Hero Bike ಹೊಸ ಅವತಾರದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಬೈಕ್ ಬಿಡುಗಡೆ!
- ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಮೀಟರ್ ಫೀಚರ್ಸ್
- 72,900 ರೂ ಆರಂಭಿಕ ಬೆಲೆಯಲ್ಲಿ ನೂತನ ಬೈಕ್ ಲಭ್ಯ
- ಕಾಲ್ ಮತ್ತು ಎಸ್‍ಎಮ್‍ಎಸ್ ಸೇರಿ ಹಲವು ಕೆನೆಕ್ಟಿವಿಟಿ ಫೀಚರ್ಸ್
ಬೆಂಗಳೂರು(ಮೇ.23): ದೇಶದಲ್ಲಿ ಭಾರಿ ಬೇಡಿಕೆ ಹಾಗೂ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಹೀರೋ ಸ್ಪ್ಲೆಂಡರ್ ಹೊಸ ಆವೃತ್ತಿ ಬಿಡುಗಡೆಯಾಗಿದೆ. ಹೀರೋ ಮೋಟೋಕಾರ್ಪ್ ಇಂದು ಐತಿಹಾಸಿಕ ಮೋಟಾರುಸೈಕಲ್ ಸ್ಪ್ಲೆಂಡರ್ ನ ಹೊಸ ಆವೃತ್ತಿ + XTEC ಬೈಕ್ ಬಿಡುಗಡೆ ಮಾಡಿದೆ.
ವಿನೂತನವಾದ ಹಾಗೂ ಪ್ರತಿದಿನ ವಾಸ್ತವತೆ ಒದಗಿಸುವ ಹೊಸ ಹೀರೋ ಸ್ಪ್ಲೆಂಡರ್ +‘XTEC’, ಬ್ಲೂಟೂತ್ ಸಂಪರ್ಕತೆ ಇರುವ ಸಂಪೂರ್ಣ ಡಿಜಿಟಲ್ ಮೀಟರ್, ಕಾಲ್ ಮತ್ತು ಎಸ್‍ಎಮ್‍ಎಸ್ ಎಚ್ಚರಿಕೆ, ಆರ್‍ಟಿಎಮ್‍ಐ(ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್), ಕಡಿಮೆ ಫ್ಯುಯೆಲ್ ಇಂಡಿಕೇಟರ್, ಎಲ್‍ಇಡಿ ಹೈ ಇಂಟೆನ್ಸಿಟಿ ಪೊಸಿಷನ್ ಲ್ಯಾಂಪ್(HIPL) ಮತ್ತು ವಿಶೇಷವಾದ ಭೌತಿಕಚಿತ್ರಣ ಮುಂತಾದ ಅಂಶಗಳಿಂದ ತುಂಬಿದೆ. ಹೆಚ್ಚುವರಿಯಾಗಿ, ಇದು ಸಂಯೋಜಿತ ಯುಎಸ್‍ಬಿ ಚಾರ್ಜರ್, ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್-ಆಫ್, ಹೀರೋದ ಕ್ರಾಂತಿಕಾರಿ i3S ತಂತ್ರಜ್ಞಾನ (ಐಡ್ಲ್-ಸ್ಟಾರ್ಟ್-ಸ್ಟಾಪ್ ಸಿಸ್ಟಮ್)ನೊಂದಿಗೆ ಕೂಡ ಬರುತ್ತದೆ.
ನಂಬರ್ ಪ್ಲೇಟ್ ಮೇಲೆ ನಿಗಮ, ಮಂಡಳಿ, ಅಧ್ಯಕ್ಷ ಯಾವುದೂ ಇರಬಾರದು, ಸರ್ಕಾರದ ಸುತ್ತೋಲೆ!
ಹೀರೋ ಸ್ಪ್ಲೆಂಡರ್ +‘XTEC’, ರೂ.72,900 ಗಳ ಆರಂಭಿಕ ಬೆಲೆಯಲ್ಲಿ(ಎಕ್ಸ್ ಶೋ ರೂಂ) ಹೀರೋ ಮೋಟೋಕಾರ್ಪ್ ಡೀಲರ್‍ಶಿಪ್‍ಗಳಾದ್ಯಂತ ಲಭ್ಯವಿರಲಿದೆ. ಹೊಸ ಹೀರೋ ಸ್ಪ್ಲೆಂಡರ್ +‘XTEC’, 5-ವರ್ಷಗಳ ವಾರಂಟಿಯೊಂದಿಗೆ ಬರುತ್ತಿದೆ.
ಹೀರೋ ಮೋಟೋಕಾರ್ಪ್‍ನ ತಂತ್ರ ಮತ್ತು ಜಾಗತಿಕ ಉತ್ಪನ್ನ ಯೋಜನೆ ವಿಭಾಗದ ಮುಖ್ಯಸ್ಥ ಮಾಲೋ ಲೆ ಮ್ಯಾಸ್ಸನ್, “ಹೀರೋ ಸ್ಪ್ಲೆಂಡರ್ ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ಮತ್ತು ಅತ್ಯುತ್ತಮವಾಗಿ ಮಾರಾಟವಾಗುವ ಮೋಟಾರುಸೈಕಲ್ ಆಗಿದ್ದು, ಭಾರತದಾದ್ಯಂತ ಲಕ್ಷಾಂತರ ಜನರ ಸಂಗಾತಿಯಾಗಿದೆ. ಸುಮಾರು ಮೂರು ದಶಕಗಳಿಂದ ಇದು ಐತಿಹಾಸಿಕವಾಗಿದ್ದು “ಹೊಸ ಹೀರೋ ಸ್ಪ್ಲೆಂಡರ್ +‘XTEC’ ಮಾದರಿಯ ಪರಿಚಯದೊಂದಿಗೆ ಇನ್ನೂ ಅನೇಕರಿಗೆ ಪ್ರೇರಣೆ ಒದಗಿಸಿ ತಾಂತ್ರಿಕವಾಗಿ ಅತ್ಯಾಧುನಿಕವಾದ ಅಂಶಗಳು ಮತ್ತು ಸ್ಮಾರ್ಟ್ ಆದ ಆಧುನಿಕ ವಿನ್ಯಾಸವನ್ನು ಸೇರಿಸಿಕೊಂಡಿದೆ. ತಂತ್ರಜ್ಞಾನದಡಿ ಪೂರಕವಾದ ಇತ್ತೀಚಿನ ಮಾದರಿ ಇದಾಗಿದ್ದು ಹೀರೋ ಗ್ಲಾಮರ್ 125, ಪ್ಲೆಶರ್ +110 ಮತ್ತು ಡೆಸ್ಟಿನಿ 125 ಪರಿಚಯಗೊಂಡಾಗಿನಿಂದಲೂ ಅಭೂತಪೂರ್ವ ಯಶಸ್ಸು ಕಂಡಿದೆ.”ಎಂದರು.
ಹೀರೋ ಮೋಟೋಕಾರ್ಪ್‍ನ ಚೀಫ್ ಗ್ರೋತ್ ಆಫಿಸರ್ ಆದ ರಂಜಿವ್ಜಿತ್ ಸಿಂಗ್, “ದಶಕಗಳಿಂದಲೂ ಹೀರೋ ಸ್ಪ್ಲೆಂಡರ್ ಪ್ರವೃತ್ತಿ ಪ್ರವರ್ತಕ ಉತ್ಪನ್ನವಾಗಿದೆ. ತನ್ನ ವಿಶ್ವಾಸ, ಸ್ಟೈಲ್, ಕಾರ್ಯಕ್ಷಮತೆ ಹಾಗೂ ವರ್ಧಿತ ಆರಾಮ ಅಂಶಗಳೊಂದಿಗೆ ಈ ಮೋಟಾರುಸೈಕಲ್ ವಿವಿಧ ರೀತಿಯ ಗ್ರಾಹಕರ ಮೆಚ್ಚುಗೆ ಗಳಿಸುತ್ತಾ ಬಂದಿದೆ. ತಂತ್ರಜ್ಞಾನ ಹಾಗು ನೋಟದ ಸ್ಟೈಲ್ ಎರಡರಲ್ಲೂ ಹೊಸ ಮಾನದಂಡ ಸೃಷ್ಟಿಸುವ ಮೂಲಕ ಹೊಸ ಹೀರೋ ಸ್ಪ್ಲೆಂಡರ್ +‘XTEC’, ಆರಾಮ ಮತ್ತು ಸುರಕ್ಷತೆಯ ಬ್ರ್ಯಾಂಡ್ ಭರವಸೆಯನ್ನು ನೀಡುತ್ತದೆ ಎಂಬ ವಿಶ್ವಾಸ ನಮಗಿದೆ.” ಎಂದರು.
ಶೀಘ್ರದಲ್ಲಿ Fastag ವ್ಯವಸ್ಥೆ ಅಂತ್ಯ, ಜಿಪಿಎಸ್ ಟೋಲ್ ಸಿಸ್ಟಮ್ ಆರಂಭ!
ತಡೆರಹಿತ ಸಂಪರ್ಕತೆ
ವರ್ಗದಲ್ಲೇ-ಪ್ರಪ್ರಥಮವಾದ ಬ್ಲೂಟೂತ್ ಸಂಪರ್ಕವಿರುವ ಸಂಪೂರ್ಣ ಡಿಜಿಟಲ್ ಮೀಟರ್ ಹೊಂದಿರುವ ಸ್ಪ್ಲೆಂಡರ್ +‘XTEC’, ಸವಾರರಿಗೆ ಗರಿಷ್ಟ ಕಾರ್ಯಾಚರಣೆ ಮತ್ತು ಮಾಹಿತಿ ಒದಗಿಸುತ್ತದೆ. ಸಂಪೂರ್ಣವಾಗಿ ಡಿಜಿಟಲ್ ಆಗಿರುವ ಡಿಸ್ಪ್ಲೇ, ಒಳಬರುತ್ತಿರುವ ಮತ್ತು ತಪ್ಪಿದ ಕರೆ ಎಚ್ಚರಿಕೆ, ಆರ್‍ಟಿಎಮ್‍ಐನೊಂದಿಗೆ ಎರಡು ಟ್ರಿಪ್ ಮೀಟರ್, ಮತ್ತು ಕಡಿಮೆ ಇಂಧನ ಸೂಚನೆ ಮುಂತಾದ ವಾಸ್ತವ ಹಾಗೂ ಬಳಕೆದಾರ-ಸೇಹಿ ಅಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಸಂಯೋಜಿತ ಯುಎಸ್‍ಬಿ ಚಾರ್ಜಿಂಗ್ ಪೋರ್ಟ್ ಕೂಡ ಇದೆ.
ಸುರಕ್ಷತೆ
ಸಂಪೂರ್ಣ ಸುರಕ್ಷತೆಗೆ ಹೀರೋ ಸ್ಪ್ಲೆಂಡರ್ ಹೆಸರುವಾಸಿಯಾಗಿದೆ. ಸವಾರ ಮತ್ತು ಹಿಂಬದಿ ಸವಾರ ಇಬ್ಬರಿಗೂ ಸುರಕ್ಷತೆಯನ್ನು ಖಾತರಿಪಡಿಸುವ ಸ್ಪ್ಲೆಂಡರ್ +‘XTEC’, ಸೈಡ್ ಸ್ಟ್ಯಾಂಡ್ ವಿಶುವಲ್ ಇಂಡಿಕೇಶನ್, ಮತ್ತು ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್-ಆಫ್ ಅಂಶವನ್ನು ಹೊಂದಿದೆ. ಮೋಟಾರುಸೈಕಲ್‍ನಲ್ಲಿರುವ ಬ್ಯಾಕ್-ಆಂಗಲ್-ಸೆನ್ಸಾರ್, ಗಾಡಿ ಬಿದ್ದಾಗ ಇಂಜಿನ್ ಸಂಪರ್ಕವನ್ನು ಕಡಿತಗೊಳಿಸುವ ವ್ಯವಸ್ಥೆ ಹೊಂದಿದೆ.
ವಿನ್ಯಾಸ
ಎಲ್‍ಇಡಿ ಹೈ ಇಂಟೆನ್ಸಿಟಿ ಪೆÇಸಿಶನ್ ಲ್ಯಾಂಪ್(HIPL)ಮತ್ತು ಹೊಸ ಭೌತಿಕಚಿತ್ರಣವು ಸ್ಪ್ಲೆಂಡರ್ +‘XTEC’ಗೆ ಅದ್ಭುತ ನೋಟ ಒದಗಿಸಿದೆ. ಅಸಾಂಪ್ರದಾಯಿಕವಾದ ಎಲ್‍ಇಡಿ ಸ್ಟ್ರಿಪ್ ಐತಿಹಾಸಿಕ ಮುಂಬದಿಯ ಅಂಚನ್ನು ಇನ್ನಷ್ಟು ವರ್ಧಿಸಿದೆ.
ಬಣ್ಣ(ವರ್ಣ)
ಸ್ಪಾರ್ಕ್ಲಿಂಗ್ ಬೀಟಾ ಬ್ಲೂ, ಕ್ಯಾನ್ವಾಸ್ ಬ್ಲ್ಯಾಕ್, ಟೋರ್ನೆಡೋ ಗ್ರೇ ಮತ್ತು ಪರ್ಲ್ ವೈಟ್‍ನಲ್ಲಿ ಬರುವ ನಾಲ್ಕು ವರ್ಣಸ್ಕೀಮ್‍ಗಳು ಹೊಸ ಸ್ಪ್ಲೆಂಡರ್ +‘XTEC’ನ ಚುರುಕಾದ ನೋಟವನ್ನು ಎತ್ತಿತೋರಿಸುತ್ತವೆ
ಇಂಜಿನ್
ಹೊಸ ಹೀರೋ ಸ್ಪ್ಲೆಂಡರ್ +‘XTEC’,97.2cc BS-VI ಅನುಸರಣೆಯ ಇಂಜಿನ್‍ನೊಂದಿಗೆ ಸಜ್ಜಾಗಿದ್ದು, ಅಧಿಕ ಕಾರ್ಯಕ್ಷಮತೆಗಾಗಿ ಇದು7.9 BHP @ 7000 RPMನ ಅದ್ಭುತವಾದ ಶಕ್ತಿ ಮತ್ತು 8.05 NM @ 6000 ಟಾರ್ಕ್ ಬೇಡಿಕೆಯನ್ನು ಹೊಂದಿದೆ. ಕಾರ್ಯಕ್ಷಮತೆ ಮತ್ತು ಆರಾಮದ ಬ್ರ್ಯಾಂಡ್ ಭರವಸೆಯನ್ನು ಒದಗಿಸುವ ಹೊಸ ಸ್ಪ್ಲೆಂಡರ್ +‘XTEC’, ಉತ್ತಮ ಇಂಧನ ಸಾಮರ್ಥ್ಯಕ್ಕಾಗಿ ಪೇಟೆಂಟ್ ಮಾಡಲಾದ i3S ತಂತ್ರಜ್ಞಾನದೊಂದಿಗೆ ಬರುತ್ತದೆ.