ಕಾರಿನ ಟಾಪ್ ಮೇಲೆ ಮೂರು ನಾಯಿಮರಿಗಳನ್ನು ನಿಲ್ಲಿಸಿ ವೇಗವಾಗಿ ಕಾರು ಓಡಿಸಿದ ಯುವಕನ ವಿರುದ್ಧ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಬೆಂಗಳೂರಿನ ಕಲ್ಯಾಣನಗರದಲ್ಲಿ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಯುವಕನನ್ನು ಬಂಧಿಸಲಾಗಿದೆ.

ಎರಡು ಶಿಟ್ಜು ತಳಿಯ ಶ್ವಾನಗಳನ್ನು ಕಾರಿನ ಟಾಪ್ ಮೇಲೆ ನಿಲ್ಲಿಸಿ ವೇಗವಾಗಿ ಯುವಕನೋರ್ವ ವೇಗವಾಗಿ ಕಾರು ಓಡಿಸಿದ ಘಟನೆ ನಡೆದಿದೆ. ಇದನ್ನು ಗಮನಿಸಿದ ಜನರು ಈ ಕಾರು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಆತ ಇದನ್ನು ಪ್ರಶ್ನಿಸಿದ ಸಾರ್ವಜನಿಕರನ್ನೇ ನಿಂದಿಸಿದ ಘಟನೆ ನಡೆದಿದೆ, ಶಿಟ್ಜು ತಳಿಯ ಪುಟ್ಟ ನಾಯಿಮರಿಗಳು ಇವುಗಳಾಗಿದ್ದು, ಮಾಲೀಕನ ಕಿಡಿಗೇಡಿ ತನದ ವರ್ತನೆಯಿಂದ ನಾಯಿಗಳು ಭಯಭೀತರಾಗಿ ಕಾರಿನಿಂದ ಇಳಿಯಲು ನೋಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಕಾರು ಚಾಲಕನ ಈ ಕಿಡಿಗೇಡಿತನದ ವರ್ತನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತನನ್ನು ಹಿಡಿದು ಶಿಕ್ಷೆ ನೀಡುವಂತೆ ವೀಡಿಯೋ ನೋಡಿದ ಅನೇಕರು ಆಗ್ರಹಿಸಿದ್ದಾರೆ. 

ಬೆಂಗಳೂರಿನ ಕಲ್ಯಾಣನಗರದಲ್ಲಿ ಡಿಸೆಂಬರ್ 3 ರಂದು ಈ ಘಟನೆ ನಡೆದಿದೆ. ಈ ಅಮಾನವೀಯ ಘಟನೆಯನ್ನು ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಈ ವೀಡಿಯೋವನ್ನು ನಮ್ಮ ಬೆಂಗಳೂರು ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಕೆಂಪು ಬಣ್ಣದ ಕಾರೊಂದರಲ್ಲಿ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದು, ಕಾರಿನ ಟಾಪ್‌ ಮೇಲೆ ಮೂರು ಶಿಟ್ಜು ತಳಿಯ ಪುಟ್ಟ ನಾಯಿ ಮರಿಗಳನ್ನು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಕಾರಿನ ಟಾಪ್ ಮೇಲೆ ನಿಲ್ಲಿಸಿಕೊಂಡು ಕಾರು ಓಡಿಸುತ್ತಿದ್ದಾರೆ. ತಮ್ಮ ಮಾಲೀಕನ ಕ್ರಮದಿಂದ ಭಯಗೊಂಡಿರುವ ನಾಯಿಮರಿಗಳು ಕಾರಿನಿಂದ ಇಳಿಯಲು ನೋಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

ಡಿಸೆಂಬರ್ 3 ರಂದು ಬೆಂಗಳೂರಿನ ಕಲ್ಯಾಣನಗರದಲ್ಲಿ ಈ ಯುವಕ ಕಾರಿನ ಟಾಪ್ ಮೇಲೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಮೂರು ನಾಯಿಮರಿಗಳನ್ನು ನಿಲ್ಲಿಸಿಕೊಂಡು ಕಾರು ಚಾಲನೆ ಮಾಡುತ್ತಿದ್ದ ಕನಿಷ್ಠ 2 ಕಿಲೋ ಮೀಟರ್‌ ವರೆಗೆ ಈತ ಇದೇ ರೀತಿ ಮಾಡಿದ್ದು, ಕಾರಿನೊಳಗೆ ಇಬ್ಬರು ಯುವಕರಿದ್ದರು, ನಾನು ಅವರ ಜೊತೆ ನಡೆಸಿದ ಸಂವಹನವನ್ನು ದುರಾದೃಷ್ಟವಶಾತ್ ಮೊದಲೇ ರೆಕಾರ್ಡ್ ಮಾಡಿಕೊಳ್ಳಲಿಲ್ಲ, ನಾನು ಅವರಿಗೆ ಎಕ್ಸ್‌ಕ್ಯೂಸ್‌ಮಿ ಇದು ಸುರಕ್ಷಿತ ಅಲ್ಲ ಎಂದು ಹೇಳಿದಾಗ ಈ ಹುಡುಗರು ಅವ್ಯಾಚ್ಯವಾಗಿ ನಿಂದಿಸಿದ್ದಾರೆ. ಈತ ಈ ಪ್ರದೇಶದಲ್ಲಿ ಈ ಹಿಂದೆಯೂ ಇದೇ ರೀತಿ ಮಾಡಿದ್ದನ್ನು ಜನ ನೋಡಿದ್ದಾರೆ ಎಂದು ವೀಡಿಯೋ ಪೋಸ್ಟ್ ಮಾಡಿ ಬರೆದುಕೊಳ್ಳಲಾಗಿದೆ. 

ಇದಕ್ಕೂ ಮೊದಲು ವೈರಲ್ ಆದ ವೀಡಿಯೋಗೆ ಈ ಕೃತ್ಯವೆಸಗಿದ ಯುವಕನೇ ಪ್ರತಿಕ್ರಿಯಿಸಿದ್ದು, ಕಾಮೆಂಟ್‌ನಲ್ಲಿ ಕ್ಷಮೆ ಕೇಳಿದ್ದಾನೆ ಕೆಟ್ಟದಾಗಿ ವರ್ತಿಸಿದ್ದಕ್ಕೆ ಕ್ಷಮಿಸಿ ನಾನು ನಿನ್ನೆ ಅಪ್‌ಸೆಟ್ ಆಗಿದ್ದೆ ಹೀಗಾಗಿ ನನ್ನ ಪ್ರಿತಿಯ ನಾಯಿ ಮರಿಗಳ ಜೊತೆ ನಾನು ರೈಡ್ ಹೋಗಿದ್ದೆ ನನ್ನ ಮಕ್ಕಳು ಕಾರಿನ ಟಾಪ್ ಮೇಲೆ ಕುಳಿತುಕೊಳ್ಳುವುದನ್ನು ಇಷ್ಟಪಡುತ್ತವೆ. ಹಾಗೂ ಅವುಗಳು ಸಂಗೀತಾವನ್ನು ಇಷ್ಟಪಡುತ್ತವೆ ಎಂದು ಆತ ಬರೆದುಕೊಂಡಿದ್ದಾನೆ. ಹೀಗೆ ಮಾಡಿದ ಯುವಕನನ್ನು ಹರಿ ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ ಆತನನ್ನು ವೀಡಿಯೋ ವೈರಲ್ ಆದ ನಂತರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಆಗಿದೆ. 

View post on Instagram