ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಮದುವೆ ಆಗುವುದಾಗಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಲಕ್ಷಾಂತರ ರುಪಾಯಿ ಹಣ ಪಡೆದು ವಂಚಿಸಿರುವ ಆರೋಪದಡಿ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು: ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಮದುವೆ ಆಗುವುದಾಗಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಲಕ್ಷಾಂತರ ರುಪಾಯಿ ಹಣ ಪಡೆದು ವಂಚಿಸಿರುವ ಆರೋಪದಡಿ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಜೆಡಿಎಸ್‌ ಜಿಲ್ಲಾಧ್ಯಕ್ಷ (JDS District President)ಎನ್ನಲಾದ ಜಿ.ಕೆ.ಗೌಡ (GK Gowda) ಎಂಬುವವನ ವಿರುದ್ಧ ಕೋಲ್ಕತ್ತಾ (Kolkata) ಮೂಲದ ಮಹಿಳೆ ಆರೋಪ ಮಾಡಿದ್ದಾರೆ. ಎಂಟು ವರ್ಷಗಳ ಹಿಂದೆ ನಗರದ ಲೈವ್‌ ಬ್ಯಾಂಡ್‌ನಲ್ಲಿ (Live band) ಕೆಲಸ ಮಾಡುವಾಗ ಜಿ.ಕೆ.ಗೌಡನ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಆತ್ಮೀಯರಾಗಿದ್ದೆವು. ಈ ವೇಳೆ ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಮೂರು ಬಾರಿ ಗರ್ಭಪಾತ ಸಹ ಮಾಡಿಸಿದ್ದ. ಅಲ್ಲದೇ ನಾನಾ ಕಾರಣ ಹೇಳಿ ನನ್ನಿಂದ 20 ಲಕ್ಷ ರು. ಹಣ ಪಡೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ನಾಲ್ಕು ವರ್ಷ ಪ್ರೀತಿಸಿ ಮೋಸ ಮಾಡಿದ ಯುವತಿ: ಮನನೊಂದು ಪ್ರಿಯಕರ ಸಾವಿಗೆ ಶರಣು

ಕಳೆದ ಮೂರು ತಿಂಗಳಿಂದ ಜಿ.ಕೆ.ಗೌಡ ನನ್ನ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾನೆ. ನನ್ನ ಮೊಬೈಲ್‌ ಸಂಖ್ಯೆಯನ್ನು ಸ್ನೇಹಿತರಿಗೆ ನೀಡಿದ್ದು, ಅವರು ಕರೆ ಮಾಡಿ ಪೂರ್ತಿ ರಾತ್ರಿಗೆ ನಿನ್ನ ಬೆಲೆ ಎಷ್ಟು ಎಂದು ಅಸಹ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಈತನ ವಿರುದ್ಧ ದೂರು ನೀಡಿರುವ ಮಹಿಳೆ, ಎಫ್‌ಐಆರ್‌ ದಾಖಲಿಸುವುದು ಬೇಡ ಎಂದಿದ್ದಾರೆ. ಹಿರಿಯ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆಯಾಗಬೇಕಂದ್ರೆ ಮತಾಂತರವಾಗು; ವರಸೆ ಬದಲಿಸಿದ ಮುಸ್ಲಿಂ ಯುವಕ