ಬೆಂಗಳೂರು(ನ.10): ಮೆಟ್ರೋ ರೈಲು ಬೆಂಗಳೂರಿಗರ ಜೀವನದ ಭಾಗವಾಗಿದೆ. ನಗರದ ಬಹುತೇಕರು ಮೆಟ್ರೋ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಇದೀಗ ಯಲಚೇನಹಳ್ಳಿ ಹಾಗೂ ಆರ್ ವಿ ರೋಡ್ ಮೆಟ್ರೋ ಪ್ರಯಾಣ 4 ದಿನಗಳ ಕಾಲ ಸ್ಥಗತಿಗೊಳಿಸಲಾಗುತ್ತಿದೆ. ನವೆಂಬರ್ 14 ರಿಂದ 17ವರೆಗೆ ಆರ್ ವಿ ರೋಡ್ ‌ನಿಂದ ಯಲಚೇನಹಳ್ಳಿ ಹಾಗೂ ಯಲಚೇನಹಳ್ಳಿಯಿಂದ ಆರ್‌ವಿ ರೋಡ್ ಮೆಟ್ರೋ  ಪ್ರಯಾಣವಿರುವುದಿಲ್ಲ ಎಂದು ನಮ್ಮ ಮೆಟ್ರೋ ತಿಳಿಸಿದೆ.

ಇದನ್ನೂ ಓದಿ: ಮೆಟ್ರೋನಲ್ಲಿ ಈಗ ಎಲ್ಲಾ ಓಪನ್! ವೈರಲ್ ಆಗಿದೆ ಜೋಡಿಯ ರೊಮ್ಯಾನ್ಸ್

RV ರೋಡ್ ಮೆಟ್ರೋ ನಿಲ್ದಾವನ್ನು ಮೆಜೆಸ್ಟಿಕ್ ನಿಲ್ದಾಣದ ರೀತಿಯಲ್ಲಿ ವಿನಿಮಯ ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತಿದೆ.  ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ರೈಲು ಕಾರಿಡಾರ್ ಯೋಜನೆ ಕಾರ್ಯಗತಿಯಲ್ಲಿದೆ. ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಸಂಚರಿಸುವವರಿಗೆ RV ರೋಡ್ ಮೆಟ್ರೋ ನಿಲ್ದಾಣದಲ್ಲಿ ರೈಲು ಬದಲಾಯಿಸುವ ಸೌಲಭ್ಯ ನೀಡಲಾಗುತ್ತಿದೆ. ಹೀಗಾಗಿ ನಾಲ್ಕು ದಿನಗಳ ಕಾಲ RV ರೋಡ್ - ಯಲಚೇನಹಳ್ಳಿ ರೈಲು ಸಂಚಾರ ಸ್ಥಗಿತಗೊಂಡಿದೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಸುರಂಗ

ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ನಾಲ್ಕು ದಿನ ಹೆಚ್ಚುವರಿ BMTC ಬಸ್ ವ್ಯವಸ್ಥೆ ಮಾಡಲಾಗಿದೆ.  ಯಲಚೇನಹಳ್ಳಿ ಹಾಗೂ ಆರ್ ವಿ ರೋಡ್ ಮೆಟ್ರೋ ನಿಲ್ದಾಣದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. 

ನವೆಂಬರ್ 14 ರಿಂದ 17ರ ವರೆಗಿನ ಬಸ್ ವಿವರ:
ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 4.45ಕ್ಕೆ ಬಸ್ ಸೇವೆ ಆರಂಭ
ಆರ್ ವಿ ರೋಡ್ ಮೆಟ್ರೋ ನಿಲ್ದಾಮದಿಂದ ಬೆಳಗ್ಗೆ 5.30ಕ್ಕೆ ಬಸ್ ಸೇವೆ ಆರಂಭ
ರಾತ್ರಿ 10.30ವರೆಗೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ಬಸ್ ಸೇವೆ
ರಾತ್ರಿ 11.45ರವರೆಗೆ ಆರ್‌ವಿ ರೋಡ್ ಮೆಟ್ರೋ ನಿಲ್ದಾಣದಿಂದ ಬಸ್ ಸೇವೆ
ನ.17ರ ಭಾನುವಾರ ಯಲಚೇನಹಳ್ಳಿಯಿಂದ ಬೆಳಗ್ಗೆ 6.30ಕ್ಕೆ ಬಸ್ ಸೇವೆ ಆರಂಭ
ನ.17ರ ಭಾನುವಾರ ಆರ್‌ವಿ ರೋಡ್‌ನಿಂದ ಬೆಳಗ್ಗೆ 7.15ಕ್ಕೆ ಬಸ್ ಸೇವೆ ಆರಂಭ

ಇದನ್ನೂ ಓದಿ: 6 ಬೋಗಿಗಳ ಮತ್ತೆರಡು ಮೆಟ್ರೋ ರೈಲಿಗೆ ಚಾಲನೆ

ನವೆಂಬರ್ 18 ರಿಂದ ಯಥಾ ಪ್ರಕಾರ ಯಲಚೇನಹಳ್ಳಿ-ಆರ್‌ವಿ ರೋಡ್ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಮೈಸೂರು ರಸ್ತೆ - ಬೈಯ್ಯಪ್ಪನಹಳ್ಳಿ(ಪರ್ಪಲ್ ಲೈನ್) ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ.