Asianet Suvarna News Asianet Suvarna News

ಆಕರ್ಷಕ ಬೆಲೆಯಲ್ಲಿ ಭಾರತದಲ್ಲಿ ಹೀರೋ XOOM ಸ್ಕೂಟರ್ ಬಿಡುಗಡೆ!

ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಆರಾಮದಾಯಕ ಪ್ರಯಾಣ,  ಹೀರೋ ಇಂಟೆಲಿಜೆಂಟ್ ಕಾರ್ನರಿಂಗ್ ಟೆಕ್ನಾಲಜಿಯೊಂದಿಗೆ ಹೀರೋ XOOM ಸ್ಕೂಟರ್ ಬಿಡುಗಡೆಯಾಗಿದೆ. ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Hero Motorcorp launched high tech 110cc scooter Xoom in India with affordable price ckm
Author
First Published Jan 31, 2023, 7:10 PM IST

ಬೆಂಗಳೂರು(ಜ.31): ಭಾರತದಲ್ಲಿ ಹೀರೋ ಇದೀಗ XOOM ಸ್ಕೂಟರ್ ಬಿಡುಗಡೆಯಾಗಿದೆ.  ಇದು ಆಟೋಮೊಬೈಲ್ ಕ್ಷೇತ್ರದಲ್ಲೇ ಮೊಟ್ಟ ಮೊದಲನೆಯದಾದ ಕಾರ್ನರ್ ಬೆಂಡ್ ಲೈಟ್ ಸ್ಕೂಟರ್ ಆಗಿದೆ. 110cc ಸ್ಕೂಟರ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.  ಮೂರು ವೇರಿಯೆಂಟ್‌ನಲ್ಲಿ ಸ್ಕೂಟರ್ ಲಭ್ಯವಿದೆ. ಶೀಟ್ ಡ್ರಮ್, ಕ್ಯಾಸ್ಸ್ಟ್ ಡ್ರಮ್ ಮತ್ತು ಕ್ಯಾಸ್ಟ್ ಡಿಸ್ಕ್ ಮಾದರಿಯಲ್ಲಿ ಲಭ್ಯವಿದೆ. ನೂತನ ಸ್ಕೂಟರ್ ಬೆಲೆ 68,599 ರೂಪಾಯಿ(LX –ಶೀಟ್ ಡ್ರಮ್ ),  71,799 ರೂಪಾಯಿ (VX – ಕ್ಯಾಸ್ಟ್ ಡ್ರಮ್) ಮತ್ತು 76,699 ರೂಪಾಯಿ (ZX – ಕ್ಯಾಸ್ಟ್ ಡ್ರಮ್) ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ.  

ತಮ್ಮ ದಿನನಿತ್ಯದ ಸವಾರಿಯಲ್ಲಿ ಸಾಹಸ ಮತ್ತು ಕೌತುಕತೆಯನ್ನು ಬಯಸುವ ಸಂಭಾವ್ಯ ಗ್ರಾಹಕರ ಪೀಳಿಗೆಯ ಬಯಕೆಗಳನ್ನು ತಣಿಸುವುದಕ್ಕಾಗಿ ಅತ್ಯಂತ ನಿಖರವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಲಾಗಿರುವ್ Xoom ಸ್ಕೂಟರ್ಮ್ ತತ್ಕಾಲೀನ ವಿನ್ಯಾಸ, ಅತ್ಯುತ್ಕೃಷ್ಟ ಚಾಲನಾಸಾಮರ್ಥ್ಯ, ಸರಿಸಾಟಿಯಿಲ್ಲದ ಚುರುಕುತನ ಮತ್ತು ಅದ್ವಿತೀಯ ಕಾರ್ಯಕ್ಷಮತೆ ಒದಗಿಸುತ್ತದೆ. 

 

Hero Bike ಹೊಸ ಅವತಾರದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಬೈಕ್ ಬಿಡುಗಡೆ!

ಹೀರೋ Xoom, 110cc ವರ್ಗದಲ್ಲಿ ಹೊಸ ಅಂಶಗಳನ್ನು ಪ್ರದರ್ಶಿಸುತ್ತಿದೆ. ಉದ್ಯಮದಲ್ಲೇ-ಮೊಟ್ಟಮೊದಲನೆಯದಾದ ಹೀರೋ ಇಂಟೆಲಿಜೆಂಟ್ ಕಾರ್ನರಿಂಗ್ ಲೈಟ್ (HiCL), ಮತ್ತು ವರ್ಗದಲ್ಲೇ ಪ್ರಪ್ರಥಮವಾದ ಅಂಶವಾದ ದೊಡ್ಡದಾದ ಮತ್ತು ವಿಶಾಲ ಟೈರ್‌ಗಳು ಮತ್ತು ಝಿಪ್ಪಿ ಆಕ್ಸಿಲರೇಶನ್‌ನೊಂದಿಗೆ ಅದು ತನ್ನ ಮಾಲೀಕರಿಗೆ ಸರಿಸಾಟಿಯಿಲ್ಲದ ಸಂಚಾರ ಅನುಭವದ ಖಾತರಿ ಒದಗಿಸುತ್ತದೆ. 

Hero Xoomನೊಂದಿಗೆ, ಹೀರೋ ಇಂಟೆಲಿಜೆಂಟ್ ಕಾರ್ನರಿಂಗ್ ಲೈಟ್TM (HiCL) ಪ್ರಪ್ರಥಮ ಬಾರಿಗೆ 110cc ವರ್ಗದಲ್ಲಿ ಪರಿಚಯಿಸಲ್ಪಡುತ್ತಿದ್ದು, ಗ್ರಾಹಕರಿಗೆ ವರ್ಧಿತ ರಕ್ಷಣೆ ಒದಗಿಸುತ್ತದೆ. HiCL, ಕತ್ತಲಾದ ಮೂಲೆ ಪ್ರದೇಶಗಳಿಗೆ ಬೆಳಕು ಒದಗಿಸಿ ಚಾಲಕರು ತಿರುವುಗಳಲ್ಲಿ ತಿರುಗಿಕೊಳ್ಳುವಾಗ ಅಥವಾ ಹೋಗುವಾಗ ಪ್ರಖರವಾದ ಸ್ಪಷ್ಟ ಬೆಳಕು ಒದಗಿಸುತ್ತದೆ. ರಸ್ತೆಗಳ ಮೂಲೆಗಳ ಮೇಲೆ ಬೀಳುವ ಬೆಳಕಿನಿಂದ ಚಾಲಕರಿಗೆ ಪ್ರಯೋಜನವೇರ್ಪಟ್ಟು ರಾತ್ರಿಯ ವೇಳೆ ಸುರಕ್ಷಿತವಾದ ಚಾಲನೆಯನ್ನು ಖಾತರಿಪಡಿಸುತ್ತದೆ. 

ಶಕ್ತಿಶಾಲಿಯಾದ BS-VI ಅನುಸರಣೆಯ ಇಂಜಿನ್‌ನೊಂದಿಗೆ ಬರುವ Xoom, ಹೀರೋ ಮೋಟೋಕಾರ್ಪ್‌ನ ಕ್ರಾಂತಿಕಾರಿ i3S ತಂತ್ರಜ್ಞಾನ (Idle Stop-Start System) ಹೊಂದಿದೆ. ಬ್ಲೂಟೂತ್ ಸಂಪರ್ಕತೆ ಇರುವ ಹೊಸ ಡಿಜಿಟಲ್ ಸ್ಪೀಡೋ ಮೀಟರ್ ಮತ್ತು ಸೈಡ್-ಸ್ಟ್ಯಾಂಡ್ ಇಂಜಿನ್ ಕಟ್-ಆಫ್  ಸ್ಕೂಟರ್‌ನ ತಾಂತ್ರಿಕ ಅಂಶಗಳ ವರ್ಧನೆಯಾಗಿದೆ. 

ಕಳೆದ ಹಲವು ವರ್ಷಗಳಿಂದ ಹೀರೋ ಮೋಟೋಕಾರ್ಪ್, ದೇಶವನ್ನು ಹಿಡಿದಿಟ್ಟಿರುವ ಐತಿಹಾಸಿಕ ಬ್ರ್ಯಾಂಡ್‌ಗಳನ್ನು ಪರಿಚಯಿಸಿದ್ದು, ಇನ್ನೂ ಕೂಡ ಪ್ರಬಲವಾದ ಗ್ರಾಹಕ ಸಂಪರ್ಕದ ಆನಂದ ಹೊಂದಿದೆ. ಹೀರೋ Xoomನ ಸರಿಸಾಟಿಯಿಲ್ಲದ ಸ್ಟೈಲ್ ಮತ್ತು ಕಾರ್ಯಕ್ಷಮತೆಯೊಮ್ದಿಗೆ ನಾವು ಸ್ಕೂಟರ್ ವರ್ಗವನ್ನು ಮರುವಿವರಿಸುವ ನಮ್ಮ ಪಯಣದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ್ದೇವೆ. ಹೊಸ ಹೀರೋXOOM, ಯುವ ಭಾರತದ ಅಗತ್ಯಗಳನ್ನು ಆಳವಾಗಿ ಅರ್ಥಮಾಡಿಕೊಂಡ ಮತ್ತು ನಮ್ಮ ಸ್ಕೂಟರ್ ಪೋರ್ಟ್‌ಫೋಲಿಯೋವನ್ನು ಬಲಪಡಿಸಲು ನೆರವಾಗುವಂತಹ ಭವಿಷ್ಯಮುಖಿ ತಂತ್ರಜ್ಞಾನಗಳನ್ನು ಪರಿಚಯಿಸಬೇಕೆನ್ನುವ ನಮ್ಮ ಬದ್ಧತೆಯ ಫಲಿತಾಂಶವಾಗಿದೆ. ಕೌತುಕಮಯವಾದ ಸವಾರಿಯನ್ನು ಬಯಸುತ್ತಿರುವ ಮತ್ತು ಆವಿಷ್ಕಾರದ ಮುಂಚೂಣಿಯಲ್ಲಿರುವವರು ಖಂಡಿತವಾಗಿಯೂ ಹೀರೋ Xoom ದ ಕ್ರಿಯಾತ್ಮಕ ಗುಣಕ್ಕೆ ಮರುಳಾಗುತ್ತಾರೆ ಎಂದು ಹೀರೋ ಮೋಟೋಕಾರ್ಪ್‌ನ ಚೀಫ್ ಗ್ರೋತ್ ಆಫಿಸರ್ ರಂಜಿವ್‌ಜೀತ್ ಸಿಂಗ್ ಹೇಳಿದ್ದಾರೆ.

ಆತ್ಯಾಕರ್ಷಕ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎಡಿಶನ್ ಸ್ಕೂಟರ್ ಬಿಡುಗಡೆ!

ಅತ್ಯಾಧುನಿಕ ಲೈಟಿಂಗ್ ಪ್ಯಾಕೇಜ್‌ನೊಂದಿಗೆ ಭವಿಷ್ಯಮುಖಿ ವಿನ್ಯಾಸ
ಹೊಚ್ಚ ಹೊಸ ಹೀರೋ Xoom, ವಾಸ್ತವವಾದ ಹೊಸ ಭವಿಷ್ಯಮುಖಿ ವಿನ್ಯಾಸ ಭಾಷೆಯನ್ನು ಪರಿಚಯಿಸುತ್ತದೆ. ಸಂಚಾರದಟ್ಟಣೆಯಲ್ಲಿ ಕ್ಷಿಪ್ರ ಹಾಗೂ ಚುರುಕಾಗಿರುವುದರ ಜೊತೆಗೆ, ಕಠಿಣವಾದ ಟೆರೇನ್‌ಗಳಲ್ಲೂ ಅತ್ಯಂತ ಸದೃಢವಾಗಿದ್ದು ಸವಾರಿ ಅನುಭವದ ಹೊಸ ಜಗತ್ತನ್ನೇ ತೆರೆದಿಡುತ್ತದೆ. ವಿಪರೀತ ಸ್ಪೋರ್ಟಿಯಾಗಿರುವ ಆದರೆ ದೃಢ ಮತ್ತು ಆರಾಮದಾಯಕವಾಗಿರುವ ಇದು ದಿನನಿತ್ಯದ ಸವಾರಿಯ ಸಾಹಸಗಳಿಗೆ ಅತ್ಯುತ್ತಮ ಸಂಗಾತಿಯಾಗಿದೆ. 

LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, LED ಟೇಲ್ ಲ್ಯಾಂಪ್‌ಗಳು ಮತ್ತು ಉದ್ಯಮದಲ್ಲೇ ಮೊಟ್ಟಮೊದಲನೆಯದಾದ “HiCL-Hero intelligent cornering light” ಒಳಗೊಂಡಂತೆ, ಅನೇಕ ಕೌತುಕಮಯವಾದ ಲೈಟಿಂಗ್ ಪ್ಯಾಕೇಜ್, ಸ್ಕೂಟರ್‌ಗೆ ಅದ್ವಿತೀಯವಾದ ಅಸ್ತಿತ್ವ ಒದಗಿಸುತ್ತದೆ. ಸಿಗ್ನೇಚರ್ H ಸ್ಥಾನದ ಹೆಡ್ ಮತ್ತು ಟೈಲ್ ಲ್ಯಾಂಪ್‌ಗಳು, ವಿಶಿಷ್ಟವಾದ ವಿಶೇಷತೆ ಖಾತರಿಪಡಿಸಿ, ಒಂದೇರೀತಿಯಾದ ಬೆಳಕು ಮತ್ತು ವರ್ಧಿತ ಸವಾರ ಸುರಕ್ಷತೆ ಒದಗಿಸುತ್ತದೆ. ದೊಡ್ಡದಾದ ಮತ್ತು ವಿಶಾಲವಾದ ಟೈರ್‌ಗಳು, ಡೈಮಂಡ್ ಕಟ್ ಅಲಾಯ್ ವೀಲ್ಸ್, ಇಂಟಿಗ್ರೇಟೆಡ್ ರೇರ್ ಗ್ರಿಪ್  ಸ್ಕೂಟರ್‌ನ ವೈಶಿಷ್ಟ್ಯತೆಯನ್ನು ಇನ್ನಷ್ಟು ಹೆಚ್ಚಿಸುವ ಅಂಶಗಳಾಗಿವೆ. 

ತಂತ್ರಜ್ಞಾನ
ಹೀರೋ ಮೋಟೋಕಾರ್ಪ್‌ನ ಆವಿಷ್ಕಾರದ ಸಂಸ್ಕೃತಿಯ ಪ್ರತೀಕವಾಗಿರುವ ಹೊಚ್ಚ ಹೊಸ ಹೀರೋ Xoom,25+ಗಿಂತ ಹೆಚ್ಚಿನ ಪೇಟೆಂಟ್ ಅಪ್ಲಿಕೇಶನ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಸ್ಕೂಟರ್, ವರ್ಗಕ್ಕೆ ಅನೇಕ ಕೌತುಕಮಯವಾದ ತಂತ್ರಜ್ಞಾನಗಳನ್ನು ತರುತ್ತಿದೆ. ಉದ್ಯ,ಮದಲ್ಲೇ ಮೊಟ್ಟಮೊದಲನೆಯದಾದ “HiCL-Hero intelligent cornering light” , ತಿರುವುಗಳಲ್ಲಿ ಬ್ಲೈಂಡ್ ಸ್ಪಾಟ್‌ಗಳಿಗೆ ಬೆಳಕು ಒದಗಿಸುವ ಮೂಲಕ ಸುರಕ್ಷತೆಯ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಹೀರೋ Xoom, ‘XSens ತಂತ್ರಜ್ಞಾನ’ದೊಂದಿಗೆ ಪ್ರೊಗ್ರಾಮ್ ಮಾಡಲ್ಪಟ್ಟಿದ್ದು, ಕಾರ್ಯಕ್ಷಮತೆ, ಬಾಳಿಕೆ, ಸುರಕ್ಷತೆ, ವಿಶ್ವಸನೀಯತೆ ಹಾಗೂ ಇಂಧನ ಉಳಿತಾಯದಲ್ಲಿ ಸುಧಾರಣೆಗೊಂಡಿದೆ. ಇದರ ಜೊತೆಗೆ, ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಬ್ಲೂಟೂತ್ ಸಂಪರ್ಕತೆಯೊಂದಿಗೆ ಕರೆ (Caller ID) ಮತ್ತು  ಎಸ್‌ಎಮ್‌ಎಸ್ ಅಪ್‌ಡೇಟ್‌ಗಳು,   ಲೋ ಫ್ಯುಯೆಲ್ನ್ ಇಂಡಿಕೇಟರ್ (RTMI), ಫೋನ್ ಬ್ಯಾಟರಿ ಮುಂತಾದ ಮುಖ್ಯ ಅಲರ್ಟ್‌ಗಳನ್ನು ನೀಡುತ್ತದೆ. ಮುಂಬದಿಯ ಗ್ಲೊವ್ ಬಾಕ್ಸ್‌ಬಲ್ಲಿರುವ ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್-ಅಫ್, ಬೂಟ್ ಲೈಟ್ ಮತ್ತು ಮೊಬೈಲ್ ಚಾರ್ಜರ್, ಸುರಕ್ಷತೆ ಮತ್ತು ಅನುಕೂಲತೆಗೆ ಮಾಡಲಾದ ಸೇರ್ಪಡೆಯಾಗಿವೆ. 

 

ಹೀರೋ ಹೀರೋ Xpulse ಬೈಕ್ Review:ಆಫ್ ರೋಡ್, ಅಡ್ವೆಂಚರ್, ನಿತ್ಯ ಬಳಕೆಗೂ ಸೈ!

ಶಕ್ತಿಶಾಲಿ ಕಾರ್ಯಕ್ಷಮತೆ
110cc BS-VI ಅನುಸರಣೆಯ ಇಂಜಿನ್ ಅಳವಡಿಕೆಯಾಗಿರುವ ಹೀರೋ Xoom, ಅಧಿಕ ಕಾರ್ಯಕ್ಷಮತೆಯುಳ್ಳ ಚಾಲನೆಗಾಗಿ,   8.05 BHP @ 7250 RPMದಲ್ಲಿ ಗರಿಷ್ಟ ಪವರ್ ಔಟ್‌ಪುಟ್ ಮತ್ತು 8.7 Nm @ 5750 RPMನ ಟಾರ್ಕ್ ಒದಗಿಸುತ್ತದೆ. ಕಾರ್ಯಕ್ಷಮತೆ ಮತ್ತು ಆರಾಮದ ಬ್ರ್ಯಾಂಡ್ ಭರವಸೆಯನ್ನು ನೀಡುವ ಹೊಸ  ಹೀರೋ Xoom, ವರ್ಧಿತ ಆರಾಮ ಮತ್ತು ಹೆಚ್ಚಿನ ಇಂಧನ ಸಾಮರ್ಥ್ಯಕ್ಕಾಗಿ  i3S ಪೇಟೆಂಟ್ ಮಾಡಲಾದ ತಂತ್ರಜ್ಞಾನ ಹೊಂದಿದೆ. ಎಲ್ಲಾ ವೇಳೆಗಳಲ್ಲೂ ಈ ಸ್ಕೂಟರ್, ತಕ್ಷಣದ ಆಕ್ಸಿಲರೇಶನ್ ಮತ್ತು ಪವರ್-ಆನ್ ಡಿಮ್ಯಾಂಡ್ ಒದಗಿಸುತ್ತದೆ. 

ಹೀರೋ Xoom, ಐದು ಸ್ಪೋರ್ಟಿ, ಪ್ರಖರವಾದ ಮತ್ತು ಮನಸೆಳೆಯುವ ವರ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಶೀಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ವರ್ಣದಲ್ಲಿ ಲಭ್ಯವಿದ್ದರೆ, ಕ್ಯಾಸ್ಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್ ಅಂಡ್ ಪರ್ಲ್ ಸಿಲ್ವರ್ ವೈಟ್ನಲ್ಲಿ ಮತ್ತು ಕ್ಯಾಸ್ಟ್ ಡಿಸ್ಕ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್, ಸ್ಪೋರ್ಟ್ಸ್ ರೆಡ್, ಮತ್ತು ಮ್ಯಾಟ್ ಅಬ್ರಾಕ್ಸ್ ಕಿತ್ತಳೆ ವರ್ಣ ಸ್ಕೀಮ್‌ಗಳಲ್ಲಿ ಲಭ್ಯವಿದೆ.

Follow Us:
Download App:
  • android
  • ios