ಸ್ಟಾರ್‌ಬಕ್ಸ್ ಸಹ ಸಂಸ್ಥಾಪಕ ಜೆವ್ ಸೀಗಲ್ (Zev Siegl)ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿಯುತ್ತಾ, ಕಾಫಿ ಹೀರಿದ್ದಾರೆ. ಈ ಫೋಟೋಗಳು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿವೆ.
ಬೆಂಗಳೂರು: ಉದ್ಯಾನ ನಗರಿಯಲ್ಲಿ ಬೆಸ್ಟ್ ಎನಿಸುವ ಫಿಲ್ಟರ್ ಕಾಫಿ ದೊರೆಯುವ ಹಲವು ಸ್ಥಳಗಳ ಪೈಕಿ ಬೆಂಗಳೂರಿನ ಬಸವನಗುಡಿ ಸಮೀಪದ ವಿದ್ಯಾರ್ಥಿ ಭವನವೂ ಒಂದು. ಇಲ್ಲಿ ಬೆಂಗಳೂರಿಗರು ಸೇರಿದಂತೆ ದೂರದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರು ಕೂಡ ಈ ಸೂಪರ್ ಆಗಿರುವ ಫಿಲ್ಟರ್ ಕಾಫಿಯನ್ನು ಕುಡಿಯುತ್ತಾರೆ. ಬೆಂಗಳೂರಿನಲ್ಲೇ ಸಖತ್ ಫೇಮಸ್ ಆಗಿರುವ ಈ ಜಾಗದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಕಾಫಿ ಸಂಸ್ಥೆ ಬಹುರಾಷ್ಟ್ರಗಳಲ್ಲಿ ಕಚೇರಿಗಳನ್ನು ಹೊಂದಿರುವಂತಹ ಸ್ಟಾರ್‌ಬಕ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಜೆವ್ ಸೀಗಲ್ ಟೀ ಸೇವಿಸಿದ್ದಾರೆ.
ಸ್ವತಃ ವಿದ್ಯಾರ್ಥಿ ಭವನವೇ (Vidyarti Bhavana) ಈ ವಿಚಾರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಅಂದಹಾಗೆ ಈ ವಿದ್ಯಾರ್ಥಿ ಭವನ ಸ್ಟಾರ್‌ಬಕ್ಸ್‌ಗಿಂತಲೂ (Star Bbucks) ಹಳೆಯ ಸಂಸ್ಥೆಯಾಗಿದೆ. ಇಲ್ಲಿನ ಕಾಫಿಯ ಘಮಲನ್ನು ಮೆಚ್ಚದವರಿಲ್ಲ. ದೇಶಕ್ಕೆ ಸ್ವಾತಂತ್ರ ಬರುವುದಕ್ಕೂ ಮೊದಲಿನಿಂದಲೂ ವಿದ್ಯಾರ್ಥಿ ಭವನ್ ರುಚಿಕರ ದೋಸೆ, ಇಡ್ಲಿ ವಡಾ, ಫಿಲ್ಟರ್ ಕಾಫಿಗೆ ಫೇಮಸ್ ಆಗಿದ್ದು, ಸ್ಟಾರ್ ಬಕ್ಸ್‌ಗಿಂತಲೂ ಹಳೆಯ ಸಂಸ್ಥೆಯಾಗಿದೆ. ಜನನಿಬಿಡ ಗಾಂಧಿ ಬಜಾರ್ ಸಮೀಪದಲ್ಲಿ ವಿದ್ಯಾರ್ಥಿಭವನ ಹೊಟೇಲ್ ಇದ್ದು, ಇಕ್ಕಟ್ಟಾದ ಈ ಜಾಗದಲ್ಲಿ ಮಸಾಲಾ ದೋಸೆ ಮತ್ತು ಫಿಲ್ಟರ್ ಕಾಫಿಯ ಘಮ ಎಲ್ಲರನ್ನೂ ಸೆಳೆಯುತ್ತದೆ.
ಮುಸ್ಲಿಂ ಮಹಿಳೆಗೆ ISIS ಎಂದು ಬರೆದು ಕೊಟ್ಟ ಸ್ಟಾರ್‌ಬಕ್ಸ್!
ಸ್ಟಾರ್‌ಬಕ್ಸ್ ಸಹ ಸಂಸ್ಥಾಪಕ ಜೆವ್ ಸೀಗಲ್ (Zev Siegl)ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿಯುತ್ತಾ, ಕಾಫಿ ಹೀರುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. 1943ರಲ್ಲಿ ಸ್ಥಾಪನೆಯಾದ ವಿದ್ಯಾರ್ಥಿ ಭವನ, ಬೆಂಗಳೂರಿನ ಅತ್ಯಂತ ಹಳೆಯ ಉಪಾಹಾರ ಗೃಹವಾಗಿದೆ. ವಿದ್ಯಾರ್ಥಿ ಭವನ ಇನ್ಸ್ಟಾಗ್ರಾಮ್‌ನಲ್ಲಿ 'ಇಂದು ಸಂಜೆ ವಿದ್ಯಾರ್ಥಿ ಭವನಕ್ಕೆ ಸ್ಟಾರ್‌ಬಕ್ಸ್‌ನ ಸಹ ಸಂಸ್ಥಾಪಕರಾದ ಜೆವ್ ಸೀಗಲ್ ಅವರು ಬಂದಿರುವುದು ನಮಗೆ ಖುಷಿ ಹಾಗೂ ಹೆಮ್ಮೆಯ ವಿಚಾರವಾಗಿದೆ. ಅವರು ವಿದ್ಯಾರ್ಥಿ ಭವನದಲ್ಲಿ ನಮ್ಮ ಮಸಾಲಾ ದೋಸೆ (Masala dosa) ಮತ್ತು ಕಾಫಿಯನ್ನು ಸವಿದರು. ಅಲ್ಲದೇ ನಮ್ಮಲ್ಲಿರುವ ಅತಿಥಿ ಪುಸ್ತಕದಲ್ಲಿಯೂ(guest Book) ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೇವ್ ಒಬ್ಬ ಅಮೆರಿಕನ್ ಉದ್ಯಮಿಯಾಗಿದ್ದು, 1971ರಲ್ಲಿ ಅವರು ಸ್ಟಾರ್‌ಬಕ್ಸ್‌ನ್ನು ಸ್ಥಾಪಿಸಿದರು ಅಲ್ಲದೇ ಸ್ಟಾರ್‌ಬಕ್ಸ್‌ನ ಉಪಾಧ್ಯಕ್ಷರು ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ (Global Investors Meet) ಸಮಾವೇಶ 2022 ರಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಬೆಂಗಳೂರಿನಲ್ಲಿದ್ದಾರೆ ಎಂದು ವಿದ್ಯಾರ್ಥಿ ಭವನ ಇನ್ಸ್ಟಾಗ್ರಾಮ್‌ನಲ್ಲಿ (Instagram) ಬರೆದುಕೊಂಡಿದೆ.
ಬೆಂಗ್ಳೂರಿಗೆ ಬಂದಾಗ ವಿದ್ಯಾರ್ಥಿ ಭವನದ ದೋಸೆ ಸವಿದಿದ್ದ ರಿಷಿ ಸುನಕ್..!
ಇನ್ನು ಬೆಂಗಳೂರಿನ ವಿದ್ಯಾರ್ಥಿ ಭವನದ ಉಪಹಾರ ಮಳಿಗೆಯಲ್ಲಿ ಜೇವ್ ಅವರು ಕಾಫಿ ಕುಡಿದು ಮಸಾಲೆದೋಸೆ ತಿನ್ನುತ್ತಿರುವುದನ್ನು ನೋಡದ ನೆಟ್ಟಿಗರು ಫುಲ್ ಥ್ರಿಲ್ ಆಗಿದ್ದು ಅಲ್ಲಿನ ಕಾಫಿ ಹೇಗಿತ್ತು ಎಂಬ ಬಗ್ಗೆ ಜೇವ್ ಅವರ ಅಭಿಪ್ರಾಯಗಳನ್ನು ನೆಟ್ಟಿಗರು ಕಾಮೆಂಟ್‌ಗಳಲ್ಲಿ ಕೇಳಿದ್ದಾರೆ. ಸ್ಟಾರ್‌ಬಕ್ಸ್ ಬರಲಿ ಕಾಫಿ ಡೇ ಇರಲಿ, ದೊಡ್ಡ ದೊಡ್ಡ ಪಂಚತಾರ ಹೊಟೇಲ್‌ಗಳೇ ತೆರೆಯಲಿ. ಆದರೆ ಸ್ಥಳೀಯ ಸೊಗಡಿನ ಸಣ್ಣಪುಟ್ಟ ಹೋಟೇಲುಗಳು, ಉಪಹಾರ ಮಂದಿರಗಳಲ್ಲಿ ಸಿಗುವ ಆಹಾರ ಕಾಫಿ ತಿಂಡಿಗಳ ರುಚಿಗೆ ಮಾತ್ರ ಈ ದೊಡ್ಡ ದೊಡ್ಡ ಸಂಸ್ಥೆಗಳ ಪಾನೀಯ ತಿನಿಸುಗಳಲ್ಲಿ ಸಿಗಲು ಸಾಧ್ಯವಿಲ್ಲ. ತಮ್ಮದೇ ವಿಭಿನ್ನ ರುಚಿಯಿಂದ ಗ್ರಾಹಕರನ್ನು ಇಂದಿಗೂ ಸೆಳೆಯುತ್ತಿರುವ ಆಯಾಯ ಊರುಗಳಲ್ಲಿ ಇರುವ, ಸದಾ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿರುವ ಕೆಲವು ಸಣ್ಣಪುಟ್ಟ ಹೋಟೇಲ್‌ಗಳು ಇದಕ್ಕೆ ಸಾಕ್ಷಿ.
ಒಟ್ಟಿನಲ್ಲಿ ಇಲ್ಲಿನ ಜನರೆಲ್ಲಾ ಸ್ಟಾರ್‌ಬಕ್ಸ್‌ನಲ್ಲಿ ತಿನ್ನಲು ಬಾಯ್ಬಿಡುತ್ತಿದ್ದರೆ, ಅದರ ಮಾಲೀಕ ಇಲ್ಲಿನ ನಮ್ಮ ಹೆಮ್ಮೆಯ ವಿದ್ಯಾರ್ಥಿ ಭವನಕ್ಕೆ ಬಂದು ಕಾಫಿ ಕುಡಿದು ಮಸಾಲೆ ದೋಸೆ ಸೇವಿಸಿರುವುದು ಹೆಮ್ಮೆಯ ಸಂಗತಿ.
