ಬೆಂಗಳೂರಿನ ಚಲ್ಲಘಟ್ಟದಲ್ಲಿ ರಾತ್ರಿ ವೇಳೆ ವಿಚಿತ್ರ ಧ್ವನಿಗಳು ಕೇಳಿಬರುತ್ತವೆ. ಅಧಿಮನೋವಿಜ್ಞಾನಿ ಡಾ. ರಾಹುಲ್ ಕುಮಾರ್ ಈ ಪ್ರದೇಶದಲ್ಲಿ ಅತೀಂದ್ರಿಯ ಶಕ್ತಿಯಿದೆ ಎಂದು ಹೇಳುತ್ತಾರೆ.
ಬೆಂಗಳೂರು: ಕೆಲವೊಂದು ಸ್ಥಳಗಳಿಗೆ ರಾತ್ರಿ ಒಬ್ಬೊಬ್ಬರೇ ತೆರಳಬಾರದು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ. ಅಂತಹ ಒಂದು ಸ್ಥಳ ರಾಜಧಾನಿ ಬೆಂಗಳೂರಿನಲ್ಲಿದೆ. ಬೆಂಗಳೂರಿನ ಚಲ್ಲಘಟ್ಟದ (Challaghatta, Bengaluru) ಭಾಗದಲ್ಲಿ ರಾತ್ರಿ ವಿಚಿತ್ರವಾದ ಧ್ವನಿ, ವ್ಯಕ್ತಿಗಳು ಓಡಾಡಿದಂತಾಗುತ್ತಿತ್ತು ಎಂಬ ಮಾತುಗಳು ಕೇಳಿ ಬರುತ್ತವೆ. ಈ ವಿಚಿತ್ರ ಅನುಭವವಾಗುವ ಸ್ಥಳದಲ್ಲಿ 90 ಜನರು ಸಾವನ್ನಪ್ಪಿದ್ದರು. 1990ರಂದು ನಡೆದ ದುರಂತದಲ್ಲಿ 90 ಜನರು ಮೃತರಾದ್ರೆ, ಸುಮಾರು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆ ಭಾಗದಲ್ಲಿ ಅತೀಂದ್ರ ಶಕ್ತಿಯ ಸಂಚಾರವಿತ್ತು ಎಂದು Paranormal Expert ಆಗಿರುವ ಡಾ.ರಾಹುಲ್ ಕುಮಾರ್ ಹೇಳುತ್ತಾರೆ.
ಡಾ.ರಾಹುಲ್ ಕುಮಾರ್ (Dr.Rahul Kumar) ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಬೆಂಗಳೂರಿನ ಚಲ್ಲಘಟ್ಟ ಪ್ರದೇಶದ ಬಗ್ಗೆ ಮಾತನಾಡಿದ್ದಾರೆ. ಅಧಿಮನೋವಿಜ್ಞಾನ (Parapsychology) ಅನ್ನೋದು ಅತೀಂದ್ರ ಶಕ್ತಿಗಳ ಕುರಿತ ಅಧ್ಯಯನ ಮಾಡುತ್ತದೆ. ಡಾ.ರಾಹುಲ್ ಕುಮಾರ್ (Paranormal Expert) ಈ ವಿಷಯಗಳ ಕುರಿತು ಅಧ್ಯಯನ ಮಾಡಿದ ವ್ಯಕ್ತಿಯಾಗಿದ್ದಾರೆ. ಚಲ್ಲಘಟ್ಟದಲ್ಲಿ ತನಿಖೆಗೆ ಮುಂದಾದ ರಾಹುಲ್ ಕುಮಾರ್ ಅವರಿಗೆ 1990ರ ದುರಂತ ಇದಕ್ಕೆ ಲಿಂಕ್ ಆಗಿರೋ ವಿಷಯ ತಿಳಿಯುತ್ತದೆ.
ಏನಿದು ಚಲ್ಲಘಟ್ಟ ಹಾರರ್?
14ನೇ ಫೆಬ್ರವರಿ 1990ರಂದು ಏರ್ ಇಂಡಿಯಾ ಪ್ರಯಾಣಿಕರ ವಿಮಾನವೊಂದು ಮುಂಬೈನಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸುತ್ತದೆ. ಬೆಳಗ್ಗೆ 11.50ಕ್ಕೆ ಮುಂಬೈನಿಂದ ಏರ್ ಇಂಡಿಯಾ ವಿಮಾನ ಟೇಕಾಫ್ ಆಗುತ್ತದೆ. ಮಧ್ಯಾಹ್ನ 12.50 ಅಥವಾ 1 ಗಂಟೆಗೆ ಈ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಲ್ಯಾಂಡಿಂಗ್ ವೇಳೆ ಈ ವಿಮಾನ ಪತನವಾಗುತ್ತದೆ. ಈ ದುರಂತದಲ್ಲಿ 90 ಜನರು ಮೃತರಾದ್ರೆ, 50 ಜನರು ಪ್ರಾಣಾಪಾಯದಿಂದ ಪಾರಾಗುತ್ತಾರೆ. ಈ ಘಟನೆ ಬಳಿಕ ದುರಂತ ನಡೆದ ಪರಿಸರದ ವ್ಯಾಪ್ತಿಯಲ್ಲಿ ವಾಸವಾಗಿರುವ ಜನರಿಗೆ ವಿಚಿತ್ರ ಅನುಭವಗಳು ಉಂಟಾಗಲು ಶುರುವಾದವು.
ರಾತ್ರಿ ಜನರ ಕಿರುಚಾಟ ಕೇಳಿಸುತ್ತದೆ. ಕೆಲವೊಮ್ಮೆ ಸುಟ್ಟ ವಾಸನೆ ಬರುತ್ತದೆ. ತಮ್ಮ ಪ್ರದೇಶದಲ್ಲಿ ಯಾವುದೋ ಒಂದು ದುರಂತ ನಡೆದಿರುವ ಫೀಲ್ ಆಗುತ್ತದೆ ಎಂದು ಇಲ್ಲಿನ ಜನರು ಹೇಳಲು ಆರಂಭಿಸಿದರು. ಈ ಸಂಬಂಧ ಸ್ಥಳೀಯ ಕಾರ್ಪೋರೇಟರ್‌ಗೆ ದೂರು ಸಹ ನೀಡಿದ್ದರು. ಈ ಸಂಬಂಧ ತನಿಖೆ ನಡೆಸುವಂತೆ ಕೆಲವರು ನಮ್ಮನ್ನು ಸಂಪರ್ಕಿಸಿದರು. ಈ ಭಯದಿಂದಾಗಿ ಜನರು ಇಲ್ಲಿ ವಾಸಿಸಲು ಬರುತ್ತಿಲ್ಲ. ವಾಸವಾಗಿರೋರು ಮನೆ ಖಾಲಿ ಮಾಡುವ ಚಿಂತನೆಯಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಇಲ್ಲಿಯ ರಿಯಲ್ ಎಸ್ಟೇಟ್ ವ್ಯಾಲ್ಯೂ ಕಡಿಮೆಯಾಗಿದೆ. ಹಾಗಾಗಿ ಈ ಸಂಬಂಧ ತನಿಖೆ ನಡೆಸುವಂತೆ ನಮ್ಮನ್ನು ಕೇಳಿಕೊಳ್ಳಲಾಗಿತ್ತು.
ಆ ಹೆಸರು ಸೌರವ್ ಆಗಿತ್ತು
ಈ ಸಂಬಂಧ ನಾವು ಎರಡು ದಿನ ತನಿಖೆ ನಡೆಸಲಾಯ್ತು. ಮೊದಲ ಸ್ಥಳೀಯರನ್ನು ಸಂಪರ್ಕಿಸಿ ಅವರಿಗೆ ಆಗುತ್ತಿರೋ ಅನುಭವಗಳ ಬಗ್ಗೆ ತಿಳಿದುಕೊಳ್ಳಲಾಯ್ತು. ರಾತ್ರಿ ಅಲ್ಲಿ ತನಿಖೆ ಆರಂಭಿಸಿದಾಗ ಹೊಸ ಹೊಸ ವಿಷಯಗಳು ತಿಳಿದವು. ಅಲ್ಲಿ ನಮಗೆ ಇವಿಪಿ (Electronic Voice phenomena) ಸಿಕ್ತು. ಇವಿಪಿ ಅಂದ್ರೆ ಯಾವುದೋ ಒಂದು ಅಗೋಚರ ಶಕ್ತಿ ನಮ್ಮನ್ನು ಸಂಪರ್ಕಿಸಲು ಅಥವಾ ಮಾತನಾಡಲು ಪ್ರಯತ್ನಿಸುತ್ತಿದೆ ಎಂದರ್ಥ. ಈ EVPಯಲ್ಲಿ ನಮಗೆ ಹೆಸರೊಂದು ಪದೇ ಪದೇ ಕೇಳಿಸುತ್ತಿತ್ತು.
ಆಗ ನಾವು ವಿಮಾನ ದುರಂತದಲ್ಲಿ ಮೃತರ ಹೆಸರು ಪರಿಶೀಲನೆ ಮಾಡಲು ಮುಂದಾದೇವು. ಮೃತರ ಲಿಸ್ಟ್ ಚೆಕ್ ಮಾಡಿದಾಗ ಸೀಟ್ ನಂಬರ್ 51ರಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 35 ವರ್ಷದ ವ್ಯಕ್ತಿಯ ಹೆಸರು ಹೋಲಿಕೆಯಾಯ್ತು. ಆ ಹೆಸರು ಸೌರವ್ ಆಗಿತ್ತು. ಇಷ್ಟು ಮಾತ್ರವಲ್ಲ ಅಲ್ಲಿದ್ದ ಮರಕ್ಕೆ ಕಟ್ಟಲಾದ ಉಯ್ಯಾಲೆ ತೂಗುವ ಮೂಲಕ ತನ್ನ ಖಚಿತತೆಯನ್ನು ದೃಢಪಡಿಸಿತು ಎಂದು ರಾಹುಲ್ ಕುಮಾರ್ ಹೇಳುತ್ತಾರೆ.
