Asianet Suvarna News Asianet Suvarna News

Africa Twin Adventure ಭಾರತದಲ್ಲಿ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಬಿಡುಗಡೆ!

  • ನೂತನ ಬೈಕ್ ಬೆಲೆ 16 ಲಕ್ಷ ರೂಪಾಯಿಯಿಂದ ಆರಂಭ
  • ಎರಡು ವೇರಿಯೆಂಟ್‌ಗಳಲ್ಲಿ ಆಫ್ರಿಕಾ ಟ್ವಿನ್ ಬೈಕ್ ಲಭ್ಯ
  • 1082.96.ಸಿಸಿ ಎಂಜಿನ್ ಹೊಂದಿರುವ ಗರಿಷ್ಠ ಸಾಮರ್ಥ್ಯದ ಬೈಕ್
Honda launches 2022 Africa Twin Adventure Sports in India Bookings Open ckm
Author
Bengaluru, First Published Mar 18, 2022, 5:02 PM IST

ನವದೆಹಲಿ(ಮಾ.18): ಹೋಂಡಾ ಮೋಟರ್‌ಸೈಕಲ್ ಭಾರತದಲ್ಲಿ ಹೊಸ ಹೊಸ ಬೈಕ್ ಮೂಲಕ ಸಂಚನ ಮೂಡಿಸುತ್ತಿದೆ. ಇದೀಗ ಹೊಚ್ಚ ಹೊಸ 2022 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ (2022 Africa Twin Adventure Sports) ಬಿಡುಗಡೆ ಮಾಡಿದೆ. ಇಂದಿನಿಂದಲೇ ಬುಕಿಂಗ್ ಕೂಡ ಆರಂಭಗೊಂಡಿದೆ. 

2022 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಎರಡು ಮಾದರಿಯಲ್ಲಿ ಲಭ್ಯವಿದೆ. ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಡ್ಯುಯೆಲ್ ಕ್ಲಚ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಇದರಲ್ಲಿ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ 16,01,500 ರೂಪಾಯಿ(ಎಕ್ಸ್ ಶೋ ರೂಂ) ಇನ್ನು ಡಿಸಿಟಿ ಮಾಡೆಲ್ ಬೈಕ್ 17,55,500 ರೂಪಾಯಿ(ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ.

ಶಕ್ತಿ ಮತ್ತು ಕಾರ್ಯಕ್ಷಮತೆ
ಅದರ ದೀರ್ಘ ಪಯಣ ಮತ್ತು ಆಫ್-ರೋಡಿಂಗ್ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, 2022 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ 1082.96.ಸಿಸಿ ಲಿಕ್ವಿಡ್-ಕೂಲ್ಡ್  4 ಸ್ಟ್ರೋಕ್ 8-ವಾಲ್ವ್ ಪ್ಯಾರಲಲ್ ಟ್ವಿನ್ ಎಂಜಿನ್, ಓವರ್‌ಹೆಡ್ ಕ್ಯಾಮ್‌ಶಾಫ್ಟ್ (ಒಎಚ್‌ಸಿ) ಟೈಪ್ ವಾಲ್ವ್ ಸಿಸ್ಟಮ್, 7500 ಆರ್‌ಪಿಎಂನಲ್ಲಿ 73Kw ಔಟ್‌ಪುಟ್ ಮತ್ತು 6000 ಆರ್‌ಪಿಎಂನಲ್ಲಿ 103 ಎನ್‌ಎಂ ಟಾರ್ಕ್ ಒಳಗೊಂಡಿದೆ. 

Honda Bikes ದೇಶ ಕಾಯೋ ಯೋಧರಿಗಾಗಿ ಆರ್ಮಿ ಕ್ಯಾಂಟೀನ್‌ಗಳಲ್ಲಿ ಹೋಂಡಾ H’ness CB350 ಮತ್ತು CB350RS ಬೈಕ್ ಲಭ್ಯ!

ತಂತ್ರಜ್ಞಾನ ಮತ್ತು ಲಭ್ಯತೆ
2022 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಆರು-ಆ್ಯಕ್ಸಿಸ್ ಇನ್‌ಎರ್ಟಿಕಲ್ ಮೆಸರ್‌ಮೆಟಂಟ್ ಯುನಿಟ್ (ಐಎಂಯು), 2 ಚಾನೆಲ್ ಎಬಿಎಸ್, ಎಚ್‌ಎಸ್‌ಟಿಸಿ (ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್) ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯಗಳೊಂದಿಗೆ ತಂತ್ರಜ್ಞಾನ ಮತ್ತು ಹೊಸತನದಿಂದ ಕೂಡಿದೆ. ಎಂಟಿ ಮತ್ತು ಡಿಸಿಟಿ  ಎರಡೂ ಮಾದರಿಗಳು ನಾಲ್ಕು ಡಿಫಾಲ್ಟ್ ರೈಡಿಂಗ್ ಮೋಡ್ ಸೆಟ್ಟಿಂಗ್‌ಗಳನ್ನು ಒಳಗೊಂಡಿವೆ. ಟೂರ್, ಅರ್ಬನ್ ಮತ್ತು ಆಫ್-ರೋಡ್ – ಇವುಗಳು ಬಹುತೇಕ ಸವಾರಿ ಪರಿಸ್ಥಿತಿಗಳನ್ನು ನಿಭಾಯಿಸಲು ನೆರವಾಗಲಿವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಯೂಸರ್ 1 ಮತ್ತು 2 ಸೆಟ್ಟಿಂಗ್‌ಗಳನ್ನು ಒಳಗೊಂಡಿವೆ.

ಜನರಿಂದ ಪಡೆದಿರುವ ಅಮೂಲ್ಯವಾದ ಪ್ರತಿಕ್ರಿಯೆಗೆ ಆದ್ಯತೆ ನೀಡಿ, 2022  ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್’, ಸವಾರಿ ಮಾಡುವಾಗ ಉತ್ತಮ ದೃಷ್ಟಿಗೋಚರತೆಗಾಗಿ ಮರುಹೊಂದಿಸಲಾದ ಕನ್ಸೋಲ್ ಪರದೆಯೊಂದಿಗೆ ಬರುತ್ತದೆ. ಮನರಂಜನೆಗೆ ಸಂಬಂಧಿಸಿದಂತೆ, ಹೊಸ 2022 ಮಾದರಿಯು ಆ್ಯಪಲ್ ಕಾರ್‌ಪ್ಲೇ (ಐಒಎಸ್ ಬಳಕೆದಾರರಿಗೆ) ಮತ್ತು ಹೊಸದಾಗಿ ಸೇರಿಸಲಾದ ಆಂಡ್ರಾಯ್ಡ್ ಆಟೊ ಎರಡರಲ್ಲೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತದೆ.

ಹೋಂಡಾ 2022 CBR650R ಬೈಕ್ ಬಿಡುಗಡೆ, ಬುಕಿಂಗ್ ಆರಂಭ!

ವಿನ್ಯಾಸ ಮತ್ತು ವೈಶಿಷ್ಟ್ಯ
ಆನ್/ಆಫ್ ರೋಡ್ ಸಾಮರ್ಥ್ಯಗಳೊಂದಿಗೆ ಸಾಹಸ ಪಯಣ ಕೈಗೊಳ್ಳುವುದಕ್ಕೆ, 2022 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಅನ್ನು ಸ್ಥಿರತೆ ಮತ್ತು ನಿರ್ವಹಣೆಗಾಗಿ ಮಾಸ್ ಸೆಂಟ್ರಲೈಷೇಶನ್ ವಿನ್ಯಾಸದೊಂದಿಗೆ ರೂಪಿಸಲಾಗಿದೆ. ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಪ್ರೊ-ಲಿಂಕ್ ರಿಯರ್ ಸಸ್ಪೆನ್ಷನ್‌ಗಳು ಸವಾರರಿಗೆ ಹೆಚ್ಚಿನ  ಸೌಕರ್ಯಗಳನ್ನು ಗರಿಷ್ಠ ಪ್ರಮಾಣದ ಸ್ಥಿರತೆ ಒದಗಿಸುತ್ತದೆ. ಜೊತೆಗೆ ಇದನ್ನು ಆನ್ ರೋನ್ ಹಾಗೂ ಆಫ್ ರೋಡ್‌ನ ಅತ್ಯುತ್ತಮ ಸಂಯೋಜನೆ ಒದಗಿಸುತ್ತದೆ.

ಆರಾಮದಾಯಕವಾದ ಸವಾರಿಯನ್ನು ಖಚಿತಪಡಿಸಿಕೊಳ್ಳಲು ಹೊಂದಾಣಿಕೆ ಮಾಡಬಹುದಾದ ಆಸನ ಮತ್ತು ಬೈಕ್ ರ‍್ಯಾಲಿ ಶೈಲಿಯ ಪಾಸಿಟಿವ್ ಎಲ್‌ಸಿಡಿ ಬಣ್ಣದ ಡಿಸ್‌ಪ್ಲೇದಂತಹ ಸೌಲಭ್ಯಗಳನ್ನು ಸಹ ಈ ಮಾದರಿಯು ಒಳಗೊಂಡಿದೆ. ಸೆಮಿ ಡಬಲ್ ಕ್ರಾö್ಯಡಲ್ ಸ್ಟೀಲ್ ಫ್ರೇಮ್, ಬೈಕ್‌ನ ಸಾಮರ್ಥ್ಯ ಸುಧಾರಿಸಲು ಮತ್ತು ಎಂಜಿನ್‌ಗೆ ಅಗತ್ಯ ನೆರವು ನೀಡಲು ಅಳವಡಿಸಲಾಗಿದೆ, ಇದು ಪ್ರಯಾಣವನ್ನು ಹೆಚ್ಚು ಆನಂದದಾಯಕವಾಗಿ ಇರಲು ನೆರವಾಗಲಿದೆ.

ಆಫ್ರಿಕಾ ಟ್ವಿನ್ ಭಾರತದಲ್ಲಿ ಸಾಹಸ ಸವಾರಿಗೆ ಹೊಸ ವ್ಯಾಖ್ಯಾನ ನೀಡಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ, ‘2022 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್’, ಸವಾರರಿಗೆ ತಮ್ಮದೇ ಆದ ಹೊಸ ಹಾದಿಗಳನ್ನು ನಿರ್ಮಿಸಲು ಮತ್ತು ಅಜ್ಞಾತ ಪ್ರದೇಶವನ್ನು ಮತ್ತಷ್ಟು ಅನ್ವೇಷಿಸಲು ಪ್ರೇರಣೆ ನೀಡಲಿದೆ. ಹೊಸ ಮಾದರಿಯು ಈಗ ಬುಕಿಂಗ್‌ಗಾಗಿ ತೆರೆದಿರುವುದರಿಂದ, ಸಾಹಸದ ಸವಾರಿಯ ಹುಡುಕಾಟದಲ್ಲಿ ಇರುವವರಿಗೆ ಹೊಸ ಅನ್ವೇಷಣೆಗಳು, ಅನುಭವಗಳು ಮತ್ತು ಉತ್ಸಾಹದಿಂದ ತುಂಬಿದ ವರ್ಷವಾಗಲಿ ನಾವು ಬಯಸುತ್ತೇವೆ’ ಎಂದು  ಹೋಂಡಾ ಮೋಟರ್‌ಸೈಕಲ್ ವ್ಯವಸ್ಥಾಪಕ ನಿರ್ದೇಶಕ  ಅತ್ಸುಶಿ ಒಗಾಟಾ ಹೇಳಿದ್ದಾರೆ.
 

Follow Us:
Download App:
  • android
  • ios