ಕೊನೆಗೂ ಸಿಕ್ಕಿಬಿದ್ದ ಪಾದರಾಯನಪುರ ಪುಂಡರ ಲೀಡರ್! ತಗಲಾಕಿಕೊಂಡಿದ್ದೇ ರೋಚಕ
ಪಾದರಾಯನಪುರ ಗಲಾಟೆ ಪ್ರಕರಣ / ಕಿಂಗ್ ಪಿನ್ ಇರ್ಪಾನ್ ಪೊಲೀಸ್ ವಶಕ್ಕೆ/ ಇರ್ಫಾನ್ ನನ್ನು ವಶಕ್ಕೆ ಪಡೆದ ಜೆಜೆನಗರ ಪೊಲೀಸರು/ ಮೈಸೂರು ಮತ್ತು ಹೈದರಾಬಾದ್ ಭಾಗದಲ್ಲಿ ಇರ್ಫಾನ್ ಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು
ಬೆಂಗಳೂರು(ಏ. 27) ಪಾದರಾಯನಪುರ ಗಲಾಟೆ ಪ್ರಕರಣದ ಕಿಂಗ್ ಪಿನ್ ಈಗ ಪೊಲೀಸರ ವಶದಲ್ಲಿ ಇದ್ದಾನೆ. ಕಿಂಗ್ ಪಿನ್ ಇರ್ಪಾನ್ ನನ್ನು ಜೆಜೆನಗರ ಪೊಲೀಸರು ಬಂಧಿಸಿದ್ದಾರೆ.
ಪಾದರಾಯನಪುರ ಗಲಾಟೆ ನಂತರ ಇರ್ಫಾನ್ ಗಾಗಿ ಪೊಲೀಸರು ಮೈಸೂರು ಮತ್ತು ಹೈದರಾಬಾದ್ ನಲ್ಲಿ ಹುಡುಜಕಾಟ ನಡೆಸಿದ್ದರು. ಗಲಭೆ ದಿನವೆ ಇರ್ಫಾನ್ ತಮ್ಮ ಇರ್ಷಾದ್ ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಇರ್ಫಾನ್ ಓವೈಸಿ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದ ಇರ್ಫಾನ್ ಇದೇ ಲಿಂಕ್ ನಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಪಾದರಾಯನಪುರ ಕೃತ್ಯ ಪೂರ್ವನಿಯೋಜಿತ ಕೃತ್ಯವಾ?
ಪಾದರಾಯನಪುರ ಗಲಭೆ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ನಿನ್ನೆ ಸಂಜೆ ಬಂಧಿಸಲಾಗಿದೆ. ಬೆಂಗಳೂರು ಬಿಟ್ಟು ಅವ್ನು ಹೋಗಿರಲಿಲ್ಲ. ಸ್ಕಾರ್ಪ್ ಬ್ಯುಸಿನಸ್ ಮಾಡ್ತಿದ್ದ ಪ್ರಚೋದನೆ ಮಾಡಿದ್ದು ಇವನೇ ಆನ್ನೋದು ಗೊತ್ತಾಗಿದೆ. ಸದ್ಯ ವಿಚಾರಣೆ ಮಾಡ್ತಿದ್ದೇವೆ, ಇದರ ಹಿಂದೆ ಯಾರಿದ್ದಾರೆ ಅನ್ನೋ ಬಗ್ಗೆ ತನಿಖೆ ನಡೆಸ್ತಿದ್ದೇವೆ ಎಂದು ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ.
ಪಾದರಾಯನಪುರಕ್ಕೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿದ್ದ ವೇಳೆ ಅಲ್ಲಿನ ಪುಂಡರು ಅವರ ಮೇಲೆಯೇ ದಾಳಿ ನಡೆಸಿದ್ದರು. ಜನರನ್ನು ಕ್ವಾರಂಟೈನ್ ಮಾಡಲು ಕೇಳಲು ಹೋಗಿದ್ದ ಸಿಬ್ಬಂದಿ ಮೇಲೆ ಹಲ್ಲೆಯಾಗಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊರೋನಾ ವಾರಿಯರ್ಸ್ ಮೇಲೆ ನಡೆದ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಪಾದರಾಯನಪುರದ ಪುಂಡರನ್ನು ಹೆಡೆಮುರಿ ಕಟ್ಟಿದ್ದ ಪೊಲೀಸರು ಅವರನ್ನು ರಾಮನಗರ ಜೈಲಿಗೆ ಶಿಪ್ಟ್ ಮಾಡಿದ್ದರು. ಇದಾದ ಮೇಲೆ ಕೈದಿಗಳಲ್ಲಿಯೂ 5 ಜನರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಅವರನ್ನು ಮತ್ತೆ ಬೆಂಗಳೂರಿಗೆ ಕರೆತಂದು ಕ್ವಾರಂಟೈನ್ ಮಾಡಲಾಗಿದೆ.