Asianet Suvarna News Asianet Suvarna News

ನಾಲ್ಕು ವರ್ಷ ಪ್ರೀತಿಸಿ ಮೋಸ ಮಾಡಿದ ಯುವತಿ: ಮನನೊಂದು ಪ್ರಿಯಕರ ಸಾವಿಗೆ ಶರಣು

ಪ್ರೀತಿಸಿದ ಹುಡುಗಿ ಕೈಕೊಟ್ಟು ಮೋಸ ಮಾಡಿದಳೆಂದು ಮನನೊಂದಿದ್ದ ಹಾಸನದ ಯುವಕ ಚನ್ನೈನ ಲಾಡ್ಜ್‌ನಲ್ಲಿ ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ.

Four years love Girl cheated for Hassan boy passionate lover hanging on Chennai lodge sat
Author
First Published Jan 31, 2023, 12:39 PM IST

ಹಾಸನ (ಜ.31): ಪ್ರೀತಿಸಿದ ಹುಡುಗಿ ಕೈಕೊಟ್ಟು ಮೋಸ ಮಾಡಿದಳೆಂದು ಮನನೊಂದಿದ್ದ ಹಾಸನದ ಯುವಕ ಚನ್ನೈನ ಲಾಡ್ಜ್‌ನಲ್ಲಿ ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಪ್ರೀತಿಗೆ ಒಪ್ಪುತ್ತಿಲ್ಲವೆಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ, ಇಲ್ಲೊಬ್ಬ ಯುವಕ ತನ್ನ ಪ್ರೇಯಸಿ ಕೈಕೊಟ್ಟಳೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚೆನ್ನೈ ನ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕನನ್ನು ಹಾಸನ ನಗರದ ಸಂಗಮೇಶ್ವರ ಬಡಾವಣೆ ಯ ಕಾರ್ತಿಕ್ (26) ಎಂದು ಗುರುತಿಸಲಾಗಿದೆ. ಈ ಯುವಕ ಕಳೆದ ನಾಲ್ಕು ವರ್ಷಗಳಿಂದ ಹೊಳೆನರಸೀಪುರ ತಾಲ್ಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ, ಜನವರಿ 27 ರಂದು ತಾನು ಚೆನ್ನೈಲಿದ್ದು ಅಲ್ಲಿಗೇ ಬರುವಂತೆ ಯುವತಿ ಕರೆದಿದ್ದಾಳೆ. ಇನ್ನು ಆಕೆಯ ಮಾತನ್ನು ನಂಬಿಕೊಂಡು ಪ್ರೀತಿಗಾಗಿ ಹಂಬಲಿಸಿದ ಯುವಕ ಕಾರ್ತಿಕ್ ಅಲ್ಲಿ ಇಲ್ಲಿ ಹಣವನ್ನು ಹೊಂದಿಸಿಕೊಂಡು ಚೆನ್ನೈ ನಗರಕ್ಕೆ ಹೋಗಿದ್ದಾನೆ. ಆದರೆ, ಚೆನ್ನೈಗೆ ಹೋದ ಬಳಿಕ ಯುವತಿ ತಾನು ಹಾಸನದಲ್ಲೇ ಇರೋದಾಗಿ ಹೇಳುವ ಮೂಲಕ ಯಾಮಾರಿಸಿದ್ದಾಳೆ. 

ಹಾಸನದದಲ್ಲಿ ಮಹಿಳೆಯ ಕೊಲೆ ಮಾಡಿ ಲೀವಿಂಗ್‌ ಪಾರ್ಟನರ್‌ ಪರಾರಿ

ಮೋಸ ಮಾಡಿದಳೆಂದು ನೇಣಿಗೆ ಶರಣು:
ಇನ್ನು ಹಾಸನ ನಗದಿಂದ ಚನ್ನೈಗೆ ಹೋಗಿದ್ದರೂ ಯುವತಿ ತನಗೆ ಸಿಗದೇ ಮೋಸ ಮಾಡಿದ್ದಾಳೆಂದು ಮನನೊಂದು ಅಲ್ಲಿ ತಂಗಲು ರೂಮ್‌ಮಾಡಿದ್ದ ಲಾಡ್ಜ್‌ನಲ್ಲಿಯೇ ಯುವಕ ನೇಣಿಗೆ ಶರಣಾಗಿದ್ದಾನೆ. ಇನ್ನು ಮೃತ ಯುವಕ ಹಾಸನದ ಪ್ರತಿಷ್ಠಿತ ಹೊಟೆಲ್ ನಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದನು. ಯುವತಿಯು, ಹುಡುಗನನ್ನು ನಂಬಿಸಿ ಮೋಸಮಾಡಿದ್ದಾಳೆ ಎಂದು ಯುವಕನ ಕುಟುಂಬ ಸದಸ್ಯರ ಆರೋಪ ಮಾಡಿದ್ದಾರೆ. ಜೊತೆಗೆ, ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸುತ್ತಿದ್ದಾರೆ.

ಹಾಸನಕ್ಕೆ ಮೃತ ದೇಹ ರವಾನೆ: ಕಳೆದ ನಾಲ್ಕು ವರ್ಷಗಳ ಪ್ರೀತಿಯಲ್ಲಿ ಮೋಸ ಆಗಿರುವುದನ್ನು ಸಹಿಸದೇ ಯುವಕ ಸಾವನ್ನಪ್ಪಿದ್ದನೆ. ಪ್ರೀತಿಸಿ ಕೈ ಕೊಟ್ಟಿದ್ದಾಳೆ. ಈ ಸಾವಿಗೆ ಯುವತಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹಾಸನ ನಗರದ ನಿವಾಸಿಗಳು ಆಗ್ರಹಿಸಿದ್ದಾರೆ. ಇನ್ನು ಯುವಕ ಲಾಡ್ಜ್‌ನಲ್ಲಿ ಸಾವನ್ನಪ್ಪಿದ ಘಟನೆಗೆ ಕುರಿತಂತೆ ಚೆನ್ನೈನ ಆರಂಬಕ್ಕಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗ್ಗೆ ಹಾಸನಕ್ಕೆ ಯುವಕನ ಮೃತದೇಹವನ್ನು ತರಲಾಯಿತು. ಇನ್ನು ಎದೆಯುದ್ದ ಬೆಳೆದು ಕುಟುಂಬಕ್ಕೆ ಆಸರೆಯಾಗಬಹುದು ಎಂದು ನಿರೀಕ್ಷಿಸಿದ್ದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ಉತ್ತರ ಪ್ರದೇಶದ ಪವನ್‌ನನ್ನು ಮದುವೆಯಾದ ಸ್ವೀಡಿಷ್ ಮಹಿಳೆ..!

ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿ ಕೊಲೆ: ಹಾಸನ (ಜ.27): ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ತನ್ನೊಂದಿಗೆ ಜೀವನ ಮಾಡುತ್ತಿದ್ದ ಯುವತಿಯೊಬ್ಬಳನ್ನು ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.  ಹಾಸನ ತಾಲೂಕಿನ ಗುಡ್ಡೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 23 ವರ್ಷ ಪ್ರಾಯದ ಸಿರಿ ಕೊಲೆಯಾದ ಯುವತಿ. 26 ವರ್ಷದ ಆದಿ ಕೊಲೆ ಮಾಡಿದ ಆರೋಪಿ. ಇಬ್ಬರೂ 8 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ (Facebook) ಪರಸ್ಪರ ಪರಿಚಯವಾಗಿದ್ದರು. ಇವರ ಫೇಸ್‌ಬುಕ್‌ ಸ್ನೇಹ ಪ್ರೀತಿಗೆ ತಿರುಗಿದ್ದು, ಇಬ್ಬರು ಜೊತೆಯಾಗಿಯೇ ಜೀವನ ಮಾಡಲು ಶುರು ಮಾಡಿದ್ದರು.  ಆದರೆ ಈಗ ಯುವತಿಯ ಕೊಲೆ ಆಗಿದ್ದು, ಲೀವಿಂಗ್  ಟುಗೆದರ್ (Living Together) ದುರಂತ ಅಂತ್ಯವಾಗಿದೆ.  ನಿನ್ನೆ ರಾತ್ರಿ ಸಿರಿಯನ್ನು ಕೊಲೆ ಮಾಡಿ ಆದಿ ಪರಾರಿಯಾಗಿದ್ದಾನೆ. ಒಂದು ತಿಂಗಳ ಹಿಂದಷ್ಟೇ ಗುಡ್ಡೇನಹಳ್ಳಿ (Guddenahalli) ಗ್ರಾಮಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ ಸಿರಿ ಹಾಗೂ ಆದಿ ನಗರದ ಪೆಟ್ರೋಲ್ ಬಂಕೊಂದರಲ್ಲಿ ಕೆಲಸ ಮಾಡುತ್ತಿದ್ದರು. 

Follow Us:
Download App:
  • android
  • ios