- Home
- Automobile
- Bike News
- ₹83,000 ಬೆಲೆಯ ಸ್ಕೂಟರ್‌ಗೆ ಕಳೆದುಹೋದ ಸಿಟಿ ಮಂದಿ, ಎದ್ನೋ ಬಿದ್ನೋ ಎಂದು ಖರೀದಿಸ್ತಿರೋದು ಯಾಕೆ?
₹83,000 ಬೆಲೆಯ ಸ್ಕೂಟರ್‌ಗೆ ಕಳೆದುಹೋದ ಸಿಟಿ ಮಂದಿ, ಎದ್ನೋ ಬಿದ್ನೋ ಎಂದು ಖರೀದಿಸ್ತಿರೋದು ಯಾಕೆ?
ಟಿವಿಎಸ್ ಮೋಟಾರ್ಸ್ ತನ್ನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಜುಪಿಟರ್ ನಂತರ ಎನ್‌ಟಾರ್ಕ್ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ಎನ್‌ಟಾರ್ಕ್ ಒಟ್ಟು 2.5 ಮಿಲಿಯನ್ ಯೂನಿಟ್‌ಗಳ ಮಾರಾಟದ ಸಾಧನೆ ಮಾಡಿದ್ದು, ವಿವಿಧ ಆವೃತ್ತಿ ಹಾಗೂ ಬಣ್ಣಗಳಲ್ಲಿ ಲಭ್ಯವಿದೆ.

2.5 ಮಿಲಿಯನ್ ಯೂನಿಟ್ ಮಾರಾಟ
ಟಿವಿಎಸ್ ಮೋಟರ್ಸ್ (TVS Motors) ತನ್ನ ಸ್ಕೂಟರ್ಸ್ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನ ಇಡ್ತಿದೆ. ಕಳೆದ ಸೆಪ್ಟೆಂಬರ್‌ನಲಿ ಬರೋಬ್ಬರಿ 3.64 ದ್ವಿಚಕ್ರ ವಾಹನಗಳನ್ನ ಮಾರಾಟ ಮಾಡಿದೆ. ಇದರ ಅರ್ಥ ಕಂಪನಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಅಂತಾ. ಜುಪಿಟರ್ ನಂತರ ಎನ್‌ಟಾರ್ಕ್ ಕಂಪನಿಯ ಪೋರ್ಟ್‌ಪೋಲಿಯೋದಲ್ಲಿ ಮಾರಾಟವಾದ ಎರಡನೇ ಸ್ಕೂಟರ್ ಆಗಿದೆ. ಈ ಕಂಪನಿಯು ಒಟ್ಟು 2.5 ಮಿಲಿಯನ್ ಯೂನಿಟ್‌ಗಳನ್ನ ಮಾರಾಟ ಮಾಡಿ ಅಚ್ಚರಿ ಮೂಡಿಸಿದೆ.
TVS Ntorq ವಿಶೇಷತೆ ಏನು?
- ಫೆಬ್ರವರಿ 5, 2018 ರಂದು TVS Ntorq ಮಾರುಕಟ್ಟೆಗೆ ರಿಲೀಸ್
- 2025ರ ಆಗಸ್ಟ್ ವೇಳೆಗೆ 2.08 ಮಿಲಿಯನ್ ಯುನಿಟ್ ಮಾರಾಟ
- 2026ರ ವೇಳೆಗೆ 2.5 ಮಿಲಿಯನ್ ಯುನಿಟ್ ಮಾರಾಟ
- 2025 ಸೆಪ್ಟೆಂಬರ್ TVS Ntorq 150 ಬಿಡುಗಡೆ ಮಾಡಿದೆ
ಹೇಗಿದೆ ಮಾರಾಟ?
- ಆಗಸ್ಟ್ 2026ರಲ್ಲಿ ಒಟ್ಟು 40756 TVS Ntorq ಮಾರಾಟ ಮಾಡಿದೆ
- ಇವುಗಳಲ್ಲಿ 28,298 125 ಸಿಸಿ ಎನ್‌ಟಾರ್ಕ್ ಸ್ಕೂಟರ್
- 150 ಸಿಸಿ ಎನ್‌ಟಾರ್ಕ್ ಸ್ಕೂಟರ್‌ಗಳ ಸಂಖ್ಯೆ 11,958
- ಜೂಪಿಟರ್ 147,450 ಯುನಿಟ್‌ಗಳು, ಜೆಸ್ಟ್ 11,213
- ಐಕ್ಯೂಬ್ 42,882 ಮತ್ತು ಆರ್ಬಿಟರ್ 14,641 ಯುನಿಟ್ ಮಾರಾಟ
ಬೆಲೆ ಎಷ್ಟು?
ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ ಏನೆಂದರೆ.. ಟಿವಿಎಸ್ ಮೊದಲ ಒಂದು ಮಿಲಿಯನ್ Ntorq ಮಾರಾಟ ಮಾಡಲು 51 ತಿಂಗಳು ತೆಗೆದುಕೊಂಡಿತ್ತು. 2 ಮಿಲಿಯನ್ ಮಾರಾಟಕ್ಕೆ 36 ತಿಂಗಳು, ಕೊನೆಯ 5 ಲಕ್ಷ ಸ್ಕೂಟರ್‌ಗಳ ಮಾರಾಟಕ್ಕೆ ಕೇವಲ 15 ತಿಂಗಳು ಮಾತ್ರ ತೆಗೆದುಕೊಂಡಿದೆ. ಕಳೆದ 8.5 ವರ್ಷಗಳಲ್ಲಿ ಒಟ್ಟು 25 ಮಿಲಿಯನ್ ಯುನಿಟ್‌ಗಳನ್ನ ಮಾರಾಟ ಮಾಡಿದೆ. Ntorq 125 ಬಹು ಬಣ್ಣಗಳಿಂದ ಮಾರುಕಟ್ಟೆಗೆ ಲಭ್ಯ ಇದೆ. ಡಿಸ್ಕ್ ವರ್ಸನ್‌ನಲ್ಲಿ 83850 ರೂಪಾಯಿಂದ ಪ್ರಾರಂಭವಾಗುತ್ತದೆ. ಡಿಸ್ಕ್, ರೇಸ್ ಎಡಿಷನ್, ಸೂಪರ್ ಸ್ಕ್ವಾಡ್ ಎಡಿಷನ್, ರೇಸ್ XP ಮತ್ತು XT ರೂಪಾಂತರಗಳಲ್ಲಿ ಲಭ್ಯವಿದೆ. ಇದು ಡ್ರಿಫ್ಟ್ ಬ್ಲೂ, ಇನ್ಫರ್ನೊ ರೆಡ್ ಮತ್ತು ರಶ್ ಗ್ರೀನ್ ಬಣ್ಣಗಳಲ್ಲಿ ಸ್ಕೂಟರ್ ಲಭ್ಯವಿದೆ.

