ಬೆಂಗಳೂರಿನಲ್ಲಿರುವ ತಮ್ಮ ಪತ್ನಿ ಅಕ್ಷತಾ ಮನೆಗೆ ಆಗಮಿಸಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಭವನಕ್ಕೆ ಆಗಮಿಸಿದ ದೋಸೆ ರುಚಿ ಸವಿದಿದ್ದ ರಿಷಿ ಸುನಕ್‌

ಬೆಂಗಳೂರು(ಅ.25): ಬ್ರಿಟನ್‌ನ ನೂತನ ಪ್ರಧಾನಿಯಾಗಿರುವ ಬೆಂಗಳೂರಿನ ಅಳಿಯ ರಿಷಿ ಸುನಕ್‌ ಅವರಿಗೆ ಬೆಂಗಳೂರಿನ ಖ್ಯಾತನಾಮ ಹೋಟೆಲ್‌ಗಳ ಪೈಕಿ ಒಂದಾದ ವಿದ್ಯಾರ್ಥಿ ಭವನ ಶುಭ ಕೋರಿದೆ. 

ಈ ಹಿಂದೆ ಬೆಂಗಳೂರಿನಲ್ಲಿರುವ ತಮ್ಮ ಪತ್ನಿ ಅಕ್ಷತಾ ಮನೆಗೆ ಆಗಮಿಸಿದ್ದ ಸಂದರ್ಭದಲ್ಲಿ ರಿಷಿ ವಿದ್ಯಾರ್ಥಿ ಭವನಕ್ಕೆ ಆಗಮಿಸಿದ ದೋಸೆ ರುಚಿ ಸವಿದಿದ್ದರು. 

UK Prime Minister: ಬ್ರಿಟನ್‌ನಲ್ಲಿ ಇನ್ಮುಂದೆ ಕರ್ನಾಟಕದ ಅಳಿಯನ ದರ್ಬಾರ್‌..!

ಅಂದಿನ ಫೋಟೋ ಲಗತ್ತಿಸಿ ಅವರಿಗೆ ಶುಭ ಕೋರಿರುವ ಹೋಟೆಲ್‌ ‘ರಿಷಿ ಸುನಕ್‌ ಬ್ರಿಟನ್‌ ಮುಂದಿನ ಪ್ರಧಾನಿಯಾಗಲಿದ್ದಾರೆ. ಅವರು ಭಾರತೀಯ ಮೂಲದವರು ಮತ್ತು ಅತ್ಯಂತ ಕಿರಿಯ ಪ್ರಧಾನಿ ಎಂಬುದು ಹೆಮ್ಮೆಯ ಸಂಗತಿ. ನಾವು ಅವರಿಗೆ ಶುಭ ಕೋರುತ್ತೇವೆ. ಅವರು ಎಲ್ಲಾ ಸಂಕಷ್ಟಗಳಿಂದ ದೇಶವನ್ನು ಪಾರು ಮಾಡಿ ಅತ್ಯಂತ ಯಶಸ್ವಿ ಪ್ರಧಾನಿಯಾಗಲಿ ಎಂದು ಹಾರೈಸುತ್ತೇವೆ’ ಎಂದು ಹೇಳಿದೆ.

Scroll to load tweet…


ಕರುನಾಡ ಕುವರಿಯ ವರಿಸಿದ ರಿಷಿ:
ಸುನಾಕ್ ಪೋಷಕರು ಮೂಲತಃ ಪಂಜಾಬ್ ಮೂಲದ ಔಷಧ ವ್ಯಾಪಾರಿಗಳು. 1960ರಲ್ಲಿ ಪೂರ್ವ ಆಫ್ರಿಕಾಗೆ ವಲಸೆ ಹೋದ ಇವರ ಕುಟುಂಬ, ಅಲ್ಲಿಂದ ಬ್ರಿಟನ್‌ಗೆ ವಲಸೆ ಹೋಗಿದ್ದರು. 1980ರಲ್ಲಿ ಇಂಗ್ಲೆಂಡ್‌ನ ಸೌತ್ ಹ್ಯಾಂಪ್ಟನ್‌ನಲ್ಲಿ ಜನಿಸಿದ ರುಷಿ, 2009ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಮ ಮೂರ್ತಿ ಮಗಳು ಅಕ್ಷತಾ ಅವರನ್ನು ವರಿಸಿದ್ದಾರೆ. 

ಅಕ್ಷತಾ-ರಿಷಿ ದಂಪತಿಗೆ ಅನುಷ್ಕಾ ಮತ್ತು ಕೃಷ್ಣಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಅಕ್ಷತಾ ಜೊತೆ ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡುವ ರಿಷಿ, ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನಕ್ಕೂ ಭೇಟಿ ನೀಡಿದ್ದರು. ಇದೀಗ ಅದೇ ಫೋಟೋ ಹಂಚಿಕೊಂಡ, ಖ್ಯಾತ ಪೊಟೇಲ್ ರಿಷಿಗೆ ಶುಭ ಹಾರೈಸಿದೆ. 

ಸದಾ ಫಿಟ್ ಆ್ಯಂಡ್ ಸ್ಲಿಮ್ ಆಗಿರಲು ಭಯಸುವ ರಿಷಿ ಸ್ವತ್ಃ ಕ್ರಿಕೆಟ್ ಆಡುತ್ತಾರೆ. ಭಾರತೀಯ ಸಂಜಾತ ಇದೇ ಮೊದಲ ಬಾರಿಗೆ ಬ್ರಿಟನ್ ಪ್ರಧಾನಿ ಆಗುತ್ತಿದ್ದು, ಹಲವು ಮೊದಲಿಗೆ ಸಾಕ್ಷಿಯಾಗಲಿದ್ದಾರೆ. ಬ್ರಿಟನ್‌ನ ಅತಿ ಕಿರಿಯ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಬೆಂಗಳೂರಿನ ಅಳಿಯ ರಿಷಿ, ಶ್ವೇತವರ್ಣೀಯರಲ್ಲದ ವ್ಯಕ್ತಿಗೆ ಇದೇ ಮೊದಲ ಬಾರಿಗೆ ಪ್ರಧಾನಿ ಹುದ್ದೆ ಸಿಕ್ಕಿದೆ. ಭಾರತವನ್ನು ನೂರಾರು ವರ್ಷಗಳ ಆಳಿದ ಬ್ರಿಟನ್‌ಗೆ ಚೊಚ್ಚಲ ಹಿಂದೂ ಪ್ರಧಾನಿಯೂ ಹೌದು ಇವರು. ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಸಂಸದನೆಂಬ ಹೆಗ್ಗಳಿಕೆಯೂ ರಿಷಿ ಮೇಲಿದೆ. ಅಷ್ಟೇ ಅಲ್ಲಿ ಬ್ರಿಟನ್ ಪ್ರಧಾನಿ ಪಟ್ಟಕ್ಕೇರಿದ ಸಿರಿವಂತರೂ ಹೌದು ರಿಷಿ. 

ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಆಯ್ಕೆ

ರಿಷಿ ಬೆಂಡವೆಂದಿದ್ದರು ಬೋರಿಸ್
ಮಾಜಿ ಪ್ರಧಾನಿ ಬೋರಿಸ್ ರಾಜೀನಾಮೆ ನೀಡಿದ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬಳಿಕ, ರಿಷ್ ಆಯ್ಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬೇರೆ ಯಾರೇ ಪ್ರಧಾನಿಯಾದರೂ ಸರಿ, ರಿಷ್ ಮಾತ್ರ ಆ ಪಟ್ಟಕ್ಕೇರುವುದು ಬೇಡವೆಂದು ಪಟ್ಟು ಹಿಡಿದಿದ್ದರು. ಆಶ್ಚರ್ಯವೆಂಬಂತೆ ಬೋರಿಸ್ ಅವರೇ ರಿಷಿ ಪಟ್ಟಕ್ಕೇರಲು ಬೆಂಬಲ ವ್ಯಕ್ತಪಡಿಸಿದ್ದಾರೆ ಈಗ.