ಬೆಂಗಳೂರು [ನ.08]:  ಎರಡನೇ ಹಂತದ ಮೆಟ್ರೋ ಕಾಮಗಾರಿಗೆ ಇನ್ನಷ್ಟು ಚುರುಕುಗೊಂಡಿದ್ದು, ಗೊಟ್ಟಿಗೆರೆ- ನಾಗವಾರದವರೆಗಿನ ರೀಚ್-6 ಮಾರ್ಗ ಮತ್ತು ಸುರಂಗ ಮಾರ್ಗದ ಕಾಮಗಾರಿಗೆ ಬಿಎಂಆರ್‌ಸಿಎಲ್ ಒಪ್ಪಿಗೆ ನೀಡಿದೆ.

ಹೀಗಾಗಿ ಮುಂದಿನ ಎರಡು ತಿಂಗಳ ಅವಧಿಯೊಳಗೆ ಗೊಟ್ಟಿಗೆರೆ- ನಾಗವಾರದ ವರೆಗಿನ ರೀಚ್- 6 ಮಾರ್ಗ  ಮತ್ತು ಸುರಂಗ ಮಾರ್ಗದ ಕಾಮಗಾರಿ ಆರಂಭಗೊಳ್ಳಲಿದೆ. ಅದಕ್ಕಾಗಿ ಗುತ್ತಿಗೆ ಪಡೆದ ಸಂಸ್ಥೆಗಳು ಸಕಲ ಸಿದಟಛಿತೆ ಮಾಡಿಕೊಳ್ಳುತ್ತಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ತಿಳಿಸಿದೆ. 

ರೀಚ್- 6ರ ಸುರಂಗ ಮಾರ್ಗದ ಪ್ಯಾಕೇಜ್-1  ಮತ್ತು ಪ್ಯಾಕೇಜ್- ಕ್ಕೆ ಸಂಬಂಧಿಸಿದಂತೆ ಸುರಂಗ ಮಾರ್ಗದ ಮತ್ತು ನಿಲ್ದಾಣಗಳ ವಿನ್ಯಾಸ ಹಾಗೂ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್ ಅಂಗೀಕಾರ ಪತ್ರ ನೀಡಿದೆ. ಪ್ಯಾಕೇಜ್- 1ನ್ನು ಮುಂಬೈನ ಮೆ.ಎಎಫ್‌ಕಾನ್ಸ್ ಇನ್ಫಾಸ್ಟ್ರಕ್ಚರ್ ಲಿಮಿಟೆಡ್‌ಗೆ ಸುರಂಗ ಮಾರ್ಗದ ಕಾಮಗಾರಿಗಾಗಿ ಗುತ್ತಿಗೆ ನೀಡಲಾಗಿದೆ. 

ಸೌತ್‌ರಾಂಪ್-ಸ್ವಾಗತ್ ರಸ್ತೆಯ ಎತ್ತರಿಸಿದ ನಿಲ್ದಾಣದಿಂದ ವೆಲ್ಲಾರ ಸುರಂಗ ನಿಲ್ದಾಣದವರೆಗಿನ 3.655 ಕಿ.ಮೀ. ಉದ್ದದ ನಿರ್ಮಾಣ ಕಾಮಗಾರಿಗೆ ಒಟ್ಟು 1526.33 ಕೋಟಿ ರು.ಗಳು ವೆಚ್ಚವಾಗಲಿದೆ. ಈ ಕಾಮಗಾರಿಯು 2.68 ಕಿ.ಮೀ ಉದ್ದ ಇರಲಿದ್ದು, ಮೂರು ಸುರಂಗ ಮಾರ್ಗದ ನಿಲಾಟಛಿಣಗಳು ಡೈರಿ ವೃತ್ತ, ಮೈಕೋ ಇಂಡಸ್ಟ್ರೀಸ್ ಮತ್ತು ಲ್ಯಾಂಗ್ಫೋರ್ಡ್ ಟೌನ್‌ನಲ್ಲಿ ನಿರ್ಮಾಣಗೊಳ್ಳಲಿವೆ.

ಪ್ಯಾಕೇಜ್- 4ರ ಗುತ್ತಿಗೆಯನ್ನು ಕೋಲ್ಕತ್ತಾದ ಮೆ.ಐಟಿಡಿ ಸಿಮೆಂಟೇಶನ್ ಇಂಡಿಯಾ ಲಿಮಿಟೆಡ್‌ಗೆ ನೀಡಲಾಗಿದ್ದು, ಈ ಸಂಸ್ಥೆ ಸುರಂಗ ಮಾರ್ಗದ ಕಾಮಗಾರಿ ನಡೆಸಲಿದೆ. ಟ್ಯಾನರಿ ರಸ್ತೆಯ ಸುರಂಗ ಮಾರ್ಗದ ನಿಲ್ದಾಣದಿಂದ ನಾಗವಾರ ನಿಲ್ದಾಣದವರೆಗಿನ ಕಾಮಗಾರಿಗೆ 1771.25  ಕೋಟಿ ರು.ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, 4.591 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗುವುದು. ಒಟ್ಟು 3.12 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು ಮತ್ತು ನಾಗವಾರದಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಪ್ಯಾಕೇಜ್‌೧ ಮತ್ತು 4 ರ ಕಾಮಗಾರಿಯಲ್ಲಿ ಸುರಂಗ ಕೊರೆಯುವ ಯಂತ್ರ(ಟನಲ್ ಬೋರಿಂಗ್ ಮೆಷನ್)  ಬಳಸಲಾಗುವುದು ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.