ಕೊರೋನಾ ಸಂಕಷ್ಟದಲ್ಲಿ ಗ್ರಾಹಕರಿಗೆ ವಾರಂಟಿ, ಉಚಿತ ಸರ್ವೀಸ್ ವಿಸ್ತರಿಸಿದ ಹೊಂಡಾ!

  • ಕೊರೋನಾ ಕಾರಣ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿ
  • ಸಂಕಷ್ಟದಲ್ಲಿರುವ ಗ್ರಾಹಕರಿಗೆ ನೆರವಾದ ಹೊಂಡಾ 2 ವೀಲ್ಹರ್ಸ್
  • ಉಚಿತ ಸರ್ವೀಸ್, ವಾರಂಟಿ ವಿಸ್ತರಿಸಿದ ಹೊಂಡಾ
Corona pandemic Honda 2Wheelers India extends Warranty Free Service to support customers ckm

ಗುರುಗ್ರಾಂ(ಮೇ .17): ಕೊರೋನಾ ವೈರಸ್ ದೇಶದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಿಯಂತ್ರಣಕ್ಕಾಗಿ ಕಠಿಣ ನಿರ್ಬಂಧಗಳು ಜಾರಿಯಲ್ಲಿದೆ. ಹೀಗಾಗಿ ಹಲವರು ಉದ್ಯೋಗ ಕಡಿತ, ವೇತನ ಕಡಿತ, ದಿನಗೂಲಿಯಿಂದ ವಂಚಿತರಾಗಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಹೊಂಡಾ 2 ವೀಲ್ಹರ್ಸ್ ಇಂಡಿಯಾ ತನ್ನ ಗ್ರಾಹಕರ ನೆರವಿಗೆ ನಿಂತಿದೆ.  ಹೋಂಡಾ ಮೋಟರ್‍ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಾಹನಗಳ ವಾರಂಟಿ ಮತ್ತು  ಉಚಿತ ಸರ್ವಿಸ್ ಪ್ರಯೋಜನಗಳನ್ನು 2021ರ ಜುಲೈ 31 ರವರೆಗೆ ವಿಸ್ತರಿಸುವುದಾಗಿ ಪ್ರಕಟಿಸಿದೆ. ಈ ಸೌಲಭ್ಯವು ದೇಶದಾದ್ಯಂತ ಇರುವ ತನ್ನ ಎಲ್ಲ ಡೀಲರ್‌ಶಿಪ್‌ಗಳಲ್ಲಿ ಲಭ್ಯ ಇರಲಿದೆ ಎಂದು ತಿಳಿಸಿದೆ.

ಕೊರೋನಾ ಹೋರಾಟಕ್ಕೆ ಕೈಜೋಡಿಸಿದ ಹೊಂಡಾ ಇಂಡಿಯಾ ; 6.5 ಕೋಟಿ ರೂ ಪ್ಯಾಕೇಜ್ ಘೋಷಣೆ!

2021ರ ಏಪ್ರಿಲ್ 1ರಿಂದ 2021ರ ಮೇ 31ರ ಅವಧಿಯಲ್ಲಿ ಕೊನೆಗೊಳ್ಳುತ್ತಿದ್ದ ವಾಹನದ ಉಚಿತ ಸರ್ವಿಸ್, ವಾರಂಟಿ ಮತ್ತು ವಿಸ್ತೃತ ವಾರಂಟಿ ವಿಸ್ತರಣೆಯು ಹೋಂಡಾ 2ವ್ಹೀಲರ್ ಇಂಡಿಯಾದ ಎಲ್ಲ ಗ್ರಾಹಕರಿಗೆ ಅನ್ವಯಿಸಲಿದೆ.

ಗ್ರಾಹಕ ಕೇಂದ್ರಿತ ಈ ಸೌಲಭ್ಯ ವಿಸ್ತರಣೆಯು, ಹಲವಾರು ರಾಜ್ಯಗಳಲ್ಲಿ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಎದುರಿಸುತ್ತಿರುವ ಹೋಂಡಾ ಗ್ರಾಹಕರಿಗೆ ಉಚಿತ ಸರ್ವಿಸ್ ಮತ್ತಿತರ ಪ್ರಯೋಜನಗಳನ್ನು ವಿಸ್ತರಿಸುವ ಭರವಸೆ ನೀಡುತ್ತದೆ.  ಲಾಕ್‍ಡೌನ್ ನಿರ್ಬಂಧಗಳು ಕ್ರಮೇಣ ತೆರವುಗೊಳ್ಳುತ್ತಿದ್ದಂತೆ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ 2021ರ ಜುಲೈ 31ರ ಮೊದಲು  ಈ ವಿಸ್ತರಿತ ಸೇವೆಗಳನ್ನು ಪಡೆಯಬಹುದಾಗಿದೆ.

‘ಕೋವಿಡ್ -19’ ವಿರುದ್ಧದ ಸಮರಕ್ಕೆ ನೆರವಾಗುವ ಮತ್ತು ಪರಿಹಾರ ಕ್ರಮ ಪ್ರಕಟಿಸಿರುವ ಹೋಂಡಾ ಇಂಡಿಯಾ ಫೌಂಡೇಷನ್, ಭಾರತದಲ್ಲಿನ  ಹೋಂಡಾ ಸಮೂಹಕ್ಕೆ ಸೇರಿದ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ನಿಭಾಯಿಸುವ ಘಟಕವಾಗಿರುವ ಹೋಂಡಾ ಇಂಡಿಯಾ ಫೌಂಡೇಷನ್ (ಎಚ್‍ಐಎಫ್), ಕರ್ನಾಟಕ, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ‘ಕೋವಿಡ್-19’ ವಿರುದ್ಧದ ಪರಿಹಾರ ಕಾರ್ಯಕ್ರಮಗಳಿಗೆ ನೆರವಾಗಲು  ರೂ 6.50 ಕೋಟಿ ಮೊತ್ತವನ್ನು ನಿಗದಿಪಡಿಸಿದೆ.

ತಿಂಗಳ ಮಾರಾಟ ವರದಿ ಪ್ರಕಟ; 2.8 ಲಕ್ಷ ವಾಹನ ಮಾರಾಟ ಮಾಡಿದ ಹೊಂಡಾ! 

ಈ ಪರಿಹಾರ ಕಾರ್ಯಕ್ರಮದಡಿ ಹರಿಯಾಣದ ಮಾನೇಸರ್‌ನಲ್ಲಿ   100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಕಲ್ಪಿಸಲಾಗಿದೆ.  ರಾಜಸ್ಥಾನದ ತಪುಕರದಲ್ಲಿ   50 ರಿಂದ 100 ಹಾಸಿಗೆ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ.  ಕರ್ನಾಟಕದ ಕೋಲಾರ, ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಮತ್ತು ಹರಿಯಾಣದ ಮಾನೇಸರ್ ಜಿಲ್ಲೆಗಳಲ್ಲಿ    ಆಮ್ಲಜನಕ ಉತ್ಪಾದನಾ ಘಟಕ  ಸ್ಥಾಪಿಸುತ್ತಿದೆ. ಈ ಕಾರ್ಯಕ್ರಮಗಳಿಗೆ ಸಮಾನಾಂತರವಾಗಿ ‘ಎಚ್‍ಐಎಫ್’, ಕೋವಿಡ್ ಸಮರದ ಮುಂಚೂಣಿ ಯೋಧರಿಗೆ ವೈಯಕ್ತಿಕ ರಕ್ಷಣಾ ಕಿಟ್‍ಗಳು (ಪಿಪಿಇ, ಮುಖಗವಸು, ಸ್ಯಾನಿಟೈಸರ್) ಮತ್ತು ಆಹಾರ ಪ್ಯಾಕೆಟ್‍ಗಳನ್ನು ಒದಗಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕ, ವೈದ್ಯಕೀಯ ಪರಿಕರಗಳಾದ ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್ ಮುಂತಾದವುಗಳನ್ನು ಒದಗಿಸುತ್ತಿದೆ.

Latest Videos
Follow Us:
Download App:
  • android
  • ios