪನ್ನಗಳನ್ನು ತಯಾರಿಸುತ್ತಿದೆ. ಅವುಗಳೆಂದರೆ, ಸಿಬಿ350 (CB350) ಮತ್ತು (ಸಿಬಿ350ಆರ್‌ಎಸ್ )CB350RS. ಸ್ಥಳೀಯವಾಗಿ ಉತ್ಪಾದಿಸಲಾದ ಈ ಮಧ್ಯಮ ಗಾತ್ರದ ಮೋಟಾರ್ಸೈಕಲ್ಗಳ ಹೊಸ ಪೋರ್ಟ್ಫೋಲಿಯೊದೊಂದಿಗೆ, ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ವರ್ಗದಲ್ಲಿ ವರ್ಷಕ್ಕೆ 300,000 ವಾಹನಗಳ ಮಾರಾಟ ಗುರಿ ಹೊಂದಿದೆ. 

Honda Bikes ದೇಶ ಕಾಯೋ ಯೋಧರಿಗಾಗಿ ಆರ್ಮಿ ಕ್ಯಾಂಟೀನ್‌ಗಳಲ್ಲಿ ಹೋಂಡಾ H’ness CB350 ಮತ್ತು CB350RS ಬೈಕ್ ಲಭ್ಯ!

ಪ್ರತ್ಯೇಕವಾಗಿ, ಎಚ್‌ಎಸ್ಐ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯನ್ನು ಪರಿಶೀಲಿಸುತ್ತಿದೆ ಮತ್ತು ಗ್ರಾಹಕರು ಮುಂದಿನ ಹಣಕಾಸು ವರ್ಷದಲ್ಲಿ ನಿಜವಾದ HMSI EV ಉತ್ಪನ್ನವನ್ನು ನೋಡಲಿದ್ದಾರೆ. ಹೀರೋ ಮೋಟೋಕಾರ್ಪ್, ಬಜಾಜ್ ಆಟೋ, ಟಿವಿಎಸ್ ಮೋಟಾರ್ ಕಂಪನಿ ಮತ್ತು ಓಲಾ ಎಲೆಕ್ಟ್ರಿಕ್ನಂತಹ ಸ್ಟಾರ್ಟ್ಅಪ್ಗಳಂತಹ ಹಲವಾರು ಮುಖ್ಯವಾಹಿನಿಯ  ಕಂಪನಿಗಳು ಈ ವಿಭಾಗದಲ್ಲಿ ಹೊಸ ಯೋಜನೆಗಳನ್ನು ಘೋಷಿಸಿದ ಬೆನ್ನಲ್ಲೇಎಚ್‌ಎಂಎಸ್‌ಐ ಕೂಡ ಭಾರತದಲ್ಲಿ ಇವಿ ಮಾರುಕಟ್ಟೆಯನ್ನು ಪ್ರವೇಶಿಸಲು ನಿರ್ಧರಿಸಿದೆ.

ದ್ವಿಚಕ್ರ ವಾಹನ ವಿಭಾಗದಲ್ಲಿ, ಹೀರೋ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರೋಥರ್ಮ್‌ನಂತಹ ಕಂಪನಿಗಳು ಹಲವಾರು ವರ್ಷಗಳಿಂದ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ. ಆದರೆ ಫಾಸಿಲ್‌ ಇಂಧನಗಳಿಂದ ಚಾಲಿತ 15.1 ಮಿಲಿಯನ್ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಕಳೆದ ಹಣಕಾಸು ವರ್ಷದಲ್ಲಿ ಸುಮಾರು 143,837 ವಾಹನಗಳ ಮಾರಾಟ ಕಡಿಮೆಯಾಗಿದೆ.
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) 2022ರ ಜನವರಿವರೆಗೆ 2.87 ಮಿಲಿಯನ್ ವಾಃನಗಳ ಮಾರಾಟದೊಂದಿಗೆ ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ.

Follow Us:
Download App:
  • android
  • ios