ಆತ್ಯಾಕರ್ಷಕ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎಡಿಶನ್ ಸ್ಕೂಟರ್ ಬಿಡುಗಡೆ!

  • ಹಬ್ಬದ ಪ್ರಯುಕ್ತ ಹೀರೋ ಮೋಟಾರ್ ಕಾರ್ಪ್ ಹೊಸ ಸ್ಕೂಟರ್ ಬಿಡುಗಡೆ
  • ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎಡಿಶನ್ ಸ್ಕೂಟರ್ ಮಾರುಕಟ್ಟೆ ಪ್ರವೇಶ
  • ಹಲವು ವಿಶೇಷತೆ, ಅತ್ಯಾಕರ್ಷ ಲುಕ್ ಸೇರಿದಂತೆ, ಕೈಗೆಟುಕುವ ದರ
Hero Motorcorp launches maestro edge 125 stealth edition scooter in india ckm

ಬೆಂಗಳೂರು(ಅ.09) ಯುವಜನತೆಗೆ ಆಕರ್ಷಕ ಉತ್ಪನ್ನಗಳನ್ನು ತರುವ ಮತ್ತು ಮುಂಬರುವ ಹಬ್ಬದ ಸಮಯದಲ್ಲಿ ರೋಮಾಂಚನವನ್ನು ಸೃಷ್ಟಿಸುವ ಉದ್ದೇಶದಿಂದ, ವಿಶ್ವದ ಅತಿದೊಡ್ಡ ಸ್ಕೂಟರ್ ಮತ್ತು ಮೋಟಾರ್ ಸೈಕಲ್‍ಗಳ ಉತ್ಪಾದಕರಾದ ಹೀರೊ ಮೋಟೊಕಾರ್ಪ್, ಇಂದು ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಸ್ಕೂಟರ್ ಅನ್ನು ಪರಿಚಯಿಸುತ್ತಿದೆ.

ಹೀರೋ ಹೀರೋ Xpulse ಬೈಕ್ Review:ಆಫ್ ರೋಡ್, ಅಡ್ವೆಂಚರ್, ನಿತ್ಯ ಬಳಕೆಗೂ ಸೈ!...

ಉತ್ಕೃಷ್ಟ ಸ್ಕೂಟರ್ ಪಟ್ಟಿಗೆ ಹೊಚ್ಚಹೊಸ ಸೇರ್ಪಡೆಯಾದ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ದೇಶದ ಹೀರೊ ಮೊಟೊಕಾರ್ಪ್ ಡೀಲರ್‌ಗಳಲ್ಲಿ ರೂ. 72,950/-* ಗಳ ಆಕರ್ಷಕ ದರಕ್ಕೆ ಲಭ್ಯವಿದೆ(ಎಕ್ಸ್ ಶೋ ರೂಂ).

ಹೊಸ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ವೇಗದ ಮತ್ತು ಅಗ್ರೆಸ್ಸಿವ್ ಸ್ಟೈಲ್ ಹೊಂದಿದೆ. ಇದರ ಆಧುನಿಕ ಸುಂದರ ವಿನ್ಯಾಸವು ಇದನ್ನು ಹೆಚ್ಚು ಆಕರ್ಷವಾಗಿದೆ.. ಇದರ ಪ್ಯಾರಾಮೆಟ್ರಿಕ್ಸ್ ಮಾದರಿಗಳು, ಉನ್ನತ ವಸ್ತುಗಳ ಫಿನಿಶ್, ಚೂಪಾದ ನೋಟ ಮತ್ತು ಪ್ರತ್ಯೇಕವಾದ ಮ್ಯಾಟ್ ಗ್ರೇ ವರ್ಣಸಂಕುಲವು ಇದರ ಅಂದವನ್ನು ಹೆಚ್ಚಿಸುತ್ತದೆ. ಜೊತೆಗೆ ಉತ್ಕೃಷ್ಟವಾದ ಮತ್ತು ವೈಯಕ್ತಿಕ ಸವಾರಿಯ ಅನುಭವ ನೀಡುತ್ತದೆ.

BS6 ಹೀರೋ ಮ್ಯಾಸ್ಟ್ರೋ ಎಡ್ಜ್ 110 ಸ್ಕೂಟರ್ ಬಿಡುಗಡೆ.

ಹಬ್ಬದ ಸಂಭ್ರಮವನ್ನು ಹೊಸ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್‍ನೊಂದಿಗೆ ಆರಂಭಿಸಲು ನಮಗೆ ಹರ್ಷವಾಗಿದೆ, ಇದು ಈ ವರ್ಗದಲ್ಲಿ ಬಹು ಅನನ್ಯವಾದ ಉತ್ಪನ್ನವಾಗಿದೆ. ನಮ್ಮ ಮೇಸ್ಟ್ರೋ ಎಡ್ಜ್ ಸ್ಕೂಟರ್ ಬ್ರ್ಯಾಂಡ್ ಗ್ರಾಹಕರಲ್ಲಿ ಬಹಳ ಜನಪ್ರಿಯವಾಗಿದೆ, ಮತ್ತು ಈ ಹೊಸ ಸೇರ್ಪಡೆಯು ನಮ್ಮ ಬ್ರ್ಯಾಂಡ್ ನ ಆಕರ್ಷಣೆಯನ್ನು ವರ್ಧಿಸಲಿದೆ. ಮುಂಬರುವ ವಾರಗಳಲ್ಲಿ ನಾವು ಅನೇಕ ಹೊಸ ಉತ್ಪನ್ನಗಳ ಪರಿಚಯವನ್ನು ಸಜ್ಜಗೊಳಿಸಿದ್ದೇವೆ, ಇವು ತಮ್ಮ ಯುವ, ಉತ್ಕೃಷ್ಟ ಮತ್ತು ತಂತ್ರಜ್ಞಾನಾಧಾರಿತ ವ್ಯಕ್ತಿತ್ವದಿಂದ ಈ ಮಾರುಕಟ್ಟೆಯನ್ನು ಬಲಪಡಿಸಲಿದೆ ಎಂದು ಹೀರೋ ಮಾರಾಟ ಮತ್ತು ಸೇವೆ ಮುಖ್ಯಸ್ಥ ನವೀನ್ ಚೌಹಾನ್ ಹೇಳಿದರು "

ಕಡಿಮೆ ಬೆಲೆಗೆ ಬಂತು ಹೀರೋ ಪ್ಲೆಶರ್ ಪ್ಲಸ್ 110 ಸ್ಕೂಟರ್!...

ಸ್ಟೆಲ್ತ್ ಥೀಂ ವಿನ್ಯಾಸ
ಉತ್ಕೃಷ್ಟವಾದ ಸ್ಟೆಲ್ತ್ ಕ್ರೆಸ್ಟ್ ಬ್ಯಾಡ್ಜಿಂಗ್, ಕಾರ್ಬನ್ ಫೈಬರ್ ಟೆಕ್ಸ್ಚರ್ಡ್ ಸ್ಟ್ರಿಪ್ಸ್, ಬಿಳಿಯ ಆಕ್ಸೆಂಟ್‍ಗಳು, ಮತ್ತು ವರ್ಣದ ಮೇಲೆ ವರ್ಣದ ಸ್ಟ್ರೈಪ್‍ಗಳು ಈ ಹೊಸ ಸ್ಕೂಟರ್‍ಗೆ ಸಮಕಾಲೀನ ಮತ್ತು ಯುವ ನೋಟವನ್ನು ನೀಡುತ್ತದೆ.

ವಿಶೇಷವಾದ ವರ್ಣಗಳ ವ್ಯವಸ್ಥೆ
ಮೇಸ್ತ್ರೊ ಎಡ್ಜ್ 125 ಸ್ಟೆಲ್ ಪ್ರತ್ಯೇಕವಾದ ಮ್ಯಾಟ್ ಗ್ರೇ ಥೀಂನಲ್ಲಿ ಲಭ್ಯವಿದೆ.

ಇಂಜಿನ್
ಮೇಸ್ತ್ರೊ ಎಡ್ಜ್ 125 ಸ್ಟೆಲ್ತ್ ಎಕ್ಸ್ ಸೆನ್ಸ್ ತಂತ್ರಜ್ಞಾನ ಹೊಂದಿರುವ 125 ಸಿ.ಸಿ, BS6,ಫ್ಯುಯಲ್ ಇಂಜೆಕ್ಷನ್ ಎಂದಿನ್ ಹೊಂದಿದೆ - ಇದು 9 BHP ಪವರ್ ಹಾಗೂ 10.4 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

Latest Videos
Follow Us:
Download App:
  • android
  • ios