Asianet Suvarna News Asianet Suvarna News

Honda Activa125 Premium: ಮತ್ತಷ್ಟು ಆಕರ್ಷಕ, ಹೋಂಡಾ ಆ್ಯಕ್ಟೀವಾ 125 ಪ್ರೀಮಿಯಂ ಸ್ಕೂಟರ್ ಬಿಡುಗಡೆ!

  • ಅತ್ಯಂತ ಆಕರ್ಷಕ ಹಾಗೂ 2 ಬಣ್ಣಗಳಲ್ಲಿ ಸ್ಕೂಟರ್ ಬಿಡುಗಡೆ
  • ಲಿಮಿಟೆಡ್ ಎಡಿಶನ್ ಹೋಂಡಾ ಆ್ಯಕ್ಟೀವಾ 125 ಪ್ರೀಮಿಯಂ ಸ್ಕೂಟರ್
  • ಎಕ್ಸ್ ಶೋ ರೂಂ 78,725 ರೂಪಾಯಿಗಳಿಂದ ಆರಂಭ,
Honda 2Wheelers India launches irresistibly stylish Activa125 Premium Edition scooter ckm
Author
Bengaluru, First Published Dec 7, 2021, 5:58 PM IST
  • Facebook
  • Twitter
  • Whatsapp

ನವದೆಹಲಿ(ಡಿ.07): ಭಾರತದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಹೋಂಡಾ ಆ್ಯಕ್ಟಿವಾ(Honda activa) ಇದೀಗ ಪ್ರೀಮಿಯಂ ಆವೃತ್ತಿ ಬಿಡುಗಡೆ ಮಾಡಿದೆ. ಭಾರತದ ದ್ವಿಚಕ್ರ ವಾಹನ ಉದ್ದಿಮೆಯಲ್ಲಿ ಮಾಲಿನ್ಯ ನಿಯಂತ್ರಣದ ಬಿಎಸ್ 6 ಮಾನದಂಡ(BS VI) ಅಳವಡಿಸಿಕೊಂಡ ಮೊದಲ ಸ್ಕೂಟರ್ ಆ್ಯಕ್ಟಿವಾ125 (Activa125).   ಇದೀಗ ಕಣ್ಮನ ಸೆಳೆಯುವ ಹೊಳೆಯುವ ನೋಟದ ಪ್ರೀಮಿಯಂ ಶೈಲಿಯ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿರುವ Activa125 ರ ಪ್ರೀಮಿಯಂ ಆವೃತ್ತಿಯನ್ನು ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಂದು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೊಂದು ನಿಜಕ್ಕೂ (#RunsOnRespect) ಸವಾರನಿಗೆ ಗೌರವ ತಂದುಕೊಡುವ ವಿಶಿಷ್ಟ ಸ್ಕೂಟರ್ ಆಗಿದೆ.

ಆ್ಯಕ್ಟಿವಾ ಬ್ರಾಂಡ್ ಪರಿಚಯಿಸಿದ ದಿನದಿಂದಲೂ ಅದೊಂದು ಬದಲಾವಣೆಯ ನಿಜವಾದ ದಾರಿದೀಪವಾಗಿದೆ.  ಆ್ಯಕ್ಟಿವಾ ಕುಟುಂಬಕ್ಕೆ ಪ್ರತಿ ಬಾರಿ ಹೊಸ ಸೇರ್ಪಡೆಯೊಂದಿಗೆ, ಉತ್ಪನ್ನದ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ವಿಷಯದಲ್ಲಿ ಹೋಂಡಾ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಹೊಸ Activa125  ರ ಪ್ರೀಮಿಯಂ ಆವೃತ್ತಿಯು ತನ್ನ ಪ್ರೀಮಿಯಂ ಆಕರ್ಷಣೆಯೊಂದಿಗೆ ಗ್ರಾಹಕರನ್ನು ಉತ್ತೇಜಿಸಲು ಸಿದ್ಧವಾಗಿದೆ ಎಂದು ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೆವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶ  ಅತ್ಸುಶಿ ಒಗಾಟಾ  ಹೇಳಿದ್ದಾರೆ. 

Bike launch: ಹೋಂಡಾ H’ness ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ, CB300R ಅನಾವರಣ!

ಕೋಟ್ಯಂತರ ಭಾರತೀಯರಿಗೆ ನಿಜವಾದ ಒಡನಾಡಿಯಾಗಿ, ಆ್ಯಕ್ಟಿವಾ ದೇಶದಾದ್ಯಂತ  ದ್ವಿಚಕ್ರ ವಾಹನ ಬಳಸುವ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತಿದೆ.Activa125  ಪ್ರೀಮಿಯಂ ಆವೃತ್ತಿ ಬಿಡುಗಡೆಯೊಂದಿಗೆ, ನಾವು ವಿಶಿಷ್ಟ ವಿನ್ಯಾಸ ಮತ್ತು ಬಣ್ಣ ಒಳಗೊಂಡ ಸೊಗಸಾದ ಮತ್ತು ಪ್ರೀಮಿಯಂ ಶೈಲಿಯನ್ನು ಪರಿಚಯಿಸುತ್ತಿದ್ದೇವೆ ಎಂದು  ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ. 

ಕೊರೋನಾ ಸಂಕಷ್ಟದಲ್ಲಿ ಗ್ರಾಹಕರಿಗೆ ವಾರಂಟಿ, ಉಚಿತ ಸರ್ವೀಸ್ ವಿಸ್ತರಿಸಿದ ಹೊಂಡಾ!

ಪ್ರೀಮಿಯಂ ವಿನ್ಯಾಸ
Activa125  ಪ್ರೀಮಿಯಂ ಆವೃತ್ತಿಯ ಡ್ಯುಯಲ್ ಟೋನ್ ಬಣ್ಣವು ಮುಂಭಾಗದ ಕವರ್‌ಗಳಿಂದ ಸೈಡ್ ಪ್ಯಾನೆಲ್‌ಗಳ ಉದ್ದಕ್ಕೂ ವಿಸ್ತರಿಸಿ ಅತ್ಯಾಕರ್ಷಕ ಶೈಲಿ ಮತ್ತು ಸೊಗಸಾದ ನೋಟವನ್ನು ಮತ್ತಷ್ಟು ವರ್ಧಿಸುತ್ತದೆ. ಅದರ ಹೊಸ ಅವತಾರವು ರಸ್ತೆಯಲ್ಲಿ ಸಾಗುವವರ ಗಮನ ಸೆಳೆಯುವ ರೀತಿಯಲ್ಲಿ ಇದೆ. ಪ್ರೀಮಿಯಂ ಆವೃತ್ತಿಯು ಕಪ್ಪು ಎಂಜಿನ್ ಜೊತೆಗೆ ಕಪ್ಪು ಮುಂಭಾಗದ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ. ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ LED ಹೆಡ್ ಲ್ಯಾಂಪ್ ಡ್ಯುಯಲ್ ಟೋನ್ ಬಣ್ಣಕ್ಕೆ ಹೊಸ ಮೆರುಗು ನೀಡಿದೆಯಲ್ಲದೆ ದಂತಕತೆಯಂತಾಗಿರುವ ಸ್ಕೂಟರ್‌ಗೆ ನಯವಾದ ಮತ್ತು ದಿಟ್ಟ ಬಗೆಯ ವರ್ಚಸ್ಸನ್ನೂ ನೀಡುತ್ತದೆ. Activa125  ಎಂಬಾಸಿಂಗ್ ಹೊಂದಿರುವ ಸ್ಟೆಲೀಶ್ ಟೈಲ್ ಲ್ಯಾಂಪ್‌, ಬಾಡಿ ಕಲರ್ ಗ್ರ್ಯಾಬ್ ರೈಲ್ ಮತ್ತು ಪ್ರೀಮಿಯಂ ಗ್ರಾಫಿಕ್ಸ್‌ನೊಂದಿಗೆ ಸ್ಕೂಟರ್‌ಗೆ ಇನ್ನಷ್ಟು ಆಕರ್ಷಕ ಶೈಲಿಯ ನೋಟ ಒದಗಿಸಿದೆ. ಆಕರ್ಷಕ ಟೇಲ್ ಲ್ಯಾಂಪ್ Activa125ಗೆ ಸೊಗಸಾದ ಹಿಂಭಾಗದ ನೋಟವನ್ನೂ ನೀಡುತ್ತದೆ.

ಬೆಲೆ ಮತ್ತು ಲಭ್ಯತೆ
 Activa125 ಪ್ರೀಮಿಯಂ ಆವೃತ್ತಿಯು 2 ಡ್ಯುಯಲ್ ಟೋನ್ ಬಣ್ಣಗಳಾದ ಮ್ಯಾಟ್ ಮ್ಯಾಗ್ನಿಫಿಸೆಂಟ್ ಕಾಪರ್ ಮೆಟಾಲಿಕ್‌ನೊಂದಿಗೆ ಪರ್ಲ್ ಅಮೇಜಿಂಗ್ ವೈಟ್ ಮತ್ತು ಮ್ಯಾಟ್ ಅರ್ಲ್ ಸಿಲ್ವರ್ ಮೆಟಾಲಿಕ್ ಜೊತೆಗೆ ಮ್ಯಾಟ್ ಸ್ಟೀಲ್ ಬ್ಲಾಕ್ ಮೆಟಾಲಿಕ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಡ್ರಮ್ ಅಲೊಯ್ ಮಾದರಿಯ ಉತ್ತೇಜಕರ ಬೆಲೆ(Price) ರೂ 78,725  ಮತ್ತು ಡಿಸ್ಕ್ ವೇರಿಯಂಟ್‌ನ ಬೆಲೆ ರೂ 82,280  (ಎಕ್ಸ್ಷೋರೂಂ ದೆಹಲಿ) ಇದೆ.  ಹೋಂಡಾ ಅ್ಯಕ್ಟೀವಾ ಸ್ಕೂಟರ್ ಭಾರತದಲ್ಲಿ ಗರಿಷ್ಠ ಮಾರಾಟ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ತಿಂಗಳು ಆ್ಯಕ್ಟೀವಾ ಬೇಡಿಕೆ ಹೆಚ್ಚಾಗುತ್ತಲೇ ಇದೆ.
 

Follow Us:
Download App:
  • android
  • ios