ಭಾರತದ 5 ಭಯಾನಕ ರೈಲು ನಿಲ್ದಾಣಗಳು; ಕನ್ನಡಿಗರ ಪಕ್ಕದಲ್ಲೇ ಉಂಟು, ನಿಗೂಢತೆಯ ನಂಟು!
ಭಾರತದ 5 ರೈಲು ನಿಲ್ದಾಣಗಳಲ್ಲಿ ದೆವ್ವಗಳು ಓಡಾಡುತ್ತವೆ ಎಂದು ಸ್ಥಳೀಯರು ನಂಬುತ್ತಾರೆ. ಈ ಕಾರಣದಿಂದಾಗಿ ಈ ರೈಲು ನಿಲ್ದಾಣಗಳಿಗೆ ಹೋಗಲು ಭಯಪಡುತ್ತಾರೆ. ಇದರ ಬಗ್ಗೆ ವಿವರವಾಗಿ ನೋಡೋಣ.

ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಪ್ರತಿದಿನ 19 ಸಾವಿರಕ್ಕೂ ಹೆಚ್ಚು ರೈಲುಗಳು ಚಲಿಸುತ್ತವೆ. ಇದರಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ದೇಶಾದ್ಯಂತ 7 ಸಾವಿರಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ಹೆಚ್ಚಿನ ರೈಲು ನಿಲ್ದಾಣಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ.
ಈ ಹಿನ್ನೆಲೆಯಲ್ಲಿ, ಭಾರತದಲ್ಲಿ 5 ನಿಗೂಢ ರೈಲು ನಿಲ್ದಾಣಗಳಿವೆ. ಈ ರೈಲು ನಿಲ್ದಾಣಗಳಲ್ಲಿ ದೆವ್ವಗಳು ಓಡಾಡುತ್ತವೆ ಮತ್ತು ಅಲೌಕಿಕ ಶಕ್ತಿಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಯಾವ ರೈಲು ನಿಲ್ದಾಣಗಳು ಎಂದು ನೋಡೋಣ.
ಲೂಧಿಯಾನ, ಬರೋಗ್ ರೈಲು ನಿಲ್ದಾಣ
ಲೂಧಿಯಾನ ರೈಲು ನಿಲ್ದಾಣ: ಪಂಜಾಬ್‌ನ ಲೂಧಿಯಾನ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ದುಃಖದಿಂದ ಸತ್ತ ಮಹಿಳೆಯೊಬ್ಬರ ಆತ್ಮ ಓಡಾಡುತ್ತದೆ ಎಂಬ ವದಂತಿ ಹಬ್ಬಿದೆ. ಈ ನಿಲ್ದಾಣದಲ್ಲಿ ಭಯಾನಕ ಕಿರುಚಾಟಗಳನ್ನು ಕೇಳಿದ್ದಾಗಿ ಮತ್ತು ಭ್ರಮೆಗಳನ್ನು ಕಂಡಿದ್ದಾಗಿ ಹಲವರು ಹೇಳಿದ್ದಾರೆ. ಇದು ಭಾರತದ ಅತ್ಯಂತ ನಿಗೂಢ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.
ಬರೋಗ್ ರೈಲು ನಿಲ್ದಾಣ: ಹಿಮಾಚಲ ಪ್ರದೇಶದಲ್ಲಿರುವ ಬರೋಗ್ ರೈಲು ನಿಲ್ದಾಣವು ಸುಂದರವಾದ ಪರ್ವತಗಳ ಹಿನ್ನೆಲೆಯಲ್ಲಿದೆ. ಇದು ವಿಚಿತ್ರ ಕಥೆಗಳಿಗೆ ಹೆಸರುವಾಸಿಯಾಗಿದೆ. ಈ ರೈಲು ನಿಲ್ದಾಣದ ವಾಸ್ತುಶಿಲ್ಪಿ ಕರ್ನಲ್ ಬರೋಗ್ ಅದರ ನಿರ್ಮಾಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು ಮತ್ತು ಸುರಂಗದ ಬಳಿ ಅವರ ಆಕೃತಿ ಓಡಾಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ದೆಹಲಿ ರೈಲು ನಿಲ್ದಾಣದ ನೂಕುನುಗ್ಗಲಿನಲ್ಲಿ 18 ಜನರು ಸಾವು; ಏನಾಯಿತು? ಯಾರ ತಪ್ಪು?
ಬೆಗುನ್‌ಕೋಡರ್ ರೈಲು ನಿಲ್ದಾಣ
ಬೆಗುನ್‌ಕೋಡರ್ ರೈಲು ನಿಲ್ದಾಣ: ಕಾಡುಗಳಿಂದ ಆವೃತವಾದ ಪಶ್ಚಿಮ ಬಂಗಾಳದಲ್ಲಿರುವ ಬೆಗುನ್‌ಕೋಡರ್ ನಿಲ್ದಾಣವು ದೆವ್ವದ ಕಥೆಗಳಿಗೆ ಹೆಸರುವಾಸಿಯಾಗಿದೆ. ಬಿಳಿ ಸೀರೆಯುಟ್ಟ ಮಹಿಳೆಯೊಬ್ಬರು ರೈಲು ನಿಲ್ದಾಣದಲ್ಲಿ ಓಡಾಡುತ್ತಾರೆ ಮತ್ತು ರಾತ್ರಿಯಲ್ಲಿ ಹಳಿಗಳ ಮೇಲೆ ನಡೆಯುತ್ತಾರೆ ಎಂದು ಸ್ಥಳೀಯರು ನಂಬುತ್ತಾರೆ.
ಈ ಕಟ್ಟುಕಥೆಗಳಿಗೆ ಹೆದರಿ ರೈಲು ಸಿಬ್ಬಂದಿಗಳು ಇಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಈ ರೈಲು ನಿಲ್ದಾಣವನ್ನು ಮುಚ್ಚಲಾಗಿದ್ದು, ಇತ್ತೀಚೆಗೆ ಮತ್ತೆ ತೆರೆಯಲಾಗಿದೆ. ಆದರೆ ಬಿಳಿ ಸೀರೆಯ ಮಹಿಳೆ ಓಡಾಡುವ ಕಥೆಗಳು ಮಾತ್ರ ನಿಂತಿಲ್ಲ.
ಕನ್ನಡಿಗರ ಪಕ್ಕದ ಚಿತ್ತೂರು ರೈಲು ನಿಲ್ದಾಣ:
ನೈನಿ ರೈಲು ನಿಲ್ದಾಣ: ಉತ್ತರ ಪ್ರದೇಶದಲ್ಲಿರುವ ನೈನಿ ರೈಲು ನಿಲ್ದಾಣವು ವಿಚಿತ್ರ ಘಟನೆಗಳಿಗೆ ಹೆಸರುವಾಸಿಯಾಗಿದೆ. ಈ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ದೆವ್ವದ ಆಕೃತಿಯನ್ನು ನೋಡಿದ್ದಾಗಿ ಸ್ಥಳೀಯರು ಹೇಳುತ್ತಾರೆ. ಗಂಗಾ ನದಿಯ ಸಮೀಪದಲ್ಲಿರುವ ಈ ನಿಲ್ದಾಣವು ಹಲವು ರಹಸ್ಯಗಳನ್ನು ಹೊಂದಿದೆ ಎಂದು ಕಥೆಗಳು ಹೇಳುತ್ತವೆ.
ಚಿತ್ತೂರು ರೈಲು ನಿಲ್ದಾಣ: ಕರ್ನಾಟಕದ ಪಕ್ಕದಲ್ಲಿಯೇ ಇರುವ ನೆರೆರಾಜ್ಯ ಆಂಧ್ರಪ್ರದೇಶದ ಚಿತ್ತೂರು ರೈಲು ನಿಲ್ದಾಣದಲ್ಲಿ ಹಳಿಗಳ ಮೇಲೆ ಕೊಲೆಗೀಡಾದ ಮಹಿಳೆಯೊಬ್ಬರ ಆತ್ಮ ಓಡಾಡುತ್ತದೆ ಎಂದು ನಂಬಲಾಗಿದೆ. ಚಿತ್ತೂರಿನಲ್ಲಿ ನೂರಾರು ಕನ್ನಡಿಗ ಕುಟುಂಬಗಳು ಕೂಡ ವಾಸ ಮಾಡುತ್ತಿವೆ. ಇನ್ನು ಇಲ್ಲಿನ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಗಳು ಹೆಚ್ಚಾಗಿ ರಾತ್ರಿಯಲ್ಲಿ ಆ ಮಹಿಳೆಯ ಕಿರುಚಾಟವನ್ನು ಕೇಳುತ್ತಾರೆ ಎಂದು ಹೇಳುತ್ತಾರೆ. ಇದರಿಂದಾಗಿ ರಾತ್ರಿಯಲ್ಲಿ ಈ ರೈಲು ನಿಲ್ದಾಣಕ್ಕೆ ಒಬ್ಬಂಟಿಯಾಗಿ ಹೋಗಲು ಹೆದರುತ್ತಾರೆ.