ಹೀರೋ ಹೀರೋ Xpulse ಬೈಕ್ Review:ಆಫ್ ರೋಡ್, ಅಡ್ವೆಂಚರ್, ನಿತ್ಯ ಬಳಕೆಗೂ ಸೈ!
ಹೀರೋ Xpulse 200Fi ಆಫ್ ರೋಡ್ ಬೈಕ್ ಬಿಡುಗಡೆಯಾದಾಗಲೇ ಎಲ್ಲರ ಗಮನಸೆಳೆದಿತ್ತು. ಕಾರಣ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದ ಈ ಬೈಕ್ ಹೆಚ್ಚು ಆಕರ್ಷಕ ಹಾಗೂ ಕೈಗೆಟುಕುವ ದರ ಹೊಂದಿದೆ.. ಸುವರ್ಣನ್ಯೂಸ್.ಕಾಂ ಓದುಗರಿಗೆ ಹೀರೋ ಮೋಟಾರ್ಸ್ Xpulse 200Fi ಬೈಕ್ ಪರ್ಫಾಮೆನ್ಸ್, ಆನ್ ರೋಡ್ ಹಾಗೂ ಆಫ್ ರೋಡ್‌ಗಳಲ್ಲಿನ ಕಂಫರ್ಟ್ ಸೇರಿದಂತೆ ಬೈಕ್‌ನ ಸಂಪೂರ್ಣ ರೈಡ್ ಮಾಹಿತಿ ನೀಡುತ್ತಿದೆ. ಸುಮಾರು 20 ದಿನಗಳ ಕಾಲ ಹೀರೋ Xpulse 200Fi ಬೈಕ್ ರೈಡ್ ಮಾಡಿ ಇದೀಗ ಓದುಗರಿಗೆ ಮಾಹಿತಿ ನೀಡುತ್ತಿದ್ದೇವೆ.
ಬೆಂಗಳೂರು(ಜು.04); ಚೀನಾದಲ್ಲಿ ಕೋವಿಡ್19 ಆರ್ಭಟ ಶುರುಮಾಡಿ ಇತರ ದೇಶಕ್ಕೆ ಹರಡುತ್ತಿದ್ದ ಸಂದರ್ಭ. ಭಾರತದಲ್ಲಿ ಎಚ್ಚರಿಕೆ ನೀಡಲಾಗಿತ್ತು. ಇನ್ನು ಕೇರಳದಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. ಕರ್ನಾಟಕದಲ್ಲಿ ಎಚ್ಚರಿಕೆಯ ಸೂಚನೆ ನೀಡಲಾಗಿತ್ತೆ ಹೊರತು ಚಟುವಟಿಕೆ ಎಂದಿನಂತೆ ಇತ್ತು. ಈ ವೇಳೆ ಸುವರ್ಣನ್ಯೂಸ್.ಕಾಂ Xpulse 200Fi ಬೈಕ್ ಪರ್ಫಾಮೆನ್ಸ್ ಕುರಿತ ಸಂಪೂರ್ಣ ಮಾಹಿತಿ ನೀಡಲು ರೈಡಿಂಗ್ ಆರಂಭಿಸಿತು. ಆದರೆ ಲಾಕ್‌ಡೌನ್ ಕಾರಣ ಬೈಕನ್ನು ಅನಿವಾರ್ಯವಾಗಿ ಎರಡು ತಿಂಗಳ ಕಾಲ ನಿಲ್ಲಿಸಬೇಕಾಯಿತು.
ಅಚ್ಚರಿ ಬೆಲೆಗೆ ಹೀರೋ XPulse 200, ಹೀರೋ XPulse 200T ಬೈಕ್ ಬಿಡುಗಡೆ!.
ಭಾರತದಲ್ಲಿ ಲಭ್ಯವಿರುವ ಆಫ್ ರೋಡ್ ಬೈಕ್‌ಗಳ ಪೈಕಿ ಹೀರೋ Xpulse 200Fi ಕೈಗೆಟುಕುವ ಬೆಲೆ, ಉತ್ತಮ ಎಂಜಿನ್ ಹಾಗೂ ಆಕರ್ಷಕ ಲುಕ್ ಹೊಂದಿದೆ.
Xpulse 200Fi ಪಡೆದ ನಾವು ಆರಂಭಿಕ ಹಂತದಲ್ಲಿ ಸಿಟಿಯಲ್ಲಿ ಇದರ ಪರ್ಫಾಮೆನ್ಸ್ ಹೇಗಿದೆ ಎಂದು ತಿಳಿಯಲು ಮುಂದಾದೆವು. ಇದು ಆಫ್ ರೋಡ್ ಸ್ಪೆಷಲ್ ಬೈಕ್ ಆಗಿದ್ದರೂ ಬೆಂಗಳೂರಿನ ಸಿಟಿ ರಸ್ತೆ ಹಾಗೂ ಹೊರವಲಯ ಹೈವೇಗಳಲ್ಲೂ ರೈಡ್ ಮಾಡಲು ಉತ್ತಮ ಹಾಗೂ ಆರಾಮದಾಯಕವಾಗಿದೆ. 21 ಫ್ರಂಟ್ ಹಾಗೂ 18 ಇಂಚಿನ ರೇರ್ ವೀಲ್ಹ್ ಇರುವ ಕಾರಣ ಗ್ರೌಂಡ್ ಕ್ಲೀಯರೆನ್ಸ್ ಉತ್ತಮವಾಗಿದೆ. ಹಳ್ಳಿ ಇರಲಿ ನಗರವಿರಲಿ ಗುಂಡಿ ಇರದ ರಸ್ತೆಗಳಿಲ್ಲ. ಹೀಗಾಗಿ ಈ ಬೈಕ್ ರಸ್ತೆ ಗುಂಡಿ, ಹಳ್ಳ ಕೊಳ್ಳಗಳನ್ನು ಸಲೀಸಾಗಿ ದಾಟುತ್ತದೆ. ಹೀಗಾಗಿ ಹಿರೋ Xpulse 200Fi ಕೇವಲ ಆಫ್‌ರೋಡ್‌ಗೆ ಮಾತ್ರ ಎಂದುಕೊಳ್ಳಬೇಡಿ, ಇದು ನಮ್ಮ ನಗರ ಪಟ್ಟಣ ಹಾಗೂ ಹಳ್ಳಿ ರಸ್ತಗಳಿಗೂ ಸೂಕ್ತವಾಗಿದೆ.
ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್; ಇಲ್ಲಿದೆ ಮೂರು ಕಡಿಮೆ ಬೆಲೆಯ ಬೈಕ್!.
ಆಫ್ ರೋಡ್ ಬೈಕ್ ಅಂದಮೇಲೆ ಆಫ್ ರೋಡ್ ರೈಡಿಂಗ್ ಮಾಡದಿದ್ದರೆ ಹೇಗೆ? ಇದಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿನ ಚಿಕ್ಕದಾದ ಆಫ್ ರೋಡ್ ಪ್ರದೇಶದಲ್ಲಿ ಬೈಕ್ ಸಾಮರ್ಥ್ಯ ಪರೀಕ್ಷಿಸಿದೆವು. ಕಲ್ಲು, ಸಡಿಲವಾದ ಮಣ್ಣು, ಗುಂಡಿ, ಮರದ ಬೇರು ಹೀಗೆ ರಸ್ತೆ ಇಲ್ಲದ ರಸ್ತೆಯಲ್ಲಿ ಹೀರೋ Xpulse 200Fi ಯಾವುದೇ ಅಡೆ ತಡೆ ಇಲ್ಲದೆ ಮುಂದೆ ಸಾಗಿತು.
ಹೀರೋ ಮೋಟಾರ್ ಸಂಪೂರ್ಣ ಡಿಜಿಟಲ್, ವಾಹನ ಖರೀದಿಗೆ ಸುಲಭ ಮಾರ್ಗ!...
ರೇಸರ್‌ಗಳಷ್ಟು ವೇಗವಾಗಿ, ಅವರಂತೆ ಬೈಕ್ ಹಾರಿಸುವ ಕಲೆ ನಮಗೆ ಗೊತ್ತಿಲ್ಲ, ಆದರೂ ಬೈಕ್ ಪರೀಕ್ಷೆಗಾಗಿ ಒಂದಷ್ಟು ಸ್ಟಂಟ್ ಮಾಡಿದೆವು ಎಲ್ಲದಕ್ಕೂ ಹೀರೋ Xpulse 200Fi ರೆಡಿಯಾಗಿತ್ತು. ಅದೆಷ್ಟೇ ವೇಗವಾಗಿ ಬಂದ ತಕ್ಷಣವೇ ತಿರುವಿಗಾಗಿ ಬ್ರೇಕ್ ಹಾಕಿದರೆ ಬೈಕ್ ಒಂಚೂರು ಅಲುಗಾಡದೇ ನಾವು ಹೇಳಿದಲ್ಲಿ ಬೈಕ್ ನಿಂತಿತ್ತು. ಕಾರಣ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), NEX Gen(ಮುಂದಿನ ಪೀಳಿಗೆ) ಟೆಕ್ನಾಲಜಿ ಹಾಗೂ Absolute ಕಂಟ್ರೋಲ್ ಸಿಸ್ಟಮ್ ಹೊಂದಿದೆ.
ಲಾಕ್‌ಡೌನ್ ನಡುವೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭರ್ಜರಿ ಆಫರ್, ಆನ್‌ಲೈನ್ ಮೂಲಕ ವ್ಯವಹಾರ!
199.6 cc ಎಂಜಿನ್, ಫ್ಯುಯೆಲ್ ಇಂಜೆಕ್ಟ್, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 18 bhp ಪವರ್ ಹಾಗೂ 17.1 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿರುವ ಹೀರೋ Xpulse 200Fi ಯಾವುದೇ ರಸ್ತೆಯಲ್ಲಿ ಅಥವಾ ರಸ್ತೆಯಲ್ಲಿ ದಾರಿಯಲ್ಲೂ ಅದೇ ಗ್ರಿಪ್, ಅದೇ ಪವರ್‌ನೊಂದಿಗೆ ಮುನ್ನಗ್ಗಲಿದೆ.
3ನೇ ಗೇರ್‌ನಲ್ಲಿ 30 ರಿಂದ 70 KMPH ವೇಗ ತಲುಪಲು 6.99 ಸೆಕೆಂಡ್ ತೆಗೆದುಕೊಂಡಿತು. 7,000 rpmನಲ್ಲಿ ಸಣ್ಣ ವೈಬ್ರೇಶನ್ ಫೀಲ್ ಆಗಲಿದೆ. ಎಕ್ಸಲರೇಟ್ ಮಾಡುತ್ತಿದ್ದಂತೆ ಬೈಕ್ ಕ್ಷಣಾರ್ಧದಲ್ಲೇ 90KMPH ವೇಗ ಪಡೆದುಕೊಂಡಿತು. ಈ ವೇಗದಲ್ಲೂ ಬೈಕ್ ಆರಾಮದಾಯಕ ರೈಡ್ ನೀಡಿತು. ನಾವು ಬೈಕ್ ಪರೀಕ್ಷೆಗಾಗಿ ವೇಗ ಹೆಚ್ಚಿಸಿದೆವು. ಆದರೆ ಅತೀ ವೇಗದ ಪ್ರಯಾಣ ಅಪಾಯ ಅನ್ನೋದನ್ನು ಮರೆಯಬೇಡಿ
ರೆಟ್ರೋ ಕ್ಲಾಸಿಕ್ ಲುಕ್, ರೌಡ್ LED ಹೆಡ್‌ಲ್ಯಾಂಪ್ಸ್, ಗೈಟರ್ ಕ್ಲಾಡ್ ಫೋರ್ಕ್, ನೀಳವಾದ ಸೀಟ್ ಹಾಗೂ ಫ್ಯುಯೆಲ್ ಟ್ಯಾಂಕ್ ಹಾಗೂ ಉತ್ತಮ ಡಿಸೈನ್ ಗ್ರಾಫಿಕ್ಸ್ ಬೈಕ್ ಆಕರ್ಷತೆಯನ್ನು ಹೆಚ್ಚಿಸಿದೆ. ಟ್ಯಾಂಕ್ 13 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 1,06,500 ರೂಪಾಯಿ(ಎಕ್ಸ್ ಶೋ ರೂಂ). ಹಿಮಾನಲಯ ಹಾಗೂ KTM ಅಡ್ವೆಂಚರ್ ಬೈಕ್‌ಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆ ಗರಿಷ್ಠ ದಕ್ಷತೆ ಹೊಂದಿದ ಬೈಕ್.
ಹೀರೋ Xpulse ಸಸ್ಪೆನ್ಶನ್ ಇದರ ಪ್ಲಸ್ ಪಾಯಿಂಟ್. A 37mm ಟೆಲಿಸ್ಕೋಪಿಕ್ ಫೋರ್ಕ್ ಹಾಗೂ 190mm ಟ್ರಾವೆಲ್ ಹ್ಯಾಂಡಲ್ಸ್ ಹೊಂದಿದೆ. ಇನ್ನು ರೇರ್ 170mm ಟ್ರಾವೆಲ್ ಮೊನೋಶಾಕ್ ಸಸ್ಪೆನ್ಶನ್ ಹೊಂದಿದೆ. ಸಿಂಗಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. 2.70 ಸೆಕೆಂಡ್‌ನಲ್ಲಿ 80 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿದೆ.
ಕೊರೋನಾ ಆರ್ಭಟದ ನಡುವೆ ಹೀರೋ Xpulse 200fi ಬೈಕ್ ಸಾಮರ್ಥ್ಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳೋ ಮೂಲಕ ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದೇವೆ. ದಿನ ನಿತ್ಯದ ಬಳಕೆ , ಆಫ್ ರೋಡ್, ಅಡ್ವೆಂಚರ್ ಬಳಕೆಗೂ ಬೈಕ್ ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ, ಹೀರೋ Xpulse ಉತ್ತಮ ಆಯ್ಕೆಯಾಗಿದೆ.