ಬೆಂಗಳೂರು(ಅ.29): ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ (ಯಲಚೇನಹಳ್ಳಿ-ನಾಗಸಂದ್ರ ಮಾರ್ಗ) ಆರು ಬೋಗಿಗಳ ಎರಡು ಮೆಟ್ರೋ ರೈಲುಗಳಿಗೆ ಸೋಮವಾರ ಚಾಲನೆ ನೀಡಲಾಗಿದೆ.

ಸೋಮವಾರ ಬೆಳಗ್ಗೆ 6 ಗಂಟೆಗೆ ಹಸಿರು ಮಾರ್ಗದ ನಾಗಸಂದ್ರ ಮೆಟ್ರೋ ರೈಲು ನಿಲ್ದಾಣದಲ್ಲಿ ಆರು ಬೋಗಿಯ ಎರಡು ಮೆಟ್ರೋ ರೈಲುಗಳಿಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳೇ ಚಾಲನೆ ನೀಡಿದ್ದಾರೆ. ಈಗಾಗಲೇ ಹಸಿರು ಮಾರ್ಗದಲ್ಲಿ ಆರು ಬೋಗಿಯ ಎರಡು ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ದಟ್ಟಣೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಇದೀಗ ಪುನಃ ಎರಡು ಮೆಟ್ರೋ ರೈಲನ್ನು ಆರು ಬೋಗಿಗಳ ರೈಲುಗಳಾಗಿ ಪರಿವರ್ತಿಸಲಾಗಿದೆ. ಹೀಗೆ ಒಟ್ಟು ಆರು ಬೋಗಿಗಳ ನಾಲ್ಕು ಮೆಟ್ರೋ ರೈಲುಗಳು ಕಾರ್ಯಾಚರಣೆಗೆ ಬಿಡಲಾಗಿದೆ.

ಹಸಿರು ಮಾರ್ಗದಲ್ಲಿ ದಟ್ಟಣೆ ಸಮಯದಲ್ಲಿ 10ರಿಂದ 11 ಸಾವಿರ ಮಂದಿ ಪ್ರಯಾಣಿಸುತ್ತಾರೆ. ವಿಶೇಷ ದಿನಗಳಂದು ಈ ಸಂಖ್ಯೆಯು 13ರಿಂದ 14 ಸಾವಿರಕ್ಕೂ ಅಧಿಕಗೊಳ್ಳುತ್ತದೆ. ಈ ಮಾರ್ಗದಲ್ಲಿ ದಿನಕ್ಕೆ 1.30 ಲಕ್ಷದಿಂದ 1.60 ಲಕ್ಷ ಮಂದಿ ಪ್ರಯಾಣಿಸುತ್ತಾರೆ ಎಂದು ಬಿಎಂಆರ್ ಸಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏರ್ಪೋರ್ಟ್‌ಗೆ ಮೆಟ್ರೋ : ಕೇಂದ್ರದ ಜತೆಗೆ ತೇಜಸ್ವಿ ಸೂರ‍್ಯ ಸಮಾಲೋಚನೆ

ಮೈಸೂರು ರಸ್ತೆ ಮೆಟ್ರೋ ನಿಲ್ದಾಣಿಂದ ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದ ಎಲ್ಲ ಮೆಟ್ರೋ ರೈಲುಗಳನ್ನು ಆರು ಬೋಗಿಗಳ ರೈಲುಗಳಾಗಿ ಪರಿವರ್ತಿಸಲಾಗಿದ್ದು ವಾಣಿಜ್ಯ ಸಂಚಾರ ನಡೆಸುತ್ತಿವೆ. 2020ರ ಮಾಚ್‌ರ್‍ ವೇಳೆಗೆ ಆರುಬೋಗಿಗಳ ಎಲ್ಲ 50 ರೈಲುಗಳ ಸಂಚಾರವನ್ನು ಮೊದಲ ಹಂತದ ಮೆಟ್ರೋ ಮಾರ್ಗದಲ್ಲಿ ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌)ದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು : ಚಲಿಸುತ್ತಿದ್ದ ಮೆಟ್ರೋ ರೈಲು ಬೋಗಿಯಲ್ಲಿ ಹೊಗೆ