ಬೆಂಗಳೂರು [ನ.05]:  ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಬಿ.ರಮೇಶ್‌ ಅವರ ವರ್ಗಾವಣೆಗೆ ಸಿಎಟಿ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಸ್ಥಾನಕ್ಕೆ ವರ್ಗಾವಣೆಯಾಗಿದ್ದ ಮಧುಗಿರಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರ ಅಳಿಯ ಐಪಿಎಸ್‌ ಅಧಿಕಾರಿ ಎಸ್‌.ಗಿರೀಶ್‌ ಅವರ ವರ್ಗಾವಣೆ ಆದೇಶವನ್ನು ಹಿಂಪಡೆದಿದೆ.

ಪಶ್ಚಿಮ ವಿಭಾಗದ ಡಿಸಿಪಿ ಹುದ್ದೆಗೆ ಕೆಎಸ್‌ಆರ್‌ಪಿ ಕಮಾಂಡೆಂಟ್‌ ಗಿರೀಶ್‌ ಅವರನ್ನು ಶನಿವಾರ ಸರ್ಕಾರ ನೇಮಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದ ಬಿ.ರಮೇಶ್‌ ಅವರು ಕೇಂದ್ರ ಆಡಳಿತ ನ್ಯಾಯ ಮಂಡಳಿ (ಸಿಎಟಿ) ಮೊರೆ ಹೋಗಿದ್ದರು. ರಮೇಶ್‌ ವರ್ಗಾವಣೆಗೆ ತಡೆಯಾಜ್ಞೆ ನೀಡಿತು. ಗಿರೀಶ್‌ ಅವರು ಕೆಎಸ್‌ಆರ್‌ಪಿ ಕಮಾಂಡೆಂಟ್‌ ಹುದ್ದೆಯಲ್ಲಿ ಹಾಗೂ ರಮೇಶ್‌ ಡಿಸಿಪಿಯಾಗಿ ಮುಂದುವರೆಯಲಿದ್ದಾರೆ.

ಯಡಿಯೂರಪ್ಪ ಆಡಿಯೋ ಲೀಕ್: ಬಹಿರಂಗಪಡಿಸಿದವರ ಕ್ಲೂ ಕೊಟ್ಟ ಸಿದ್ದರಾಮಯ್ಯ...

ಈ ಹಿಂದೆ ಲೋಕಾಯುಕ್ತ ಡಿವೈಎಸ್ಪಿಯಾಗಿದ್ದಾಗ ಎಸ್‌.ಗಿರೀಶ್‌ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಭೂ ಹಗರಣ ಪ್ರಕರಣದ ತನಿಖಾಧಿಕಾರಿಯಾಗಿದ್ದರು. 2011ರಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದು ಬಿಟ್ಟತಂಡದ ನೇತೃತ್ವವಹಿಸಿದ್ದರು.