ಒಂದು ಕರೆ ಮಾಡಿದ್ರೆ ಸಾಕು, ಮನೆ ಬಾಗಿಲಿಗೆ ಮೆಡಿಸಿನ್ ಬರುತ್ತೆ!

ಕೊರೋನಾ ಲಾಕ್ ಡೌನ್ ಸಂದರ್ಭ/ ಸಹಾಯವಾಣಿ ನೆರವು/   ಸಹಾಯ ವಾಣಿ  ನಂಬರ್ - 08042240048, 49000888ಕ್ಕೆ ಕರೆ ಮಾಡಿ ಔಷಧಿ ಆರ್ಡರ್ ಮಾಡಿದರೆ ಸಾಕು/

Karnataka Police Helpline for free medicine service during Lockdown time

ಬೆಂಗಳೂರು(ಏ. 30)   ಒಂದೇ ಒಂದು ಫೋನ್ ಕಾಲ್ ಗೆ ನಿಮ್ಮ‌ಮನೆ ತಲುಪಲಿದೆ ಜೀವರಕ್ಷಕ ಔಷಧಿ..  ಹೌದು ಇಂಥದ್ದೊಂದು ವ್ಯವಸ್ಥೆಯನ್ನು ಕೊರೋನಾ ಲಾಕ್ ಡೌನ್ ಸಮಯದಲ್ಲಿ ಮಾಡಲಾಗಿದೆ.  ಕರೋನಾ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗೆ ನಗರ ಪೊಲೀಸರು ಧಾವಿಸುತ್ತಿದ್ದಾರೆ. 

ಎಮರ್ಜೆನ್ಸಿ ಔಷಧಿ ಸೇವೆಗೆ  ಸೇವೆಗೆ ತೆರೆದಿದೆ ಪೊಲೀಸರು ಧಾವಿಸುತ್ತಿದ್ದಾರೆ.  ಸಹಾಯ ವಾಣಿ  ನಂಬರ್ - 08042240048, 49000888ಕ್ಕೆ ಕರೆ ಮಾಡಿ ಔಷಧಿ ಆರ್ಡರ್ ಮಾಡಿದರೆ ಸಾಕು.   ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರ ಸಹಾಯವಾಣಿ ಜನರಿಗೆ ಜೀವಸಂಜೀವಿನಿ ಆಗುತ್ತಿದೆ. 

ಪಾದರಾಯನಪುರದ ಸದ್ಯದ ಸ್ಥಿತಿ ಹೇಗಿದೆ?

ರಾಜ್ಯದಲ್ಲೆ ಮೊದಲ ಉಚಿತ ಔಷಧಿ ಸರಬರಾಜು ಸೇವೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.  ಹವ್ಯಾಸಿ Riders Republic ತಂಡ ಉಚಿತವಾಗಿ ಔಷಧಿ ವಿತರಣೆ ಸೇವೆ ಒದಗಿಸುತ್ತಿದೆ.  ಈಶಾನ್ಯ ಪೊಲೀಸರು, ನುರಿತ ವೈದ್ಯರ ತಂಡ, ರೈಡರ್ಸ್ ರಿಪಬ್ಲಿಕ್ ತಂಡ ಶ್ಲಾಘನೆಗೆ ಪಾತ್ರವಾಗಿದೆ.

ಜನರೆ ಪೊಲೀಸರಿಗೆ ಔಷಧಿ ನೀಡಿ ನಮ್ಮವರಿಗೆ ಒಪ್ಪಿಸಿ ಎನ್ನುತ್ತಿದ್ದಾರೆ.   ಜಿಲ್ಲೆ ,,ರಾಜ್ಯ,  ಹೊರರಾಜ್ಯಗಳಿಗೂ ಸಖಷ್ಟದ ಸಮಯದಲ್ಲಿ ಔಷಧ ಪೂರೈಕೆ ಮಾಡುವ ಮಹತ್ಕಾರ್ಯ ಮಾಡಲಾಗುತ್ತಿದೆ.  ನುರಿತ ವೈದ್ಯರ ತಂಡ ಆಯಾಯ ಜಿಲ್ಲೆ ವೈದ್ಯರ ಜೊತೆ ಸಮಾಲೋಚನೆ ನಡೆಸಿ ಔಷಧಿ ವಿತರಣೆ ಮಾಡುತ್ತಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Latest Videos
Follow Us:
Download App:
  • android
  • ios