ನಿಮ್ಗೆ ಕರೆ ಮಾಡುವವರೆಲ್ಲಾ ಬೆಳದಿಂಗಳ ಬಾಲೆ ಆಗಿರೋದಿಲ್ಲ; ಬೆಂಗ್ಳೂರು ಪೊಲೀಸ್ರಿಂದ ಎಚ್ಚರಿಕೆ!
ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ, ಆರೋಗ್ಯ ಇಲಾಖೆ ಜೊತೆ ಪೊಲೀಸ್ ಇಲಾಖೆ ಕೂಡ ಅವಿರತ ಶ್ರಮ ವಹಿಸುತ್ತಿದೆ. ಇದರ ಜೊತೆಗೆ ಜನರಿಗೆ ಎಚ್ಚರಿಕೆ ಸಂದೇಶವನ್ನೂ ನೀಡುತ್ತಿದೆ. ಇದೀಗ ಬೆಂಗಳೂರು ಪೊಲೀಸರು ಸಿನಿಮಾ ಶೈಲಿಯಲ್ಲಿ ಸಾರ್ವಜನಿಕರಿಗೆ ಮಹತ್ವದ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು(ಮೇ.01): ಅನವಶ್ಯಕವಾಗಿ ಓಡಾಡುವವರಿಗೆ ಈಗಾಗಲೇ ಪೊಲೀಸರು ಲಾಠಿ ಏಟು, ವಾಹನ ಸೀಝ್, ದಂಡ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದೀಗ ಅಗತ್ಯ ವಸ್ತು ಖರೀದಿ ನೆಪದಲ್ಲಿ ಮನೆಯಿಂದ ಹೊರಬಂದು ಅನವಶ್ಯಕವಾಗಿ ತಿರುಗಾಡುವವರಿಗೆ ಬೆಂಗಳೂರು ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಹೀಗೆ ಓಡಾಡುವರಿಗೆ ಕರೆಯೊಂದು ಬರಲಿದೆ. ಆದರೆ ನಿಮಗೆ ಫೋನ್ ಮಾಡುವ ಅಪರಿಚಿತರೆಲ್ಲಾ ಬೆಳದಿಂಗಳ ಬಾಲೆ ಆಗಿರೋದಿಲ್ಲ.." ಎಚ್ಚರ..! ಎಂದು ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ.
ಒಂದು ಕರೆ ಮಾಡಿದ್ರೆ ಸಾಕು, ಮನೆ ಬಾಗಿಲಿಗೆ ಮೆಡಿಸಿನ್ ಬರುತ್ತೆ!.
ಬೇಕಾಬಿಟ್ಟಿ ಓಡಾಡೋರಿಗೆ ಚಾಟಿ ಬೀಸಿದ ಖಾಕಿ ಬೆಂಗಳೂರು ಪೊಲೀಸರು ಫೇಸ್‌ಬುಕ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪೊಲೀಸರ ಈ ಎಚ್ಚರಿಕೆ ಸಂದೇಶಕ್ಕೆ ಪ್ರಮುಖ ಕಾರಣವಿದೆ. ಇತ್ತೀಚೆಗೆ ಹಲವು ಕಾರಣ ನೀಡಿ ಹೊರಗಡೆ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸೋಂಕು ಹರಡುವಿಕೆ ಸಂಭವ ಜಾಸ್ತಿ ಇದೆ. ಇದೀಗ ಆರೋಗ್ಯ ಇಲಾಖೆ ದಿಢೀರ್ ಕರೆ ಮಾಡಿ ಆರೋಗ್ಯ ತಪಾಸಣೆ ನಡೆಸುತ್ತಿದೆ.
ಕೊನೆಗೂ ಸಿಕ್ಕಿಬಿದ್ದ ಪಾದರಾಯನಪುರ ಪುಂಡರ ಲೀಡರ್! ತಗಲಾಕಿಕೊಂಡಿದ್ದೇ ರೋಚಕ
ಈ ಕುರಿತು ಅರಿವು ಮೂಡಿಸಲು ಬೆಂಗಳೂರು ಪೊಲೀಸರು ನಿಮಗೆ ಫೋನ್ ಮಾಡುವ ಅಪರಿಚತರೆಲ್ಲಾ ಬೆಳಂದಿಗಳ ಬಾಲೆ ಅಗಿರುವುದಿಲ್ಲ. ಕರೋನಾ ಸಂಬಂಧಿಸಿದ ಫೋನ್ ಕಾಲ್ ಬರಬಹುದು ಅಂತ ವಾರ್ನಿಂಗ್ ನೀಡಿದ್ದಾರೆ. ಪೊಲೀಸರ ಎಚ್ಚರಿಕೆ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ ಅನವಶ್ಯಕವಾಗಿ ಓಡಾಡುವವರಿಗೆ ಹಾಗೂ ಕೊರೋನಾ ಸೋಂಕು ಹರಡದಂತೆ ತಡೆಯಲು ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.